ಅರುಣ್ ಕುಮಾರ್ ತಿವಾರಿ, ಸಂದೀಪ್ ಅರೆ 
ದೇಶ

Mount Everest ಹತ್ತಿದ ಖುಷಿ ಕ್ಷಣ ಮಾತ್ರ ಉಳಿಯಲಿಲ್ಲ; ಅರ್ಧದಲ್ಲೇ ಪ್ರಾಣಬಿಟ್ಟ ಭಾರತೀಯ ಪರ್ವತಾರೋಹಿಗಳು!

ನೇಪಾಳದ ಕಠ್ಮಂಡುವಿನಿಂದ ದುಃಖದ ಸುದ್ದಿ ಹೊರಬಂದಿದೆ. ವಿಶ್ವದ ಅತಿ ಎತ್ತರದ ಮೌಂಟ್ ಎವರೆಸ್ಟ್ ಶಿಖರವನ್ನು ಹತ್ತಿ ತಮ್ಮ ಬಹುಕಾಲದ ಕನಸನ್ನು ನನಸು ಮಾಡಿಕೊಂಡಿದ್ದ ಇಬ್ಬರು ಭಾರತೀಯ ಪರ್ವತಾರೋಹಿಗಳು ಪರ್ವತವನ್ನು ಇಳಿಯುವಾಗ ಸಾವನ್ನಪ್ಪಿದ್ದಾರೆ.

ನವದೆಹಲಿ: ನೇಪಾಳದ ಕಠ್ಮಂಡುವಿನಿಂದ ದುಃಖದ ಸುದ್ದಿ ಹೊರಬಂದಿದೆ. ವಿಶ್ವದ ಅತಿ ಎತ್ತರದ ಮೌಂಟ್ ಎವರೆಸ್ಟ್ ಶಿಖರವನ್ನು ಹತ್ತಿ ತಮ್ಮ ಬಹುಕಾಲದ ಕನಸನ್ನು ನನಸು ಮಾಡಿಕೊಂಡಿದ್ದ ಇಬ್ಬರು ಭಾರತೀಯ ಪರ್ವತಾರೋಹಿಗಳು ಪರ್ವತವನ್ನು ಇಳಿಯುವಾಗ ಸಾವನ್ನಪ್ಪಿದ್ದಾರೆ. ಭಾರತೀಯ ಪರ್ವತಾರೋಹಿಗಳನ್ನು ಅರುಣ್ ಕುಮಾರ್ ತಿವಾರಿ ಮತ್ತು ಸಂದೀಪ್ ಅರೆ ಎಂದು ಗುರುತಿಸಲಾಗಿದೆ. ಸಾವಿಗೆ ಕಾರಣ ಆಯಾಸ ಎಂದು ಹೇಳಲಾಗಿದೆ.

ನೇಪಾಳದ ಯಾತ್ರೆ ನಿರ್ವಾಹಕರ ಸಂಘದ ಪ್ರಧಾನ ಕಾರ್ಯದರ್ಶಿ ರಿಷಿ ಭಂಡಾರಿ ಮಾತನಾಡಿ, ಭಾರತೀಯ ಪರ್ವತಾರೋಹಿಗಳಾದ ಅರುಣ್ ಕುಮಾರ್ ತಿವಾರಿ ಮತ್ತು ಸಂದೀಪ್ ಅರೆ ಅವರು ಶಿಖರವನ್ನು ಇಳಿಯುವಾಗ ತುಂಬಾ ದಣಿದಿದ್ದರು. ಮಾರ್ಗದರ್ಶಕರ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.

ಬುಧವಾರ ಸಂದೀಪ್ ಅರೆ ಶಿಖರವನ್ನೇರಿದ್ದರೇ ಗುರುವಾರ ಸಂಜೆ 5:30ರ ಸುಮಾರಿಗೆ ತಿವಾರಿ ಶಿಖರವನ್ನು ಏರಿದ್ದರು. ಮಾರ್ಗದರ್ಶಕರು ತುಂಬಾ ಪ್ರಯತ್ನಿಸಿದರು. ಆದರೆ ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ ಎಂದು ರಿಷಿ ಭಂಡಾರಿ ಹೇಳಿದರು. ಸಂದೀಪ್ ಅರೆ ಗುರುವಾರ ನಿಧನರಾಗಿದ್ದರೇ ಅರುಣ್ ಕುಮಾರ್ ತಿವಾರಿ ಯಾವಾಗ ನಿಧನರಾದರು ಎಂಬುದು ಸ್ಪಷ್ಟವಾಗಿಲ್ಲ.

ಬುಧವಾರ, ಸಂದೀಪ್ ಮತ್ತು ಅರುಣ್ ಸೇರಿದಂತೆ ಮೂವರು ಭಾರತೀಯರು 8,848.86 ಮೀಟರ್ ಎತ್ತರದ ಶಿಖರವನ್ನು ಏರಿದ 274 ಪರ್ವತಾರೋಹಿಗಳಲ್ಲಿ ಒಬ್ಬರಾಗಿದ್ದಾರೆ. ಇನ್ನು ಒಂದೇ ದಿನದಲ್ಲಿ ಅತಿ ಹೆಚ್ಚು ಶಿಖರಗಳನ್ನು ಏರಿದ ಹೊಸ ದಾಖಲೆಯನ್ನು ನಿರ್ಮಿಸಿತು. ಇತರ ಇಬ್ಬರು ಪರ್ವತಾರೋಹಿಗಳಾದ ತುಳಸಿ ರೆಡ್ಡಿ ಪಲ್ಪುನುರಿ ಮತ್ತು ಅಜಯ್ ಪಾಲ್ ಸಿಂಗ್ ಧಲಿವಾಲ್. ಮರುದಿನ, ಗುರುವಾರ, ಭಾರತದ ಲಕ್ಷ್ಮಿಕಾಂತ ಮಂಡಲ್ ಕೂಡ ವಿಶ್ವದ ಅತಿ ಎತ್ತರದ ಶಿಖರವನ್ನು ತಲುಪಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದ ಯುವಕ ದಾರುಣ ಅಂತ್ಯ

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್

Cricket: ಪಂತ್‌ರಂತೆ ಆಡಲು ಪ್ರಯತ್ನಿಸಲ್ಲ, ಅವರ ಜೊತೆ ಆಡೋದು ದೊಡ್ಡ ಅನುಭವ: ಫಿಟ್ನೆಸ್ ಅಪ್ಡೇಟ್ ಕೊಟ್ಟ Dhruv Jurel