ಮಾರ್ಕೊ ರೂಬಿಯೊ 
ದೇಶ

ಅಮೆರಿಕದಲ್ಲಿ ಭಾರತೀಯರ ವಿರುದ್ಧ ಜನಾಂಗೀಯ ಹೇಳಿಕೆ: ಮಾರ್ಕೊ ರೂಬಿಯೊ ಹೇಳಿದ್ದೇನು?

ಜಗತ್ತಿನ ಪ್ರತಿಯೊಂದು ದೇಶದಲ್ಲೂ ಮೂರ್ಖ ಜನರಿದ್ದಾರೆ. ಇಲ್ಲಿ ಮೂರ್ಖ ಜನರಿದ್ದಾರೆ ಎಂದು ನನಗೆ ಖಚಿತವಾಗಿದೆ, ಮತ್ತು ಅಮೆರಿಕದಲ್ಲಿ ಯಾವಾಗಲೂ ಮೂರ್ಖತನದ ಹೇಳಿಕೆ ನೀಡುವ ಮುರ್ಖ ಜನರಿರುತ್ತಾರೆ ಎಂದು ಹೇಳಿದರು.

ನವದೆಹಲಿ: ಅಮೆರಿಕದಲ್ಲಿ ಭಾರತೀಯ-ಅಮೆರಿಕನ್ನರನ್ನು ಗುರಿಯಾಗಿಸಿಕೊಂಡ ಜನಾಂಗೀಯ ಹೇಳಿಕೆಗಳನ್ನು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಭಾನುವಾರ ತೀವ್ರವಾಗಿ ಖಂಡಿಸಿದ್ದಾರೆ. ಅಂತಹ ಹೇಳಿಕೆಗಳು ಅಮೆರಿಕದ ಸಮಾಜವನ್ನು ಪ್ರತಿಬಿಂಬಿಸುವುದಿಲ್ಲ ಮತ್ತು ಆಡಳಿತವು ಅದನ್ನು ಗಂಭೀರವಾಗಿ ಪರಿಗಣಿಸುತ್ತದೆ ಎಂದು ಪ್ರತಿಪಾದಿಸಿದ್ದಾರೆ.

ಭಾರತ ಭೇಟಿಯ ಸಮಯದಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ರೂಬಿಯೊ, ಭಾರತೀಯರ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳು ಮತ್ತು ಆನ್‌ಲೈನ್ ನಿಂದನೆಗಳು ಬರುತ್ತಿವೆ ಎಂಬುದನ್ನು ಒಪ್ಪಿಕೊಂಡರು. ಆದರೆ ಪ್ರತಿಯೊಂದು ದೇಶದಲ್ಲೂ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುವ ವ್ಯಕ್ತಿಗಳು ಇರುತ್ತಾರೆ. ಅಂತಹ ಕಾಮೆಂಟ್‌ಗಳನ್ನು ಗಂಭೀರವಾಗಿ ಪರಿಗಣಿಸುತ್ತೇನೆ ಎಂದರು.

ಜಗತ್ತಿನ ಪ್ರತಿಯೊಂದು ದೇಶದಲ್ಲೂ ಮೂರ್ಖ ಜನರಿದ್ದಾರೆ. ಇಲ್ಲಿ ಮೂರ್ಖ ಜನರಿದ್ದಾರೆ ಎಂದು ನನಗೆ ಖಚಿತವಾಗಿದೆ, ಮತ್ತು ಅಮೆರಿಕದಲ್ಲಿ ಯಾವಾಗಲೂ ಮೂರ್ಖತನದ ಹೇಳಿಕೆ ನೀಡುವ ಮುರ್ಖ ಜನರಿರುತ್ತಾರೆ ಎಂದು ಹೇಳಿದರು.

ಅಮೆರಿಕವನ್ನು "ಬಹಳ ಸ್ವಾಗತಾರ್ಹ ದೇಶ" ಎಂದು ಬಣ್ಣಿಸಿದ ಅಮೆರಿಕ ವಿದೇಶಾಂಗ ಕಾರ್ಯದರ್ಶಿ, ಭಾರತೀಯ ವಲಸೆಗಾರರು ಸೇರಿದಂತೆ ಪ್ರಪಂಚದಾದ್ಯಂತದ ವಲಸಿಗರು ದೇಶದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ ನಮ್ಮ ರಾಷ್ಟ್ರವು ಪ್ರಪಂಚದಾದ್ಯಂತದ ನಮ್ಮ ದೇಶಕ್ಕೆ ಬರುವ ಜನರಿಂದ ಶ್ರೀಮಂತವಾಗಿದೆ" ಎಂದು ಅವರು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮ ಮತ್ತಿತರ ವೇದಿಕೆಗಳಲ್ಲಿ ಭಾರತೀಯ-ಅಮೆರಿಕನ್ ಸಮುದಾಯದ ವಿರುದ್ಧ ಜನಾಂಗೀಯ ನಿಂದನೆ ಮತ್ತು ದ್ವೇಷ ಭಾಷಣದ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಕಳವಳಗಳು ಹೆಚ್ಚಾಗುತ್ತಿರುವಂತೆಯೇ ರೂಬಿಯೊ ಈ ಹೇಳಿಕೆ ನೀಡಿದ್ದಾರೆ.

ಭಾರತೀಯ-ಅಮೆರಿಕನ್ನರನ್ನು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಅತ್ಯಂತ ಸಾಧನೆಗೈದ ಮತ್ತು ಗೌರವಾನ್ವಿತ ಸಮುದಾಯಗಳಲ್ಲಿ ಒಂದೆಂದು ರೂಬಿಯೊ ಬಣ್ಣಿಸಿದರು. ಬಹು ಕ್ಷೇತ್ರಗಳಲ್ಲಿ ಅವರ ಕೊಡುಗೆಗಳನ್ನು ಎತ್ತಿ ತೋರಿಸಿದರು. ತಂತ್ರಜ್ಞಾನ, ವ್ಯವಹಾರ, ಆರೋಗ್ಯ ರಕ್ಷಣೆ ಮತ್ತು ಸಾರ್ವಜನಿಕ ಸೇವೆಯಂತಹ ಕ್ಷೇತ್ರಗಳಲ್ಲಿ ಭಾರತೀಯ ವಲಸಿಗರು ಗಮನಾರ್ಹ ಯಶಸ್ಸನ್ನು ಸಾಧಿಸಿದ್ದಾರೆ ಎಂದು ಅವರು ಹೇಳಿದರು.

"ಯುನೈಟೆಡ್ ಸ್ಟೇಟ್ಸ್‌ನಲ್ಲಿರುವ ಭಾರತೀಯ ವಲಸಿಗರು ಗಮನಾರ್ಹ ರೀತಿಯಲ್ಲಿ ಯಶಸ್ವಿಯಾಗಿದ್ದಾರೆ. ಅಜ್ಞಾನದ ದೃಷ್ಟಿಕೋನಗಳನ್ನು ಹೊಂದಿರುವ ಜನರು ಎಲ್ಲೆಡೆ ಇದ್ದಾರೆ.ಅಂತಹ ಕಾಮೆಂಟ್‌ಗಳು ಒಟ್ಟಾರೆಯಾಗಿ ಯುನೈಟೆಡ್ ಸ್ಟೇಟ್ಸ್‌ನ ಮೌಲ್ಯಗಳನ್ನು ಪ್ರತಿನಿಧಿಸುವುದಿಲ್ಲ ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಶೀಘ್ರದಲ್ಲೇ ವಿಶ್ವಕ್ಕೆ ಸಿಹಿ ಸುದ್ದಿ: ಅಮೆರಿಕಾ–ಇರಾನ್ ಸಂಘರ್ಷ ಅಂತ್ಯ ಸಾಧ್ಯತೆ, ಮಾರ್ಕೊ ರುಬಿಯೊ ಮಹತ್ವದ ಹೇಳಿಕೆ..!

ಪಾಕಿಸ್ತಾನದಲ್ಲಿ ಮುಂದುವರಿದ ರಕ್ತಪಾತ: ಚಲಿಸುತ್ತಿದ್ದ ರೈಲಿನಲ್ಲಿ ಆತ್ಮಾಹುತಿ ಬಾಂಬ್ ದಾಳಿ; 24 ಪ್ರಯಾಣಿಕರ ಸಾವು, 100ಕ್ಕೂ ಹೆಚ್ಚು ಜನರಿಗೆ ಗಾಯ

ಎಬೋಲಾ ಭೀತಿ: ಡಿಆರ್‌ಸಿ, ಉಗಾಂಡಾ, ದಕ್ಷಿಣ ಸುಡಾನ್‌ಗೆ ಅನಗತ್ಯ ಪ್ರಯಾಣ ಬೇಡ: ಭಾರತೀಯರಿಗೆ ಕೇಂದ್ರ ಸರ್ಕಾರ ಎಚ್ಚರಿಕೆ

ಅಮೆರಿಕ-ಇರಾನ್ ಮಾತುಕತೆಯಲ್ಲಿ ಮಹತ್ವದ ಪ್ರಗತಿ: ಶಾಂತಿ ಒಪ್ಪಂದ ಅಂತಿಮ ಹಂತದಲ್ಲಿದೆ ಎಂದ ಡೊನಾಲ್ಟ್ ಟ್ರಂಪ್, ಹಾರ್ಮುಜ್ ಜಲಸಂಧಿ ಪುನರಾರಂಭ ನಿರೀಕ್ಷೆ

ಅಮೆರಿಕ ಶ್ವೇತಭವನ ಬಳಿ ಮತ್ತೆ ಗುಂಡಿನ ದಾಳಿ: ಪ್ರತಿದಾಳಿಗೆ ಬಂದೂಕುಧಾರಿ ಸಾವು-Video

SCROLL FOR NEXT