ಸಿಎಂ ಒಮರ್ ಅಬ್ದುಲ್ಲಾ, ಆಗಾ ರುಹುಲ್ಲಾ 
ದೇಶ

NC ಯಲ್ಲಿ ಬಂಡಾಯದ ಬೇಗುದಿ: ಒಮರ್ ಅಬ್ದುಲ್ಲಾಗೆ ಮತ್ತೊಂದು ದೊಡ್ಡ ಹೊಡೆತ; ಪಕ್ಷ ತೊರೆದ ಆಗಾ ರುಹುಲ್ಲಾ, ಸಂಸದ ಸ್ಥಾನಕ್ಕೂ ಗುಡ್ ಬೈ!

ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರ ಸರ್ಕಾರ ಈಗಾಗಲೇ ಕೆಲ ಶಾಸಕರಿಂದ ಬಂಡಾಯವನ್ನು ಎದುರಿಸುತ್ತಿರುವ ಹೊತ್ತಲ್ಲೇ ನಡೆದಿರುವ ಈ ಬೆಳವಣಿಗೆಯು ಅವರ ಮುಂದಿರುವ ರಾಜಕೀಯ ಸವಾಲುಗಳನ್ನು ಮತ್ತಷ್ಟು ಹೆಚ್ಚಿಸಿದೆ.

ಜಮ್ಮು -ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದ ಆಡಳಿತಾರೂಢ ನ್ಯಾಷನಲ್ ಕಾನ್ಫರೆನ್ಸ್ (NC) ಪಕ್ಷಕ್ಕೆ ಮಂಗಳವಾರ ಭಾರಿ ಹೊಡೆತ ಬಿದ್ದಿದೆ. ಶ್ರೀನಗರದ ಸಂಸದ ಆಗಾ ಸೈಯದ್ ರುಹುಲ್ಲಾ ಪಕ್ಷದಿಂದ ಹೊರಬರುವುದಾಗಿ ಘೋಷಿಸಿದ್ದು, ತಮ್ಮ ಸಂಸದ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ.

ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರ ಸರ್ಕಾರ ಈಗಾಗಲೇ ಕೆಲ ಶಾಸಕರಿಂದ ಬಂಡಾಯವನ್ನು ಎದುರಿಸುತ್ತಿರುವ ಹೊತ್ತಲ್ಲೇ ನಡೆದಿರುವ ಈ ಬೆಳವಣಿಗೆಯು ಅವರ ಮುಂದಿರುವ ರಾಜಕೀಯ ಸವಾಲುಗಳನ್ನು ಮತ್ತಷ್ಟು ಹೆಚ್ಚಿಸಿದೆ.

ಬುಡ್ಗಾಮ್‌ನಲ್ಲಿ ನಡೆದ ಬೃಹತ್ ಸಭೆಯೊಂದರಲ್ಲಿ ಈ ಘೋಷಣೆ ಮಾಡಿದ ರುಹುಲ್ಲಾ, ಎನ್‌ಸಿ ಪಕ್ಷದೊಂದಿಗಿದ್ದ ತಮ್ಮ ದಶಕಗಳ ಸುದೀರ್ಘ ಒಡನಾಟವನ್ನು ಮುರಿದುಕೊಂಡರು. ಜಮ್ಮು ಮತ್ತು ಕಾಶ್ಮೀರದ ಜನರಿಗೆ ನೀಡಿದ್ದ ಭರವಸೆಗಳನ್ನು ಪಕ್ಷದ ನಾಯಕತ್ವವು ಕೈಬಿಟ್ಟಿದೆ ಎಂದು ಅವರು ಆರೋಪಿಸಿದರು.

370ನೇ ವಿಧಿಯ ಮರುಸ್ಥಾಪನೆ, ಸಾಂವಿಧಾನಿಕ ಹಕ್ಕುಗಳು, ಮೀಸಲಾತಿ ಸುಧಾರಣೆಗಳು ಮತ್ತು ರಾಜಕೀಯ ಕೈದಿಗಳ ಬಿಡುಗಡೆಯ ಕುರಿತಾದ ತಮ್ಮ ಭರವಸೆಗಳಿಂದ ಪಕ್ಷವು ದೂರ ಸರಿದಿದೆ. ಅಂತಹ ಪಕ್ಷದೊಂದಿಗೆ ಇನ್ನು ಮುಂದೆ ಮುಂದುವರಿಯಲು ಸಾಧ್ಯವಿಲ್ಲ ಎಂದು 48 ವರ್ಷದ ಈ ನಾಯಕ ಹೇಳಿದರು.

ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ನಾಯಕ ರವೀಂದರ್ ರೈನಾ, ರುಹುಲ್ಲಾ ಅವರ ನಿರ್ಗಮನ ಆಡಳಿತಾರೂಢ ಪಕ್ಷಕ್ಕೆ ದೊಡ್ಡ ಹೊಡೆತವಾಗಿದೆ ಎಂದು ಬಣ್ಣಿಸಿದರು. "ಅವರು ಮೂರು ಬಾರಿ ಶಾಸಕರಾಗಿ (MLA) ಸೇವೆ ಸಲ್ಲಿಸಿದ್ದಾರೆ ಮತ್ತು ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಅವರ ರಾಜೀನಾಮೆ ನ್ಯಾಷನಲ್ ಕಾನ್ಫರೆನ್ಸ್‌ಗೆ ದೊಡ್ಡ ಹಿನ್ನಡೆಯಾಗಿದೆ ಎಂದು ಅವರು ಹೇಳಿದರು.

25 ಶಾಸಕರ ಬಂಡಾಯದ ನಡುವೆ ಎನ್‌ಸಿಗೆ ಹೊಸ ಬಿಕ್ಕಟ್ಟು: ಪಕ್ಷದೊಳಗೆ ಅಸಮಾಧಾನ ಹೆಚ್ಚುತ್ತಿರುವ ಸಂದರ್ಭದಲ್ಲೇ ರುಹುಲ್ಲಾ ಪಕ್ಷ ತೊರೆದಿದ್ದಾರೆ. ಅಕ್ಟೋಬರ್ 27 ರಂದು ನಡೆದ ಸಚಿವ ಸಂಪುಟ ಪುನಾರಚನೆಯಲ್ಲಿ ಒಮರ್ ಅಬ್ದುಲ್ಲಾ ಅವರು ನಾಲ್ವರು ಹೊಸ ಸಚಿವರನ್ನು ಸೇರಿಸಿಕೊಂಡ ನಂತರ, ಪಕ್ಷದ ಆಂತರಿಕ ಭಿನ್ನಾಭಿಪ್ರಾಯಗಳು ತೀವ್ರಗೊಂಡಿವೆ.

ಸೋಮವಾರ ಪರಿಸ್ಥಿತಿ ಇನ್ನಷ್ಟು ಉಲ್ಬಣಗೊಂಡಿತು. ಅಸಮಾಧಾನಗೊಂಡ ಎನ್‌ಸಿ ಪಕ್ಷದ 25 ಶಾಸಕರು ಪಕ್ಷದ ನಾಯಕತ್ವಕ್ಕೆ 14 ದಿನಗಳ ಗಡುವು ನೀಡಿದರು. ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಸರ್ಕಾರಕ್ಕೆ ನೀಡಿದ ಬೆಂಬಲವನ್ನು ಹಿಂಪಡೆಯುವುದಾಗಿ ಬಂಡಾಯ ಗುಂಪು ಎಚ್ಚರಿಕೆ ನೀಡಿದೆ. ಪ್ರಸ್ತುತ ಸಚಿವರನ್ನೆಲ್ಲಾ ಸಂಪುಟದಿಂದ ಕೈಬಿಡುವುದು ಮತ್ತು ಮುಖ್ಯಮಂತ್ರಿಯವರ ಸಲಹೆಗಾರರನ್ನು ವಜಾಗೊಳಿಸುವುದು ಸೇರಿದಂತೆ, ಒಮರ್ ಅಬ್ದುಲ್ಲಾ ಅವರ ಆಡಳಿತ ವ್ಯವಸ್ಥೆಯನ್ನು ಸಂಪೂರ್ಣವಾಗಿ ಪುನಾರಚಿಸಬೇಕೆಂದು ಈ ಬಂಡಾಯ ಶಾಸಕರು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಹೆಸರಿಗೆ ಮಾತ್ರ ನಿರ್ಬಂಧ, ಅಂಗಡಿಗಳಲ್ಲಿ ಎಲ್ಲ ರೀತಿಯ ಪಟಾಕಿಗಳೂ ಸಿಗುತ್ತಿವೆ’: ಸುಪ್ರೀಂ ಕೋರ್ಟ್ ಕಳವಳ, ಕೇಂದ್ರಕ್ಕೆ ಖಡಕ್ ಸೂಚನೆ

'ಅಮ್ಮಾ ಪ್ಲೀಸ್ ಮನೆಗ್ ಕರ್ಕೊಂಡ್ ಹೋಗು': 2 ತಿಂಗಳ ಕಣ್ಣೀರಿಗೆ ಕೊನೆಗೂ ತೆರೆ, ಪೋಷಕರ ಮಡಿಲು ಸೇರಿದ ಕಂದಮ್ಮ! ಆಗಿದ್ದೇನು? Video

ಕೇವಲ 14 ಎಸೆತಗಳಲ್ಲೇ ಅರ್ಧ ಶತಕ; ಮಹಿಳಾ T20ಯಲ್ಲಿ ವಿಶ್ವ ದಾಖಲೆ ಬರೆದ RCB ಆಟಗಾರ್ತಿ!

ಚಿರತೆ ಎಂದು ಭಾವಿಸಿ ಚೀತಾಗಳ ಬೇಟೆ; ಇಬ್ಬರು ಬೇಟೆಗಾರ ಸಹೋದರರ ಬಂಧನ, ಡಬಲ್ ಬ್ಯಾರೆಲ್ ಗನ್ ವಶಕ್ಕೆ!

ರಾಹುಲ್ ಗಾಂಧಿ ಕೇವಲ ಅಣಕು ಸಂಸತ್ತಿನಲ್ಲಿ ಮಾತ್ರ ಪ್ರಧಾನಿಯಾಗ್ತಾರೆ! ಸಿಎಂ ಹಿಮಂತ ಬಿಸ್ವಾ ಶರ್ಮಾ