ಎನ್ ಚಂದ್ರಬಾಬು ನಾಯ್ಡು 
ದೇಶ

ಕರ್ನಾಟಕದ ಜನ, ಸಿಎಂ ಡಿಕೆಶಿಗೆ ಧನ್ಯವಾದ ಅರ್ಪಿಸಿದ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು!

ಚಂಡಮಾರುತ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಮತ್ತು ಪುನಶ್ಚೇತನ ಕಾರ್ಯಗಳಿಗೆ ಬೆಂಬಲ ನೀಡಲು 'ನಮ್ಮ ತಂಡಗಳು ಆಂಧ್ರಪ್ರದೇಶದತ್ತ ಹೊರಟಿವೆ' ಎಂದು ಕರ್ನಾಟಕದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ 'ಎಕ್ಸ್' ಖಾತೆಯಲ್ಲಿ ಪೋಸ್ಟ್ ಮಾಡಿದ್ದರು.

ಅಮರಾವತಿ: 'ಮುರಸು' (Murasu) ಚಂಡಮಾರುತ ಉಂಟುಮಾಡಿದ ಪರಿಣಾಮಗಳನ್ನು ನಿಭಾಯಿಸುವಲ್ಲಿ ಸಮಯೋಚಿತ ಬೆಂಬಲ ನೀಡಿದ್ದಕ್ಕಾಗಿ, ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಮಂಗಳವಾರ ಕರ್ನಾಟಕದ ಮುಖ್ಯಮಂತ್ರಿ ಮತ್ತು ಅಲ್ಲಿನ ಜನರಿಗೆ ಧನ್ಯವಾದ ಅರ್ಪಿಸಿದರು.

ಚಂಡಮಾರುತ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಮತ್ತು ಪುನಶ್ಚೇತನ ಕಾರ್ಯಗಳಿಗೆ ಬೆಂಬಲ ನೀಡಲು 'ನಮ್ಮ ತಂಡಗಳು ಆಂಧ್ರಪ್ರದೇಶದತ್ತ ಹೊರಟಿವೆ' ಎಂದು ಕರ್ನಾಟಕದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ 'ಎಕ್ಸ್' ಖಾತೆಯಲ್ಲಿ ಪೋಸ್ಟ್ ಮಾಡಿದ್ದರು; ಇದಕ್ಕೆ ಪ್ರತಿಕ್ರಿಯೆಯಾಗಿ ನಾಯ್ಡು ಈ ಧನ್ಯವಾದ ತಿಳಿಸಿದರು.

'ಮುರಾಸು (Murasau) ಚಂಡಮಾರುತದ ಸಂದರ್ಭದಲ್ಲಿ ಆಂಧ್ರ ಪ್ರದೇಶದ ಬೆಂಬಲಕ್ಕೆ ನಿಂತಿದ್ದಕ್ಕಾಗಿ ಕರ್ನಾಟಕದ ಗೌರವಾನ್ವಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಹಾಗೂ ಕರ್ನಾಟಕದ ಜನತೆಗೆ ಹೃತ್ಪೂರ್ವಕ ಧನ್ಯವಾದಗಳು. ನಮಗೆ ಅಗತ್ಯವಿದ್ದ ಸಮಯದಲ್ಲಿ ನೀವು ನೀಡಿದ ಸಮಯೋಚಿತ ಬೆಂಬಲವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ' ಎಂದು ನಾಯ್ಡು ಅವರು 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.

ಚಂಡಮಾರುತಗಳಂತಹ ನೈಸರ್ಗಿಕ ವಿಕೋಪಗಳ ನಂತರ, ವಿಶೇಷವಾಗಿ ಇತ್ತೀಚಿನ ಅತ್ಯಂತ ತೀವ್ರವಾದ 'ಅರ್ನಾಬ್' (Arnab) ಚಂಡಮಾರುತದ ಬಳಿಕ, ಪುನಶ್ಚೇತನ ಕಾರ್ಯಗಳಲ್ಲಿ ನೆರವು ನೀಡುವಂತೆ ಆಂಧ್ರ ಪ್ರದೇಶವು ನೆರೆಯ ರಾಜ್ಯಗಳನ್ನು ನಿಯಮಿತವಾಗಿ ಕೋರುತ್ತಿದೆ.

ಹಾನಿಗೊಳಗಾದ ವಿದ್ಯುತ್ ಮೂಲಸೌಕರ್ಯಗಳನ್ನು ದುರಸ್ತಿಪಡಿಸಲು ಮತ್ತು ಪುನಃಸ್ಥಾಪಿಸಲು ತೆಲಂಗಾಣದ ಇಂಧನ ಇಲಾಖೆಯ ಸಿಬ್ಬಂದಿಯನ್ನು ಕರೆಸಿಕೊಳ್ಳಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಂಗ್ರೆಸ್ ಆಕ್ರೋಶಕ್ಕೆ ಮಣಿದ ವಿಜಯೇಂದ್ರ: ಪೋಸ್ಟರ್ ಸಮರ ಬೆನ್ನಲ್ಲೇ 'ಈ ನನ್ನ ಮಕ್ಕಳು' ಹೇಳಿಕೆಗೆ ಕ್ಷಮೆಯಾಚಿಸಿದ ಬಿಜೆಪಿ ರಾಜ್ಯಾಧ್ಯಕ್ಷ

RTGS ಚೋರ್ ಬಿವೈ ವಿಜಯೇಂದ್ರ: ಈ ನನ್ ಮಕ್ಕಳು ಎಂದಿದ್ದಕ್ಕೆ BYV ಮನೆ ಮುಂದೆ ಕಾಂಗ್ರೆಸ್ ಕಾರ್ಯಕರ್ತರ ಪೋಸ್ಟರ್ ಸಮರ

ಆಂಧ್ರ ಕರಾವಳಿಗೆ ಅಪ್ಪಳಿಸಿದ ಚಂಡಮಾರುತ ‘ಮುರಸು’; ಧರೆಗುರುಳಿದ ಸಾವಿರಾರು ಮರಗಳು, ಮೀನುಗಾರಿಕೆ ದೋಣಿಗಳಿಗೆ ಹಾನಿ – ಭಾರಿ ಅನಾಹುತ; Video

'ಇನ್ಯಾವತ್ತೂ ಪ್ರತಿಭಟನೆಯಲ್ಲಿ ಭಾಗಿಯಾಗಲ್ಲ'; ಕೊನೆಗೂ ಕ್ಷಮೆ ಯಾಚಿಸಿದ ನಟ Imran Khan, ವಿದೇಶಕ್ಕೆ ತೆರಳಲು ಕೋರ್ಟ್ ಅನುಮತಿ!

Iran ಮೇಲೆ ಮತ್ತೆ ಮುಗಿಬಿದ್ದ ಅಮೆರಿಕ; Qeshm ದ್ವೀಪದ ಮೇಲೆ ವೈಮಾನಿಕ ದಾಳಿ, ಮಧ್ಯಪ್ರಾಚ್ಯದಲ್ಲಿ ಹೆಚ್ಚಿದ ಯುದ್ಧದ ಆತಂಕ..!