ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ರ‍್ಯಾಲಿ  
ದೇಶ

'ಇಂಡಿಯಾ' ರ‍್ಯಾಲಿಗೆ ಗೈರಾದವರ ವಿರುದ್ಧ ಶಿಸ್ತು ಕ್ರಮ; 185 IYC ಸದಸ್ಯರನ್ನು ಅಮಾನತುಗೊಳಿಸಿದ ಕಾಂಗ್ರೆಸ್!

'ಇಂಡಿಯಾ' ರ‍್ಯಾಲಿಗೆ ಗೈರಾದವರ ವಿರುದ್ಧ ಕಾಂಗ್ರೆಸ್ ಶಿಸ್ತು ಕ್ರಮ ಕೈಗೊಂಡಿದ್ದು, ಈ ಕ್ರಮವು ಅಂತಿಮವಾಗಿ 500 ಸದಸ್ಯರನ್ನು ಒಳಗೊಳ್ಳಬಹುದು ಎನ್ನಲಾಗಿದೆ.

ನವದೆಹಲಿ: ನವೆಂಬರ್ 1 ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಇಂಡಿಯಾ ಬಣದ ರ‍್ಯಾಲಿಯಲ್ಲಿ ಭಾಗವಹಿಸದ ಏಳು ರಾಜ್ಯಗಳ ಭಾರತೀಯ ಯುವ ಕಾಂಗ್ರೆಸ್ ನ ಕನಿಷ್ಠ 185 ಸದಸ್ಯರನ್ನು ಕಾಂಗ್ರೆಸ್ ಅಮಾನತುಗೊಳಿಸಿದೆ ಎಂದು NDTV ವರದಿ ಮಾಡಿದೆ.

'ಇಂಡಿಯಾ' ರ‍್ಯಾಲಿಗೆ ಗೈರಾದವರ ವಿರುದ್ಧ ಕಾಂಗ್ರೆಸ್ ಶಿಸ್ತು ಕ್ರಮ ಕೈಗೊಂಡಿದ್ದು, ಈ ಕ್ರಮವು ಅಂತಿಮವಾಗಿ 500 ಸದಸ್ಯರನ್ನು ಒಳಗೊಳ್ಳಬಹುದು ಎನ್ನಲಾಗಿದೆ.

ಮಧ್ಯಪ್ರದೇಶದಲ್ಲಿ ಅತಿ ಹೆಚ್ಚು ಅಂದರೆ 60 ಸದಸ್ಯರನ್ನು ಅಮಾನತುಗಳಿಸಲಾಗಿದ್ದು, ನಂತರ ಗುಜರಾತ್ (49) ಮತ್ತು ಪಶ್ಚಿಮ ಬಂಗಾಳ(26) ಹೆಚ್ಚು ಯುವ ಮುಖಂಡರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ.

ಯುವ ಕಾಂಗ್ರೆಸ್ ಅಧ್ಯಕ್ಷ ಉದಯ್ ಭಾನು ಚಿಬ್ ಈ ಕ್ರಮವನ್ನು ಸಮರ್ಥಿಸಿಕೊಂಡಿದ್ದು, ಸಾಂಸ್ಥಿಕ ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳಲು ಸ್ಪಷ್ಟ ಹಾಜರಾತಿ ಸೂಚನೆಗಳನ್ನು ನಿರ್ಲಕ್ಷಿಸಿದ ಪದಾಧಿಕಾರಿಗಳನ್ನು ತೆಗೆದುಹಾಕಲಾಗಿದೆ ಎಂದು ಹೇಳಿದ್ದಾರೆ.

ರ‍್ಯಾಲಿಯಲ್ಲಿ ಹಾಜರಾತಿಯನ್ನು ಪತ್ತೆಹಚ್ಚಲು ಕಾಂಗ್ರೆಸ್, ಬಾರ್‌ಕೋಡ್ ಸ್ಕ್ಯಾನರ್‌ಗಳು ಮತ್ತು ಅದರ ಮೊಬೈಲ್ ಅಪ್ಲಿಕೇಶನ್ ಅನ್ನು ಬಳಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಅಮೆರಿಕ ಮಧ್ಯಂತರ ಚುನಾವಣೆ ಎಫೆಕ್ಟ್: ಷೇರುಪೇಟೆ ಭಾರಿ ಏರಿಕೆ, ಒಂದೇ ದಿನದಲ್ಲಿ 8 ಲಕ್ಷ ಕೋಟಿ ರೂ. ಲಾಭ!

ಮಿಚಿಗನ್‌ನಲ್ಲಿ ಅಬ್ದುಲ್ಲಾ ಗೆದ್ದಾಯ್ತು': ಅಮೆರಿಕ ಚುನಾವಣೆ ನಂತರ ಮುಂದಿನ ಸರದಿ ಉತ್ತರಪ್ರದೇಶ - ಅಸಾದುದ್ದೀನ್ ಓವೈಸಿ

IPL 2027: 4 ಆಟಗಾರರ ವಿನಿಮಯ; CSK ಸೇರಿ ಬರೋಬ್ಬರಿ ₹7 ಕೋಟಿ ಕಳೆದುಕೊಂಡ SRH ಸ್ಟಾರ್ ಆಟಗಾರ!

ಶೇ.40 ರಷ್ಟು ಬಸ್ ಪ್ರಯಾಣ ದರ ಹೆಚ್ಚಳ: ರಾಜ್ಯದ ಇತಿಹಾಸದಲ್ಲಿಯೇ ನೋಡಿಲ್ಲ- ಸಾರಿಗೆ ಸಚಿವರು ರಾಜೀನಾಮೆ ನೀಡಬೇಕು- ವಿಪಕ್ಷ ನಾಯಕ ಆರ್ ಅಶೋಕ್

ದೀಪಾವಳಿಗೂ ಮುನ್ನ ರೈತರಿಗೆ ಸಿಹಿಸುದ್ದಿ ನೀಡಿದ ರಾಜ್ಯ ಸರ್ಕಾರ: ಬರ ಪರಿಹಾರ ಮೊತ್ತ 5 ಸಾವಿರಕ್ಕೆ ಏರಿಕೆ ಮಾಡಿದ ಡಿಕೆಶಿ