ಇಂದಿ ಗಾಂಧಿ ಮೃತದೇಹದ ಬಳಿ ರಾಹುಲ್ ಗಾಂಧಿ 
ದೇಶ

'ಅವರ ಸೀರೆ, ಎದೆಯ ಮೇಲೂ ರಕ್ತ': ಇಂದಿರಾ ಗಾಂಧಿ ಹತ್ಯೆಯ ಭಯಾನಕ ಕ್ಷಣಗಳನ್ನು ಬಿಚ್ಚಿಟ್ಟ ಸೋನಿಯಾ!

ಈ ಘಟನೆ ಮತ್ತು ಇಂತಹ ಇನ್ನೂ ಅನೇಕ ನಿರ್ಣಾಯಕ ಕ್ಷಣಗಳನ್ನು ಸೋನಿಯಾ ಗಾಂಧಿ ಅವರು ತಮ್ಮ ಮುಂಬರುವ ಆತ್ಮಚರಿತ್ರೆ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' (Belonging: A Journey of Love) ನಲ್ಲಿ ವಿವರಿಸಿದ್ದಾರೆ.

"ನನ್ನ ಹೃದಯಕ್ಕೆ ಯಾರೋ ಚಾಕುವಿನಿಂದ ಇರಿದಂತಾಯಿತು" ಎಂದು ಸೋನಿಯಾ ಗಾಂಧಿ ಅವರು ಆ ಕ್ಷಣವನ್ನು ನೆನಪಿಸಿಕೊಳ್ಳುತ್ತಾರೆ. ಅಂದಿನ ಪ್ರಧಾನಿ ಮತ್ತು ತಮ್ಮ ತಾಯಿ ಇಂದಿರಾ ಗಾಂಧಿ ಹತ್ಯೆಗೀಡಾದ ದಿನದಂದೇ, ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವಂತೆ ರಾಜೀವ್ ಗಾಂಧಿ ಅವರಿಗೆ ಸೂಚಿಸಲಾಗಿತ್ತು.

ಪ್ರಧಾನಿ ಹುದ್ದೆಯನ್ನು ಸ್ವೀಕರಿಸಬೇಡಿ, ಅದು ನಿಮ್ಮ ಜೀವಕ್ಕೆ ಅಪಾಯ ತಂದೊಡ್ಡಬಹುದು ಎಂದು ಸೋನಿಯಾ ಗಾಂಧಿ ಅವರು ರಾಜೀವ್ ಗಾಂಧಿ ಅವರನ್ನು ಬೇಡಿಕೊಂಡಾಗ, "ಅವರು ಹೇಗಿದ್ದರೂ ನನ್ನನ್ನು ಕೊಲ್ಲುತ್ತಾರೆ," ಎಂದು ರಾಜೀವ್ ಉತ್ತರಿಸಿದರು.

ಈ ಘಟನೆ ಮತ್ತು ಇಂತಹ ಇನ್ನೂ ಅನೇಕ ನಿರ್ಣಾಯಕ ಕ್ಷಣಗಳನ್ನು ಸೋನಿಯಾ ಗಾಂಧಿ ಅವರು ತಮ್ಮ ಮುಂಬರುವ ಆತ್ಮಚರಿತ್ರೆ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' (Belonging: A Journey of Love) ನಲ್ಲಿ ವಿವರಿಸಿದ್ದಾರೆ. ಹಾರ್ಪರ್ ಕಾಲಿನ್ಸ್ ಇಂಡಿಯಾ (HarperCollins India) ಪ್ರಕಟಿಸುತ್ತಿರುವ ಈ ಪುಸ್ತಕವು ನವೆಂಬರ್ 10 ರಂದು ಬಿಡುಗಡೆಯಾಗಲಿದೆ.

ಬ್ರಿಟಿಷ್ ದಿನಪತ್ರಿಕೆ 'ದಿ ಗಾರ್ಡಿಯನ್' (The Guardian) ಪ್ರಕಟಿಸಿದ ಈ ಪುಸ್ತಕದ ಆಯ್ದ ಭಾಗದ ಪ್ರಕಾರ, 1984ರ ಅಕ್ಟೋಬರ್ 31ರಂದು ನಡೆದ ಇಂದಿರಾ ಗಾಂಧಿ ಅವರ ಹತ್ಯೆಯ ದಿನದ ಭೀಕರ ಘಟನೆಗಳನ್ನು ಸೋನಿಯಾ ಗಾಂಧಿ ನೆನಪಿಸಿಕೊಂಡಿದ್ದಾರೆ. ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ತಮ್ಮ ನಿವಾಸವಾದ '1, ಸಫ್ದರ್‌ಜಂಗ್ ರಸ್ತೆ'ಯಲ್ಲಿ ತಮ್ಮದೇ ಅಂಗರಕ್ಷಕರಿಂದ ಹತ್ಯೆಗೀಡಾಗಿದ್ದರು.

"ನನ್ನ ಅತ್ತೆ (ಇಂದಿರಾ ಗಾಂಧಿ) ಮನೆಯ ಪಕ್ಕದಲ್ಲಿದ್ದ ಕಚೇರಿಗೆ ತೆರಳಿದಾಗ, ನಾನು ನನ್ನ ಕೋಣೆಗೆ ಮರಳಿದೆ. ಸ್ನಾನಕ್ಕೆ ಸಿದ್ಧವಾಗುತ್ತಿದ್ದಾಗ, ಪಟಾಕಿ ಸಿಡಿದಂತೆ ದೊಡ್ಡ ಸರಣಿ ಶಬ್ದಗಳು ಕೇಳಿಸಿದವು. ನಾನು ಅಲ್ಲೇ ಸ್ತಬ್ಧವಾಗಿ ನಿಂತುಬಿಟ್ಟೆ."

"ಯಾರೋ ನನ್ನ ಸ್ನಾನದ ಮನೆಯ ಬಾಗಿಲನ್ನು ತೀವ್ರವಾಗಿ ಬಡಿಯತೊಡಗಿದರು. ಅದು ಮಕ್ಕಳ ಆಯಾ ಆಗಿದ್ದರು, ಅವರು ಅಳುತ್ತಾ, ಆತಂಕದಿಂದ ಕೂಗಾಡುತ್ತಿದ್ದರು. ನನ್ನ ಹೃದಯ ಜೋರಾಗಿ ಬಡಿದುಕೊಳ್ಳುತ್ತಿತ್ತು. ನಾನು ತಕ್ಷಣ ಬಾಗಿಲು ತೆರೆದೆ. ಅವರು ಮಾತನಾಡಲು ಸಾಧ್ಯವಾಗದ ಸ್ಥಿತಿಯಲ್ಲಿದ್ದರು. ಕೈ ಸನ್ನೆ ಮಾಡುತ್ತಾ ಗಾರ್ಡನ್ ಕಡೆಗೆ ತೋರಿಸುತ್ತಿದ್ದರು" ಎಂದು ಕಾಂಗ್ರೆಸ್‌ ಮಾಜಿ ಅಧ್ಯಕ್ಷೆ ವಿವರಿಸಿದ್ದಾರೆ.

"ನಾನು ಅಕ್ಬರ್ ರಸ್ತೆಯ ಕಡೆಗೆ ಹೋಗುವ ದಾರಿಯಲ್ಲಿ ಓಡಿದೆ. ಬಿಳಿ ಬಣ್ಣದ ಅಂಬಾಸಿಡರ್ ಕಾರೊಂದು ಅದೇ ದಾರಿಯಲ್ಲಿ ನಿಧಾನವಾಗಿ ಚಲಿಸುತ್ತಿರುವುದನ್ನು ಕಂಡೆ. ನಾನು ಕ್ಷಣಕಾಲ ಹಿಂಜರಿದೆ. ಭಯ ಮತ್ತು ಆತಂಕದಿಂದ ನನ್ನ ಉಸಿರು ನಿಂತಂತಾಯಿತು. ನನಗೆ ಉಸಿರುಗಟ್ಟಿದಂತಾಯಿತು, ಉಸಿರಾಡಲು ಕಷ್ಟವಾಯಿತು. ನಾನು ಕುಸಿದು ಬೀಳುವ ಸ್ಥಿತಿಯಲ್ಲಿದ್ದೆ. ಆದರೆ, 'ಇಲ್ಲ, ನಾನು ಕುಸಿಯಬಾರದು' ಎಂದುಕೊಂಡು, ಆ ಕಾರಿನತ್ತ ಹೆಜ್ಜೆ ಹಾಕಿದೆ. ಅವರನ್ನು ಕಾರಿನೊಳಗೆ ಒಯ್ಯುತ್ತಿರುವುದನ್ನು ನಾನು ಕಂಡೆ. ಆಗ ನನಗೆ ವಿಷಯ ಅರ್ಥವಾಯಿತು; ನಾನು ಜೋರಾಗಿ ಕಿರುಚಿದೆ" ಎಂದು ಸೋನಿಯಾ ಗಾಂಧಿ ಪುಸ್ತಕದಲ್ಲಿ ಬರೆದಿದ್ದಾರೆ.

"ನಾನು ಈಗ ಕಾರಿನಲ್ಲಿದ್ದೇನೆ, ಅವರ ಮುಖವನ್ನೇ ನೋಡುತ್ತಿದ್ದೇನೆ. ರಕ್ತ... ಅವರ ಸೀರೆಯ ಮೇಲೆ ರಕ್ತ, ಎದೆಯ ಮೇಲೂ ರಕ್ತ..." "ಅವರ ದೊಡ್ಡ ಕಣ್ಣುಗಳು ಅಗಲವಾಗಿ ತೆರೆದುಕೊಂಡಿದ್ದವು; ಮುಖದಲ್ಲಿ ಆಶ್ಚರ್ಯದ ಭಾವವಿತ್ತು. ಅವರು ಕದಲಲಿಲ್ಲ. ನಾನು ಅವರೊಂದಿಗೆ ಮಾತನಾಡಲು, 'ಅಮ್ಮ, ಅಮ್ಮ' ಎಂದು ಕೂಗಲು ಪ್ರಯತ್ನಿಸಿದೆ, ಆದರೆ ಬಾಯಿಯಿಂದ ಯಾವುದೇ ಶಬ್ದ ಹೊರಬರಲಿಲ್ಲ. ಮತ್ತೆ ಪ್ರಯತ್ನಿಸಿದೆ; ಅವರಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ" ಎಂದು ಸೋನಿಯಾ ಗಾಂಧಿ ಅವರು ಹತ್ಯೆಯ ಆ ಭಯಾನಕ ಕ್ಷಣಗಳನ್ನು ವಿವರಿಸಿದ್ದಾರೆ.

ಇಂದಿರಾ ಗಾಂಧಿ ಅವರ ಸಹಾಯಕರು ಕಾರಿನ ಮುಂಭಾಗದಲ್ಲಿದ್ದುಕೊಂಡು ಕಿರುಚುತ್ತಿದ್ದರು ಮತ್ತು ದಟ್ಟವಾದ, ನಿಧಾನಗತಿಯ ಸಂಚಾರ ದಟ್ಟಣೆಯ ನಡುವೆ ಕಾರು ಬಹುತೇಕ ಕದಲದ ಸ್ಥಿತಿಯಲ್ಲಿತ್ತು ಎಂದು ಅವರು ಹೇಳುತ್ತಾರೆ.

ಆ ಕಾರಿನಲ್ಲಿ ಸೈರನ್ ಇರಲಿಲ್ಲ ಮತ್ತು ಅದು ಒಂದಾದ ನಂತರ ಮತ್ತೊಂದು ಕೆಂಪು ದೀಪದ(ರೆಡ್ ಲೈಟ್) ಸಂಕೇತವನ್ನು ಎದುರಿಸಬೇಕಾಯಿತು ಎಂದು ಸೋನಿಯಾ ಗಾಂಧಿ ನೆನಪಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ಶುದ್ಧೀಕರಣವಾಗುವರೆಗೂ ಆಯೋಗದ ಎಲ್ಲ ನೇಮಕಾತಿ ಪರೀಕ್ಷೆಗಳನ್ನು ಮುಂದೂಡಿ: HD ಕುಮಾರಸ್ವಾಮಿ

2028ರ ಅಧ್ಯಕ್ಷೀಯ ಚುನಾವಣೆ ಮೇಲೆ ಕಣ್ಣಿಟ್ಟಿರುವ ಜೆಡಿ ವ್ಯಾನ್ಸ್ ಟ್ರಂಪ್‌ರಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ!

ಯಾದಗಿರಿ: ಗೋಡೆಗೆ ಡಿಕ್ಕಿ ಹೊಡೆದ ಕಾರು; ಭೀಕರ ಅಪಘಾತದಲ್ಲಿ ನಾಲ್ವರು ಯುವಕರು ದುರ್ಮರಣ

ರಾಜಕೀಯ 'ಇಷ್ಟವಿರಲಿಲ್ಲ', ರಾಹುಲ್, ಪ್ರಿಯಾಂಕಾ ಸಹ ವಿರೋಧಿಸಿದ್ದರು, ಆದರೆ ಭಗವದ್ಗೀತೆ, ಶ್ರೀಕೃಷ್ಣನ ಸಂದೇಶ "ಮುಂದಿನ ದಾರಿ ತೋರಿಸಿತು": ಸೋನಿಯಾ

'E20 ಈಗ 420 ಆಗಿದೆ': ಪೆಟ್ರೋಲ್‌ನಲ್ಲಿ ಎಥೆನಾಲ್ ಪ್ರಮಾಣ ಹೆಚ್ಚಾಗಿದೆ, ಲಾಭ ಯಾರಿಗೆ?; ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ಕಿಡಿ