ರಾಹುಲ್ ಗಾಂಧಿ ಮತ್ತು ಪ್ರಧಾನಿ ಮೋದಿ 
ದೇಶ

'ಪ್ರಧಾನಿಯ ಸುಳ್ಳನ್ನು ಸೈನಿಕರು ನಂಬಲ್ಲ': ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ, ಬಹಿರಂಗ ಚರ್ಚೆಗೆ ಮತ್ತೆ ಸವಾಲು

ಪ್ರಧಾನಿ ಹೇಳಿದ ಸುಳ್ಳುಗಳನ್ನು ಸಿಆರ್‌ಪಿಎಫ್ ಯೋಧರು ನಂಬಿಲ್ಲ ಎಂದು ಹೇಳಿರುವ ಅವರು, ದೇಶದ್ರೋಹಿಗಳು ಯಾರು ಮತ್ತು ವಿದೇಶಿ ಶಕ್ತಿಗಳ ನಿಯಂತ್ರಣದಲ್ಲಿ ಇರುವವರು ಯಾರು ಎಂಬ ಬಗ್ಗೆ ಬಹಿರಂಗ ಚರ್ಚೆಗೆ ಮತ್ತೊಮ್ಮೆ ಸವಾಲು..

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು 'ದಿಮಾಗಿ ನಕ್ಸಲ್‌' (ನಕ್ಸಲ್ ಮನಸ್ಥಿತಿಯವರು) ಎಂಬ ಹೇಳಿಕೆ ನೀಡಿದ್ದಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ಹೇಳಿದ ಸುಳ್ಳುಗಳನ್ನು ಸಿಆರ್‌ಪಿಎಫ್ ಯೋಧರು ನಂಬಿಲ್ಲ ಎಂದು ಹೇಳಿರುವ ಅವರು, ದೇಶದ್ರೋಹಿಗಳು ಯಾರು ಮತ್ತು ವಿದೇಶಿ ಶಕ್ತಿಗಳ ನಿಯಂತ್ರಣದಲ್ಲಿ ಇರುವವರು ಯಾರು ಎಂಬ ಬಗ್ಗೆ ಬಹಿರಂಗ ಚರ್ಚೆಗೆ ಮತ್ತೊಮ್ಮೆ ಸವಾಲು ಹಾಕಿದ್ದಾರೆ.

ಈ ಕುರಿತು ಸೋಮವಾರ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಸಿಆರ್‌ಪಿಎಫ್ ಯೋಧರನ್ನು ಉದ್ದೇಶಿಸಿ, 'ನಿಮ್ಮ ಮುಖಗಳೇ ಎಲ್ಲವನ್ನೂ ಹೇಳುತ್ತಿದ್ದವು. ಪ್ರಧಾನಿಯವರ ಸುಳ್ಳುಗಳನ್ನು ನೀವು ನಂಬಿಲ್ಲ' ಎಂದು ಹೇಳಿದ್ದಾರೆ.

'ಅವರು ನಮ್ಮನ್ನು ನಕ್ಸಲರು ಎಂದು ಕರೆದಿದ್ದಾರೆ. ನನ್ನ ಸವಾಲು ಈಗಲೂ ಹಾಗೆಯೇ ಇದೆ. ದೇಶದ್ರೋಹಿಗಳು ಯಾರು ಮತ್ತು ವಿದೇಶಿ ಶಕ್ತಿಗಳ ನಿಯಂತ್ರಣದಲ್ಲಿ ಇರುವವರು ಯಾರು ಎಂಬ ಬಗ್ಗೆ ನನ್ನೊಂದಿಗೆ ಚರ್ಚೆ ನಡೆಸಲಿ. ಯಾವಾಗ ಬೇಕಾದರೂ, ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ. ಚರ್ಚೆಯ ಬಳಿಕ ಪ್ರಧಾನಿ ಮತ್ತೆ ಯಾವುದೇ ಒಬ್ಬ ಯೋಧನ ಎದುರು ನಿಲ್ಲುವ ಧೈರ್ಯ ತೋರುವುದಿಲ್ಲ ಎಂಬ ಭರವಸೆ ನನಗಿದೆ' ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಭಾನುವಾರ ಛತ್ತೀಸ್‌ಗಢದ ಬಸ್ತಾರ್‌ನಲ್ಲಿರುವ ಸಿಆರ್‌ಪಿಎಫ್ ಶಿಬಿರದಲ್ಲಿ ಭದ್ರತಾ ಸಿಬ್ಬಂದಿಯೊಂದಿಗೆ ದೀಪಾವಳಿ ಆಚರಿಸಿದ್ದ ಪ್ರಧಾನಿ ಮೋದಿ, ತಮ್ಮ ರಾಜಕೀಯ ವಿರೋಧಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದರು. ಸಶಸ್ತ್ರ ಮಾವೋವಾದಿಗಳನ್ನು ನಿರ್ಮೂಲನೆ ಮಾಡಲಾಗಿದ್ದರೂ, 'ದಿಮಾಗಿ ನಕ್ಸಲರು' ಹಲವು ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳಲ್ಲಿ ನುಸುಳಿದ್ದಾರೆ. ಅವರು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ವಿರುದ್ಧ ಜನರನ್ನು ಪ್ರಚೋದಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.

ಇಂತಹ ಶಕ್ತಿಗಳನ್ನು ಗುರುತಿಸಿ ಸೋಲಿಸುವ ಮೂಲಕ ದೇಶದ ಭದ್ರತೆಯನ್ನು ಕಾಪಾಡಬೇಕು ಎಂದೂ ಮೋದಿ ಹೇಳಿದ್ದರು.

ಕಾಂಗ್ರೆಸ್ ತಿರುಗೇಟು

ಪ್ರಧಾನಿ ಮೋದಿ ಹೇಳಿಕೆಗೆ ಕಾಂಗ್ರೆಸ್ ಕೂಡ ತೀವ್ರವಾಗಿ ಪ್ರತಿಕ್ರಿಯಿಸಿದೆ. ಮೋದಿ ಅವರು ಸ್ಪಷ್ಟವಾಗಿ ಆತಂಕಗೊಂಡಿದ್ದಾರೆ, ವಿಚಲಿತರಾಗಿದ್ದಾರೆ ಮತ್ತು ಹತಾಶರಾಗಿದ್ದಾರೆ. ಅವರು ಅಧಿಕಾರದಿಂದ ಕೆಳಗಿಳಿಯುವ ಸಮಯ ಹತ್ತಿರವಾಗುತ್ತಿದೆ ಎಂದು ಕಾಂಗ್ರೆಸ್ ಟೀಕಿಸಿದೆ.

ಇದಕ್ಕೂ ಮುನ್ನ ಆಗಸ್ಟ್‌ನಲ್ಲಿ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿಯೂ ಮೋದಿ 'ದಿಮಾಗಿ ನಕ್ಸಲರು' ಎಂಬ ಪದ ಬಳಸಿದ್ದರು. ಸಶಸ್ತ್ರ ನಕ್ಸಲಿಸಂ ಅನ್ನು ದೇಶದಿಂದ ನಿರ್ಮೂಲನೆ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ. ಆದರೆ, ನಕ್ಸಲ್ ಸಿದ್ಧಾಂತವನ್ನು ಬೆಂಬಲಿಸುವವರು ಹಿಂಸಾಚಾರಕ್ಕೆ ಪ್ರಚೋದನೆ ನೀಡಲು ಅವಕಾಶ ಹುಡುಕುತ್ತಿದ್ದಾರೆ ಎಂದು ಹೇಳಿದ್ದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರದ ನೀತಿಗಳನ್ನು ವಿರೋಧಿಸುವವರನ್ನು 'ದಿಮಾಗಿ ನಕ್ಸಲರು' ಎಂದು ಕರೆದು ಅವರ ಧ್ವನಿಯನ್ನು ಹತ್ತಿಕ್ಕಲು ಮೋದಿ ಪ್ರಯತ್ನಿಸುತ್ತಿದ್ದಾರೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.

ಚರ್ಚೆಗೆ ರಾಹುಲ್ ಸವಾಲು; ಬಿಜೆಪಿಯಿಂದ ಟೀಕೆ

ಪ್ರಧಾನಿ ಮೋದಿ ಅವರೊಂದಿಗೆ ಬಹಿರಂಗ ಚರ್ಚೆ ನಡೆಸುವಂತೆ ರಾಹುಲ್ ಗಾಂಧಿ ಹಲವು ಬಾರಿ ಸವಾಲು ಹಾಕಿದ್ದಾರೆ. ಐದು ನಿಮಿಷಗಳ ಚರ್ಚೆಯಲ್ಲೇ ಪ್ರಧಾನಿ ದೇಶದ್ರೋಹಿ ಎಂಬುದು ಸಾಬೀತಾಗಲಿದೆ ಎಂದು ಈ ಹಿಂದೆ ಅವರು ಹೇಳಿದ್ದರು.

ಆದರೆ, ರಾಹುಲ್ ಗಾಂಧಿ ಅವರ ಸವಾಲನ್ನು ಬಿಜೆಪಿ ನಾಯಕರು ಲೇವಡಿ ಮಾಡಿದ್ದಾರೆ. ಸಂಸತ್ತಿನಲ್ಲೇ ಚರ್ಚೆಗೆ ಅವಕಾಶವಿದ್ದರೂ ರಾಹುಲ್ ಗಾಂಧಿ ಅದರಿಂದ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ರಾಹುಲ್ ಗಾಂಧಿ ಹೇಳಿಕೆಗೆ ಪ್ರತಿಕ್ರಿಯಿಸಿದ್ದು, ಪ್ರಧಾನಿಯವರು ಚರ್ಚೆಗೆ ಸ್ಥಳ ಆಯ್ಕೆ ಮಾಡಲಿ ಎಂದು ಕೇಳುವ ಬದಲು ಸಂಸತ್ತಿನಲ್ಲೇ ಚರ್ಚೆ ನಡೆಸಬಹುದು. ಲೋಕಸಭೆಯ ವಿರೋಧ ಪಕ್ಷದ ನಾಯಕನಾಗಿ ರಾಹುಲ್ ಗಾಂಧಿ ಸ್ವಲ್ಪ ಗಂಭೀರತೆ ಮತ್ತು ಜವಾಬ್ದಾರಿ ಪ್ರದರ್ಶಿಸಬೇಕು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬೆಂಗಳೂರು ಮೆಟ್ರೋ ಬ್ಲಾಸ್ಟ್ ಮಾಡ್ತೇವೆ, ದಿಲ್‌ಜಿತ್ ಶೋ ಟಾರ್ಗೆಟ್ ಮಾಡಿ ಹುಬ್ಬಳ್ಳಿ-ಬೆಳಗಾವಿ ಪಾಲಿಕೆಗಳಿಗೆ ಬಾಂಬ್ ಬೆದರಿಕೆ: ಅಮಿತಾಭ್ ಬಚ್ಚನ್ ಮನೆ ಮೇಲೂ ಉಗ್ರರ ಕಣ್ಣು!

ಅರಮನೆ ವಶಕ್ಕೆ ಪಡೆಯಲು ಕಾರ್ಯಾಂಗ ದುರ್ಬಳಕೆ ಆಗಿದೆ: ಸರ್ಕಾರ - ರಾಜಮನೆತನ ನಡುವಿನ ಸಂಘರ್ಷಕ್ಕೆ ಯದುವೀರ್ ರಿಯಾಕ್ಷನ್

Sand paper gate: 'ಆತ ಹೇಳಿದ್ದು 100% ಸತ್ಯ'; 8 ವರ್ಷಗಳ ಬಳಿಕ ಮತ್ತೆ ವಿವಾದ ಕೆದಕಿ ಬೆಂಕಿಗೆ ಪೆಟ್ರೋಲ್ ಸುರಿದ David Warner!

ಭಾರತದ ವಿರುದ್ಧ ಮಹಾ ಷಡ್ಯಂತ್ರ?; ಢಾಕಾ ಬೀದಿಗಳ ತೋರಿಸಿ ದೆಹಲಿ ಎಂದ ಚೈನೀಸ್ ವ್ಲಾಗರ್ ಗಳು, ಬಾಂಗ್ಲಾ ಮಾಧ್ಯಮಗಳಿಂದಲೇ ಬಟಾಬಯಲು!

HDK ಒಬ್ಬ ಬೇಜವಾಬ್ದಾರಿ ಕೇಂದ್ರ ಸಚಿವ; ಸಾಬೀತು ಮಾಡದಿದ್ರೆ ಸುಮ್ನೆ ಬಿಡಲ್ಲ: ಲಂಚ ಆರೋಪಕ್ಕೆ ಶಿವಲಿಂಗೇಗೌಡ ಕಿಡಿ!