ಕೆ,ಟಿ ರಾಮರಾವ್ ಮತ್ತು ರೇವಂತ್ ರೆಡ್ಡಿ 
ದೇಶ

ಸ್ವಂತ ಸಹೋದರಿಯನ್ನೇ ಮನೆಯಿಂದ ಹೊರಹಾಕಿದವರು ಯಾರಾದರೂ ಈ ಭೂಮಿಯ ಮೇಲಿದ್ದಾರೆಯೇ: BRS ನಾಯಕರಿಗೆ ರೇವಂತ್ ರೆಡ್ಡಿ

ಒಬ್ಬ ಸಹೋದರನಾಗಿ 'ಇಂದಿರಮ್ಮ' ಸೀರೆಗಳನ್ನು ವಿತರಿಸುವ ಮೂಲಕ ನಾನು ನಿಮ್ಮ ಮೇಲಿರುವ ಕೃತಜ್ಞತೆಯನ್ನು ವ್ಯಕ್ತಪಡಿಸಲು ಪ್ರಯತ್ನಿಸುತ್ತಿದ್ದೇನೆ. ಆದರೆ, ಕೆಟಿಆರ್ ನೋಡಿ, ಕುಟುಂಬದ ಆಸ್ತಿಯನ್ನು ಹಂಚಿಕೊಳ್ಳಲು ಸಿದ್ಧರಿಲ್ಲದ ಅವರು, ತಮ್ಮ ಸಹೋದರಿಯನ್ನೇ ಮನೆಯಿಂದ ಹೊರಹಾಕಿದ್ದಾರೆ

ತೆಲಂಗಾಣ: ಕುಟುಂಬದ ಆಸ್ತಿಯನ್ನು ಹಂಚಿಕೊಳ್ಳಲು ಇಷ್ಟಪಡದ ಕೆಟಿಆರ್, ತಮ್ಮ ಸಹೋದರಿ ಕೆ. ಕವಿತಾ ಅವರನ್ನು ಮನೆಯಿಂದ ಹೊರಹಾಕಿದ್ದಾರೆ ಎಂದು ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ದೂರಿದ್ದಾರೆ.

ಕೊಡಂಗಲ್‌ನಲ್ಲಿ ಮಹಿಳಾ ಸ್ವಸಹಾಯ ಸಂಘಗಳ (SHG) ಸದಸ್ಯರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರೇವಂತ್ ರೆಡ್ಡಿ, ಸ್ವಸಹಾಯ ಸಂಘಗಳ ಸದಸ್ಯರ ಸಂಖ್ಯೆ 70 ಲಕ್ಷಕ್ಕೆ ಏರಿಕೆಯಾಗಿದ್ದು, 2034ರ ವೇಳೆಗೆ ಈ ಸಂಖ್ಯೆಯನ್ನು ಒಂದು ಕೋಟಿಗೆ ಹೆಚ್ಚಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ತಿಳಿಸಿದರು.

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜನ್ಮದಿನವಾದ ನವೆಂಬರ್ 19ರಂದು, ಮಹಿಳೆಯರಿಗೆ ಉಚಿತ 'ಇಂದಿರಮ್ಮ' ಸೀರೆಗಳನ್ನು ವಿತರಿಸುವ ಎರಡನೇ ಹಂತದ ಕಾರ್ಯಕ್ರಮಕ್ಕೆ ಸರ್ಕಾರ ಚಾಲನೆ ನೀಡಲಿದೆ ಎಂದು ಅವರು ಹೇಳಿದರು.

ಒಬ್ಬ ಸಹೋದರನಾಗಿ 'ಇಂದಿರಮ್ಮ' ಸೀರೆಗಳನ್ನು ವಿತರಿಸುವ ಮೂಲಕ ನಾನು ನಿಮ್ಮ ಮೇಲಿರುವ ಕೃತಜ್ಞತೆಯನ್ನು ವ್ಯಕ್ತಪಡಿಸಲು ಪ್ರಯತ್ನಿಸುತ್ತಿದ್ದೇನೆ. ಆದರೆ, ಕೆಟಿಆರ್ ಅವರನ್ನು ನೋಡಿ, ಕುಟುಂಬದ ಆಸ್ತಿಯನ್ನು ಹಂಚಿಕೊಳ್ಳಲು ಸಿದ್ಧರಿಲ್ಲದ ಅವರು, ತಮ್ಮ ಸಹೋದರಿಯನ್ನೇ (ಕೆ. ಕವಿತಾ) ಮನೆಯಿಂದ ಹೊರಹಾಕಿದ್ದಾರೆ. ಜೈಲು ಶಿಕ್ಷೆಯನ್ನು ಅನುಭವಿಸಿ, ಹಲವು ಪ್ರಕರಣಗಳನ್ನು ಎದುರಿಸುತ್ತಿರುವ ಆ ಸಹೋದರಿ ಈಗ ಮನೆಗೆ ಮರಳಿದ್ದಾರೆ, ಎಂದು ರೇವಂತ್ ರೆಡ್ಡಿ ಹೇಳಿದರು.

ದೆಹಲಿ ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕವಿತಾ ಜೈಲು ವಾಸ ಅನುಭವಿಸಿದ್ದು ಮತ್ತು ನಂತರ ಅವರನ್ನು ಬಿಆರ್‌ಎಸ್‌ನಿಂದ ಅಮಾನತುಗೊಳಿಸಿರುವುದನ್ನು ಅವರು ಈ ಸಂದರ್ಭದಲ್ಲಿ ಉಲ್ಲೇಖಿಸಿದರು. ಕವಿತಾ ಅವರು ಇದೀಗ 'ತೆಲಂಗಾಣ ರಕ್ಷಣಾ ಸೇನಾ' ಎಂಬ ತಮ್ಮದೇ ಆದ ಸಂಘಟನೆಯನ್ನು ಸ್ಥಾಪಿಸಿಕೊಂಡಿದ್ದಾರೆ.

ಕವಿತಾ ಏನೇ ತಪ್ಪು ಮಾಡಿದ್ದರೂ, ಆರು ತಿಂಗಳು ಜೈಲಿನಲ್ಲಿ ಕಳೆದು ಮನೆಗೆ ಮರಳಿದಾಗ ಸಹೋದರನಾಗಿ ಅವರನ್ನು ನೋಡಿಕೊಳ್ಳಬೇಕಿತ್ತು. ಆಕೆ ತಪ್ಪು ಮಾಡಿದ್ದಾಳೆ' ಮತ್ತು 'ಮದ್ಯ ಮಾರಾಟ ಮಾಡಿದ್ದಾಳೆ' ಎಂದು ಆರೋಪಿಸಿ ಸ್ವಂತ ಸಹೋದರಿಯನ್ನೇ ಮನೆಯಿಂದ ಹೊರಹಾಕಿದ ಬೇರೆ ಯಾರಾದರೂ ಈ ಭೂಮಿಯ ಮೇಲಿದ್ದಾರೆಯೇ? ಎಂದು ರೇವಂತ್ ರೆಡ್ಡಿ ಪ್ರಶ್ನಿಸಿದರು.

ಬಿಆರ್‌ಎಸ್ ಪಕ್ಷವು ಮಹಿಳೆಯರ ಕಲ್ಯಾಣಕ್ಕಾಗಿ ಕೆಲಸ ಮಾಡಿದೆ ಎಂಬ ಕೆ.ಟಿ. ರಾಮರಾವ್ ಅವರ ಹೇಳಿಕೆಗಳನ್ನು ಉಲ್ಲೇಖಿಸಿದ ರೇವಂತ್ ರೆಡ್ಡಿ, ತಮ್ಮ ಸ್ವಂತ ಸಹೋದರಿಯನ್ನೇ ನಡೆಸಿಕೊಂಡ ರೀತಿಯನ್ನು ಗಮನಿಸಿದರೆ, ಅವರ ಮಾತುಗಳ ವಿಶ್ವಾಸಾರ್ಹತೆ ಏನು ಎಂದು ಪ್ರಶ್ನಿಸಿದರು.

ಬಿಆರ್‌ಎಸ್ ಅಧ್ಯಕ್ಷ ಕೆ. ಚಂದ್ರಶೇಖರ ರಾವ್ (ಕೆಸಿಆರ್) ಅವರನ್ನು ಗುರಿಯಾಗಿಸಿಕೊಂಡು ಮಾತನಾಡಿದ ರೇವಂತ್ ರೆಡ್ಡಿ, ಒಬ್ಬ ತಂದೆಯಾಗಿ ಅವರು ತಮ್ಮ ಮಗನಿಗೆ, ಸಹೋದರಿಯನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಸಲಹೆ ನೀಡಬೇಕಿತ್ತು. ಆದರೆ, ಕೆಸಿಆರ್ ಆ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ ಎಂದು ಹೇಳಿದರು. "ತಮ್ಮ ಕುಟುಂಬದ ಸದಸ್ಯರಿಗೇ ಒಳ್ಳೆಯ ವಿಷಯಗಳನ್ನು ಕಲಿಸಲು ಸಾಧ್ಯವಾಗದ ವ್ಯಕ್ತಿ (ಕೆಸಿಆರ್), ತೆಲಂಗಾಣದ ನಾಲ್ಕು ಕೋಟಿ ಜನರಿಗೆ ಹೇಗೆ ಒಳಿತು ಮಾಡಬಲ್ಲರು?" ಎಂದು ಅವರು ಪ್ರಶ್ನಿಸಿದರು ಮುಖ್ಯಮಂತ್ರಿಯಾಗಿ ತಮ್ಮ 10 ವರ್ಷಗಳ ಅಧಿಕಾರಾವಧಿಯಲ್ಲಿ ಕೆಸಿಆರ್ ರಾಜ್ಯಕ್ಕೆ ಅನ್ಯಾಯವೆಸಗಿದ್ದಾರೆ ಎಂದು ರೆಡ್ಡಿ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ವಿಷಗಾಳಿಯ ಪ್ರಕೋಪ: ಅಪಾಯಕಾರಿ ಮಟ್ಟಕ್ಕೆ ತಲುಪಿದ ವಾಯುಮಾಲಿನ್ಯ; 1,331ಕ್ಕೆ ಏರಿದ AQI, ದಟ್ಟ ಹೊಗೆ ಹೊದಿಕೆಯಲ್ಲಿ ರಾಷ್ಟ್ರ ರಾಜಧಾನಿ..!

West Asia war: 'ಯುದ್ಧ ನಿಲ್ಲಿಸಿ ಸಂಧಾನಕ್ಕೆ ಬನ್ನಿ, ಇಲ್ಲದಿದ್ದರೆ ನರಕ ಸೃಷ್ಟಿಸುತ್ತೇವೆ': ಅಮೆರಿಕ ಅಧ್ಯಕ್ಷ ಟ್ರಂಪ್‌ಗೆ ಇರಾನ್ ಖಡಕ್ ಎಚ್ಚರಿಕೆ..!

DC ಹುದ್ದೆಯಲ್ಲಿ ಮುಂದುವರಿಯಲು 75 ಲಕ್ಷ ರೂ. ಲಂಚ?: ಹಾಸನ ಜಿಲ್ಲಾಡಳಿತದಲ್ಲಿ ಸಂಚಲನ ಸೃಷ್ಟಿಸಿದ ವಾಟ್ಸ್‌ಆ್ಯಪ್ ಚಾಟ್, ತನಿಖೆಗೆ HDK ಒತ್ತಾಯ..!

ವಾಹನ ಸವಾರರೇ ಗಮನಿಸಿ: ಮೇಖ್ರಿ ಸರ್ಕಲ್ ಎಲಿವೇಟೆಡ್ ಕಾರಿಡಾರ್ ಕಾಮಗಾರಿ ಆರಂಭ; ಮುಂದಿನ 18 ತಿಂಗಳು ಸಂಚಾರ ಬದಲಾವಣೆ..!

ಒಂದೇ ತಿಂಗಳಲ್ಲಿ LPG ದರ ಕೆ.ಜಿಗೆ 11 ರೂ. ಹೆಚ್ಚಳ: ಆಟೋ ಚಾಲಕರಿಗೆ ಗಾಯದ ಮೇಲೆ ಬರೆ, ಪ್ರಯಾಣ ದರ ಮಾತ್ರ ಯಥಾಸ್ಥಿತಿ..!