ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ 
ದೇಶ

'ಗೋಪಾಲಕರನ್ನು ಹೀಯಾಳಿಸುವ ಮೂಲಕ ಯೋಗಿ ಆದಿತ್ಯನಾಥ್ ಭಗವಾನ್ ಕೃಷ್ಣನಿಗೆ ಅವಮಾನ ಮಾಡಿದ್ದಾರೆ': ಅಖಿಲೇಶ್ ಯಾದವ್

ಅಕ್ಟೋಬರ್ 24ರಂದು ಉತ್ತರ ಪ್ರದೇಶದಲ್ಲಿನ ಅಕ್ರಮ ನುಸುಳುಕೋರರ ಕುರಿತು ಅಖಿಲೇಶ್ ಯಾದವ್ ನೀಡಿದ್ದ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು.

2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲನುಭವಿಸಲಿದೆ ಎಂದು ಹೇಳಿರುವ ಸಮಾಜವಾದಿ ಪಕ್ಷದ (SP) ಅಧ್ಯಕ್ಷ ಅಖಿಲೇಶ್ ಯಾದವ್, ಗೋಪಾಲಕರ(ಗೋವುಗಳನ್ನು ಮೇಯಿಸುವವರು) ಬಗ್ಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೀಡಿರುವ ಹೇಳಿಕೆಗಳು ಪರೋಕ್ಷವಾಗಿ ಶ್ರೀಕೃಷ್ಣನಿಗೆ ಮಾಡಿದ ಅವಮಾನ ಎಂದು ಆರೋಪಿಸಿದ್ದಾರೆ. ಉತ್ತರಾಖಂಡದ ಜನರ ಕುರಿತು ಈ ಹಿಂದೆ ಅಖಿಲೇಶ್ ಯಾದವ್ ನೀಡಿದ್ದ ಹೇಳಿಕೆಗೆ ಯೋಗಿ ಆದಿತ್ಯನಾಥ್ ತಿರುಗೇಟು ನೀಡಿದ ಬೆನ್ನಲ್ಲೇ ಈ ವಾಗ್ದಾಳಿ ನಡೆದಿದೆ.

ಅಕ್ಟೋಬರ್ 24ರಂದು ಉತ್ತರ ಪ್ರದೇಶದಲ್ಲಿನ ಅಕ್ರಮ ನುಸುಳುಕೋರರ ಕುರಿತು ಅಖಿಲೇಶ್ ಯಾದವ್ ನೀಡಿದ್ದ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ರಾಜ್ಯದಲ್ಲಿ ನುಸುಳುಕೋರರು ಇದ್ದಾರೆ ಎಂಬ ಬಿಜೆಪಿಯ ಆರೋಪಗಳನ್ನು ಪ್ರಶ್ನಿಸಿದ್ದ ಅವರು, ಉತ್ತರಾಖಂಡದ ಜನರೇ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ನುಸುಳುಕೋರರಾಗಿದ್ದಾರೆ ಎಂದು ಹೇಳಿದ್ದರು.

ಈ ಹೇಳಿಕೆಯನ್ನು ಉತ್ತರಾಖಂಡ ಮತ್ತು ಅಲ್ಲಿನ ಜನರಿಗೆ ಮಾಡಿದ ಅವಮಾನ ಎಂದು ಬಿಜೆಪಿ ಟೀಕಿಸಿತ್ತು. ಇದಕ್ಕೆ ಸ್ಪಷ್ಟನೆ ನೀಡಿದ್ದ ಎಸ್‌ಪಿ, ಯಾದವ್ ಅವರು ಬೆಟ್ಟದ ರಾಜ್ಯದ ಜನರ ಬಗ್ಗೆ ಅಲ್ಲ, ಒಬ್ಬ ವ್ಯಕ್ತಿಯನ್ನು ಉದ್ದೇಶಿಸಿ ಮಾತನಾಡಿದ್ದರು ಎಂದು ಹೇಳಿತ್ತು.

ಲಖನೌನಲ್ಲಿ ನಡೆದ ಉತ್ತರಾಖಂಡ ಮಹೋತ್ಸವದಲ್ಲಿ ಈ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಆದಿತ್ಯನಾಥ್, ಅಖಿಲೇಶ್ ಯಾದವ್ ಅವರ ಹೆಸರನ್ನು ನೇರವಾಗಿ ಪ್ರಸ್ತಾಪಿಸದೆ, ಉತ್ತರಾಖಂಡದ ಒಬ್ಬ ಮಗಳು ಇಲ್ಲದಿದ್ದರೆ, ಅವರು ಸೈಫೈನಲ್ಲಿ ಎಮ್ಮೆಗಳನ್ನು ಮೇಯಿಸುತ್ತಿರುತ್ತಿದ್ದರು ಎಂದು ವ್ಯಂಗ್ಯವಾಡಿದ್ದರು. ಇದು ಉತ್ತರಾಖಂಡ ಮೂಲದ ಅಖಿಲೇಶ್ ಯಾದವ್ ಅವರ ಪತ್ನಿ ಡಿಂಪಲ್ ಯಾದವ್ ಅವರನ್ನು ಉಲ್ಲೇಖಿಸಿದ ಮಾತಾಗಿತ್ತು. ಬೆಟ್ಟದ ರಾಜ್ಯದ ಜನರನ್ನು ಟೀಕಿಸುವವರು ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ನುಸುಳುಕೋರರನ್ನು ಅಪ್ಪಿಕೊಳ್ಳುತ್ತಿದ್ದಾರೆ ಎಂದೂ ಆದಿತ್ಯನಾಥ್ ಆರೋಪಿಸಿದ್ದರು.

ಇಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅಖಿಲೇಶ್ ಯಾದವ್, ಆದಿತ್ಯನಾಥ್ ಅವರ ಹೇಳಿಕೆಯ ವಿಡಿಯೊ ತುಣುಕನ್ನು ಹಂಚಿಕೊಂಡು, ಗೋಪಾಲಕರ ಕುರಿತು ಮಾತನಾಡುವ ಮೂಲಕ ಮುಖ್ಯಮಂತ್ರಿ ಶ್ರೀಕೃಷ್ಣನಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಗೋಪಾಲಕರ ವಿರುದ್ಧ ಅವಹೇಳನಕಾರಿ ಭಾಷೆ ಬಳಸುವ ಮೂಲಕ ಉತ್ತರ ಪ್ರದೇಶದ ಮುಖ್ಯಮಂತ್ರಿ ಪರೋಕ್ಷವಾಗಿ ಗೋಪಾಲನಾದ ಶ್ರೀಕೃಷ್ಣನಿಗೆ ಅವಮಾನ ಮಾಡಿದ್ದಾರೆ. ಇದು ಕ್ಷಮಿಸಲಾರದ ಅಪರಾಧ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.

ಮೊದಲು ಅಯೋಧ್ಯೆಯ ರಾಮಮಂದಿರಕ್ಕೆ ಬಂದ ಕಾಣಿಕೆ, ದೇಣಿಗೆ ಮತ್ತು ಕೊಡುಗೆಗಳ ಕಳ್ಳತನದಲ್ಲಿ ದೊಡ್ಡ ಗುಂಪಿನೊಂದಿಗೆ ಭಾಗಿಯಾಗಿದ್ದ ಅವರು, ಸತ್ಯ ಹೊರಬರಬಹುದು ಎಂಬ ಭಯದಿಂದ ಅವರಿಗೆ ಕ್ಲೀನ್ ಚಿಟ್ ನೀಡಿದರು. ಈಗ ಶ್ರೀಕೃಷ್ಣನ ಮೇಲೆ ದಾಳಿ ನಡೆಸುತ್ತಿದ್ದಾರೆ. ಸನಾತನ ಧರ್ಮದಿಂದ ಪ್ರತ್ಯೇಕವಾಗಿ ತಮ್ಮದೇ ಆದ ಅಧಿಕಾರವನ್ನು ಸ್ಥಾಪಿಸಿಕೊಳ್ಳುವ ಉದ್ದೇಶದಿಂದ ಅವರು ಇಂತಹ ಆಕ್ಷೇಪಾರ್ಹ ಭಾಷೆ ಬಳಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಅವರು ಶಿವನ ನಿಜವಾದ ಭಕ್ತರೂ ಅಲ್ಲ, ರಾಮನ ಭಕ್ತರೂ ಅಲ್ಲ, ಕೃಷ್ಣನ ಭಕ್ತರೂ ಅಲ್ಲ, ದೇವಿ ಅಹಲ್ಯಾಬಾಯಿ ಅವರ ಭಕ್ತರೂ ಅಲ್ಲ ಎಂದು ಆದಿತ್ಯನಾಥ್ ಅವರ ಹೆಸರನ್ನು ನೇರವಾಗಿ ಉಲ್ಲೇಖಿಸದೆ ಯಾದವ್ ತಮ್ಮ ಪೋಸ್ಟ್‌ನಲ್ಲಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CRPF ಯೋಧರ ಮೇಲೆ ಗುಂಡಿನ ದಾಳಿ: ಹೊಣೆ ಹೊತ್ತ ಹೊಸ ಉಗ್ರ ಸಂಘಟನೆ; RSS, 'ಹಿಂದುತ್ವ ಆಡಳಿತ'ಕ್ಕೆ 'ವಿನಾಶಕಾರಿ' ಬೆದರಿಕೆ!

'₹7 ಕೋಟಿ ಕೊಡಿ, ಇಲ್ಲದಿದ್ದರೆ...': ಬಿಷ್ಣೋಯ್ ಗ್ಯಾಂಗ್‌ನಿಂದ ಅರವಿಂದ್ ಕೇಜ್ರಿವಾಲ್, ಅವರ ಮಗಳಿಗೆ ಕೊಲೆ ಬೆದರಿಕೆ!

'ಟಾಕ್ಸಿಕ್'​ ಹಸಿಬಿಸಿ ದೃಶ್ಯಗಳ ಟ್ರೋಲಿಂಗ್‌ ಬಗ್ಗೆ ಮೌನ ಮುರಿದ ಕಿಯಾರಾ; ಪತಿ ಸಿದ್ಧಾರ್ಥ್ ಪ್ರತಿಕ್ರಿಯೆ ಬಹಿರಂಗ!

ದೀಪಾವಳಿ ಹಬ್ಬಕ್ಕೆ ಕರೀನಾ ಕಪೂರ್ ಧರಿಸಿದ್ದ ಪೆಂಡೆಂಟ್‌ನಲ್ಲಿ ಕುರಾನ್‌ ಪದ್ಯ; ಬಾಲಿವುಡ್ ನಟಿಗೆ ಲೀಗಲ್ ನೋಟಿಸ್‌!

ನಟಿ-ಮಾಡೆಲ್ ಸಮ್ರೀನ್ ಜತೆ ಸ್ಟಾರ್‌ ಕ್ರಿಕೆಟರ್‌ ಅರ್ಷ್‌ದೀಪ್ ಸಿಂಗ್ ಎಂಗೇಜ್‌ಮೆಂಟ್; ಫೋಟೋ ಹಂಚಿಕೊಂಡ ಗರ್ಲ್​ಫ್ರೆಂಡ್!