ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ 
ದೇಶ

ಹಿಂದೆ ಯಾಕೆ ಪಟಾಕಿ ಹೊಡೆತಿದ್ರು ಗೊತ್ತಾ? ದೀಪಾವಳಿ ಆಚರಣೆ ಸಮರ್ಥಿಸಿಕೊಂಡ ಆರ್‌ಎಸ್‌ಎಸ್ ಮುಖ್ಯಸ್ಥ!

ತುಪ್ಪ ಮತ್ತು ಎಣ್ಣೆಯ ದೀಪಗಳನ್ನು ಬೆಳಗಿಸುವುದರಿಂದ ಪರಿಸರದಲ್ಲಿ ಒಂದು ವಿಶೇಷ ರೀತಿಯ ವಾತಾವರಣ ಸೃಷ್ಟಿಯಾಗುತ್ತದೆ. "ಇಂತಹ ಆಚರಣೆಗಳ ಹಿಂದಿರುವ ವಿಜ್ಞಾನವನ್ನು ಅರ್ಥಮಾಡಿಕೊಂಡು ಅವುಗಳನ್ನು ಪಾಲಿಸಬೇಕು ಎಂದು ಮೋಹನ್ ಭಾಗವತ್ ಹೇಳಿದ್ದಾರೆ.

ನಾಗ್ಫುರ: ಸಾಂಪ್ರದಾಯಿಕ ದೀಪಾವಳಿ ಹಬ್ಬ ಆಚರಣೆ ಹಿಂದೆ ವೈಜ್ಞಾನಿಕ ಆಧಾರವಿದೆ ಎಂದು ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಪ್ರತಿಪಾದಿಸಿದ್ದಾರೆ.

'ಮಹೇಶ್ವರಿ ಪಂಚಾಯತ್' ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಭಾಗವತ್, ತುಪ್ಪ ಮತ್ತು ಎಣ್ಣೆಯ ದೀಪಗಳನ್ನು ಬೆಳಗಿಸುವುದರಿಂದ ಪರಿಸರದಲ್ಲಿ ಒಂದು ವಿಶೇಷ ರೀತಿಯ ವಾತಾವರಣ ಸೃಷ್ಟಿಯಾಗುತ್ತದೆ. "ಇಂತಹ ಆಚರಣೆಗಳ ಹಿಂದಿರುವ ವಿಜ್ಞಾನವನ್ನು ಅರ್ಥಮಾಡಿಕೊಂಡು ಅವುಗಳನ್ನು ಪಾಲಿಸಬೇಕು. ಇದು ವಾತಾವರಣವನ್ನು ಶುದ್ಧವಾಗಿರಿಸುವುದಲ್ಲದೆ, ನಮ್ಮ ಜೀವನಕ್ಕೂ ಸಂತೋಷವನ್ನು ತರುತ್ತದೆ ಎಂದು ಅವರು ತಿಳಿಸಿದರು.

ಹಿಂದಿನ ಕಾಲದಲ್ಲಿ ಬಳಸುತ್ತಿದ್ದ ಪಟಾಕಿಗಳು ರಾಸಾಯನಿಕಗಳಿಂದ ತಯಾರಾಗಿರುತ್ತಿರಲಿಲ್ಲ. ಬದಲಾಗಿ, ಅವು ಕೀಟಗಳನ್ನು ಕೊಲ್ಲಲು ಮತ್ತು ವಾತಾವರಣವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತಿದ್ದವು ಎಂದು ಅವರು ವಾದಿಸಿದ್ದಾರೆ.

ಹಬ್ಬಗಳು ಭಾರತೀಯ ಸಮಾಜದ ಅವಿಭಾಜ್ಯ ಅಂಗಗಳಾಗಿವೆ. ಇವು ಪ್ರಾಚೀನ ಕಾಲದಿಂದಲೂ ಆಚರಿಸಿಕೊಂಡು ಬರಲಾಗುತ್ತಿದ್ದು, ಮುಂದೆಯೂ ಮುಂದುವರಿಯಲಿವೆ ಎಂದು ಅವರು ಹೇಳಿದ್ದಾರೆ.

ಹಬ್ಬಗಳು ಸಮಾಜವನ್ನು 'ಜೀವಂತ'ವಾಗಿರಿಸುತ್ತವೆ. ಕೆಲವರು ಇವುಗಳನ್ನು ನಿಲ್ಲಿಸಲು ಪ್ರಯತ್ನಿಸಿದರೂ, ಅವು ಎಂದಿಗೂ ನಿಲ್ಲುವುದಿಲ್ಲ. ಹಬ್ಬಗಳನ್ನು ಅವುಗಳ "ಶುದ್ಧ ರೂಪ"ದಲ್ಲಿಯೇ ಆಚರಿಸಬೇಕು, ಆಗ ಮಾತ್ರ ಜನರು ಅವುಗಳಿಗೆ ಸಂಬಂಧಿಸಿದ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಸಾಂಪ್ರದಾಯಿಕ ಆಚರಣೆಗಳನ್ನು ಪಾಲಿಸುವುದರಿಂದ ವ್ಯಕ್ತಿ, ಸಮಾಜ ಮತ್ತು ಮಾನವಕುಲದ ಒಳಿತಿಗೆ ಕೊಡುಗೆ ಸಿಗುವುದಲ್ಲದೆ, ಪರಿಸರವನ್ನು ರಕ್ಷಿಸಲೂ ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ನಾವೆಲ್ಲರೂ ಇದರ ಬಗ್ಗೆ ಕಾಳಜಿ ವಹಿಸಿದರೆ, ಜೀವನದಲ್ಲಿ ಯಾವುದರ ಬಗ್ಗೆಯೂ ಚಿಂತಿಸುವ ಅಗತ್ಯವಿರುವುದಿಲ್ಲ. ಇದರಿಂದ ವ್ಯಕ್ತಿ, ಸಮಾಜ, ಇಡೀ ಮಾನವಕುಲ ಮತ್ತು ಪರಿಸರ ಎಲ್ಲವೂ ಸುರಕ್ಷಿತವಾಗಿರುತ್ತವೆ. ದೀಪಾವಳಿಯು ಜಗತ್ತಿನಾದ್ಯಂತ ಮನ್ನಣೆ ಪಡೆಯುತ್ತಿದ್ದು, ಭಾರತದ ಗಡಿಯಾಚೆಗೂ ಹೆಚ್ಚಿನ ಮಹತ್ವವನ್ನು ಪಡೆದುಕೊಳ್ಳುತ್ತಿದೆ ಎಂದೂ ಅವರು ಹೇಳಿದ್ದಾರೆ.

ಹಿಂದೆ ದೀಪಾವಳಿಯನ್ನು ಕೇವಲ ಭಾರತದಲ್ಲಿ ಮಾತ್ರ ಆಚರಿಸಲಾಗುತ್ತಿತ್ತು, ಆದರೆ ಈಗ ಅಮೆರಿಕ ಮತ್ತು ಯುಕೆ ಸಂಸತ್ತುಗಳಲ್ಲಿಯೂ ಇದನ್ನು ಆಚರಿಸಲಾಗುತ್ತಿದೆ. ಪ್ರಪಂಚದಾದ್ಯಂತ ಜನರು ಈ ಹಬ್ಬದ ಮಹತ್ವವನ್ನು ಗುರುತಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಎಲ್ಲರಿಗೂ ಉತ್ತಮ ಜೀವನವನ್ನು ಖಚಿತಪಡಿಸಿಕೊಳ್ಳಲು ಈ ನಿಯಮಗಳನ್ನು ರೂಪಿಸಲಾಗಿದ್ದು, ಜನರು ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳಬೇಕು. "ನಾವು ವಾಸಿಸುವ ಮನೆ, ಸಮಾಜ ಮತ್ತು ನಗರದಲ್ಲಿ ನಿಯಮಗಳು ಹಾಗೂ ಕಾನೂನುಗಳು ಎಲ್ಲರಿಗೂ ಅನ್ವಯಿಸುತ್ತವೆ ಮತ್ತು ಪ್ರತಿಯೊಬ್ಬರ ಜೀವನವನ್ನು ಉತ್ತಮಗೊಳಿಸುವ ಉದ್ದೇಶದಿಂದಲೇ ಇವುಗಳನ್ನು ರೂಪಿಸಲಾಗಿದೆ. ನಾವು ನಮ್ಮ ತಪ್ಪುಗಳನ್ನು ಇನ್ನೂ ತಿದ್ದಿಕೊಂಡಿಲ್ಲದಿದ್ದರೆ, ಈಗಲಾದರೂ ಅದನ್ನು ಪ್ರಾರಂಭಿಸಬೇಕು ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮಹಿಳಾ ಮೀಸಲಾತಿ ಮಸೂದೆ: ಸಂಸತ್ತಿನ ವಿಶೇಷ ಅಧಿವೇಶನಕ್ಕೆ ಕೇಂದ್ರ ಚಿಂತನೆ,15-18 ಮತಗಳ ಅಂತರದಲ್ಲಿ ಗೆಲ್ಲುವ ನಿರೀಕ್ಷೆ!

'ಜೈಲಿನಲ್ಲಿದ್ದ ಚಾರ್ಲ್ಸ್ ಶೋಭರಾಜ್ ಗರ್ಲ್​ಫ್ರೆಂಡ್ ಗೂ ಸೋನಿಯಾ ಗಾಂಧಿ ಮನೆಯೂಟ ತಂದಾಗ...': ಆತ್ಮಕಥೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ!

ಮೋದಿ ಸರ್ಕಾರ ಸುಗಮವಾಗಿ ನಡೆಯಲು ನಮ್ಮದೇ ನೆರವು; ಆದರೆ ಕೇಂದ್ರದಿಂದ ನಮಗೇ ವಂಚನೆ- ಪ್ರಿಯಾಂಕ್ ಖರ್ಗೆ

ಬೆನ್ನು ನೋವು ಹೇಗಿದೆ? ಇನ್ನು ಎಷ್ಟು ದಿನ ಇರಬೇಕು? ನರಕ ಆಗ್ತಿದೆ...: ಪರಸ್ಪರ ಯೋಗ ಕ್ಷೇಮ ವಿಚಾರಿಸಿಕೊಂಡ ಸುಬ್ಬಾ – ಸುಬ್ಬಿ!

ಚುನಾವಣೆ ಮಾದರಿಯಲ್ಲಿ kpsc ಪರೀಕ್ಷೆ: ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ ಸಿಎಂ ಡಿಕೆ ಶಿವಕುಮಾರ್ ಎಚ್ಚರಿಕೆ