ಪ್ರಧಾನಿ ನರೇಂದ್ರ ಮೋದಿ 
ದೇಶ

'ಯಶೋಗಾಥೆಗಳನ್ನು ಪ್ರಚುರಪಡಿಸಿ': ಪತ್ರಿಕಾ ಪ್ರಕಟಣೆಗಳಿಂದ ಹಿಡಿದು ಇನ್‌ಸ್ಟಾಗ್ರಾಂ ರೀಲ್ಸ್‌ವರೆಗೆ ಮಾಧ್ಯಮಗಳೊಂದಿಗೆ ನನಗೆ ಒಡನಾಟವಿದೆ ಎಂದ ಪ್ರಧಾನಿ!

ಸುದ್ದಿ ಜಗತ್ತಿನಲ್ಲಿ ಅಸಾಧ್ಯವಾದುದು ಯಾವುದೂ ಇಲ್ಲ. ಬಿಕ್ಕಟ್ಟು ಮತ್ತು ವಿಪತ್ತಿನ ಸಮಯದಲ್ಲೂ ಕ್ಷೇತ್ರ ವರದಿಗಾರರು (field reporters) ಎಲ್ಲೆಡೆ ತಲುಪುತ್ತಾರೆ ಎಂದು ಬಣ್ಣಿಸಿದರು.

ನವದೆಹಲಿ: ದೇಶದ 'ಯಶೋಗಾಥೆಗಳನ್ನು ಪ್ರಚುರಪಡಿಸುವ ಕುರಿತು ಕೆಲಸ ಮಾಡುವಂತೆ' ಮಾಧ್ಯಮಗಳಿಗೆ ಮನವಿ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಈ ನಿಟ್ಟಿನಲ್ಲಿ ಈಗಾಗಲೇ ಸಾಕಷ್ಟು ಕೆಲಸಗಳು ನಡೆಯುತ್ತಿವೆ ಎಂದು ಗುರುವಾರ ಹೇಳಿದರು.

ಇಲ್ಲಿನ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಪತ್ರಕರ್ತರಿಗಾಗಿ ಆಯೋಜಿಸಿದ್ದ 'ದೀಪಾವಳಿ ಮಿಲನ್' ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ವಿವಿಧ ಕ್ಷೇತ್ರಗಳಲ್ಲಿ ತಮ್ಮ ಸರ್ಕಾರ ಸಾಧಿಸಿರುವ ಪ್ರಗತಿಯನ್ನು ಎತ್ತಿ ತೋರಿಸಿದರು. ಅಲ್ಲದೆ, ಭಾರತವು ಖಂಡಿತವಾಗಿಯೂ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿದೆ ಎಂದು ದೃಢವಾಗಿ ಹೇಳಿದರು.

'ಎನ್‌ಡಿಎ ಸರ್ಕಾರವು ದೇಶದಿಂದ ಬಡತನವನ್ನು ಹೋಗಲಾಡಿಸುವಲ್ಲಿ ಯಶಸ್ವಿಯಾಗಿದೆ ಮತ್ತು 50 ಕೋಟಿ ಜನರನ್ನು ಬಡತನ ರೇಖೆಯಿಂದ ಮೇಲಕ್ಕೆ ತಂದಿದೆ. ಹಿಂದೆ 'ಗರೀಬಿ ಹಟಾವೋ' (ಬಡತನ ನಿರ್ಮೂಲನೆ) ಎಂಬ ಘೋಷಣೆಗಳಿದ್ದವು. ಆದರೆ, ಈ ಸರ್ಕಾರವು ಬಡತನವನ್ನು ಹೋಗಲಾಡಿಸಿದೆ. ವಿಶ್ವ ಬ್ಯಾಂಕ್‌ನ ಪ್ರಕಾರ, ಕಳೆದ 12 ವರ್ಷಗಳಲ್ಲಿ 50 ಕೋಟಿ ಜನರು ಬಡತನ ರೇಖೆಯಿಂದ ಮೇಲಕ್ಕೆ ಬಂದಿದ್ದಾರೆ' ಎಂದು ಅವರು ತಿಳಿಸಿದರು.

ಇಂತಹ ಕಾರ್ಯಕ್ರಮಗಳಲ್ಲಿ ಕುರ್ಚಿಗಳನ್ನು ಜೋಡಿಸುತ್ತಿದ್ದ ದಿನಗಳಿಂದಲೂ ತಮಗೆ ಮಾಧ್ಯಮಗಳೊಂದಿಗೆ ದೀರ್ಘಕಾಲದ ಒಡನಾಟವಿದೆ. 'ನಾನು ಮಾಧ್ಯಮಗಳೊಂದಿಗೆ ವ್ಯವಹರಿಸಿದ್ದೇನೆ ಮತ್ತು ಪತ್ರಿಕಾ ಪ್ರಕಟಣೆಗಳ ಕಾಲದಿಂದ ಹಿಡಿದು ಇನ್‌ಸ್ಟಾಗ್ರಾಂ ರೀಲ್ಸ್‌ವರೆಗಿನ ಅವುಗಳ ವಿಕಾಸವನ್ನು ಕಂಡಿದ್ದೇನೆ' ಎಂದು ಮೋದಿ ಹೇಳಿದರು.

ಸುದ್ದಿ ಜಗತ್ತಿನಲ್ಲಿ ಅಸಾಧ್ಯವಾದುದು ಯಾವುದೂ ಇಲ್ಲ. ಬಿಕ್ಕಟ್ಟು ಮತ್ತು ವಿಪತ್ತಿನ ಸಮಯದಲ್ಲೂ ಕ್ಷೇತ್ರ ವರದಿಗಾರರು (field reporters) ಎಲ್ಲೆಡೆ ತಲುಪುತ್ತಾರೆ ಎಂದು ಬಣ್ಣಿಸಿದರು.

ಮಾದಕವಸ್ತು ದುರುಪಯೋಗದ ವಿರುದ್ಧದ ಹೋರಾಟದ ಬಗ್ಗೆ ಜಾಗೃತಿ ಮೂಡಿಸುವಂತೆಯೂ ಮನವಿ ಮಾಡಿದ ಅವರು, ಭಾರತೀಯ ಮಾಧ್ಯಮಗಳು ದೇಶದ ಯಶೋಗಾಥೆಗಳನ್ನು (success stories) ಪ್ರಚುರಪಡಿಸುವ ಕೆಲಸ ಮಾಡಬೇಕೆಂದು ನಾನು ಕೋರುತ್ತೇನೆ. ಇಂತಹ ಕೆಲಸ ಈಗಾಗಲೇ ಸಾಕಷ್ಟು ನಡೆಯುತ್ತಿದೆ' ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಶ್ಮೀರ: ಕರ್ತವ್ಯದ ವೇಳೆ ನಾಪತ್ತೆಯಾಗಿದ್ದ ಇಬ್ಬರು ಪೊಲೀಸ್ ಅಧಿಕಾರಿಗಳು ಶವವಾಗಿ ಪತ್ತೆ

'ಟಾಕ್ಸಿಕ್'​ ಹಸಿಬಿಸಿ ದೃಶ್ಯಗಳ ಟ್ರೋಲಿಂಗ್‌ ಬಗ್ಗೆ ಮೌನ ಮುರಿದ ಕಿಯಾರಾ; ಪತಿ ಸಿದ್ಧಾರ್ಥ್ ಪ್ರತಿಕ್ರಿಯೆ ಬಹಿರಂಗ!

ದೀಪಾವಳಿ ಹಬ್ಬಕ್ಕೆ ಕರೀನಾ ಕಪೂರ್ ಧರಿಸಿದ್ದ ಪೆಂಡೆಂಟ್‌ನಲ್ಲಿ ಕುರಾನ್‌ ಪದ್ಯ; ಬಾಲಿವುಡ್ ನಟಿಗೆ ಲೀಗಲ್ ನೋಟಿಸ್‌!

ನಟಿ-ಮಾಡೆಲ್ ಸಮ್ರೀನ್ ಜತೆ ಸ್ಟಾರ್‌ ಕ್ರಿಕೆಟರ್‌ ಅರ್ಷ್‌ದೀಪ್ ಸಿಂಗ್ ಎಂಗೇಜ್‌ಮೆಂಟ್; ಫೋಟೋ ಹಂಚಿಕೊಂಡ ಗರ್ಲ್​ಫ್ರೆಂಡ್!

ಚೀನಾ Spy ಮೋಹಕ್ಕೆ ಬಿದ್ದರಾ ಟೆಕ್ ದಿಗ್ಗಜ..? Nvidia CEO ಕುರ್ಚಿಗೆ ಕುತ್ತು, Jensen Huang ತಲೆದಂಡಕ್ಕೆ ಮುಹೂರ್ತ ಫಿಕ್ಸ್..?