ರಾಹುಲ್ ಗಾಂಧಿ - ನರೇಂದ್ರ ಮೋದಿ  
ದೇಶ

'ನನ್ನೊಂದಿಗೆ ಮುಖಾಮುಖಿ ಚರ್ಚೆ ನಂತರ ನರೇಂದ್ರ ಮೋದಿ ಪ್ರಧಾನಿಯಾಗಿ ಉಳಿಯುವುದಿಲ್ಲ: ರಾಹುಲ್ ಗಾಂಧಿ

'ನರೇಂದ್ರ ಮೋದಿ ನನ್ನ ವಿರುದ್ಧ ಆರೋಪಗಳನ್ನು ಮಾಡಲಿ ಮತ್ತು ನಾನು ಅವರ ವಿರುದ್ಧ ಆರೋಪಗಳನ್ನು ಮಾಡುತ್ತೇನೆ. ಅವರು ಬರಲಿ; ಒಂದು ಮೇಜಿನ ಇತ್ತ ಕಡೆ ನರೇಂದ್ರ ಮೋದಿ ಜಿ ಇರಲಿ, ಅತ್ತ ಕಡೆ ನಾನು ಇರುತ್ತೇನೆ' ಎಂದು ಹೇಳಿದರು.

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮತ್ತೊಮ್ಮೆ ಬಹಿರಂಗ ಚರ್ಚೆಗೆ (debate) ಬರುವಂತೆ ಸವಾಲು ಹಾಕಿದ್ದು, ತಮ್ಮೊಂದಿಗೆ ಮುಖಾಮುಖಿ ಚರ್ಚೆ ನಡೆಸಿದ ನಂತರ ಮೋದಿ ಅವರು ಅಧಿಕಾರದಲ್ಲಿ ಉಳಿಯುವುದಿಲ್ಲ ಎಂದಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ನಡೆದ 'ಆಸ್ಕ್ ಮೀ' (Ask Me) ಸಂವಾದದ ವೇಳೆ, ಸಂಸತ್ತಿನಲ್ಲಿ ಚರ್ಚೆ ನಡೆಸಬಹುದು ಎಂದು ಬಿಜೆಪಿ ಹೇಳಿರುವಾಗ, ಸಾರ್ವಜನಿಕ ಚರ್ಚೆಗಾಗಿ ತಾವು ಏಕೆ ಒತ್ತಾಯಿಸುತ್ತಿದ್ದೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಗಾಂಧಿ, ಸಂಸತ್ತಿನಲ್ಲಿ ತಮಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ ಮತ್ತು ತಮ್ಮ ಮೈಕ್ರೊಫೋನ್ ಅನ್ನು ಕೂಡ ಆಫ್ ಮಾಡಲಾಗುತ್ತದೆ ಎಂದು ಹೇಳಿದರು.

'ಕೃಷಿ ಮಸೂದೆಗಳು, ಮತ ಕಳ್ಳತನ, ಚೀನಾ, ಜನರಲ್ ನರವಾಣೆ ಅವರ ಪುಸ್ತಕ ಹಾಗೂ ಎಪ್‌ಸ್ಟೈನ್ ವಿಷಯಗಳ ಬಗ್ಗೆ ಮಾತನಾಡಲು ನೀವು ನನಗೆ ಅವಕಾಶ ನೀಡಲಿಲ್ಲ. ನನಗೆ ಮುಖಾಮುಖಿ ಚರ್ಚೆ (ಒನ್-ಆನ್-ಒನ್ ಡಿಬೇಟ್) ಬೇಕು. ಸುದೀರ್ಘ ಭಾಷಣಗಳನ್ನು ಒಳಗೊಂಡ ಚರ್ಚೆ ನನಗೆ ಬೇಡ' ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ಹೇಳಿದರು.

'ನರೇಂದ್ರ ಮೋದಿ ನನ್ನ ವಿರುದ್ಧ ಆರೋಪಗಳನ್ನು ಮಾಡಲಿ ಮತ್ತು ನಾನು ಅವರ ವಿರುದ್ಧ ಆರೋಪಗಳನ್ನು ಮಾಡುತ್ತೇನೆ. ಅವರು ಬರಲಿ; ಒಂದು ಮೇಜಿನ ಇತ್ತ ಕಡೆ ನರೇಂದ್ರ ಮೋದಿ ಜಿ ಇರಲಿ, ಅತ್ತ ಕಡೆ ನಾನು ಇರುತ್ತೇನೆ' ಎಂದು ಹೇಳಿದರು.

'ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ ಅಥವಾ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಈ ಚರ್ಚೆಗೆ ತೀರ್ಪುಗಾರರನ್ನಾಗಿ ನೇಮಿಸಿದರೆ ತನಗೆ ಯಾವುದೇ ಆಕ್ಷೇಪವಿಲ್ಲ. ಆದರೆ, ನನ್ನೊಂದಿಗೆ ಮುಖಾಮುಖಿ ಚರ್ಚೆ ನಡೆಸಿದ ನಂತರ ಪ್ರಧಾನ ಮಂತ್ರಿಯವರು ಆ ಹುದ್ದೆಯಲ್ಲಿ ಉಳಿಯುವುದಿಲ್ಲ ಎಂದು ನಾನು ಖಾತರಿ ನೀಡುತ್ತೇನೆ' ಎಂದು ಗಾಂಧಿ ಹೇಳಿದರು.

ಮೋದಿ ಅವರು ತನ್ನೊಂದಿಗೆ ಬಹಿರಂಗ ಚರ್ಚೆಗೆ ಬರುವಂತೆ ಪದೇ ಪದೆ ಸವಾಲೆಸೆಯುತ್ತಿರುವ ರಾಹುಲ್ ಗಾಂಧಿ, ಪ್ರಧಾನ ಮಂತ್ರಿಯೊಬ್ಬರು 'ದೇಶದ್ರೋಹಿ' ಎಂಬುದನ್ನು ಸಾಬೀತುಪಡಿಸಲು ತಮಗೆ ಕೇವಲ ಐದು ನಿಮಿಷ ಸಾಕು ಎಂದು ಅವರು ಈ ಹಿಂದೆ ಹೇಳಿಕೊಂಡಿದ್ದರು.

ಸಂಸತ್ತಿನಲ್ಲಿ ನಡೆಯುವ ಚರ್ಚೆಗಳಿಂದ ಗಾಂಧಿ ಅವರೇ ಓಡಿಹೋಗುತ್ತಿದ್ದಾರೆ ಎಂದು ಆರೋಪಿಸಿರುವ ಬಿಜೆಪಿ ನಾಯಕರು, ಅವರ ಈ ಸವಾಲನ್ನು ಲೇವಡಿ ಮಾಡಿದ್ದಾರೆ.

ರಾಹುಲ್ ಗಾಂಧಿ ಚರ್ಚೆಗಾಗಿ ಮೋದಿಯವರೇ ಒಂದು ಸ್ಥಳವನ್ನು ಆಯ್ಕೆ ಮಾಡುವಂತೆ ಕೇಳುತ್ತಿದ್ದರೆ, ಸಂಸತ್ತಿನಲ್ಲಿ ಈಗಾಗಲೇ ಅಂತಹ ಒಂದು ವೇದಿಕೆ ಲಭ್ಯವಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಅಲ್ಲದೆ, ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಅವರು 'ಸ್ವಲ್ಪ ಗಂಭೀರತೆ ಮತ್ತು ಜವಾಬ್ದಾರಿಯನ್ನು ಪ್ರದರ್ಶಿಸಬೇಕು' ಎಂದು ಕರೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

PM Modi visit to Bengaluru | ಕನ್ನಡ ವರನಟ ಡಾ ರಾಜ್ ಕುಮಾರ್ ಯೋಗಾಭ್ಯಾಸದಲ್ಲಿ ಮಾದರಿ: ಪ್ರಧಾನಿ ಮೋದಿ

4th ODI: ವಿಲ್ ಯಂಗ್ ಸ್ಫೋಟಕ ಶತಕ, ಭಾರತಕ್ಕೆ ಗೆಲ್ಲಲು 334 ರನ್ ಬೃಹತ್ ಗುರಿ ನೀಡಿದ ನ್ಯೂಜಿಲೆಂಡ್

16 ವರ್ಷಗಳ ಹಿಂದೆ ವಿಚ್ಚೇದನ, ಮುರಿದು ಬಿದ್ದ 2ನೇ ಮದುವೆ, ಕೊನೆಗೂ ಒಂದಾದ ತಾರಾ ದಂಪತಿ ರಂಜಿತ್-ಪ್ರಿಯಾ ರಮಣ್!

ರಾಕ್ಷಸ ಕೃತ್ಯ; ಮಹಿಳೆಗೆ ಲೈಂಗಿಕ ಕಿರುಕುಳ, ವಿರೋಧಿಸಿದ್ದಕ್ಕೆ ರೈಲಿನಿಂದ ತಳ್ಳಿದ ಕಾಮುಕ; ಸಿಸಿಟಿವಿಯಲ್ಲಿ ಕೃತ್ಯ ಸೆರೆ! Video

ಮೈದಾನದಲ್ಲೇ ಬ್ರಾರ್ - ಟಿಮ್ ನಡುವೆ ಮತ್ತೆ ಜಗಳ: ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ ವಿರಾಟ್ ಕೊಹ್ಲಿ; Video