ಸಾಂದರ್ಭಿಕ ಚಿತ್ರ 
ದೇಶ

ಬೆತ್ತಲೆ ಫೋಟೋ ಕಳುಹಿಸಿದ ಪಾಕ್ ಏಜೆಂಟ್; ಪ್ರತಿಯಾಗಿ ರಹಸ್ಯ ಯುದ್ಧ ಯೋಜನೆ ಮಾಹಿತಿ ನೀಡಿದ IAF ಅಧಿಕಾರಿ!

ವಾಯುಪಡೆಯ 'ವಿಂಗ್ ಕಮಾಂಡರ್' (Wing Commander) ಶ್ರೇಣಿಯ ಅಧಿಕಾರಿಯೊಬ್ಬರು, ಭಾರತೀಯ ವಾಯುಪಡೆಯ ರಹಸ್ಯ ಯುದ್ಧ ಯೋಜನೆಗಳು, ಡ್ರೋನ್ ಘಟಕಗಳ ಸಾಮರ್ಥ್ಯ, ಯುದ್ಧ ವಿಮಾನಗಳ ನಿಯೋಜನೆ, ಮಿಲಿಟರಿ ಕಸರತ್ತುಗಳು ಮತ್ತು ಸೂಕ್ಷ್ಮ ಸೇನಾ ನೆಲೆಗಳ ಸ್ಥಳಗಳ ಕುರಿತ ಮಾಹಿತಿ ಹಂಚಿಕೊಂಡಿದ್ದಾರೆ

ನವದೆಹಲಿ: ಭಾರತೀಯ ವಾಯುಪಡೆಯ(IAF) ಅಧಿಕಾರಿಯೊಬ್ಬರು, ಬೆತ್ತಲೆ ಫೋಟೋಗೆ ಪ್ರತಿಯಾಗಿ, ಪಾಕಿಸ್ತಾನದ ಗುಪ್ತಚರ ಸಂಸ್ಥೆಯೊಂದಿಗೆ ಸಂಪರ್ಕ ಹೊಂದಿರುವ ಮಹಿಳೆಯೊಬ್ಬರಿಗೆ ಅತ್ಯಂತ ಸೂಕ್ಷ್ಮ ಮಾಹಿತಿಯನ್ನು ಸೋರಿಕೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಾಯುಪಡೆಯ 'ವಿಂಗ್ ಕಮಾಂಡರ್' (Wing Commander) ಶ್ರೇಣಿಯ ಅಧಿಕಾರಿಯೊಬ್ಬರು, ಭಾರತೀಯ ವಾಯುಪಡೆಯ ರಹಸ್ಯ ಯುದ್ಧ ಯೋಜನೆಗಳು, ಡ್ರೋನ್ ಘಟಕಗಳ ಸಾಮರ್ಥ್ಯ, ಯುದ್ಧ ವಿಮಾನಗಳ ನಿಯೋಜನೆ, ಮಿಲಿಟರಿ ಕಸರತ್ತುಗಳು ಮತ್ತು ಸೂಕ್ಷ್ಮ ಸೇನಾ ನೆಲೆಗಳ ಸ್ಥಳಗಳ ಕುರಿತ ಮಾಹಿತಿಯನ್ನು ಪಾಕಿಸ್ತಾನದ ಏಜೆಂಟ್‌ ಜೊತೆ ಹಂಚಿಕೊಂಡಿದ್ದಾರೆ ಎಂದು ದೆಹಲಿ ಪೊಲೀಸರು ತಮ್ಮ ದೋಷಾರೋಪ ಪಟ್ಟಿಯಲ್ಲಿ(charge sheet) ತಿಳಿಸಿದ್ದಾರೆ.

ಇಂತಹ ಮಾಹಿತಿ ಸೋರಿಕೆಯು ದೇಶದ ಮಿಲಿಟರಿ ಸನ್ನದ್ಧತೆ ಮತ್ತು ಭದ್ರತೆಗೆ ಗಂಭೀರ ಬೆದರಿಕೆಯನ್ನು ಉಂಟುಮಾಡಬಹುದು ಎಂದು ಪೊಲೀಸರು ಹೇಳಿದ್ದಾರೆ.

'ಅಧಿಕೃತ ರಹಸ್ಯಗಳ ಕಾಯ್ದೆ'ಯ (Official Secrets Act) ಅಡಿಯಲ್ಲಿ ದಾಖಲಾದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ, ಈ ಅಧಿಕಾರಿ ಕಳೆದ ಐದು ತಿಂಗಳುಗಳಿಂದ ಪೊಲೀಸರ ವಶದಲ್ಲಿದ್ದಾರೆ.

ಜನವರಿ 12 ಮತ್ತು ಏಪ್ರಿಲ್ 1, 2026 ರ ನಡುವೆ, ಈ ಅಧಿಕಾರಿ ವಾಟ್ಸಾಪ್ ಮೂಲಕ ಪಾಕಿಸ್ತಾನದ ಏಜೆಂಟ್‌ನೊಂದಿಗೆ ಸಂಪರ್ಕದಲ್ಲಿದ್ದರು ಮತ್ತು ಈ ಅವಧಿಯಲ್ಲಿ ಅವರಿಗೆ ವರ್ಗೀಕೃತ(ರಹಸ್ಯ) ಮಿಲಿಟರಿ ಮಾಹಿತಿಯನ್ನು ಹಂಚಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಏಪ್ರಿಲ್ 1 ರಂದು, ಅವರು ತಮ್ಮ ಕಚೇರಿಯೊಳಗೆ ಸ್ಮಾರ್ಟ್‌ಫೋನ್ ಕೊಂಡೊಯ್ಯುತ್ತಿದ್ದಾಗ ಅವರನ್ನು ತಡೆದು ಪರಿಶೀಲನೆ ನಡೆಸಲಾಯಿತು. ಈ ವೇಳೆ ಪಾಕಿಸ್ತಾನದ ಏಜೆಂಟ್, ಈ ವಿಂಗ್ ಕಮಾಂಡರ್‌ಗೆ ಬೆತ್ತಲೆ ಫೋಟೋಗಳನ್ನು ಕಳುಹಿಸಿದ್ದರು; ಅದಕ್ಕೆ ಪ್ರತಿಯಾಗಿ, ಈ ಅಧಿಕಾರಿ ಭಾರತೀಯ ವಾಯುಪಡೆಯ ರಹಸ್ಯ ಯುದ್ಧ ಯೋಜನೆಯ ದಾಖಲೆಯ ಪುಟವೊಂದನ್ನು ಹಂಚಿಕೊಂಡಿದ್ದರು ಎಂದು ದೋಷಾರೋಪ ಪಟ್ಟಿಯಲ್ಲಿ ಆರೋಪಿಸಲಾಗಿದೆ. ಅಷ್ಟೇ ಅಲ್ಲದೆ, ತಮಗೆ ಸಿಗುವ ಪ್ರತಿಯೊಂದು ಬೆತ್ತಲೆ ಫೋಟೋಗೂ, ತಾವು ಯುದ್ಧ ಯೋಜನೆಯ ದಾಖಲೆಗಳ ಒಂದೊಂದು ಪುಟವನ್ನು ನೀಡುವುದಾಗಿ ಆರೋಪಿ ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಡಿಜಿಟಲ್ ಸಾಕ್ಷ್ಯಗಳ ಆಧಾರದ ಮೇಲೆ ತನಿಖೆ ಮುಂದುವರಿಸಿರುವ ಪೊಲೀಸರು, ಆರೋಪಿ ಮತ್ತು ಪಾಕಿಸ್ತಾನದ ವ್ಯಕ್ತಿಯ ನಡುವೆ 3,008 ಟೆಕ್ಷ್ಟ್ ಮೆಸೇಜ್​ಗಳು, 65 ಫೋಟೋಗಳು, 42 ಧ್ವನಿ ಕರೆಗಳು, ನಾಲ್ಕು ವಿಡಿಯೋ ಕರೆಗಳು ಹಾಗೂ ಆರು ಯುಆರ್‌ಎಲ್‌ಗಳ ವಿನಿಮಯ ನಡೆದಿರುವುದನ್ನು ಪತ್ತೆಹಚ್ಚಿರುವುದಾಗಿ ತಿಳಿಸಿದ್ದಾರೆ. ಕಳೆದ ಐದು ತಿಂಗಳಿಂದ ಅಧಿಕಾರಿ ಬಂಧನದಲ್ಲಿದ್ದು, ಅಧಿಕೃತ ರಹಸ್ಯಗಳ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಈ ಸಂಚಿನಲ್ಲಿ ಬೇರೆ ಯಾರಾದರೂ ಶಾಮೀಲಾಗಿದ್ದಾರೆಯೇ ಹಾಗೂ ಎಷ್ಟು ಪ್ರಮಾಣದ ಸೂಕ್ಷ್ಮ ಮಾಹಿತಿ ಸೋರಿಕೆಯಾಗಿದೆ ಎಂಬ ಕುರಿತು ತನಿಖೆ ಮುಂದುವರಿದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತದ ಆರ್ಥಿಕ ಬೆಳವಣಿಗೆಯ ಪ್ರಮುಖ ಚಾಲನಾ ಶಕ್ತಿ ನವ ಮಧ್ಯಮ ವರ್ಗ: ಪ್ರಧಾನಿ ಮೋದಿ; Video

ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್: ಯಾರಿಗೆ ಕ್ಲೀನ್ ಚಿಟ್? ಕುಮಾರಸ್ವಾಮಿ ಪ್ರಶ್ನೆ

ವಿಧಾನಸೌಧವನ್ನೇ ಮಾರಿಬಿಡಿ: ಸರ್ಕಾರಿ ಆಸ್ತಿಯನ್ನು ರಕ್ಷಿಸಲು ವಿಫಲರಾದ ಅಧಿಕಾರಿಗಳ ವಿರುದ್ದ ಸಾರಿಗೆ ಸಚಿವ ಗರಂ

ಆರೋಗ್ಯ ಮತ್ತು ಸೌಖ್ಯಕ್ಕೆ ಅಭ್ಯಂಗ (ಕುಶಲವೇ ಕ್ಷೇಮವೇ)

ನಿಗೂಢ ವಿದೇಶಿ ಪ್ರಜೆ: ಸೋನಿಯಾ ಗಾಂಧಿ ವಿರುದ್ಧ ವಿವಾದಾತ್ಮಕ ಪೋಸ್ಟ್‌; ಕಂಗನಾ ವಿರುದ್ಧ ಬಿತ್ತು FIR!