ಊಟಿಯಲ್ಲಿ ಮೈಕೊರೆಯುವ ಚಳಿ 
ದೇಶ

ಊಟಿಯಲ್ಲಿ ಮೈಕೊರೆಯುವ ಚಳಿ; 5.9 ಡಿಗ್ರಿಗೆ ಕುಸಿದ ಕನಿಷ್ಠ ತಾಪಮಾನ, ಹಿಮದ ಹೊದಿಕೆಯಲ್ಲಿ ಗಿರಿಧಾಮ

ನೀಲಗಿರಿ ಜಿಲ್ಲೆಯ ಊಟಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕನಿಷ್ಠ ತಾಪಮಾನ 5.9 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದೆ. ಸಾಮಾನ್ಯವಾಗಿ ನೀಲಗಿರಿ ಜಿಲ್ಲೆಯಲ್ಲಿ ಡಿಸೆಂಬರ್ 15ರ ನಂತರ ಹಿಮದ ಋತು ಆರಂಭವಾಗುತ್ತದೆ.

ಊಟಿ: ತಮಿಳುನಾಡಿನ ಪ್ರಸಿದ್ಧ ಗಿರಿಧಾಮ ಊಟಿಯಲ್ಲಿ ಚಳಿಯ ತೀವ್ರತೆ ಹೆಚ್ಚಾಗಿದ್ದು, ಮುಂಜಾನೆ ಇಡೀ ಪ್ರದೇಶ ಹಿಮದ ಹೊದಿಕೆಯಿಂದ ಆವೃತವಾಗಿದೆ.

ನೀಲಗಿರಿ ಜಿಲ್ಲೆಯ ಊಟಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕನಿಷ್ಠ ತಾಪಮಾನ 5.9 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದೆ. ಸಾಮಾನ್ಯವಾಗಿ ನೀಲಗಿರಿ ಜಿಲ್ಲೆಯಲ್ಲಿ ಡಿಸೆಂಬರ್ 15ರ ನಂತರ ಹಿಮದ ಋತು ಆರಂಭವಾಗುತ್ತದೆ.

ಆದರೆ ಈ ಬಾರಿ ಡಿಸೆಂಬರ್ ಆರಂಭಕ್ಕೂ ಮುನ್ನವೇ ಹಿಮ ಆವರಿಸಿಕೊಂಡಿದೆ. ಇದರಿಂದ ಸ್ಥಳೀಯರು ಹಾಗೂ ಪ್ರವಾಸಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಹುಲ್ಲುಗಾವಲು, ವಾಹನಗಳ ಮೇಲೆ ಹಿಮದ ಹೊದಿಕೆ

ಗುರುವಾರ ಮುಂಜಾನೆ ಊಟಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಿಮದ ಪದರ ಕಾಣಿಸಿಕೊಂಡಿದೆ. ಹುಲ್ಲುಗಾವಲುಗಳು, ವಾಹನಗಳು, ಮರಗಳು ಹಾಗೂ ಗಿಡಗಳ ಮೇಲೆ ಬಿಳಿ ಹಿಮದ ಹೊದಿಕೆ ಆವರಿಸಿತ್ತು. ಮುಂಜಾನೆಯ ಈ ದೃಶ್ಯ ಗಿರಿಧಾಮದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿತ್ತು.

ಕನಿಷ್ಠ ತಾಪಮಾನ 5.9 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿರುವುದರಿಂದ ಬೆಳಗಿನ ಜಾವ ಚಳಿ ತೀವ್ರವಾಗಿತ್ತು. ಸಾಮಾನ್ಯಕ್ಕಿಂತ ಮುಂಚಿತವಾಗಿ ಹಿಮದ ಋತು ಆರಂಭವಾಗಿರುವುದು ಈ ಬಾರಿಯ ನೀಲಗಿರಿಯ ವಿಶೇಷವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Arnab ಚಂಡಮಾರುತ ಸಂಕಷ್ಟದಲ್ಲಿ ನೆರವು; ಕರ್ನಾಟಕಕ್ಕೆ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಧನ್ಯವಾದ; ಡಿಕೆಶಿ ಹೇಳಿದ್ದೇನು?

ಮನರೇಗಾ ಯೋಜನೆಯ ₹13.57 ಲಕ್ಷ ಗುಳುಂ; ಕೆಲಸ ಮಾಡದೆ ಸರ್ಕಾರಿ ಹಣ ಲೂಟಿ, ಇಬ್ಬರು ಆರೋಪಿಗಳಿಗೆ ಜೈಲು ಶಿಕ್ಷೆ!

Gold rate: ಭಾರಿ ಕುಸಿತದ ಬಳಿಕ ಚಿನ್ನದ ದರ ಮತ್ತೆ ಏರಿಕೆ; ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ದರ ಎಷ್ಟಿದೆ? ಬೆಳ್ಳಿ ಬೆಲೆಯಲ್ಲೂ ಬದಲಾವಣೆ, ಇಲ್ಲಿದೆ ಸಂಪೂರ್ಣ ಪಟ್ಟಿ!

ಮತದಾರರ ಹೆಸರು ಅಳಿಸಲು ಫಾರ್ಮ್-7 ದುರ್ಬಳಕೆ ಆರೋಪ; ಬಿಜೆಪಿ ಬೂತ್ ಏಜೆಂಟರಿಗೆ ಹೈಕೋರ್ಟ್ ರಿಲೀಫ್, FIRಗೆ ತಡೆ

Wellington Test: ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ, ಬುಮ್ರಾ ಮಾರಕ ದಾಳಿಗೆ ತತ್ತರಿಸಿದ ಕಿವೀಸ್ 99/5