ವರ್ಷಾ - ಮೋನಾ - ನಿತೀಶ್ 
ದೇಶ

ಪತಿ ಜೊತೆ ಅಕ್ರಮ ಸಂಬಂಧ ಶಂಕೆ; ಇಂಡಿಗೋ ಸಿಬ್ಬಂದಿ ವರ್ಷಾ ಹತ್ಯೆ; ಪತ್ನಿಯಿಂದಲೇ ಸುಪಾರಿ!

ಗೊಂಡಿಯಾ ಜಿಲ್ಲೆಯ ನಿರ್ಜನ ಅರಣ್ಯ ಪ್ರದೇಶವೊಂದರಲ್ಲಿ 23 ವರ್ಷದ ಇಂಡಿಗೋ ವಿಮಾನಯಾನ ಸಂಸ್ಥೆಯ ಉದ್ಯೋಗಿ ವರ್ಷಾ ಅವರನ್ನು ಬರ್ಬರವಾಗಿ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.

ಗೊಂಡಿಯಾ: ಮಹಾರಾಷ್ಟ್ರದಲ್ಲಿ ಗೊಂಡಿಯಾ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ತನ್ನ ಪತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂಬ ಶಂಕೆಯ ಹಿನ್ನೆಲೆಯಲ್ಲಿ ಇಂಡಿಗೋ ಏರ್​ಲೈನ್​ ಉದ್ಯೋಗಿ ವರ್ಷಾ ತುರ್ಕರ್​ ಅವರನ್ನು 'ಸುಪಾರಿ ನೀಡಿ' ಕೊಲೆ ಮಾಡಿಸಿದ ಆಘಾತಕಾರಿ ಘಟನೆ ನಡೆದಿದೆ.

ಗೊಂಡಿಯಾ ಜಿಲ್ಲೆಯ ನಿರ್ಜನ ಅರಣ್ಯ ಪ್ರದೇಶವೊಂದರಲ್ಲಿ 23 ವರ್ಷದ ಇಂಡಿಗೋ ವಿಮಾನಯಾನ ಸಂಸ್ಥೆಯ ಉದ್ಯೋಗಿ ವರ್ಷಾ ಅವರನ್ನು ಬರ್ಬರವಾಗಿ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.

ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ವರ್ಷಾ ಅವರ ಬಹುಕಾಲದ ಸ್ನೇಹಿತನ ಪತ್ನಿ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

ವರ್ಷಾ ಅವರು ಪುಣೆ ವಿಮಾನ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ದೀಪಾವಳಿ ಹಬ್ಬವನ್ನು ಆಚರಿಸಲು ಅವರು ತಮ್ಮ ಎರಡೂವರೆ ವರ್ಷದ ಮಗಳೊಂದಿಗೆ ಮಧ್ಯಪ್ರದೇಶದ ಬಾಲಾಘಾಟ್ ಜಿಲ್ಲೆಯಲ್ಲಿರುವ ತಮ್ಮ ತವರು ಮನೆಗೆ ಬಂದಿದ್ದರು.

ನವೆಂಬರ್ 14 ರಂದು, ವರ್ಷಾ ಅವರು ಗೊಂಡಿಯಾದಲ್ಲಿ ನೆಲೆಸಿರುವ, ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ತಮ್ಮ ಬಹುಕಾಲದ ಸ್ನೇಹಿತ ನಿತೇಶ್ ಅಗರ್ವಾಲ್ (42) ಅವರನ್ನು ಭೇಟಿಯಾಗಲು ಮನೆಯಿಂದ ಹೊರಟಿದ್ದರು. ಇವರಿಬ್ಬರೂ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಪರಸ್ಪರ ಪರಿಚಿತರಾಗಿದ್ದರು ಎಂದು ಹೇಳಲಾಗಿದೆ.

ಇಬ್ಬರು ಮಹಾರಾಷ್ಟ್ರ-ಮಧ್ಯಪ್ರದೇಶ ಗಡಿಯ ಸಮೀಪವಿರುವ ವೈನ್‌ಗಂಗಾ ನದಿಯ ದಂಡೆಯ ಬಳಿಯ ನಿರ್ಜನ ಅರಣ್ಯ ಪ್ರದೇಶಕ್ಕೆ ಭೇಟಿ ನೀಡಲು ನಿರ್ಧರಿಸಿದ್ದರು. ಅದರಂತೆ ವೈನ್‌ಗಂಗಾ ನದಿಯ ದಡದಲ್ಲಿರುವ ನಿರ್ಜನ ಅರಣ್ಯ ಪ್ರದೇಶಕ್ಕೆ ಅವರು ತೆರಳಿದ್ದಾಗ, ಎಂಟ್ರಿ ಕೊಟ್ಟ ಮೂವರು ದುಷ್ಕರ್ಮಿಗಳು, ವರ್ಷಾಗೆ ಚಾಕುವಿನಿಂದ ಇರಿದು ಕೊಂದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಘಟನೆಯನ್ನು ನಿತೀಶ್ ಕಣ್ಣಾರೆ ಕಂಡಿದ್ದಾರೆ.

ಪತ್ನಿಯಿಂದಲೇ ಸುಪಾರಿ

ನಿತೀಶ್ ಅವರ ಪತ್ನಿ ಮೋನಾ ಅಗರ್ವಾಲ್​​, ತನ್ನ ಪತಿ ವರ್ಷಾಳೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದುಕೊಂಡಿದ್ದರು. ಇದರಿಂದ ತೀವ್ರವಾಗಿ ನೊಂದಿದ್ದರು. ಪತಿ ತನಗೆ ಡಿವೋರ್ಸ್​ ಕೊಡುವ ಭಯದಲ್ಲಿ 13 ಲಕ್ಷ ರೂಪಾಯಿ ಕೊಟ್ಟು ಕೊಲೆಗೆ ಸುಪಾರಿ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವರ್ಷಾ ಕೊಲೆ ಮಾಡಲು ಮೋನಾ ತನ್ನ ನೆರೆಯ ಶ್ರೀಮಂತ ಉದ್ಯಮಿ ಕುನಾಲ್ ಕುಂಭಾಲ್ಕರ್ (31) ಅವರನ್ನು ಸಂಪರ್ಕಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ನಂತರ ಕುನಾಲ್ ಆರೋಪಿ ದರೋಡೆಕೋರ, ಶಾರುಖ್ ಪಠಾಣ್ ಅವರನ್ನು ಸಂಪರ್ಕಿಸಿ, ಕೊಲೆ ಮಾಡಲು, 13 ಲಕ್ಷ ರೂ.ಗಳನ್ನು ನೀಡಿದ್ದಾರೆ.

ಶಾರುಖ್ ಈ ಕೆಲಸವನ್ನು ಮೂವರು ಸ್ಥಳೀಯ ಯುವಕರಿಗೆ ಹಸ್ತಾಂತರಿಸಿದ್ದಾರೆ. ಇಮ್ರಾನ್ ಕರೀಮ್ ಶೇಖ್, ನೈಲಾನ್ ಶೇಖ್ ಮತ್ತು ಕ್ರಿಶ್ ರಾವುತ್ ಮೂವರು ಸೇರಿ ವರ್ಷಾ ಅವರನ್ನು ಹತ್ಯೆ ಮಾಡಿದ್ದಾರೆ.

ಆರೋಪಿ ಜಿಪಿಎಸ್ ಬಳಸಿ ಕಾರನ್ನು ಟ್ರ್ಯಾಕ್ ಮಾಡಿದ್ದಾನೆ. ಆರೋಪಿಗಳು ಮೋನಾ ಹೆಸರಿನಲ್ಲಿ ನೋಂದಾಯಿಸಲಾದ ನಿತೇಶ್ ಕಾರಿನ ಚಲನವಲನಗಳನ್ನು ಟ್ರ್ಯಾಕ್ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರು ವಾಹನದ ಲೈವ್ ಜಿಪಿಎಸ್ ಸ್ಥಳವನ್ನು ಅದರ ಐಕನೆಕ್ಟ್ ಅಪ್ಲಿಕೇಶನ್ ಐಡಿ ಮತ್ತು ಪಾಸ್‌ವರ್ಡ್ ಬಳಸಿ ಪ್ರವೇಶಿಸಿ, ಆ ಜೋಡಿಯನ್ನು ಹಿಂಬಾಲಿಸಿದ್ದಾರೆ.

ಕಾರು ದೇವಸ್ಥಾನವೊಂದರ ಬಳಿ ನಿಂತಾಗ, ಈ ಮೂವರು ದಾಳಿಕೋರರು ವರ್ಷಾಳ ಮೇಲೆ ಹಲ್ಲೆ ನಡೆಸಿದ್ದಾರೆ . ಇಮ್ರಾನ್ ನೀಡಿದ ಹೇಳಿಕೆಯ ಆಧಾರದ ಮೇಲೆ, ಶುಕ್ರವಾರ ಮೋನಾ ಮತ್ತು ಕುನಾಲ್ ಅವರನ್ನು ಪೊಲೀಸರು ವಶಕ್ಕೆ ಪಡೆದರು. ಬಳಿಕ ಇಮ್ರಾನ್, ಮೋನಾ ಮತ್ತು ಕುನಾಲ್ ಅವರನ್ನು ದವನಿವಾಡಾ ಪೊಲೀಸರಿಗೆ ಹಸ್ತಾಂತರಿಸಲಾಯಿತು. ಶಾರುಖ್ ಪಠಾಣ್ ಸೇರಿದಂತೆ ಈ ಮೂವರನ್ನೂ ಬಂಧಿಸಲಾಗಿದೆ. ಪ್ರಕರಣದ ಇತರ ಇಬ್ಬರು ಆರೋಪಿಗಳಾದ ನಯಲನ್ ಮತ್ತು ಕೃಷ್ ತಲೆಮರೆಸಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ನಮ್ಮಲ್ಲಿ ನೀರಿದ್ದರೆ ಖಂಡಿತ ತಮಿಳುನಾಡಿಗೆ ಕೊಡ್ತೇವೆ, ಈ ವರ್ಷ ಕುಡಿಯುವ ನೀರಿಗೇ ತತ್ವಾರವಾಗಿದೆ ’: ಸಿಎಂ ಡಿ ಕೆ ಶಿವಕುಮಾರ್; Video

HDK vs DKS ಸಂಘರ್ಷಗೆ ಸ್ವಾಮೀಜಿ ಎಂಟ್ರಿ: ಎಚ್‌ಡಿ ಕುಮಾರಸ್ವಾಮಿ ವಿರುದ್ಧ ನಿಶ್ಚಲಾನಂದನಾಥ ಸ್ವಾಮೀಜಿ ಕಿಡಿ!

ಕಾವೇರಿ ಕದನದಲ್ಲಿ ಮಹಾ ತಿರುವು! ಸುಪ್ರೀಂನಲ್ಲಿ ವಿಜಯ್ ಸರ್ಕಾರದ ಅರ್ಜಿ ವಜಾ ಬೆನ್ನಲ್ಲೇ ಕರ್ನಾಟಕಕ್ಕೆ ಶಾಕ್: ತಮಿಳುನಾಡಿಗೆ ನಿತ್ಯ 2,000 ಕ್ಯೂಸೆಕ್ ನೀರು ಬಿಡಲು CWRC ಶಿಫಾರಸು

'ಕಂಗಲಾದ ಪ್ರಧಾನಿ' ಆರ್ಥಿಕ ಪರಿಸ್ಥಿತಿಗೆ ಇತರರನ್ನು ದೂಷಿಸುವ ಬದಲು ಸರ್ಕಾರದ ನೀತಿಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು- ಕಾಂಗ್ರೆಸ್

ಪಂಜಾಬ್ ಚುನಾವಣೆಗೂ ಮುನ್ನ 'ಕೈ'ಗೆ ಮರ್ಮಾಘಾತ: ಪ್ರಣಾಳಿಕೆ ರಚನೆಯ ಮುಖಂಡನೇ ಬಿಜೆಪಿಗೆ ಸೇರ್ಪಡೆ