ಪುಸ್ತಕದಲ್ಲಿ ಸಾವರ್ಕರ್ ಬಗ್ಗೆ 'ತಪ್ಪಾಗಿ ಚಿತ್ರಣ': ಸೋನಿಯಾ ಗಾಂಧಿಗೆ ಕಾನೂನು ನೋಟಿಸ್; ಬೇಷರತ್ ಕ್ಷಮೆಯಾಚನೆಗೆ ಆಗ್ರಹ
ವಿನಾಯಕ್ ದಾಮೋದರ್ ಸಾವರ್ಕರ್ ಅವರ ಮೊಮ್ಮಗ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಗೆ ಕಾನೂನು ನೋಟಿಸ್ ಕಳುಹಿಸಿದ್ದಾರೆ. ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ 'ಬಿಲೋಂಗಿಂಗ್: ಎ ಜರ್ನಿ ಆಫ್ ಲವ್' ನಲ್ಲಿ ಸ್ವಾತಂತ್ರ್ಯ ಹೋರಾಟಗಾರ ವೀರ್ ಸಾರ್ವಕರ್...
ಪುಣೆ: ವಿನಾಯಕ್ ದಾಮೋದರ್ ಸಾವರ್ಕರ್ ಅವರ ಮೊಮ್ಮಗ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಗೆ ಕಾನೂನು ನೋಟಿಸ್ ಕಳುಹಿಸಿದ್ದಾರೆ. ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ 'ಬಿಲೋಂಗಿಂಗ್: ಎ ಜರ್ನಿ ಆಫ್ ಲವ್' ನಲ್ಲಿ ಸ್ವಾತಂತ್ರ್ಯ ಹೋರಾಟಗಾರ ವೀರ್ ಸಾರ್ವಕರ್ ಬಗ್ಗೆ ಮಾಡಲಾದ ಹೇಳಿಕೆಗಳಿಗೆ ಬೇಷರತ್ ಕ್ಷಮೆಯಾಚನೆ, ಸ್ಪಷ್ಟೀಕರಣ ಮತ್ತು ತಿದ್ದುಪಡಿಗೆ ಒತ್ತಾಯಿಸಿದ್ದಾರೆ.
ಸತ್ಯಕಿ ಸಾವರ್ಕರ್ ಪರವಾಗಿ ವಕೀಲ ಸಂಗ್ರಾಮ್ ಕೊಲ್ಹತ್ಕರ್ ಅವರು ಹೊರಡಿಸಿದ ಕಾನೂನು ನೋಟಿಸ್, ಪುಸ್ತಕದ ಪುಟ 201 ಮತ್ತು 443ರ ವಿಷಯಗಳನ್ನು ವಿರೋಧಿಸುತ್ತದೆ. ಈ ಹೇಳಿಕೆಗಳು ವಾಸ್ತವಿಕವಾಗಿ ತಪ್ಪು. ಐತಿಹಾಸಿಕವಾಗಿ ದಾರಿತಪ್ಪಿಸುತ್ತಿವ, ವಿರೂಪಗೊಂಡಿವೆ. ಅವು ವಿ.ಡಿ. ಸಾವರ್ಕರ್ ಅವರ ಖ್ಯಾತಿ ಮತ್ತು ಪರಂಪರೆಗೆ ಹಾನಿ ಮಾಡುತ್ತವೆ ಎಂದು ನೋಟಿಸ್ ಆರೋಪಿಸಿದೆ.
ನೋಟಿಸ್ ಸ್ವೀಕರಿಸಿದ 15 ದಿನಗಳ ಒಳಗೆ ಸೋನಿಯಾ ಗಾಂಧಿಯವರು ಬೇಡಿಕೆಗಳನ್ನು ಈಡೇರಿಸುವಂತೆ ಕೇಳಿದೆ. ಹಾಗೆ ಮಾಡಲು ವಿಫಲವಾದರೆ ಅಥವಾ ಬೇಡಿಕೆಗಳನ್ನು ಪೂರೈಸಲು ನಿರಾಕರಿಸಿದರೆ, ಸತ್ಯಕಿ ಸಾವರ್ಕರ್ ಸೂಕ್ತ ಕಾನೂನು ಕ್ರಮಗಳನ್ನು ಪ್ರಾರಂಭಿಸುವುದಾಗಿ ಎಚ್ಚರಿಸಿದ್ದಾರೆ. ಸತ್ಯಕಿ ಸಾವರ್ಕರ್ ಇತ್ತೀಚೆಗೆ ಸೋನಿಯಾ ಗಾಂಧಿ ಬರೆದ ಮತ್ತು ನವೆಂಬರ್ 10ರಂದು ಹಾರ್ಪರ್‌ಕಾಲಿನ್ಸ್ ಪಬ್ಲಿಷರ್ಸ್ ಇಂಡಿಯಾ ಪ್ರಕಟಿಸಿದ ಪುಸ್ತಕವನ್ನು ಓದಿದ್ದಾರೆ ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ. ಪುಸ್ತಕದಲ್ಲಿ ವಿ.ಡಿ ಸಾವರ್ಕರ್ ಬಗ್ಗೆ ಮಾಡಲಾದ ಕಾಮೆಂಟ್‌ಗಳು ಮತ್ತು ಆರೋಪಗಳಿಂದ ನೋಯಿಸಿದ್ದಾರೆ.
ಕಾಂಗ್ರೆಸ್ ಸ್ವಾತಂತ್ರ್ಯ ಹೋರಾಟಗಾರರು ಬ್ರಿಟಿಷ್ ಆಡಳಿತಗಾರರ ಕೈಯಲ್ಲಿ ದಾಳಿ ಮತ್ತು ಜೈಲು ಶಿಕ್ಷೆಯನ್ನು ಎದುರಿಸುತ್ತಿರುವಾಗ, ವಿನಾಯಕ ದಾಮೋದರ್ ಸಾವರ್ಕರ್‌ರಂತಹ ಹಿರಿಯ ಆರ್‌ಎಸ್‌ಎಸ್ ಸಿದ್ಧಾಂತಿಗಳು ತಮ್ಮ ವಸಾಹತುಶಾಹಿ ಯಜಮಾನರಿಗೆ ಕ್ಷಮಾದಾನ ಪತ್ರಗಳನ್ನು ಬರೆಯುತ್ತಿದ್ದರು. ಅವರ ಸಂಘಟನೆಯ ಸದಸ್ಯರು ಮಾಹಿತಿದಾರರಾಗಿ ಬ್ರಿಟಿಷ್ ಅಧಿಕಾರಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು ಎಂದು ಬರೆಯಲಾಗಿದೆ.