ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಸೆಕೆಂಡ್ ಅಂತರ, 2 ಕಾರುಗಳ ಡಿಕ್ಕಿ; 100 ಅಡಿ ದೂರಕ್ಕೆ ಗಾಳಿಯಲ್ಲಿ ಹಾರಿ ಬಿದ್ದ ಬೈಕ್ ಸವಾರ! ಬದುಕಿದ್ದೇ ಪವಾಡ, CCTVಯಲ್ಲಿ ಭಯಾನಕ ದೃಶ್ಯ ಸೆರೆ!

ಅಪಘಾತದ ಭೀಕರ ದೃಶ್ಯ ಸಮೀಪದ ಪೆಟ್ರೋಲ್ ಬಂಕ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬೈಕ್ ಸಾವರನನ್ನು ನವೀನ್ ಎಂದು ಗುರುತಿಸಲಾಗಿದೆ.

ಬೈಕ್ ಗೆ ಕಾರುಗಳ ಢಿಕ್ಕಿ
Srinivasa Murthy VN
Updated On : 26 Nov 2026, 10:37 pm

ರಾಜಮಂಡ್ರಿ: ರಸ್ತೆ ಅಪಘಾತವೊಂದರಲ್ಲಿ ಎರಡು ಎಸ್‌ಯುವಿಗಳು ಕೆಲವೇ ಸೆಕೆಂಡುಗಳ ಅಂತರದಲ್ಲಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನೊಬ್ಬ ಗಾಳಿಯಲ್ಲಿ ಹಾರಿ 100 ಅಡಿ ದೂರ ರಸ್ತೆಗೆ ಬಿದ್ದ ಘಟನೆ ನಡೆದಿದೆ.

ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ರಂಗಂಪೇಟೆ ಮಂಡಲದ ಪೆದರಾಯವರಂ ಸಮೀಪದ ಎಡಿಬಿ ರಸ್ತೆಯಲ್ಲಿ ಈ ಘಟನೆ ನಡೆದಿದೆ.

ಅಪಘಾತದ ಭೀಕರ ದೃಶ್ಯ ಸಮೀಪದ ಪೆಟ್ರೋಲ್ ಬಂಕ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬೈಕ್ ಸಾವರನನ್ನು ನವೀನ್ ಎಂದು ಗುರುತಿಸಲಾಗಿದೆ.

Advertisement

Advertisement

ಅಪಘಾತದ ತೀವ್ರತೆ ಕಂಡ ಪ್ರತ್ಯಕ್ಷದರ್ಶಿಗಳು ಬೈಕ್ ಸವಾರನಿಗೆ ಗಂಭೀರ ಗಾಯಗಳಾಗಿರಬಹುದು ಎಂದು ಆತಂಕ ವ್ಯಕ್ತಪಡಿಸಿದ್ದರು. ಆದರೆ, ಅದೃಷ್ಟವಶಾತ್ ನವೇನ್ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾನೆ.

Also Read

ಪ್ರೇಮಸೌಧ ತಾಜ್‌ಮಹಲ್‌`ಗೆ ವಾನರ ಸೇನೆ ಲಗ್ಗೆ, ಪ್ರವೇಶ ದ್ವಾರಗಳಲ್ಲೇ ಕಾಟ; ಪ್ರವಾಸಿಗರಿಗೆ ಆತಂಕ, ಇಬ್ಬರು ಆಸ್ಪತ್ರೆಗೆ ದಾಖಲು! Video

ಆಗಿದ್ದೇನು?

ನವೀನ್ ತಪ್ಪು ದಿಕ್ಕಿನಲ್ಲಿ ಬೈಕ್ ಚಲಾಯಿಸಿಕೊಂಡು ಬಂದು ರಸ್ತೆ ಜಂಕ್ಷನ್ ಪ್ರವೇಶಿಸಿದ್ದಾನೆ ಎನ್ನಲಾಗಿದೆ. ಈ ವೇಳೆ ಎದುರಿನಿಂದ ಬಂದ ಬಿಳಿ ಬಣ್ಣದ ಎಸ್‌ಯುವಿ ಬೈಕ್‌ಗೆ ಡಿಕ್ಕಿ ಹೊಡೆದಿದೆ.

ಇದರ ಬೆನ್ನಲ್ಲೇ ಮತ್ತೊಂದು ಮಹೀಂದ್ರಾ ಥಾರ್ ಕೂಡ ಬೈಕ್‌ಗೆ ಡಿಕ್ಕಿ ಹೊಡೆದಿದೆ. 2 ವಾಹನಗಳು ಕೆಲವೇ ಸೆಕೆಂಡುಗಳ ಅಂತರದಲ್ಲಿ ಡಿಕ್ಕಿ ಹೊಡೆದ ರಭಸಕ್ಕೆ ನವೀನ್ ಗಾಳಿಯಲ್ಲಿ ಹಾರಿ, ತಲೆಕೆಳಗಾಗಿ ರಸ್ತೆಗೆ ಬಿದ್ದಿದ್ದಾನೆ.

ಭೀಕರ ಅಪಘಾತವಾದ್ರೂ, ಕೂದಲೆಳೆ ಅಂತರದಲ್ಲಿ ಪಾರಾದ ಸವಾರ, CCTV ವಿಡಿಯೋ

ಅಚ್ಚರಿ ಎಂದರೆ ಬೈಕ್ ಸವಾರ ನವೀನ್ ಅಪಘಾತದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾನೆ. ಅಪಘಾತದ ಬಳಿಕ ನವೀನ್ ರಸ್ತೆಯಿಂದ ಎದ್ದು, ತನ್ನ ಬೈಕ್ ಎತ್ತಿಕೊಂಡು ಅಲ್ಲಿಂದ ತೆರಳುತ್ತಿರುವ ದೃಶ್ಯವೂ ಸಿಸಿಟಿವಿ ದೃಶ್ಯಾವಳಿಯಲ್ಲಿದೆ.

ಸಮೀಪದ ಪೆಟ್ರೋಲ್ ಬಂಕ್‌ನಲ್ಲಿ ಅಳವಡಿಸಲಾಗಿದ್ದ ಕ್ಯಾಮೆರಾದಲ್ಲಿ ಸೆರೆಯಾದ ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement