ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

OBC ಕೋಟಾ ಕಡಿತಗೊಳಿಸಿ ಅದನ್ನು ಮುಸ್ಲಿಮರಿಗೆ ನೀಡಲು ವಿರೋಧ ಪಕ್ಷ ಬಯಸುತ್ತಿದೆ: ಪ್ರಧಾನಿ ಮೋದಿ

ಅತಿದೊಡ್ಡ ವಿರೋಧ ಪಕ್ಷವು ಒಬಿಸಿ ಮೀಸಲಾತಿಯನ್ನು ಕಡಿಮೆ ಮಾಡಲು ಮತ್ತು ಮುಸ್ಲಿಂ ಮೀಸಲಾತಿಯನ್ನು ಜಾರಿಗೊಳಿಸಲು ಬಯಸುತ್ತದೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪದ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ — online desk
Lingaraj Badiger
Updated On : 26 Nov 2026, 11:32 am

ನವದೆಹಲಿ: ವಿರೋಧ ಪಕ್ಷವು ಹಿಂದುಳಿದ ವರ್ಗಗಳ(ಒಬಿಸಿ) ಮೀಸಲಾತಿಯನ್ನು ಕಡಿತಗೊಳಿಸಿ, ಅದನ್ನು ಮುಸ್ಲಿಮರಿಗೆ ನೀಡಲು ಪ್ರಯತ್ನಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಆರೋಪಿಸಿದ್ದಾರೆ.

ಇಂದು ಸಂವಿಧಾನ ದಿನದ ಅಂಗವಾಗಿ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾದ, ಪ್ರಧಾನಿ ಮೋದಿ ಸಹಿ ಮಾಡಿದ ಲೇಖನದಲ್ಲಿ, ಅತಿದೊಡ್ಡ ವಿರೋಧ ಪಕ್ಷವು ಒಬಿಸಿ ಮೀಸಲಾತಿಯನ್ನು ಕಡಿಮೆ ಮಾಡಲು ಮತ್ತು ಮುಸ್ಲಿಂ ಮೀಸಲಾತಿಯನ್ನು ಜಾರಿಗೊಳಿಸಲು ಬಯಸುತ್ತದೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪದ ಮಾಡಿದ್ದಾರೆ.

ನವೆಂಬರ್ 26, 1949 ರಂದು ಸಂವಿಧಾನವನ್ನು ಅಂಗೀಕರಿಸಿದ ದಿನವನ್ನು ಗುರುತಿಸುತ್ತಾ, ವಿರೋಧ ಪಕ್ಷವು ಸಂವಿಧಾನದ ರಚನೆಕಾರರು ತಿರಸ್ಕರಿಸಿದ ಕಾರ್ಯಸೂಚಿಯನ್ನು ಮುಂದಿಡುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

Advertisement

Advertisement

Also Read

ಈ ಸಲ ಯೋಗಿ ಆದಿತ್ಯನಾಥ್ CM ಅಭ್ಯರ್ಥಿ ಅಲ್ಲ? 'ಕಮಲ'ವೇ BJPಯ ಫೇಸ್: ಚರ್ಚೆಗೆ ಗ್ರಾಸವಾದ DCM ಮೌರ್ಯ ಹೇಳಿಕೆ!

"ವಿರೋಧ ಪಕ್ಷವು ಒಬಿಸಿ ಮೀಸಲಾತಿಯನ್ನು ಕಡಿಮೆ ಮಾಡಲು ಮತ್ತು ಮುಸ್ಲಿಂ ಮೀಸಲಾತಿಯನ್ನು ಜಾರಿಗೆ ತರಲು ಬಯಸುತ್ತಿದೆ. ಇದನ್ನು ನಮ್ಮ ಸಂವಿಧಾನದ ನಿರ್ಮಾಪಕರು, ವಿಶೇಷವಾಗಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಸಂಪೂರ್ಣವಾಗಿ ವಿರೋಧಿಸಿದ್ದರು" ಎಂದು ಪ್ರಧಾನಿ ಮೋದಿ ಬರೆದಿದ್ದಾರೆ.

ವಿರೋಧ ಪಕ್ಷವು ಸಂಸತ್ತಿನಲ್ಲಿ ಅಡಚಣೆ ಉಂಟುಮಾಡುವ ವ್ಯಕ್ತಿಯಾಗಿ ಬದಲಾಗುತ್ತಿದೆ ಎಂದು ಆರೋಪಿಸಿದ ಮೋದಿ, "ಇದು ವಿರೋಧ ಪಕ್ಷಕ್ಕಿಂತ ಹೆಚ್ಚಾಗಿ ಅವ್ರೋಧ ಪಕ್ಷ(ಅಡಚಣೆ ಮಾಡುವವ)ದಂತೆ ಕಾಣುತ್ತಿದೆ" ಮತ್ತು ಪ್ರಜಾಪ್ರಭುತ್ವ ಪ್ರಕ್ರಿಯೆಗಳಿಗೆ ಅಡ್ಡಿಪಡಿಸುವುದು "ಸಾಂವಿಧಾನಿಕ ಜವಾಬ್ದಾರಿಗಳನ್ನು ನಿರ್ವಹಿಸುವುದಕ್ಕೆ ಪರ್ಯಾಯವಲ್ಲ" ಎಂದು ಬರೆದಿದ್ದಾರೆ.

ಮಹಿಳೆಯರಿಗೆ ನ್ಯಾಯ ದೊರಕಿಸಿಕೊಡುವುದನ್ನು ತಡೆಯಲು ಯಾವುದೇ ಶಕ್ತಿಗೆ ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ ಮೋದಿ, ಮಹಿಳೆಯರಿಗೆ ಶೇ. 33 ರಷ್ಟು ಮೀಸಲಾತಿ ನೀಡುವ ಸಂವಿಧಾನ ತಿದ್ದುಪಡಿ ಮಸೂದೆ ಸಂಸತ್ತಿನಲ್ಲಿ ಸೋಲಿಗೆ "ಒಂದೇ ವಿರೋಧ ಪಕ್ಷ" ಕಾರಣ ಎಂದು ಕಾಂಗ್ರೆಸ್ ಅನ್ನು ದೂಷಿಸಿದರು.

ಶಾಸಕಾಂಗ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಸಾಕಷ್ಟು ಪ್ರಾತಿನಿಧ್ಯವನ್ನು ನೀಡುವ ಗುರಿಯನ್ನು ಹೊಂದಿರುವ ಕಾನೂನನ್ನು ಒಂದು ವಿರೋಧ ಪಕ್ಷವು ಅಂಗೀಕರಿಸಲು ಅನುಮತಿಸಲಿಲ್ಲ. ಇದು ಮತ್ತೊಮ್ಮೆ "ಸಾಂವಿಧಾನಿಕ ಮೌಲ್ಯಗಳ ಬಗ್ಗೆ ಅವರ ತಿರಸ್ಕಾರ"ವನ್ನು ತೋರಿಸುತ್ತದೆ ಎಂದು ಪ್ರಧಾನಿ ಹೇಳಿದರು.

"ಭಾರತದ 'ನಾರಿ ಶಕ್ತಿ'ಗೆ ನಾನು ಭರವಸೆ ನೀಡುತ್ತೇನೆ, ಅವರಿಗೆ ನ್ಯಾಯ ಸಿಗುವುದನ್ನು ಖಚಿತಪಡಿಸಿಕೊಳ್ಳುವುದನ್ನು ಯಾವುದೇ ಶಕ್ತಿ ತಡೆಯಲು ಸಾಧ್ಯವಿಲ್ಲ" ಎಂದು ಮೋದಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement