ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಲೋಕಲ್ ರೈಲಿನಲ್ಲೇ ಮದು ಮಗಳಿಗೆ ಆರತಿ ಎತ್ತಿ 'ಮದುವೆ ಪೂರ್ವ' ಸಂಭ್ರಮಾಚರಣೆ: Video ವೈರಲ್, ನೆಟ್ಟಿಗರ ಆಕ್ರೋಶ!

ಚಲಿಸುತ್ತಿದ್ದ ರೈಲಿನಲ್ಲಿ ಪ್ರಯಾಣದ ನಡುವೆಯೇ ಸಾಂಪ್ರದಾಯಿಕ ವಿಧಿವಿಧಾನಗಳನ್ನು ನೆರವೇರಿಸಿದ್ದಾರೆ. ಆದರೆ, ಸಾರ್ವಜನಿಕ ರೈಲಿನಲ್ಲಿ ಇಂತಹ ಖಾಸಗಿ ಕಾರ್ಯಕ್ರಮಗಳನ್ನು ನಡೆಸಬಹುದೇ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮದು ಮಗಳಿಗೆ ಆರತಿ ಎತ್ತಿದ ಮಹಿಳೆಯರು
Nagaraja AB
Updated On : 27 Nov 2026, 7:15 pm

ಮುಂಬೈ: ಮುಂಬೈ ಲೋಕಲ್ ರೈಲಿನ ಬೋಗಿಯೊಂದರಲ್ಲಿ ಮಹಿಳೆಯರ ಗುಂಪೊಂದು ತಮ್ಮ ಸ್ನೇಹಿತೆಗಾಗಿ ಮದುವೆ ಪೂರ್ವ ಸಂಭ್ರಮಾಚರಣೆ ಮಾಡಿದ್ದಾರೆ. ಚಲಿಸುತ್ತಿದ್ದ ರೈಲಿನಲ್ಲಿ ಪ್ರಯಾಣದ ನಡುವೆಯೇ ಸಾಂಪ್ರದಾಯಿಕ ವಿಧಿವಿಧಾನಗಳನ್ನು ನೆರವೇರಿಸಿದ್ದಾರೆ. ಆದರೆ, ಸಾರ್ವಜನಿಕ ರೈಲಿನಲ್ಲಿ ಇಂತಹ ಖಾಸಗಿ ಕಾರ್ಯಕ್ರಮಗಳನ್ನು ನಡೆಸಬಹುದೇ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ಮುಂಬೈ ಹೆರಿಟೇಜ್' (Mumbai Heritage) ಎಂಬ ಎಕ್ಸ್ (X) ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದ್ದು, ಅದರಲ್ಲಿ ಮಹಿಳೆಯರು ರೈಲಿನ ಬೋಗಿಯ ಒಂದು ಭಾಗವನ್ನು ಹೂವುಗಳು, ಅಲಂಕಾರಿಕ ವಸ್ತುಗಳು ಮತ್ತು ಗೋಡೆಗೆ ಅಂಟಿಸಿದ ಸ್ಟಿಕ್ಕರ್‌ಗಳಿಂದ ಸಿಂಗರಿಸುತ್ತಿರುವುದು ಕಂಡುಬರುತ್ತದೆ.

ಈ ಮಹಿಳೆಯರು ಕಾರ್ಯಕ್ರಮವನ್ನು ಮೊದಲೇ ಯೋಜಿಸಿದಂತೆ ತೋರುತ್ತಿದ್ದು, ತಮ್ಮ ಸ್ನೇಹಿತೆಯನ್ನು ಸ್ವಾಗತಿಸಲು ಸಿದ್ಧರಾಗಿದ್ದಾಗ, ಅವರಲ್ಲೊಬ್ಬರು ಅಲಂಕರಿಸಿದ ತಟ್ಟೆಯನ್ನು (ಥಾಲಿ) ಹಿಡಿದುಕೊಂಡಿದ್ದರು. ಮದುಮಗಳು ಅಲ್ಲಿಗೆ ಆಗಮಿಸಿದಾಗ, ಮಹಿಳೆಯರು ಆಕೆಯ ಮೇಲೆ ಹೂವಿನ ದಳಗಳನ್ನು ಸುರಿದು, ಸಾಂಪ್ರದಾಯಿಕ ವಿಧಿವಿಧಾನಗಳನ್ನು ನೆರವೇರಿಸಿದರು ಮತ್ತು ಆಕೆಯನ್ನು ಹರಸಿ ಅಪ್ಪಿಕೊಂಡಿದ್ದಾರೆ.

Advertisement

Advertisement

ಸಾಮಾನ್ಯವಾಗಿ ಕುಟುಂಬ ಮತ್ತು ಸ್ನೇಹಿತರೊಂದಿಗೆ ಮನೆಯಲ್ಲಿ ನಡೆಯುವ ಸಾಂಪ್ರದಾಯಿಕ ಮದುವೆ ಪೂರ್ವ ಆಚರಣೆಯನ್ನೇ ಅವರು ಇಲ್ಲಿ ಮರುಸೃಷ್ಟಿಸಿದಂತಿದೆ. ಈ ವಿಡಿಯೋವನ್ನು ಹಂಚಿಕೊಂಡ 'ಮುಂಬೈ ಹೆರಿಟೇಜ್', ಇದೊಂದು ಸಾಂಪ್ರದಾಯಿಕ ಮಹಾರಾಷ್ಟ್ರ ಶೈಲಿಯ ಮದುವೆ ಪೂರ್ವ ಆಚರಣೆಯಾಗಿದ್ದು, ಇದರಲ್ಲಿ ಸಂಬಂಧಿಕರು ಮತ್ತು ಸ್ನೇಹಿತರು ಒಗ್ಗೂಡಿ ವಧು ಅಥವಾ ವರನ ಮೇಲೆ ಪ್ರೀತಿ ಮತ್ತು ಆಶೀರ್ವಾದ ಮಾಡುತ್ತಾರೆ ಎಂದು ವಿವರಿಸಿದೆ.

"ಈ ಬಾರಿ ಮನೆಯಲ್ಲಿ ಅಲ್ಲ, ಬದಲಾಗಿ ಮುಂಬೈ ಲೋಕಲ್ ರೈಲಿನಲ್ಲಿ!" ಎಂದು ವಿಡಿಯೋ ಶೀರ್ಷಿಕೆಯಲ್ಲಿ ಬರೆಯಲಾಗಿದೆ.ವಿಡಿಯೋದಲ್ಲಿ ಮಹಿಳೆಯರು ಸಂಭ್ರಮಿಸುತ್ತಿರುವುದು ಕಂಡುಬಂದರೂ, ಸಾರ್ವಜನಿಕ ರೈಲಿನಲ್ಲಿ ಇಂತಹ ಕಾರ್ಯಕ್ರಮವನ್ನು ಆಯೋಜಿಸಿದ್ದರ ಬಗ್ಗೆ ಸಾಮಾಜಿಕ ಜಾಲತಾಣ ಬಳಕೆದಾರರು ಪ್ರಶ್ನೆಗಳನ್ನು ಎತ್ತಿದ್ದಾರೆ.

Also Read

ಮದುವೆಗೂ ಮುನ್ನವೇ ತಾಯಿಯಾಗಲು ಬಯಸಿದ್ದೆ, ಅದಕ್ಕೆ ಪೋಷಕರನ್ನೂ ಒಪ್ಪಿಸಿದ್ದೆ, ಆದ್ರೆ...: ನಟಿ ಸ್ವರಾ ಭಾಸ್ಕರ್

ಈ ವಿಡಿಯೋ 'ರೈಲ್ವೆ ಸೇವಾ' (Railway Seva) ಸಂಸ್ಥೆಯ ಗಮನಕ್ಕೆ ಬಂದಿದ್ದು, ಅವರು ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳನ್ನು ಟ್ಯಾಗ್ ಮಾಡುವ ಮೂಲಕ, ಈ ವಿಷಯವನ್ನು ಗಮನಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ. ಸಾರ್ವಜನಿಕ ರೈಲಿನಲ್ಲಿ ಇಂತಹ ಆಚರಣೆಗಳಿಗೆ ಅವಕಾಶ ನೀಡಬಹುದೇ ಎಂದು ಅನೇಕ ಬಳಕೆದಾರರು ಪ್ರಶ್ನಿಸುತ್ತಿರುವ ಬೆನ್ನಲ್ಲೇ ಈ ಪ್ರತಿಕ್ರಿಯೆ ಬಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement