ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ದೀಪತೂಣ್‌ನಲ್ಲಿ ದೀಪ ಹಚ್ಚದ ವಿಜಯ್ ಸರ್ಕಾರದ ವಿರುದ್ಧ ಸುಪ್ರೀಂ ಗರಂ; ನಾಳೆಯೇ ದೀಪ ಬೆಳಗಲು ಆದೇಶ, ಬೆಟ್ಟದ ಭದ್ರತೆ CRPF ಹೆಗಲಿಗೆ!

ಮಧುರೈನ ತಿರುಪ್ಪರಂಕುಂದ್ರಂ ಬೆಟ್ಟದ 'ದೀಪತೂಣ್' ಮೇಲೆ ಕಾರ್ತಿಕ ದೀಪ ಹಚ್ಚುವ ಆದೇಶವನ್ನು ಪಾಲಿಸದ ತಮಿಳುನಾಡು ಸರ್ಕಾರ ಮತ್ತು ಅಧಿಕಾರಿಗಳ ವಿರುದ್ಧ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಆ ಕುರಿತ ವರದಿ ಇಲ್ಲಿದೆ:

ದೀಪತೂಣ್‌ನಲ್ಲಿ ದೀಪ ಹಚ್ಚದ ವಿಜಯ್ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತರಾಟೆ — Online Desk
Hruthin H P
Updated On : 27 Nov 2026, 3:57 pm

ಮಧುರೈ (ತಮಿಳುನಾಡು): ತಮಿಳುನಾಡಿನ ಮಧುರೈನ ತಿರುಪ್ಪರಂಕುಂಡ್ರಂ ಬೆಟ್ಟದ ಮೇಲಿರುವ 'ದೀಪತ್ತೂಣ್' (ದೀಪಸ್ತಂಭ) ಕಂಬದಲ್ಲಿ ಕಾರ್ತಿಕ ದೀಪ ಬೆಳಗಿಸುವ ಆದೇಶವನ್ನು ಪಾಲಿಸಲು ವಿಫಲವಾದ ಮುಖ್ಯಮಂತ್ರಿ ಜೋಸೆಫ್ ವಿಜಯ್ ನೇತೃತ್ವದ ತಮಿಳುನಾಡು ಸರ್ಕಾರ ಮತ್ತು ಮಧುರೈ ಜಿಲ್ಲಾಡಳಿತವನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. "ಇಂತಹ ಪರಿಸ್ಥಿತಿಯನ್ನು ಉಕ್ಕಿನ ಹಸ್ತದಿಂದ ನಿಭಾಯಿಸುವ ಸಮಯ ಬಂದಿದೆ" ಎಂದು ನ್ಯಾಯಾಲಯ ಖಡಕ್ ಎಚ್ಚರಿಕೆ ನೀಡಿದೆ. ಆ ಕುರಿತ ವರದಿ ಇಲ್ಲಿದೆ:

ಉಕ್ಕಿನ ಹಸ್ತದಿಂದ ನಿಭಾಯಿಸುತ್ತೇವೆ

ತಮಿಳುನಾಡು ಸರ್ಕಾರದ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ವಿಪುಲ್ ಪಾಂಚೋಲಿ ಅವರನ್ನೊಳಗೊಂಡ ಪೀಠವು, "ಸಾಂವಿಧಾನಿಕ ಅರಾಜಕತೆ ಸೃಷ್ಟಿಸಲು ಪ್ರಯತ್ನಿಸುವವರನ್ನು ಸುಮ್ಮನೆ ಬಿಡುವುದಿಲ್ಲ; ಇಂತಹ ಪರಿಸ್ಥಿತಿಯನ್ನು ಉಕ್ಕಿನ ಹಸ್ತದಿಂದ ನಿಭಾಯಿಸುವ ಸಮಯ ಬಂದಿದೆ" ಎಂದು ಎಚ್ಚರಿಸಿದೆ. ಜೊತೆಗೆ, ತಮಿಳುನಾಡಿನ ಅಧಿಕಾರಿಗಳು ತಮ್ಮ "ರಾಜಕೀಯ ಬಾಸ್‌ಗಳ ಆದೇಶದಂತೆ ವರ್ತಿಸಿದ್ದಾರೆ" ಎಂದು ನ್ಯಾಯಾಲಯ ಕಿಡಿಕಾರಿದ ನ್ಯಾಯಾಲಯ, ತನ್ನ ಆದೇಶವನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿದ ಹಿನ್ನೆಲೆಯಲ್ಲಿ, ತಿರುಪ್ಪರಂಕುಂಡ್ರಂನ ಅರುಲ್ಮಿಗು ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ಧರ್ಮದರ್ಶಿ ಮಂಡಳಿಯನ್ನು ಅಮಾನತುಗೊಳಿಸಿದೆ. ಇದರೊಂದಿಗೆ, ದೇವಾಲಯದ ಆಡಳಿತವನ್ನು ನೋಡಿಕೊಳ್ಳಲು ಇಬ್ಬರು ನಿವೃತ್ತ ನ್ಯಾಯಾಧೀಶರ ಸಮಿತಿಯನ್ನು ನೇಮಿಸಿದೆ.

Advertisement

Advertisement

Also Read

ಒಂದೇ ಬೆಟ್ಟ, ಎರಡು ನಂಬಿಕೆ: ಏನಿದು ತಿರುಪ್ಪರಂಕುಂದ್ರಂ ವಿವಾದದ ಅಸಲಿ ಕಥೆ? ಇಲ್ಲಿದೆ 100 ವರ್ಷಗಳ ಕಾನೂನು ಸಂಘರ್ಷದ ಚಿತ್ರಣ

ಶನಿವಾರವೇ ದೀಪ ಬೆಳಗಲು ಆದೇಶ

ನವೆಂಬರ್ 24ರಂದು ದೀಪಸ್ತಂಭದಲ್ಲಿ ದೀಪ ಬೆಳಗಿಸಲು ಸಾಧ್ಯವಾಗದ ಕಾರಣ, ನಾಳೆ ಅಂದರೆ ಶನಿವಾರ (ನವೆಂಬರ್ 28) ಅರ್ಚಕರೊಂದಿಗೆ ಸಮಾಲೋಚಿಸಿ ದೀಪತ್ತೂಣ್ ಕಂಬದ ಮೇಲೆ ಕಾರ್ತಿಕ ದೀಪ ಬೆಳಗಿಸುವಂತೆ ನ್ಯಾಯಾಲಯ ನೇಮಿಸಿದ ಸಮಿತಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಇದಕ್ಕೆ ಅಗತ್ಯವಿದ್ದರೆ ಸಿಆರ್‌ಪಿಎಫ್ ಭದ್ರತೆ ನಿಯೋಜಿಸಲು ಮತ್ತು ಸಮೀಪದ ದರ್ಗಾಕ್ಕೂ ಸೂಕ್ತ ರಕ್ಷಣೆ ನೀಡಲು ಸೂಚಿಸಿದೆ. ಇದೆ ವೇಳೆ, ಆದೇಶ ಪಾಲಿಸದ ಕಾರಣಕ್ಕಾಗಿ ತಮಿಳುನಾಡು ಸರ್ಕಾರದ ಮುಖ್ಯ ಕಾರ್ಯದರ್ಶಿ, ಡಿಜಿಪಿ, ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ ಆಯುಕ್ತರು, ಮಧುರೈ ಜಿಲ್ಲಾಧಿಕಾರಿ ನಿಶಾಂತ್ ಕೃಷ್ಣ, ಎಸ್‌ಪಿ ಹಾಗೂ ದೇವಾಲಯದ ಟ್ರಸ್ಟಿಗಳಿಗೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಲಾಗಿದೆ.

ಏನಿದು ವಿವಾದ?

ತಿರುಪ್ಪರಂಕುಂಡ್ರಂ ಬೆಟ್ಟದ ಕೆಳಭಾಗದಲ್ಲಿರುವ ಉಚ್ಚಿಪಿಳ್ಳೈಯಾರ್ ದೇವಾಲಯದ ದೀಪ ಮಂಟಪದಲ್ಲಿ ಪ್ರತಿ ವರ್ಷ ಸಾಂಪ್ರದಾಯಿಕವಾಗಿ ಕಾರ್ತಿಕ ದೀಪ ಬೆಳಗಿಸಲಾಗುತ್ತದೆ. ಆದರೆ ಬೆಟ್ಟದ ಮೇಲ್ಭಾಗದಲ್ಲಿ ದರ್ಗಾದಿಂದ ಸುಮಾರು 50 ಮೀಟರ್ ದೂರದಲ್ಲಿರುವ 'ದೀಪತ್ತೂಣ್' ಕಲ್ಲಿನ ಕಂಬದ ಮೇಲೂ ದೀಪ ಬೆಳಗಿಸಲು ಅನುಮತಿ ನೀಡುವಂತೆ ಹಿಂದೂ ಸಂಘಟನೆಗಳು ಕೋರಿದ್ದವು. ನವೆಂಬರ್ 20ರಂದು ಸುಪ್ರೀಂ ಕೋರ್ಟ್ ಒಂದು ಬಾರಿಯ ಮಧ್ಯಂತರ ವ್ಯವಸ್ಥೆಯಾಗಿ ನವೆಂಬರ್ 24ರಂದು ದೀಪಸ್ತಂಭದಲ್ಲಿ ದೀಪ ಬೆಳಗಿಸಲು ಷರತ್ತುಬದ್ಧ ಅನುಮತಿ ನೀಡಿತ್ತು. ಆದರೆ ದೇವಾಲಯದ ಟ್ರಸ್ಟ್ ಅನುಮತಿ ನಿರಾಕರಿಸಿದೆ ಎಂಬ ನೆಪವೊಡ್ಡಿ ಜಿಲ್ಲಾಡಳಿತ ಅಲ್ಲಿ ದೀಪ ಬೆಳಗಿಸಿರಲಿಲ್ಲ, ಇದು ಭಾರಿ ರಾಜಕೀಯ ಮತ್ತು ಕಾನೂನು ಸಂಘರ್ಷಕ್ಕೆ ಕಾರಣವಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement