ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಸೂತಕದ ಛಾಯೆ; ಹಸೆಮಣೆ ಏರಿದ ಮರುದಿನವೇ ಮಸಣ ಸೇರಿದ ವರ, ರಿಸೆಪ್ಷನ್ ವೇದಿಕೆಯಲ್ಲೇ ಕುಸಿದು ಬಿದ್ದು ವೈದ್ಯ ಸಾವು..!

ಮೃತರನ್ನು ಪಾಟ್ನಾದಲ್ಲಿ ನೆಲೆಸಿದ್ದ ಆಯುಷ್ (AYUSH) ವೈದ್ಯ ಪವನ್ ಕುಮಾರ್ ಯಾದವ್ (25) ಎಂದು ಗುರುತಿಸಲಾಗಿದೆ. ನವೆಂಬರ್ 26ರಂದು ನಡೆದ ಈ ಘಟನೆ ಎರಡು ಕುಟುಂಬಗಳನ್ನೂ ಶೋಕಸಾಗರದಲ್ಲಿ ಮುಳುಗಿಸಿದೆ.

ಮೃತ ಪವನ್ ಕುಮಾರ್ ಯಾದವ್ ಮತ್ತು ವಧು ಗುಡಿಯಾ
Manjula VN
Updated On : 28 Nov 2026, 12:58 pm

ಪಾಟ್ನಾ (ಬಿಹಾರ): ಹಸೆಮಣೆ ಏರಿ ಇನ್ನೂ 24 ಗಂಟೆಗಳೂ ಕಳೆದಿರಲಿಲ್ಲ. ಮದುವೆಯ ಸಂಭ್ರಮದಲ್ಲಿದ್ದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.

ಮದುವೆಯಾದ ಮರುದಿನವೇ ಆರತಕ್ಷತೆ (ರಿಸೆಪ್ಷನ್) ವೇದಿಕೆಯ ಮೇಲೆ ಕುಸಿದು ಬಿದ್ದ 25 ವರ್ಷದ ಯುವ ವೈದ್ಯ, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಬಿಹಾರದ ಕಟಿಹಾರ್ ಜಿಲ್ಲೆಯಲ್ಲಿ ನಡೆದಿದೆ.

ಮೃತರನ್ನು ಪಾಟ್ನಾದಲ್ಲಿ ನೆಲೆಸಿದ್ದ ಆಯುಷ್ (AYUSH) ವೈದ್ಯ ಪವನ್ ಕುಮಾರ್ ಯಾದವ್ (25) ಎಂದು ಗುರುತಿಸಲಾಗಿದೆ. ನವೆಂಬರ್ 26ರಂದು ನಡೆದ ಈ ಘಟನೆ ಎರಡು ಕುಟುಂಬಗಳನ್ನೂ ಶೋಕಸಾಗರದಲ್ಲಿ ಮುಳುಗಿಸಿದೆ.

Advertisement

Advertisement

ಮೃತ ಪವನ್ ಕುಮಾರ್ ಯಾದವ್ ಆಯುಷ್ ವೈದ್ಯರಾಗಿ ಕೆಲಸ ಮಾಡುತ್ತಿದ್ದರು. ಪಾಟ್ನಾದಲ್ಲಿ ವಾಸವಿದ್ದ ಇವರು, ನವೆಂಬರ್ 25ರಂದು ಗುಡಿಯಾ (ಹೆಸರು ಬದಲಾಯಿಸಲಾಗಿದೆ) ಎಂಬ ಯುವತಿಯನ್ನು ವಿವಾಹವಾಗಿದ್ದರು.

ವಧುವಿನ ಗ್ರಾಮವಾದ ದಿರಾ ಚಾಂದ್‌ಪುರಕ್ಕೆ ಅದ್ಧೂರಿ ಮೆರವಣಿಗೆಯಲ್ಲಿ ತೆರಳಿದ್ದ ವರನ ಕುಟುಂಬ, ಸಂಪ್ರದಾಯದಂತೆ ವಿವಾಹ ನೆರವೇರಿಸಿತ್ತು. ಮರುದಿನ ನವೆಂಬರ್ 26ರಂದು ಪವನ್ ಪತ್ನಿಯನ್ನು ಮನೆಗೆ ಕರೆತಂದಿದ್ದರು. ನವದಂಪತಿಗೆ ಬಂಧುಗಳು ಮತ್ತು ಊರಿನವರು ಶುಭ ಹಾರೈಸಲು ಸಂಜೆ ಆರತಕ್ಷತೆ ಹಾಗೂ ಔತಣಕೂಟ ಏರ್ಪಡಿಸಲಾಗಿತ್ತು.

Also Read

ರಾಯಚೂರು: ಸಾವಿನಲ್ಲೂ ಒಂದಾದ ಅಪ್ಪ-ಮಗ; ತಂದೆ ಸಾವಿನ ಸುದ್ದಿ ಕೇಳಿ ಕೊನೆಯುಸಿರೆಳೆದ ಪುತ್ರ!

ಆರತಕ್ಷತೆ ಸಮಾರಂಭದಲ್ಲಿ ವಧು-ವರರು ವೇದಿಕೆಯ ಮೇಲೆ ಕುಳಿತಿದ್ದರು. ಅತಿಥಿಗಳು ಊಟ ಮುಗಿಸಿ ನವದಂಪತಿಗೆ ಆಶೀರ್ವಾದ ಮಾಡುತ್ತಿದ್ದರು. ಕಾರ್ಯಕ್ರಮ ಮುಕ್ತಾಯದ ಹಂತದಲ್ಲಿದ್ದಾಗ ಪವನ್ ಏಕಾಏಕಿ ವೇದಿಕೆಯ ಮೇಲೆಯೇ ಕುಸಿದು ಬಿದ್ದಿದ್ದಾರೆ.

ಕೂಡಲೇ ಸ್ಥಳದಲ್ಲಿದ್ದವರು ಅವರನ್ನು ಫಾಲ್ಕಾ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಆದರೆ, ಪವನ್ ಅವರ ಆರೋಗ್ಯ ಸ್ಥಿತಿ ಹದಗೆಡುತ್ತಿದ್ದ ಹಿನ್ನೆಲೆಯಲ್ಲಿ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಪೂರ್ಣಿಯಾದ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದ್ದಾರೆ. ಆದರೆ. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಪವನ್ ಕೊನೆಯುಸಿರೆಳೆದಿದ್ದಾರೆ.

ಪವನ್ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಎರಡೂ ಕುಟುಂಬಗಳಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಪತಿಯ ಸಾವಿನ ಸುದ್ದಿ ಕೇಳಿದ ವಧು ಗುಡಿಯಾ ಪದೇಪದೇ ಪ್ರಜ್ಞೆ ತಪ್ಪಿದ್ದಾರೆ ಎನ್ನಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement