ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

'ಅನಿವಾರ್ಯತೆ': ಕ್ಷೇತ್ರ ಪುನರ್ವಿಂಗಡಣೆ ಮಸೂದೆಗೆ ಬೆಂಬಲ ಕುರಿತು ಶರದ್ ಪವಾರ್ ಸ್ಪಷ್ಟನೆ, ಕಾಂಗ್ರೆಸ್ ಆಕ್ರೋಶ!

ಕ್ಷೇತ್ರ ಪುನರ್ವಿಂಗಡಣೆ ಮಸೂದೆಗೆ ಬೆಂಬಲ ನೀಡುವ ಮೊದಲು ಅಧಿಕಾರ ಹಂಚಿಕೆಯ ಒಪ್ಪಂದ ಅಂತಿಮವಾಗಬೇಕು ಎಂಬುದು ಎನ್‌ಸಿಪಿ (ಎಸ್‌ಪಿ) ಪಕ್ಷದ ಒಂದು ಬಣದ ಅಭಿಪ್ರಾಯವಾಗಿದೆ ಎಂದು ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.

ಶರದ್ ಪವಾರ್ ಮತ್ತು ರಾಹುಲ್ ಗಾಂಧಿ (ಸಂಗ್ರಹ ಚಿತ್ರ)
Srinivasa Murthy VN
Updated On : 28 Nov 2026, 7:57 am

ಮುಂಬೈ: ಮುಂಬರುವ ಕ್ಷೇತ್ರ ಪುನರ್ವಿಂಗಡಣೆ (Delimitation) ಮಸೂದೆಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಮೋದಿ ಸರ್ಕಾರಕ್ಕೆ NCP ಬೆಂಬಲ ಘೋಷಣೆ ದೇಶದ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದು, ಈ ಅಚ್ಚರಿ ನಿರ್ಧಾರದ ಹಿಂದಿನ ಅಂಶಗಳ ಕುರಿತು ಪಕ್ಷದ ಮುಖ್ಯಸ್ಥ ಶರದ್ ಪವಾರ್ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟನೆ ನೀಡಿದ್ದಾರೆ ಎನ್ನಲಾಗಿದೆ.

ಕ್ಷೇತ್ರ ಪುನರ್ವಿಂಗಡಣೆ ಮಸೂದೆಗೆ ಬೆಂಬಲ ನೀಡುವ ಮೊದಲು ಅಧಿಕಾರ ಹಂಚಿಕೆಯ ಒಪ್ಪಂದ ಅಂತಿಮವಾಗಬೇಕು ಎಂಬುದು ಎನ್‌ಸಿಪಿ (ಎಸ್‌ಪಿ) ಪಕ್ಷದ ಒಂದು ಬಣದ ಅಭಿಪ್ರಾಯವಾಗಿದೆ ಎಂದು ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.

ಅಲ್ಲದೆ ಈಗಾಗಲೇ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಶರದ್ ಪವಾರ್ ಅವರು ಕಾಂಗ್ರೆಸ್ ನಾಯಕರಿಗೆ ದೂರವಾಣಿ ಕರೆ ಮಾಡಿ ತಮ್ಮ ಪಕ್ಷದ ಅನಿವಾರ್ಯತೆಗಳನ್ನು ವಿವರಿಸಿದ್ದಾರೆ ಎನ್ನಲಾಗಿದೆ.

Advertisement

Advertisement

ಎನ್‌ಸಿಪಿ (ಎಸ್‌ಪಿ) ಪಕ್ಷದಲ್ಲಿ ಒಡಕು ಉಂಟಾಗುವುದನ್ನು ತಪ್ಪಿಸಲು ಕ್ಷೇತ್ರ ಪುನರ್ವಿಂಗಡಣೆ ಮಸೂದೆಗೆ ಬೆಂಬಲ ನೀಡುವುದು ಅಗತ್ಯ ಎಂದು ಅವರು INDIA ಮೈತ್ರಿಕೂಟದ ನಾಯಕರಿಗೆ ತಿಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Also Read

Delimitation: ಕಾಂಗ್ರೆಸ್`ಗೆ ಕೈಕೊಟ್ಟ NCPಗೆ ಬಂಪರ್; ಕೇಂದ್ರದಲ್ಲಿ ಸುಪ್ರಿಯಾಸುಳೆಗೆ ಮಂತ್ರಿ ಸ್ಥಾನ!: ವರದಿ

ಇತ್ತೀಚಿನ ದಿನಗಳಲ್ಲಿ ಪಕ್ಷದ ನಾಯಕರು ಕ್ಷೇತ್ರ ಪುನರ್ವಿಂಗಡಣೆ ಪರವಾಗಿ ಮಾತನಾಡುತ್ತಿರುವುದು ಈ ರಾಜಕೀಯ ಬದಲಾವಣೆಯ ಸುಳಿವು ನೀಡಿದೆ. ಜಿತೇಂದ್ರ ಅವ್ಹಾದ್ ಅವರು, ಕ್ಷೇತ್ರಗಳ ಮರುಹಂಚಿಕೆ ಅಗತ್ಯ ಎಂಬ ಅಭಿಪ್ರಾಯವನ್ನು ಶರದ್ ಪವಾರ್ ಈ ಹಿಂದೆಯೇ ಅನೌಪಚಾರಿಕ ಮಾತುಕತೆಯ ವೇಳೆ ವ್ಯಕ್ತಪಡಿಸಿದ್ದರು ಎಂದು ಹೇಳಿದ್ದಾರೆ.

ಸುಪ್ರಿಯಾ ಸುಳೆ ಕೂಡ ಕ್ಷೇತ್ರ ಪುನರ್ವಿಂಗಡಣೆಗೆ ಬೆಂಬಲ ಸೂಚಿಸಿದ್ದಾರೆ. ಸಂಸದೀಯ ಕ್ಷೇತ್ರಗಳ ಸಂಖ್ಯೆಯನ್ನು ಶೇ.50ರಷ್ಟು ಹೆಚ್ಚಿಸುವುದರಿಂದ ರಾಜ್ಯಗಳ ಪ್ರಾತಿನಿಧ್ಯ ಕಡಿಮೆಯಾಗಬಹುದು ಎಂಬ ಆತಂಕ ದೂರವಾಗಲಿದೆ ಎಂಬುದು ಅವರ ವಾದವಾಗಿದೆ.

ಶರದ್ ಪವಾರ್ ಅವರ ಅನಾರೋಗ್ಯದ ಹಿನ್ನೆಲೆಯಲ್ಲಿ ಸುಪ್ರಿಯಾ ಸುಳೆ ಸೋಮವಾರ ನೇರವಾಗಿ ದೆಹಲಿಗೆ ತೆರಳಿ ಸಂಸತ್ ಅಧಿವೇಶನದಲ್ಲಿ ಭಾಗವಹಿಸಲಿದ್ದಾರೆ. ಹೀಗಾಗಿ ನವೆಂಬರ್ 28ರಂದು ನಡೆಯುವ INDIA ಮೈತ್ರಿಕೂಟದ ಸಭೆಗೆ ಅವರು ಗೈರಾಗಲಿದ್ದಾರೆ. ಅವರ ಬದಲಿಗೆ ಎನ್‌ಸಿಪಿ (ಎಸ್‌ಪಿ) ಸಂಸದ ನಿಲೇಶ್ ಲಂಕೆ ಸಭೆಯಲ್ಲಿ ಭಾಗವಹಿಸುವ ಸಾಧ್ಯತೆ ಇತ್ತು. ಆದರೆ, ರಾಜಕೀಯ ಬೆಳವಣಿಗೆಗಳು ವೇಗವಾಗಿ ಬದಲಾಗುತ್ತಿವೆ ಎಂದು ವರದಿ ತಿಳಿಸಿದೆ.

ಕಾಂಗ್ರೆಸ್ ಆಕ್ರೋಶ: 'ಈಗ ಏನು ಹೇಳುತ್ತೀರಿ?'

ಶರದ್ ಪವಾರ್ ಅವರ ಪಕ್ಷದ ನಡೆಗೆ ಮಹಾರಾಷ್ಟ್ರ ಕಾಂಗ್ರೆಸ್ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದೆ. ರಾಜ್ಯಸಭೆಗೆ ಶರದ್ ಪವಾರ್ ಅವರನ್ನು ಮರು ಆಯ್ಕೆ ಮಾಡಲು ಕಾಂಗ್ರೆಸ್ ಬೆಂಬಲ ನೀಡಿದ್ದನ್ನು ನೆನಪಿಸಿರುವ ಪಕ್ಷ, ಇದೀಗ ಅವರ ನಿಲುವಿನ ಬಗ್ಗೆ ಪ್ರಶ್ನೆ ಎತ್ತಿದೆ.

2026ರ ಮಾರ್ಚ್‌ನಲ್ಲಿ ಮಹಾರಾಷ್ಟ್ರದ ಏಳು ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಯಬೇಕಿತ್ತು. ಆಗ ಎನ್‌ಸಿಪಿ (ಎಸ್‌ಪಿ) ಪಕ್ಷಕ್ಕೆ ಕೇವಲ 10 ಶಾಸಕರಿದ್ದರು. ರಾಜ್ಯಸಭೆಗೆ ಆಯ್ಕೆಯಾಗಲು 36 ಮತಗಳ ಅಗತ್ಯವಿತ್ತು. ಕಾಂಗ್ರೆಸ್‌ಗೆ 16 ಹಾಗೂ ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ಬಣಕ್ಕೆ 20 ಶಾಸಕರಿದ್ದರು.

ಶರದ್ ಪವಾರ್ ಅವರ ಅಭ್ಯರ್ಥಿತನಕ್ಕೆ ಬೆಂಬಲ ನೀಡುವಂತೆ ಸುಪ್ರಿಯಾ ಸುಳೆ ಕಾಂಗ್ರೆಸ್ ನಾಯಕರನ್ನು ಕೋರಿದ್ದರು. ಆಗ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಯಾವುದೇ ಹಿಂಜರಿಕೆಯಿಲ್ಲದೆ ಬೆಂಬಲ ನೀಡಿದ್ದರು ಎಂದು ಮಹಾರಾಷ್ಟ್ರ ಕಾಂಗ್ರೆಸ್ ತನ್ನ ಪೋಸ್ಟ್‌ನಲ್ಲಿ ಉಲ್ಲೇಖಿಸಿದೆ.

'ಈಗ ಏನು?' ಎಂದು ಪ್ರಶ್ನಿಸುವ ಮೂಲಕ ಕಾಂಗ್ರೆಸ್ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement