ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಸಂಸತ್ ಅಧಿವೇಶನಕ್ಕೂ ಮುನ್ನ ಟಿಎಂಸಿ ಬಿಗ್ ಮೂವ್; 20 ಬಂಡಾಯ ಸಂಸದರ ಮತದಾನಕ್ಕೆ ಬ್ರೇಕ್ ಹಾಕುವಂತೆ ಸ್ಪೀಕರ್‌ಗೆ ಅಭಿಷೇಕ್ ಬ್ಯಾನರ್ಜಿ ಪತ್ರ

ಸಂಸತ್ತಿನ ವಿಶೇಷ ಅಧಿವೇಶನಕ್ಕೂ ಮುನ್ನ, TMC ಪಕ್ಷದ 20 ಬಂಡಾಯ ಸಂಸದರಿಗೆ ಮತದಾನ ಮಾಡಲು ಅವಕಾಶ ನೀಡಬಾರದು ಎಂದು ಸ್ಪೀಕರ್ ಓಂ ಬಿರ್ಲಾ ಅವರಿಗೆ ಅಭಿಷೇಕ್ ಬ್ಯಾನರ್ಜಿ ಪತ್ರ ಬರೆದಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಅಭಿಷೇಕ್ ಬ್ಯಾನರ್ಜಿ
Hruthin H P
Updated On : 29 Nov 2026, 3:55 pm

ನವದೆಹಲಿ: ನವೆಂಬರ್ 30ರಿಂದ ಆರಂಭವಾಗಲಿರುವ ಸಂಸತ್ತಿನ ವಿಶೇಷ ಅಧಿವೇಶನಕ್ಕೂ ಮುನ್ನ ರಾಷ್ಟ್ರ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದಿಂದ ಬಂಡಾಯವೆದ್ದು ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ (ಎನ್‌ಸಿಪಿಐ) ಜೊತೆ ವಿಲೀನಗೊಂಡಿರುವ 20 ಸಂಸದರಿಗೆ ವಿಶೇಷ ಅಧಿವೇಶನದಲ್ಲಿ ಮತ ಚಲಾಯಿಸಲು ಅವಕಾಶ ನೀಡಬಾರದು ಎಂದು ಟಿಎಂಸಿ ಲೋಕಸಭಾ ನಾಯಕ ಅಭಿಷೇಕ್ ಬ್ಯಾನರ್ಜಿ ಆಗ್ರಹಿಸಿದ್ದಾರೆ. ಈ ಸಂಬಂಧ ಅವರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಮಹತ್ವದ ಪತ್ರವೊಂದನ್ನು ಬರೆದಿದ್ದು, ಪಕ್ಷಾಂತರ ನಿಷೇಧ ಕಾಯ್ದೆಯಡಿ ಈ ಸಂಸದರ ವಿರುದ್ಧ ಸಲ್ಲಿಸಲಾಗಿರುವ ಅನರ್ಹತೆ ಅರ್ಜಿಗಳು ಇನ್ನೂ ಬಾಕಿ ಇರುವುದನ್ನು ಉಲ್ಲೇಖಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಅನರ್ಹತೆ ಅರ್ಜಿ ಬಾಕಿ ಇರುವಾಗ ಮತದಾನಕ್ಕೆ ಅವಕಾಶ ಬೇಡ

ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿರುವ ಅಭಿಷೇಕ್ ಬ್ಯಾನರ್ಜಿ, ಟಿಎಂಸಿ ಚಿಹ್ನೆಯಡಿ ಗೆದ್ದಿರುವ ಈ 20 ಸಂಸದರ ವಿರುದ್ಧ ಜೂನ್ 19, 2026ರಂದೇ ಸಂವಿಧಾನದ 10ನೇ ಶೆಡ್ಯೂಲ್ ಅಡಿಯಲ್ಲಿ ಅನರ್ಹತೆ ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂದು ನೆನಪಿಸಿದ್ದಾರೆ. ಈ ಅರ್ಜಿಗಳ ಕುರಿತು ಸ್ಪೀಕರ್ ಅವರಿಂದ ಇನ್ನೂ ಯಾವುದೇ ಅಂತಿಮ ನಿರ್ಧಾರ ಹೊರಬಿದ್ದಿಲ್ಲ. ಪ್ರಕರಣ ಇತ್ಯರ್ಥವಾಗುವ ಮುನ್ನವೇ ಅವರಿಗೆ ಮತದಾನದ ಹಕ್ಕು ನೀಡಿದರೆ ಅದು ಬಾಕಿ ಇರುವ ವಿಚಾರಣೆಯ ಮೇಲೆ ಪ್ರಭಾವ ಬೀರಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

Advertisement

Advertisement

Also Read

Delimitation Bill: ಸಂಸತ್ತಿನಲ್ಲಿ ಮತಗಳ ಗಣಿತ! ಕಳೆದ ಬಾರಿ ಬಿದ್ದುಹೋಗಿದ್ದ ಮಸೂದೆ ಈ ಬಾರಿ ಪಾಸ್ ಆಗುತ್ತಾ? ಇಲ್ಲಿದೆ ಸದನದ ಇಂಚಿಂಚು ಲೆಕ್ಕಾಚಾರ

ಮುಂದುವರೆದು, ಲೋಕಸಭೆಯಲ್ಲಿ ಈ 20 ಬಂಡಾಯ ಸಂಸದರಿಗೆ ನೀಡಿರುವ ಪ್ರತ್ಯೇಕ ಆಸನ ವ್ಯವಸ್ಥೆಯನ್ನು ತಕ್ಷಣವೇ ಮರುಪರಿಶೀಲಿಸಬೇಕು ಎಂದು ಒತ್ತಾಯಿಸಿದ ಬ್ಯಾನರ್ಜಿ, ಲೋಕಸಭೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಈಗಲೂ ಟಿಎಂಸಿ ಸಂಸದರ ಬಲ 28 ಎಂದೇ ತೋರಿಸುತ್ತಿದೆ ಮತ್ತು ಈ 20 ಸಂಸದರು ಅಧಿಕೃತ ದಾಖಲೆಗಳಲ್ಲಿ ಟಿಎಂಸಿ ಸದಸ್ಯರಾಗಿಯೇ ಇದ್ದಾರೆ ಎಂದು ಉಲ್ಲೇಖಿಸಿದ್ದಾರೆ. ಜೊತೆಗೆ, ಸಂವಿಧಾನದ 10ನೇ ಶೆಡ್ಯೂಲ್‌ನ ಪ್ಯಾರಾ 4ರ ಅಡಿಯಲ್ಲಿ ರಕ್ಷಣೆ ಸಿಗಬೇಕಾದರೆ ಮೂಲ ರಾಜಕೀಯ ಪಕ್ಷವೇ ಬೇರೊಂದು ಪಕ್ಷದೊಂದಿಗೆ ವಿಲೀನವಾಗಬೇಕು. ಆದರೆ ಟಿಎಂಸಿ ಪಕ್ಷವು ಎನ್‌ಸಿಪಿಐ ಜೊತೆ ವಿಲೀನವಾಗಿಲ್ಲವಾದ್ದರಿಂದ ಬಂಡಾಯ ಸಂಸದರ ವಾದಕ್ಕೆ ಮಾನ್ಯತೆ ಇಲ್ಲ ಎಂದು ಅಭಿಷೇಕ್ ಬ್ಯಾನರ್ಜಿ ಸ್ಪಷ್ಟಪಡಿಸಿದ್ದಾರೆ.

Also Read

Delimitation ನಂತರ ರಾಜ್ಯದ ರಾಜಕೀಯ ನಕ್ಷೆಯೇ ಬದಲು; ಬೆಂಗಳೂರಿಗೆ ಸಿಗಲಿದೆ ಸೂಪರ್ ಪವರ್! ನಿಮ್ಮ ಜಿಲ್ಲೆಗೆ ಎಷ್ಟು ಲಾಭ? ಇಲ್ಲಿದೆ ಕರ್ನಾಟಕದ ಸಂಪೂರ್ಣ ಲೆಕ್ಕಾಚಾರ

ಏತನ್ಮಧ್ಯೆ, ನವೆಂಬರ್ 30ರಿಂದ ಡಿಸೆಂಬರ್ 4ರವರೆಗೆ ನಡೆಯಲಿರುವ ವಿಶೇಷ ಅಧಿವೇಶನದಲ್ಲಿ ಕೇಂದ್ರ ಸರ್ಕಾರವು ಕ್ಷೇತ್ರ ಪುನರ್ವಿಂಗಡಣೆ ಮತ್ತು ಮಹಿಳಾ ಮೀಸಲಾತಿಗೆ ಸಂಬಂಧಿಸಿದ ಪ್ರಮುಖ ಸಂವಿಧಾನ ತಿದ್ದುಪಡಿ ಮಸೂದೆಗಳನ್ನು ಮಂಡಿಸಲಿದೆ. ಈ ಮಸೂದೆಗಳು ಅಂಗೀಕಾರವಾಗಲು ಸದನದಲ್ಲಿ ಹಾಜರಿರುವ ಸದಸ್ಯರ ಮೂರನೇ ಎರಡರಷ್ಟು ಬಹುಮತ ಅಗತ್ಯವಿದೆ. ಹೀಗಾಗಿ ಈ 20 ಸಂಸದರ ಮತಗಳು ಅತ್ಯಂತ ನಿರ್ಣಾಯಕವಾಗಿವೆ. ಇದೇ ವೇಳೆ ಟಿಎಂಸಿ ತನ್ನೆಲ್ಲಾ ಲೋಕಸಭಾ ಸದಸ್ಯರಿಗೆ ಮೂರು ಸಾಲಿನ ವಿಪ್ ಜಾರಿಗೊಳಿಸಿದ್ದು, ಕಡ್ಡಾಯವಾಗಿ ಸದನಕ್ಕೆ ಹಾಜರಾಗಿ ಪಕ್ಷದ ನಿಲುವನ್ನು ಬೆಂಬಲಿಸುವಂತೆ ಸೂಚಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement