ಸೋನಿಯಾಗಾಂಧಿ ಮತ್ತು ನಿತೀಶ್ ಕುಮಾರ್ 
ದೇಶ

ಆತ ದೇಶದ್ರೋಹಿ,'ಇಂಡಿಯಾ ಒಕ್ಕೂಟ' ತೊರೆದಿದ್ದು ಒಳ್ಳೆಯದೆ ಆಯಿತು: ನಿತೀಶ್ ವಿರುದ್ಧ ಸೋನಿಯಾ ಕಿಡಿ; ಜೆಡಿಯು ವಾಗ್ದಾಳಿ

ನಿತೀಶ್ ಕುಮಾರ್‌ ಇಂಡಿಯಾ ಒಕ್ಕೂಟದಲ್ಲಿಯೇ ಇದ್ದಿದ್ದರೆ 2024ರ ಲೋಕಸಭಾ ಚುನಾವಣೆಯ ಫಲಿತಾಂಶ ಬೇರೆಯೇ ಆಗಿರುತ್ತಿತ್ತು ಎಂದು ದಿಗ್ವಿಜಯ ಸಿಂಗ್‌ ಹೇಳಿದರು

ನವದೆಹಲಿ: 2024ರ ಲೋಕಸಭಾ ಚುನಾವಣೆಗೂ ಮುನ್ನ ಜೆಡಿಯು ವರಿಷ್ಠ ನಿತೀಶ್‌ ಕುಮಾರ್‌ ಅವರು ‘ಇಂಡಿಯಾ’ ಒಕ್ಕೂಟವನ್ನು ತೊರೆದ ವಿಚಾರವು ಮಂಗಳವಾರ ಇಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕಾರಿ ಸಭೆಯಲ್ಲಿ (ಸಿಡಬ್ಲುಸಿ) ಪ್ರಸ್ತಾಪವಾಗಿದೆ.

ನಿತೀಶ್‌ ಕುಮಾರ್‌ ಅವರು ವಿಪಕ್ಷಗಳ ಒಕ್ಕೂಟವನ್ನು ತೊರೆಯದಂತೆ ನೋಡಿ ಕೊಳ್ಳಬೇಕಿತ್ತು ಎಂದು ಪಕ್ಷದ ಹಿರಿಯ ನಾಯಕ ದಿಗ್ವಿಜಯ ಸಿಂಗ್ ಹೇಳಿದರು. ಆದರೆ, ಅವರು ಹೊರ ಹೋಗಿದ್ದೇ ಒಳ್ಳೆಯದಾಯಿತು. ಅವರು ವಿರೋಧ ಪಕ್ಷಗಳಿಗೆ ದ್ರೋಹ ಬಗೆದರು ಎಂಬುದಾಗಿ ಪಕ್ಷದ ಹಿರಿಯ ನಾಯಕಿ ಸೋನಿಯಾ ಗಾಂಧಿ ಹೇಳಿದರು ಎಂದು ಮೂಲಗಳು ಹೇಳಿವೆ.

ನಿತೀಶ್ ಕುಮಾರ್‌ ಇಂಡಿಯಾ ಒಕ್ಕೂಟದಲ್ಲಿಯೇ ಇದ್ದಿದ್ದರೆ 2024ರ ಲೋಕಸಭಾ ಚುನಾವಣೆಯ ಫಲಿತಾಂಶ ಬೇರೆಯೇ ಆಗಿರುತ್ತಿತ್ತು ಎಂದು ದಿಗ್ವಿಜಯ ಸಿಂಗ್‌ ಹೇಳಿದರು. ಈ ಮಾತಿಗೆ ಸೋನಿಯಾ ಗಾಂಧಿ ಸಹಮತ ವ್ಯಕ್ತಪಡಿಸಲಿಲ್ಲ. ನಿತೀಶ್ ಕುಮಾರ್‌ ಒಕ್ಕೂಟ ತೊರೆದಿದ್ದೇ ಒಳ್ಳೆಯದಾಯಿತು ಎಂದು ಸೋನಿಯಾ ಗಾಂಧಿ ಸಭೆಗೆ ತಿಳಿಸಿದರು ಎಂದು ತಿಳಿದು ಬಂದಿದೆ.

ನಿತೀಶ್ ಕುಮಾರ್ ವಿರುದ್ಧ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮಾತುಗಳು ಜೆಡಿ(ಯು) ಅಧ್ಯಕ್ಷರ ಆಪ್ತ ವಲಯದಲ್ಲಿ ತೀವ್ರ ಟೀಕೆಗೆ ಗುರಿಯಾಗಿವೆ. 2022ರಲ್ಲಿ ಬಿಜೆಪಿಯೊಂದಿಗಿನ ಮೈತ್ರಿಯನ್ನು ಕಡಿದುಕೊಂಡಿದ್ದ ಕುಮಾರ್, ಕಾಂಗ್ರೆಸ್, ಆರ್‌ಜೆಡಿ ಮತ್ತು ಎಡಪಕ್ಷಗಳ ಬೆಂಬಲದೊಂದಿಗೆ ಹೊಸ ಸರ್ಕಾರವನ್ನು ರಚಿಸಿದ್ದರು ಹಾಗೂ 'ಇಂಡಿಯಾ' (INDIA) ಮೈತ್ರಿಕೂಟದ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಆದರೆ, ಹೊಸ ಮೈತ್ರಿಕೂಟದ ಸಂಚಾಲಕರನ್ನಾಗಿ ತಮ್ಮನ್ನು ನೇಮಿಸಲು ಮಿತ್ರಪಕ್ಷಗಳು ತೋರಿದ ಹಿಂಜರಿಕೆಯಿಂದ ಅಸಮಾಧಾನಗೊಂಡಿದ್ದ ಕುಮಾರ್, ಲೋಕಸಭಾ ಚುನಾವಣೆಯ ವೇಳಾಪಟ್ಟಿಯನ್ನು ಚುನಾವಣಾ ಆಯೋಗ ಘೋಷಿಸುವ ಕೆಲವೇ ವಾರಗಳ ಮೊದಲು, 2024ರಲ್ಲಿ ಹಠಾತ್ತನೆ ಎನ್‌ಡಿಎ (NDA) ಮೈತ್ರಿಕೂಟಕ್ಕೆ ಮರಳಿದರು.

ಸೋನಿಯಾ ಗಾಂಧಿ ಅವರ ಈ ಹೇಳಿಕೆಯ ಕುರಿತು ಪ್ರತಿಕ್ರಿಯಿಸಿದ ಕೇಂದ್ರ ಸಚಿವ ರಾಜೀವ್ ರಂಜನ್ ಸಿಂಗ್ 'ಲಾಲನ್' ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. ಅಲ್ಲದೆ, "ತುರ್ತು ಪರಿಸ್ಥಿತಿಯ ಸಮಯದಲ್ಲಿ ಪ್ರಜಾ ಪ್ರಭುತ್ವವನ್ನು ನಾಶಪಡಿಸಿದ ಪಕ್ಷ ಕಾಂಗ್ರೆಸ್ ವಿರುದ್ಧ ಆರೋಪಿಸಿದರು, "ನಿತೀಶ್ ಕುಮಾರ್ ಅವರನ್ನು ಜನರು ಪ್ರೀತಿಸುತ್ತಾರೆ. ಅವರಿಗೆ ಸೋನಿಯಾ ಗಾಂಧಿ ಅವರ ಪ್ರಮಾಣಪತ್ರದ ಅಗತ್ಯವಿಲ್ಲ" ಎಂದು ಪ್ರತಿಪಾದಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ "ಪ್ರಜಾಪ್ರಭುತ್ವ ಬಲಗೊಂಡಿದೆ ಮತ್ತು ದೇಶವು ಸಮೃದ್ಧಿಯತ್ತ ಸಾಗುತ್ತಿದೆ" ಎಂದೂ ಅವರು ಪ್ರತಿಪಾದಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಂಗ್ರೆಸ್‌ನಲ್ಲಿ ಮತ್ತೆ ಸಂಪುಟ ಸರ್ಕಸ್: ದೆಹಲಿಯಲ್ಲಿ ವೇಣುಗೋಪಾಲ್ ಭೇಟಿಯಾದ ಸಿದ್ದರಾಮಯ್ಯ, ಖಾಲಿ ಇರೋ 2 ಸಚಿವ ಸ್ಥಾನ ಭರ್ತಿಗೆ ಪಟ್ಟು..!

ಡಿಕೆಶಿ ಕನಸಿನ ಅವಳಿ ಸುರಂಗ ಮಾರ್ಗಕ್ಕೆ ಹೊಸ ಕಂಟಕ: ಹೆಬ್ಬಾಳ ಕೆರೆಯ 3.45 ಎಕರೆ ಜೌಗು ಪ್ರದೇಶ ನಾಶಕ್ಕೆ ಯತ್ನ, ಎದುರಾಯ್ತು ಕಾನೂನು ಸಂಕಷ್ಟ..!

ಕರ್ನಾಟಕ ಮತದಾರರ ಪಟ್ಟಿ ಪರಿಷ್ಕರಣೆ: ಬುಡಕಟ್ಟು, ದಲಿತರು, ಅಲ್ಪಸಂಖ್ಯಾತರು, ಮಹಿಳೆಯರ ಹೆಸರೇ ಹೆಚ್ಚು ಡಿಲೀಟ್‌? SIR ವಿರುದ್ಧ ಸಿಡಿದೆದ್ದ ಒಕ್ಕೂಟ..!

Asian Games 2026: ಚಿನ್ನ-ಬೆಳ್ಳಿ ಗೆದ್ದು ಮಿಂಚಿದ ಕರುನಾಡ ಕುವರಿ ಪೂವಮ್ಮ; ಕರ್ನಾಟಕದ ಬಹುಮಾನ ನೀತಿಗೆ ಅಸಮಾಧಾನ, ರಾಜ್ಯ ಸರ್ಕಾರದ ಅಸಡ್ಡೆಗೆ ಬೇಸರ..!

ಶುಭಮನ್ ಗಿಲ್ 2ನೇ ಏಕದಿನ ದ್ವಿಶತಕ; ರೋಹಿತ್ ಶರ್ಮಾ ಬಳಿಕ ಐತಿಹಾಸಿಕ ದಾಖಲೆ!