ನ್ಯಾ. ಭುಯಾನ್ 
ದೇಶ

ಮತದಾನದ ಹಕ್ಕು ಕಸಿಯುವಂತಿಲ್ಲ: ನ್ಯಾ. ಭುಯಾನ್ ಹೇಳಿಕೆ ಶಿಷ್ಟಾಚಾರಕ್ಕೆ ವಿರುದ್ಧ- ನಿವೃತ್ತ ಸಿಜೆಐ ಬಿ.ಆರ್ ಗವಾಯಿ

ಲಕ್ಷಾಂತರ ಭಾರತೀಯರ ಮತದಾನದ ಹಕ್ಕನ್ನು ಕಸಿದುಕೊಂಡು ಅವರನ್ನು ತಮ್ಮದೇ ದೇಶದಲ್ಲಿ ದ್ವಿತೀಯ ದರ್ಜೆ ನಾಗರಿಕರನ್ನಾಗಿಸುವ ಯಾವುದೇ ಪ್ರಕ್ರಿಯೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ.

ನವದೆಹಲಿ: ಎಸ್ಐಆರ್ ವಿವಾದಕ್ಕೆ ಸಂಬಂಧಿಸಿದಂತೆ ಮತದಾನದ ಹಕ್ಕು ಕಸಿಯುವಂತಿಲ್ಲ ಎಂದು ಹೇಳಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅವರ ಹೇಳಿಕೆಗೆ ಸುಪ್ರೀಂ ಕೋರ್ಟ್ ಮಾಜಿ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ದೆಹಲಿ ಹೈಕೋರ್ಟ್‌ನ ಇಬ್ಬರು ನಿವೃತ್ತ ನ್ಯಾಯಮೂರ್ತಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಲಕ್ಷಾಂತರ ಭಾರತೀಯರ ಮತದಾನದ ಹಕ್ಕನ್ನು ಕಸಿದುಕೊಂಡು ಅವರನ್ನು ತಮ್ಮದೇ ದೇಶದಲ್ಲಿ ದ್ವಿತೀಯ ದರ್ಜೆ ನಾಗರಿಕರನ್ನಾಗಿಸುವ ಯಾವುದೇ ಪ್ರಕ್ರಿಯೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇಂತಹ ಕ್ರಮ ಮೂಲತಃ ನಿರಂಕುಶ. ಅದನ್ನು ಸಮರ್ಥಿಸಲು ಬೇರೆ ವಿಷಯಗಳನ್ನು ಮುಂದಿಟ್ಟುಕೊಂಡು ವಾದಿಸುವುದೂ ಸಾಧ್ಯವಿಲ್ಲ’ ಎಂದು ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅವರು ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು, ಎಸ್ಐಆರ್ ಕುರಿತು ಅರ್ಜಿಗಳು ಸರ್ವೋಚ್ಚ ನ್ಯಾಯಾಲಯದ ಮುಂದೆ ಬಾಕಿ ಇರುವಾಗ ಕುರಿತು ಹಾಲಿ ನ್ಯಾಯಮೂರ್ತಿಯೊಬ್ಬರು ಸಾರ್ವಜನಿಕವಾಗಿ ಪ್ರತಿಕ್ರಿಯಿಸಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.

ನ್ಯಾಯಾಲಯದ ಮುಂದೆ ವಿಚಾರಣಾ ಹಂತದಲ್ಲಿರುವ(sub judice) ವಿಷಯದ ಕುರಿತು ಹಾಲಿ ನ್ಯಾಯಮೂರ್ತಿಯೊಬ್ಬರು ಪ್ರತಿಕ್ರಿಯಿಸುವುದು "ನ್ಯಾಯಾಂಗದ ಶಿಷ್ಟಾಚಾರಕ್ಕೆ" (judicial propriety) ವಿರುದ್ಧ ಎಂದು ಪಿಟಿಐಗೆ ತಿಳಿಸಿದ್ದಾರೆ.

ಇನ್ನು ದೆಹಲಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳಾದ ಎಸ್.ಎನ್. ಧಿಂಗ್ರಾ ಮತ್ತು ಆರ್.ಎಸ್. ಸೋಧಿ ಕೂಡ ಭುಯಾನ್ ಅವರ ಹೇಳಿಕೆಯನ್ನು ಪ್ರಶ್ನಿಸಿದ್ದಾರೆ.

ಈ ಹೇಳಿಕೆಯು "ಸರ್ವೋಚ್ಚ ನ್ಯಾಯಾಲಯದ ಹಾಲಿ ನ್ಯಾಯಮೂರ್ತಿಯೊಬ್ಬರ ಮಿತಿಯನ್ನು ಮೀರಿದಂತಿದೆ" ಎಂದು ಹೇಳಿದ ಧಿಂಗ್ರಾ, ಈ ವಿಷಯವು ಸುಪ್ರೀಂ ಕೋರ್ಟ್‌ನ ಮುಂದಿರುವಾಗ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಅಂತಹ ಹೇಳಿಕೆಗಳನ್ನು ನೀಡಬಾರದಿತ್ತು ಎಂದಿದ್ದಾರೆ.

"ಅಂತಹ ಹೇಳಿಕೆಯನ್ನು ನೀಡುವ ಮೊದಲು ಅವರು ಸಾವಿರ ಬಾರಿ ಯೋಚಿಸಬೇಕಿತ್ತು" ಎಂದ ಧಿಂಗ್ರಾ ಹೇಳಿದ್ದಾರೆ.

ಮತ್ತೊಂದೆಡೆ, ಎಸ್ಐಆರ್ ಅನ್ನು ಮತದಾನದ ಹಕ್ಕು ಕಸಿದುಕೊಳ್ಳುವ ಪ್ರಕ್ರಿಯೆ ಎಂದು ಕರೆಯುವುದು ಸರಿಯಲ್ಲ ಎಂದ ಸೋಧಿ, ಮತದಾನದ ಹಕ್ಕುಗಳು ಶಾಸನಬದ್ಧ ಚೌಕಟ್ಟಿನಿಂದ ನಿರ್ಧರಿಸಲ್ಪಡುತ್ತವೆ ಎಂದು ಹೇಳಿದ್ದಾರೆ.

ಭಾನುವಾರ 19ನೇ NALSAR ನ್ಯಾಯಮೂರ್ತಿ ಬಿ.ಆರ್. ಸಾಹ್ನಿ ಸ್ಮಾರಕ ಅಣಕು ನ್ಯಾಯಾಲಯ ಸ್ಪರ್ಧೆ–2026ರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ನ್ಯಾ. ಭುಯಾನ್ ಅವರು, ಮತದಾನದ ಹಕ್ಕು ಕೇವಲ ಶಾಸನಬದ್ಧ ಹಕ್ಕಲ್ಲ. ಅದು ಸಂವಿಧಾನದ 326ನೇ ವಿಧಿಯಿಂದ ದೊರೆಯುವ ಸಾಂವಿಧಾನಿಕ ಹಕ್ಕು ಎಂದು ಸ್ಪಷ್ಟಪಡಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

SIR ಫಾರ್ಮ್ 6ಗೆ ಅನುಮೋದನೆ ನೀಡಿಲ್ಲ: CJI ಸ್ಪಷ್ಟನೆ; 'ಸುಪ್ರೀಂ' ಹೇಳಿಕೆಯೂ CEC ಏಕಪಕ್ಷೀಯ ತೀರ್ಮಾನ ಅಂತ ದೃಢಪಡಿಸಿದೆ: ರಾಹುಲ್

'ನನಗೆ ಆಶೀರ್ವಾದ ಮಾಡಿದಂತೆ ಯತೀಂದ್ರಗೂ ಮಾಡಿ': ಸಿದ್ದರಾಮಯ್ಯ ಭಾವುಕ ಮಾತಿಗೆ 'ಮತ್ತೆ ಚುನಾವಣೆಗೆ ನಿಲ್ಲಿ' ಎಂದ ಜನ; ಮಾಜಿ ಸಿಎಂ ಹೇಳಿದ್ದೇನು?

SIR v/s FIR: ಫಾರ್ಮ್-7 ದುರ್ಬಳಕೆ ಆರೋಪ; ಬಿಜೆಪಿ ಶಾಸಕನ ವಿರುದ್ಧ ಸೌಮ್ಯಾ ರೆಡ್ಡಿ ದೂರು; Video

ಫ್ಲೈದುಬೈ ಘಟನೆ ಬೆನ್ನಲ್ಲೇ London-Chicago ವಿಮಾನದಲ್ಲಿ ತುರ್ತು ಪರಿಸ್ಥಿತಿ; ದಿಢೀರ್ 9,000 ಅಡಿಗಳಿಗೆ ಕುಸಿತ

ಸ್ಮಿತ್ ಮಚ್ಚಾರ್ ಬಗ್ಗೆಯೂ ಸ್ವಲ್ಪ ಮಾತಾಡಿ: CJP ಪ್ರತಿಭಟನೆಯಲ್ಲಿ ಭಾಗಿಯಾದ ನಾಸಿರುದ್ದೀನ್ ಶಾ ವಿರುದ್ಧ ನಟ ಪಿಯೂಷ್ ಮಿಶ್ರಾ ಕಿಡಿ!