ಕಮಲ್ ಹಾಸನ್- ಎಲೋನ್ ಮಸ್ಕ್ online desk
ದೇಶ

ಸ್ಟಾರ್‌ಲಿಂಕ್ ವಿವಾದ: ಭಾರತ ವಸಾಹತಲ್ಲ- Elon Musk ಗೆ ಕಮಲ್ ಹಾಸನ್ ತಿರುಗೇಟು

ಈ ಮಧ್ಯೆ ಸರ್ಕಾರ ಮಸ್ಕ್ ಅವರ ಆರೋಪಗಳನ್ನು ತಿರಸ್ಕರಿಸಿದೆ. ಅನುಮೋದನೆ ಪ್ರಕ್ರಿಯೆಯು ನ್ಯಾಯಯುತ ಮತ್ತು ತಾರತಮ್ಯರಹಿತವಾಗಿದೆ ಎಂದು ಹೇಳಿದೆ.

ಭಾರತದಲ್ಲಿ ಸ್ಟಾರ್‌ಲಿಂಕ್‌ನ ಉಡಾವಣೆಯನ್ನು ಪ್ರಬಲ ಕೈಗಾರಿಕೋದ್ಯಮಿಗಳು ತಡೆಯುತ್ತಿದ್ದಾರೆ ಎಂಬ ಎಲೋನ್ ಮಸ್ಕ್ ಅವರ ಹೇಳಿಕೆಗೆ ನಟ ಕಮಲ ಹಾಸನ್ ಪ್ರತಿಕ್ರಿಯೆ ನೀಡಿದ್ದು, ಯಾವುದೇ ಕೋಟ್ಯಾಧಿಪತಿ, ಭಾರತೀಯ ಅಥವಾ ಅಮೆರಿಕನ್, ಒಂದು ರಾಷ್ಟ್ರದ ನೀತಿಯನ್ನು ನಿರ್ದೇಶಿಸಬಾರದು ಎಂದು ಹೇಳಿದ್ದಾರೆ.

“ಭಾರತ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ, ವಸಾಹತು ಅಲ್ಲ. ನಾವು ಜಗತ್ತನ್ನು ಸ್ವಾಗತಿಸುತ್ತೇವೆ, ಆದರೆ ನಾವು, ಭಾರತೀಯ ಜನರು, ನಮ್ಮ ಭವಿಷ್ಯವನ್ನು ನಾವೇ ನಿರ್ಧರಿಸುತ್ತೇವೆ” ಎಂದು ಅವರು X ನಲ್ಲಿ ಬರೆದಿದ್ದಾರೆ.

“ಕೆಲವು ಒಲಿಗಾರ್ಕ್ ಗಳು” ತಮ್ಮ “ಏಕಸ್ವಾಮ್ಯದ ಹಿಡಿತ”ವನ್ನು ಕಾಪಾಡಿಕೊಳ್ಳಲು ತಮ್ಮ ಉಪಗ್ರಹ ಇಂಟರ್ನೆಟ್ ಕಂಪನಿಯನ್ನು ಭಾರತದಿಂದ ನಿರ್ಬಂಧಿಸುತ್ತಿದ್ದಾರೆ ಎಂದು ಮಸ್ಕ್ ಆರೋಪ ಮಾಡಿದ್ದರು. ನಂತರ ಅವರು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ “ಭಾರತದ ನಿಜವಾದ ಬಾಸ್ ಹೌದಾ?” ಎಂದು ಕೇಳಿದರು.

ಈ ಹೇಳಿಕೆಗಳಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿಕ್ರಿಯೆ ನೀಡಿದರು: “ಭಾರತಕ್ಕೆ ಸ್ವಾಗತ, ಎಲೋನ್. ನೀವು ಇನ್ನೊಬ್ಬ ವ್ಯಕ್ತಿಯನ್ನು ಕಂಡುಹಿಡಿಯುವವರೆಗೆ ಕಾಯಿರಿ.” ಎಂದು ಬರೆದಿದ್ದರು. ರಾಹುಲ್ ಗೆ ಮಸ್ಕ್ ಧನ್ಯವಾದ ಹೇಳುತ್ತಾ: “ಇದು ನಿಜಕ್ಕೂ ತೊಂದರೆದಾಯಕವಾಗಿದೆ”. ಎಂದು ತಿಳಿಸಿದ್ದರು.

ಈ ಮಧ್ಯೆ ಸರ್ಕಾರ ಮಸ್ಕ್ ಅವರ ಆರೋಪಗಳನ್ನು ತಿರಸ್ಕರಿಸಿದೆ. ಅನುಮೋದನೆ ಪ್ರಕ್ರಿಯೆಯು ನ್ಯಾಯಯುತ ಮತ್ತು ತಾರತಮ್ಯರಹಿತವಾಗಿದೆ ಎಂದು ಹೇಳಿದೆ.

ಸಂವಹನ ಸಚಿವಾಲಯ ಸ್ಟಾರ್‌ಲಿಂಕ್, ಜಿಯೋ ಸ್ಯಾಟ್‌ಕಾಮ್ ಮತ್ತು ಭಾರ್ತಿ ಬೆಂಬಲಿತ ಯುಟೆಲ್‌ಸ್ಯಾಟ್ ಒನ್‌ವೆಬ್ ಪರವಾನಗಿಗಳನ್ನು ಹೊಂದಿದ್ದವು, ಆದರೆ ವಾಣಿಜ್ಯ ಸೇವೆಗಳನ್ನು ಪ್ರಾರಂಭಿಸುವ ಮೊದಲು ಭದ್ರತಾ ಮೌಲ್ಯಮಾಪನಗಳನ್ನು ಪೂರ್ಣಗೊಳಿಸುವುದು ಮತ್ತು ಸ್ಪೆಕ್ಟ್ರಮ್-ಸಂಬಂಧಿತ ಅನುಮೋದನೆಗಳನ್ನು ಪಡೆಯುವುದು ಅಗತ್ಯವಾಗಿತ್ತು ಎಂದು ಹೇಳಿದೆ.

ಸ್ಟಾರ್‌ಲಿಂಕ್‌ನ ಪ್ರವೇಶದ ಕುರಿತಾದ ಚರ್ಚೆಯನ್ನು ಉದ್ದೇಶಿಸಿ ಮಾತನಾಡಿದ ಹಾಸನ್, ದೂರದ ಪ್ರದೇಶಗಳಿಗೆ ಪ್ರಾಯೋಗಿಕ, ಕೈಗೆಟುಕುವ ಸಂಪರ್ಕವನ್ನು ನೀಡುವ ಭಾರತೀಯ ಮತ್ತು ಜಾಗತಿಕ ಪೂರೈಕೆದಾರರಿಂದ ಭಾರತ ಸ್ಪರ್ಧೆಯನ್ನು ಸ್ವಾಗತಿಸಬೇಕು ಎಂದು ಹೇಳಿದರು. "ಸಂಪರ್ಕ ವ್ಯವಸ್ಥೆಯು ಡಿಜಿಟಲ್ ಅಂತರವನ್ನು ಹೋಗಲಾಡಿಸಬೇಕೇ ಹೊರತು, ಹೊಸದೊಂದನ್ನು ಸೃಷ್ಟಿಸಬಾರದು" ಎಂದು ಅವರು ಹೇಳಿದರು.

ಕೈಗೆಟುಕುವಿಕೆಯ ಜೊತೆಗೆ, ಹಾಸನ್ ರಾಷ್ಟ್ರೀಯ ಭದ್ರತೆಯನ್ನು ಒತ್ತಿ ಹೇಳಿದರು. ನೆಟ್‌ವರ್ಕ್‌ಗಳು ಮತ್ತು ಸ್ಪೆಕ್ಟ್ರಮ್ ನ್ನು ಕೇವಲ ವಾಣಿಜ್ಯ ಸ್ವತ್ತುಗಳಲ್ಲ, ಬದಲಾಗಿ ಕಾರ್ಯತಂತ್ರದ ಮೂಲಸೌಕರ್ಯ ಎಂದು ಅವರು ವಿವರಿಸಿದರು, ಭಾರತದ ಸುರಕ್ಷತಾ ಕ್ರಮಗಳು "ಚೌಕಾಸಿ" ಮಾಡಲಾಗದ ವಿಷಯ ಎಂದು ಹೇಳಿದರು.

ಪಾಶ್ಚಿಮಾತ್ಯ ದೇಶಗಳು ವಿದೇಶಗಳಲ್ಲಿ ಸ್ಪರ್ಧೆಯನ್ನು ಪ್ರತಿಪಾದಿಸುವಾಗ ತಮ್ಮದೇ ಆದ ಕೈಗಾರಿಕೆಗಳನ್ನು ರಕ್ಷಿಸುತ್ತಿವೆ ಎಂದು ಆರೋಪಿಸಿದ ಅವರು ಮುಕ್ತ ಮಾರುಕಟ್ಟೆಗಳ ಬೇಡಿಕೆಗಳನ್ನು ಪ್ರಶ್ನಿಸಿದರು.

ಚೀನಾದ ಎಲೆಕ್ಟ್ರಿಕ್ ವಾಹನಗಳ ಮೇಲಿನ ಯುಎಸ್‌ನ 100% ಸುಂಕಗಳನ್ನು ಅವರು ಉಲ್ಲೇಖಿಸಿದರು, ಅದರ ತಯಾರಕರನ್ನು ರಕ್ಷಿಸಲು ಭಾರತದ ಕ್ರಮಗಳೊಂದಿಗೆ ಹೋಲಿಕೆ ಮಾಡಿದರು. ಭದ್ರತಾ ಕಾಳಜಿಯಿಂದಾಗಿ ಎರಡೂ ದೇಶಗಳು Huawei ಕಂಪನಿಯನ್ನು ನಿರ್ಬಂಧಿಸಿವೆ ಎಂದು ಅವರು ಗಮನಸೆಳೆದರು.

"ತನ್ನ ಸ್ವಂತ ಕಾರ್ಯಸೂಚಿಗೆ ಸರಿಹೊಂದಿದಾಗ ಮಾತ್ರ ಇತರರಿಂದ ಸಮಾನ ಅವಕಾಶವನ್ನು ಬೇಡಲು ಸಾಧ್ಯವಿಲ್ಲ" ಎಂದು ಕಮಲ್ ಹಾಸನ್ ಅಭಿಪ್ರಾಯಪಟ್ಟಿದ್ದಾರೆ. ಭಾರತೀಯರು ತಮ್ಮ ದೇಶದೊಳಗೇ ಕುಂದುಕೊರತೆಗಳ ಬಗ್ಗೆ ಚರ್ಚಿಸಿ ಅವುಗಳನ್ನು ಪರಿಹರಿಸಿಕೊಳ್ಳುತ್ತಾರೆ ಎಂದು ಹಾಸನ್ ಹೇಳಿದರು.

ಗ್ರಾಮೀಣ ಬ್ರಾಡ್‌ಬ್ಯಾಂಡ್ ಯೋಜನೆಗಾಗಿ 39,888 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಿದ್ದರೂ, ಸೇವೆಗೆ ಸಿದ್ಧವಿರುವ ಗ್ರಾಮ ಪಂಚಾಯಿತಿಗಳ ಪೈಕಿ ಕೇವಲ ಶೇಕಡಾ 33.2 ರಷ್ಟು ಮಾತ್ರ ಏಕೆ ಕಾರ್ಯನಿರ್ವಹಿಸುತ್ತಿವೆ ಎಂದು ಅವರು 'ಭಾರತನೆಟ್' (BharatNet) ಕುರಿತ ಸಿಎಜಿ (CAG) ಯ 2026ರ ಲೆಕ್ಕಪರಿಶೋಧನಾ ವರದಿಯನ್ನು ಉಲ್ಲೇಖಿಸಿ ಪ್ರಶ್ನಿಸಿದರು.

ದತ್ತಾಂಶವನ್ನು (ಡೇಟಾ) ಕೈಗೆಟುಕುವ ದರದಲ್ಲಿ ಲಭ್ಯವಾಗುವಂತೆ ಮಾಡಿ, ಲಕ್ಷಾಂತರ ಜನರನ್ನು ಅಂತರ್ಜಾಲದ ವ್ಯಾಪ್ತಿಗೆ ತಂದಿರುವ ಭಾರತದ ದೂರಸಂಪರ್ಕ ವಲಯ ಮತ್ತು ನಿಯಮಾವಳಿಗಳ ಸಾಧನೆಯನ್ನು ಗುರುತಿಸುವ ಜೊತೆಗೇ ಈ ಪರಿಶೀಲನೆಯೂ ನಡೆಯಬೇಕು ಎಂದು ಕಮಲ್ ಹಾಸನ್ ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Delhi CJP Protest: ಅಭಿಜೀತ್ ದೀಪ್ಕೆ, ಸೌರವ್ ದಾಸ್, ಆಶುತೋಷ್ ರಂಕಾ,ಯೂಟ್ಯೂಬರ್ ಧ್ರುವ್ ರಾಠಿ ಸೇರಿ 200ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ; Video

ಶಾಕಿಂಗ್ Video: CJP ಪ್ರತಿಭಟನೆ ತಡೆಯಲು ಬ್ಯಾರಿಕೇಡ್‌ ಮಾತ್ರವಲ್ಲ, ರಸ್ತೆಯಲ್ಲಿ ಸ್ಪೈಕ್ ಸ್ಟ್ರಿಪ್‌ ಅಳವಡಿಕೆ!

ಜ್ಞಾನೇಶ್ ಕುಮಾರ್, ಪ್ರಧಾನಿ ಮೋದಿ ಇಬ್ಬರೂ ಮನೆಗೆ ಹೋಗುತ್ತಾರೆ, ನಂತರ ಪ್ರಜಾಪ್ರಭುತ್ವದ ದುರಸ್ತಿ: ರಾಹುಲ್ ಗಾಂಧಿ

‘ಪ್ರೇಮದ ಊರಲಿ’ ಭರ್ಜರಿ ಕಲೆಕ್ಷನ್: ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 39 ಕೋಟಿ ರೂ. ಗಳಿಕೆ!

‘ಕಾನೂನು ಸುವ್ಯವಸ್ಥೆಗೆ ಗಂಭೀರ ಅಪಾಯವಿದೆ’: ಸಿಜೆಪಿ ಪ್ರತಿಭಟನೆಗೆ ಕೆಲವೇ ಗಂಟೆ ಮೊದಲು ರಾಜ್ಯಗಳಿಗೆ ಪತ್ರ ಬರೆದು MHA ಹೇಳಿದ್ದೇನು?