ಸಾಂದರ್ಭಿಕ ಚಿತ್ರ 
ದೇಶ

ಜೈಲಿನಿಂದ ಕೈದಿಗಳು ಪರಾರಿಯಾಗುವುದನ್ನು ತಡೆಯಲು ಬಂದೂಕು ಬಳಸಲು ತಮಿಳುನಾಡು ಕಾರಾಗೃಹ ಇಲಾಖೆ ಅನುಮತಿ!

ಸೋಮವಾರ ತಡರಾತ್ರಿ ಥೇನಿ ಜಿಲ್ಲಾ ಕಾರಾಗೃಹದಿಂದ 17 ವಿಚಾರಣಾಧೀನ ಕೈದಿಗಳು ಪರಾರಿಯಾದ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ.

ಚೆನ್ನೈ: ತಮಿಳುನಾಡಿನ ಥೇನಿ ಜಿಲ್ಲೆಯಲ್ಲಿ ಕೈದಿಗಳು ಎಸ್ಕೇಪ್ ಆದ ಘಟನೆಯ ಹಿನ್ನೆಲೆಯಲ್ಲಿ, ಕೈದಿಗಳು ಪರಾರಿಯಾಗುವುದನ್ನು ತಡೆಯಲು ಅಗತ್ಯ ಬಿದ್ದರೆ ಬಂದೂಕುಗಳನ್ನು ಬಳಸಲು ತಮಿಳುನಾಡು ಕಾರಾಗೃಹ ಇಲಾಖೆಯು ತನ್ನ ಸಿಬ್ಬಂದಿಗೆ ಅಧಿಕಾರ ನೀಡಿದೆ ಎಂದು ಪೊಲೀಸ್ ಮೂಲಗಳು ಬುಧವಾರ ತಿಳಿಸಿವೆ.

ಜೈಲಿನಿಂದ ಪರಾರಿಯಾಗುವಂತಹ ಅಹಿತಕರ ಘಟನೆಗಳನ್ನು ನಿಯಂತ್ರಿಸಲು, ಪರಿಸ್ಥಿತಿಗೆ ಅನುಗುಣವಾಗಿ ಬಂದೂಕುಗಳನ್ನು ಬಳಸಲು ಸಿಬ್ಬಂದಿಗೆ ಅನುಮತಿ ನೀಡುವ ನಿರ್ದೇಶನಗಳನ್ನು ಪೊಲೀಸ್ ಮಹಾನಿರ್ದೇಶಕ (ಕಾರಾಗೃಹಗಳು) ಸಂದೀಪ್ ರೈ ರಾಥೋರ್ ಹೊರಡಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಸೋಮವಾರ ತಡರಾತ್ರಿ ಥೇನಿ ಜಿಲ್ಲಾ ಕಾರಾಗೃಹದಿಂದ 17 ಕೈದಿಗಳು ಪರಾರಿಯಾದ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ.

ಥೇನಿ ಘಟನೆಯ ನಂತರ, ರಾಜ್ಯದಾದ್ಯಂತ ಇರುವ 125 ಕಾರಾಗೃಹಗಳಲ್ಲಿನ ವಾಚ್‌ಟವರ್‌ಗಳಲ್ಲಿ ನಿಗಾ ವಹಿಸಲು ಸಶಸ್ತ್ರ ಸಿಬ್ಬಂದಿಯನ್ನು ನಿಯೋಜಿಸುವಂತೆ ಸೂಚನೆ ನೀಡಲಾಗಿದೆ. ಕೈದಿಗಳು ಪರಾರಿಯಾಗಲು ಪ್ರಯತ್ನಿಸಿದರೆ ಶಸ್ತ್ರಾಸ್ತ್ರಗಳನ್ನು ಬಳಸಲು ಅನುಮತಿ ನೀಡುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ತೆಕ್ಕಂಪಟ್ಟಿಯ ಜಿಲ್ಲಾ ಕಾರಾಗೃಹದಲ್ಲಿ, ವಿಚಾರಣಾಧೀನ ಕೈದಿಗಳು ವೈದ್ಯಕೀಯ ತುರ್ತುಸ್ಥಿತಿಯ ನಾಟಕವಾಡಿ, ಜೈಲು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಈ ಘಟನೆಯು ರಾಜ್ಯದಾದ್ಯಂತ ಭದ್ರತೆಯ ಕುರಿತು ತೀವ್ರ ಕಳವಳಕ್ಕೆ ಕಾರಣವಾಗಿದೆ.

ಪರಾರಿಯಾದ 17 ಕೈದಿಗಳ ಪೈಕಿ 13 ಮಂದಿಯನ್ನು ಈಗಾಗಲೇ ಮತ್ತೆ ಸೆರೆಹಿಡಿಯಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸುಡಾನ್‌ನಲ್ಲಿ ಭೀಕರ ನರಮೇಧ: ಜನನಿಬಿಡ ಮಾರುಕಟ್ಟೆ ಮೇಲೆ ಸೇನೆಯಿಂದ ಡ್ರೋನ್ ದಾಳಿ, 100ಕ್ಕೂ ಹೆಚ್ಚು ಸಾವು!

Cyclone Arnab: ಆಂಧ್ರಪ್ರದೇಶ ಕರಾವಳಿಗೆ ಅಪ್ಪಳಿಸಿದ 'ಅರ್ನಬ್' ಚಂಡಮಾರುತ; ಗಂಟೆಗೆ 150 ಕಿಮೀ ವೇಗದಲ್ಲಿ ಬಿರುಗಾಳಿ; Video

ಭೀಕರ ಬರಕ್ಕೆ ನಲುಗಿದ ಗದಗ: ಹೊಂಬಾಳ ಗ್ರಾಮದಲ್ಲಿ ರೈತರ ಆಕ್ರಂದನ, ಬದುಕಿಗಾಗಿ ನಗರಗಳತ್ತ ಮುಖ ಮಾಡಿದ ಅನ್ನದಾತ..!

"ಮೋದಿ ಕಾ ಬಾಪ್ ಭಿ ಜಾಯೇಗಾ" ಹೇಳಿಕೆ ವಿವಾದ: ನಿಂದಿಸಿಲ್ಲ, ಪ್ರಚೋದನೆಗೆ ಉತ್ತರಿಸಿದ್ದಾರೆ: ಖರ್ಗೆ ಬೆನ್ನಿಗೆ ನಿಂತ 'ಕೈ' ಪಡೆ..!

ಬೆಂಗಳೂರು ಅಭಿವೃದ್ಧಿಗೆ 10 ವರ್ಷಗಳ ಮೆಗಾ ಪ್ಲ್ಯಾನ್‌; ₹1 ಲಕ್ಷ ಕೋಟಿ ವೆಚ್ಚದ ಯೋಜನೆಗಳ ಘೋಷಣೆ..!