ಪ್ರಯಾಗ್‌ರಾಜ್‌ನಲ್ಲಿ 3 ಡ್ರಮ್ ತುಂಬ ನಗದು ಪತ್ತೆ Online Desk
ದೇಶ

ಥಾರ್ ಕಾರಿನ ಜಗಳದಿಂದ ಬಯಲಾಯ್ತು ಭೂಗತ ರಹಸ್ಯ! ಪ್ರಯಾಗ್‌ರಾಜ್‌ನಲ್ಲಿ 3 ಡ್ರಮ್ ತುಂಬ ನಗದು ಪತ್ತೆ: ಬರೋಬ್ಬರಿ 5 ಕೋಟಿ ಕಪ್ಪುಹಣ ಜಪ್ತಿ!

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಭೂಮಿಯ ಅಡಿಯಲ್ಲಿ ಹೂತಿಟ್ಟಿದ್ದ ಮೂರು ನೀಲಿ ಪ್ಲಾಸ್ಟಿಕ್ ಡ್ರಮ್‌ಗಳಲ್ಲಿ ಕಂತೆ ಕಂತೆ ₹500 ಮುಖಬೆಲೆಯ ಕೋಟ್ಯಂತರ ರೂಪಾಯಿ ನಗದು ಪತ್ತೆಯಾಗಿದ್ದು, ಇಡೀ ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದೆ. ಆ ಕುರಿತ ವರದಿ ಇಲ್ಲಿದೆ:

ಪ್ರಯಾಗ್‌ರಾಜ್‌ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದ ಭಾರಿ ಪೊಲೀಸ್ ಕಾರ್ಯಾಚರಣೆಯಲ್ಲಿ ನೆಲದಡಿಯಲ್ಲಿ ಬಚ್ಚಿಟ್ಟಿದ್ದ 3 ನೀಲಿ ಬಣ್ಣದ ಪ್ಲಾಸ್ಟಿಕ್ ಡ್ರಮ್‌ಗಳಿಂದ ಸುಮಾರು 5 ಕೋಟಿ ರೂಪಾಯಿಗೂ ಅಧಿಕ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಯಾಗ್‌ರಾಜ್‌ನ ಗಂಗಾನಗರ ವಲಯದ ನವಾಬ್‌ಗಂಜ್ ಠಾಣಾ ವ್ಯಾಪ್ತಿಯ ಬರೈಪುರ್ ರಾಮನಗರ ಗ್ರಾಮದಲ್ಲಿ ಅಕ್ಟೋಬರ್ 28ರ ತಡರಾತ್ರಿ ಈ ರೋಮಾಂಚಕ ದಾಳಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದ ವರದಿ ಇಲ್ಲಿದೆ:

ಏನಿದು ಘಟನೆ?

ಉತ್ತರ ಪ್ರದೇಶದ ಪ್ರಯಾಗ್‌ರಾಜ್ (ಅಲಹಾಬಾದ್) ವ್ಯಾಪ್ತಿಯ ನವಾಬ್‌ಗಂಜ್ ಪೊಲೀಸ್ ಠಾಣಾ ಸರಹದ್ದಿನ ಬರೈಪುರ್ ರಾಮನಗರ ಎಂಬ ಗ್ರಾಮದಲ್ಲಿ, ಮೇಲ್ನೋಟಕ್ಕೆ ಕೇವಲ ಸಾಮಾನ್ಯ ನೀಲಿ ಬಣ್ಣದ ನೀರಿನ ಡ್ರಮ್‌ಗಳಂತೆ ಕಾಣುತ್ತಿದ್ದ ಇವುಗಳನ್ನು ಮನೆಯೊಂದರ ನೆಲದ ಅಡಿಯಲ್ಲಿ ಅಗೆದು ಹೂತಿಡಲಾಗಿತ್ತು. ಪೊಲೀಸರು ಮತ್ತು ಐಟಿ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಭೂಮಿಯನ್ನು ಅಗೆದಾಗ ಈ ಮೂರು ಡ್ರಮ್‌ಗಳು ಸಿಕ್ಕಿವೆ. ಜೊತೆಗೆ, ಡ್ರಮ್‌ಗಳ ಒಳಗಿದ್ದ ಕೋಟ್ಯಂತರ ರೂಪಾಯಿ ಹಣವು ಮಣ್ಣು ಅಥವಾ ತೇವಾಂಶದಿಂದ ಹಾಳಾಗಬಾರದು ಎಂಬ ಕಾರಣಕ್ಕೆ, ನೋಟುಗಳ ಕಂತೆಗಳನ್ನು ಅತ್ಯಂತ ಜಾಗರೂಕತೆಯಿಂದ ಪ್ಲಾಸ್ಟಿಕ್ (ಪಾಲಿಥೀನ್) ಕವರ್‌ಗಳಲ್ಲಿ ಸುತ್ತಿಡಲಾಗಿತ್ತು. ಪ್ರಾಥಮಿಕ ವರದಿಗಳ ಪ್ರಕಾರ ಈ ಡ್ರಮ್‌ಗಳಿಂದ ಸುಮಾರು ₹5 ಕೋಟಿಗೂ ಅಧಿಕ ನಗದು ಪತ್ತೆಯಾಗಿದೆ ಎಂದು ಅಂದಾಜಿಸಲಾಗಿದೆ.

ಮುಂದುವರೆದು, ಈ ಮನೆ ರಾಕೇಶ್ ಯಾದವ್ ಅಲಿಯಾಸ್ ಮಹಾಕಾಲ್ ಮತ್ತು ರಾಜೇಶ್ ಯಾದವ್ ಎಂಬ ಸಹೋದರರಿಗೆ ಸೇರಿದ್ದಾಗಿದೆ. ಈ ಇಬ್ಬರೂ ಈ ಹಿಂದೆ ಪುಣೆಯಲ್ಲಿ ಚಿನ್ನದ ವ್ಯಾಪಾರಿಯೊಬ್ಬರ ಬಳಿ ಕೆಲಸ ಮಾಡುತ್ತಿದ್ದರು. 2020ರ ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಹಠಾತ್ ಕೆಲಸ ಬಿಟ್ಟು ಹಳ್ಳಿಗೆ ಮರಳಿದ್ದ ಇವರು, ಇತ್ತೀಚೆಗೆ ಕೋಟ್ಯಂತರ ಮೌಲ್ಯದ ಜಮೀನು ಮತ್ತು ದುಬಾರಿ ಕಾರುಗಳನ್ನು ಖರೀದಿಸುವ ಮೂಲಕ ಗ್ರಾಮಸ್ಥರಲ್ಲಿ ಅನುಮಾನ ಮೂಡಿಸಿದ್ದರು.

ಹಾಗಾದ್ರೆ, ರಹಸ್ಯ ಬಯಲಾಗಿದ್ದು ಹೇಗೆ?

ಇತ್ತೀಚೆಗೆ ಈ ಸಹೋದರರು ಮತ್ತು ಗ್ರಾಮಸ್ಥರ ನಡುವೆ ಜಗಳ ನಡೆದಿತ್ತು. ಮತ್ತೊಂದೆಡೆ ಮಹೀಂದ್ರಾ ಥಾರ್ ಕಾರು ಖರೀದಿಸುವ ವಿಚಾರದಲ್ಲಿ ಸಹೋದರರ ನಡುವೆಯೂ ಭಿನ್ನಾಭಿಪ್ರಾಯ ತಲೆದೋರಿತ್ತು. ಈ ಜಗಳಗಳ ಬೆನ್ನಲ್ಲೇ, ಇವರ ಬಳಿ ಭಾರಿ ಪ್ರಮಾಣದ ಕಪ್ಪುಹಣ ಇರುವ ಬಗ್ಗೆ ಪೊಲೀಸರಿಗೆ ರಹಸ್ಯ ಸುಳಿವು ಲಭಿಸಿತ್ತು. ಅದರಂತೆ,  ಪೊಲೀಸರು ಈಗಾಗಲೇ ಮನೆಯನ್ನು ಸೀಲ್ ಮಾಡಿ ಕುಟುಂಬದ ಸದಸ್ಯರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಹಣದ ನಿಖರ ಮೊತ್ತವನ್ನು ಎಣಿಕೆ ಮಾಡಲು ಮತ್ತು ಇದರ ಅಸಲಿ ಮೂಲವನ್ನು ಪತ್ತೆಹಚ್ಚಲು ಆದಾಯ ತೆರಿಗೆ ಇಲಾಖೆ ಹಾಗೂ ಇತರ ಹಣಕಾಸು ತನಿಖಾ ಸಂಸ್ಥೆಗಳಿಗೆ ಮಾಹಿತಿ ನೀಡಲಾಗಿದ್ದು, ಜಂಟಿ ತನಿಖೆ ಮುಂದುವರಿದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭೂತಾನ್‌ನಲ್ಲಿ ಹಿಮನದಿ ಸ್ಫೋಟ: ಭಾರತದ ಗಡಿ ರಾಜ್ಯಗಳಲ್ಲಿ ದಿಢೀರ್ ಪ್ರವಾಹ ಭೀತಿ, ಬಂಗಾಳ-ಅಸ್ಸಾಂನಲ್ಲಿ ಹೈ ಅಲರ್ಟ್ ಘೋಷಣೆ

ನಟ ಧನ್ವೀರ್‌ಗೆ ಹೆಚ್ಚಿದ ಸಂಕಷ್ಟ: ಮೂರು ಠಾಣೆಗಳಲ್ಲಿ ಎಫ್‌ಐಆರ್ ದಾಖಲು, ವಿಚಾರಣೆಗೆ ಹಾಜರಾಗಲು ಪೊಲೀಸರ ನೋಟಿಸ್

ಅಮೆರಿಕದ ನಾರ್ತ್ ಡಕೋಟಾದಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ಅನಾವರಣ!

CEC ಜ್ಞಾನೇಶ್ ಕುಮಾರ್ ವಿರುದ್ಧ INDIA ಒಕ್ಕೂಟ ಹೊಸ ಅಸ್ತ್ರ; ‘ಸಾರ್ವಜನಿಕ ದೋಷಾರೋಪಣೆ’ಗೆ ಸಜ್ಜು; ಇಂದು ಖರ್ಗೆ ನಿವಾಸದಲ್ಲಿ ಮಹತ್ವದ ಸಭೆ

ನೀರಿಗೇ ರೂ.30-35 ಕೊಡ್ತೀರಿ, ಹಾಲಿನ ಬೆಲೆ ಹೆಚ್ಚಾದರೆ ವಿರೋಧವೇಕೆ?: ದರ ಏರಿಕೆ ಸಮರ್ಥಿಸಿಕೊಂಡ ಸಿಎಂ ಡಿ.ಕೆ. ಶಿವಕುಮಾರ್