ಅಭಿಜಿತ್ ದೀಪ್ಕೆ - ದಿಲ್ಜಿತ್ ದೋಸಾಂಜ್ 
ದೇಶ

'ನಾನು ನಿಮ್ಮ ಕಿರಿಯ ಸಹೋದರನಿದ್ದಂತೆ': ದಿಲ್ಜಿತ್ ದೋಸಾಂಜ್ ಬಳಿ ಕ್ಷಮೆಯಾಚಿಸಿದ CJP ಸಂಸ್ಥಾಪಕ ಅಭಿಜಿತ್ ದೀಪ್ಕೆ!

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರವಾಗಿ ನಡೆದ ಪ್ರತಿಭಟನೆಯ ವೇಳೆ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ದಿಲ್ಜಿತ್ 'ನಾನು ಕೇವಲ ಒಬ್ಬ ಕಲಾವಿದ' ಎಂದು ಉತ್ತರಿಸಿದ ನಂತರ ತಾವು ಎದುರಿಸಿದ ಟೀಕೆಗಳ ಕುರಿತು ಖಾರವಾಗಿ ಪ್ರತಿಕ್ರಿಯಿಸಿದರು.

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾದ ನಂತರ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯ ಸಂದರ್ಭದಲ್ಲಿ ಮಾತನಾಡದಿದ್ದಕ್ಕಾಗಿ ಅಣಕಿಸಿದ್ದಕ್ಕಾಗಿ ಕಾಕ್ರೋಚ್ ಜನತಾ ಪಾರ್ಟಿಯ ಸಂಸ್ಥಾಪಕ ಅಭಿಜಿತ್ ದೀಪ್ಕೆ ಶನಿವಾರ ಗಾಯಕ-ನಟ ದಿಲ್ಜಿತ್ ದೋಸಾಂಜ್ ಬಳಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ.

ಶುಕ್ರವಾರ ಸಂಜೆ ದೆಹಲಿಯ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆದ ತಮ್ಮ ಸಂಗೀತ ಕಾರ್ಯಕ್ರಮದಲ್ಲಿ ದಿಲ್ಜಿತ್ ದೋಸಾಂಜ್ ಈ ವಿಷಯವನ್ನು ಪ್ರಸ್ತಾಪಿಸಿದರು. ದೀಪ್ಕೆ ಅಥವಾ ಸಿಜೆಪಿಯನ್ನು ಹೆಸರಿಸದೆ, ಯಾರೊಬ್ಬರೂ ಪಂಜಾಬಿಗಳಿಗೆ ಹೋರಾಡುವುದು ಹೇಗೆಂದು ಕಲಿಸಬಾರದು. ಅದು ಅವರ ರಕ್ತದಲ್ಲೇ ಕರಗತವಾಗಿದೆ ಎಂದು ಹೇಳಿದರು.

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರವಾಗಿ ನಡೆದ ಪ್ರತಿಭಟನೆಯ ವೇಳೆ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ದಿಲ್ಜಿತ್ 'ನಾನು ಕೇವಲ ಒಬ್ಬ ಕಲಾವಿದ' ಎಂದು ಉತ್ತರಿಸಿದ ನಂತರ ತಾವು ಎದುರಿಸಿದ ಟೀಕೆಗಳ ಕುರಿತು ದಿಲ್ಜಿತ್ ಖಾರವಾಗಿ ಪ್ರತಿಕ್ರಿಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಅಭಿಜಿತ್ ದೀಪ್ಕೆ, ಸಟ್ಲುಜ್‌ನಂತಹ ರಾಜಕೀಯ ಆಧಾರಿತ ಚಿತ್ರಗಳಲ್ಲಿ ನಟಿಸಿದ್ದರೂ, ವಿದ್ಯಾರ್ಥಿಗಳ ಪ್ರತಿಭಟನೆಗಳನ್ನು ಬೆಂಬಲಿಸದ ಅವರ ನಿಲುವು ಬೂಟಾಟಿಕೆ ಎಂದು ಆರೋಪಿಸಿದರು.

ಇದಕ್ಕೆ ತಿರುಗೇಟು ನೀಡಿದ ದಿಲ್ಜಿತ್, ಯಾವುದೇ ಹೆಸರನ್ನು ಬಹಿರಂಗವಾಗಿ ಹೇಳದೆಯೇ, 'ನಾನು ಒಬ್ಬ ಕಲಾವಿದನಾಗಿರುವುದರಿಂದ ನಿಮ್ಮೆಲ್ಲರನ್ನೂ ಪ್ರೀತಿಸುತ್ತೇನೆ, ಸಹೋದರ. ನಾನು ಸುಮ್ಮನಿದ್ದೇನೆ. ಹೀಗಾಗಿ, ನಾನು ಸುಮ್ಮನಿರಲು ಬಿಡಿ. ನಾನು ನಿಮ್ಮೆಲ್ಲರನ್ನೂ ಬೆಂಬಲಿಸುತ್ತೇನೆ. ಆದರೆ ಪಂಜಾಬಿಗಳಿಗೆ ಹೇಗೆ ಹೋರಾಡಬೇಕೆಂದು ಕಲಿಸಿಕೊಡಬೇಡಿ. ನೀವು ವೇದಿಕೆ ಮೇಲೆ ಗೇಲಿ ಮಾಡಿರುವ ಚಿತ್ರ, ಜಸ್ವಂತ್ ಸಿಂಗ್ ಖಲ್ರಾ ಅವರನ್ನು ಆದರಿಸಿದ ಚಿತ್ರ. ನಾವು ಆ ಚಿತ್ರಕ್ಕಾಗಿ ಬಹಳ ಸಮಯ ಹೋರಾಡಿದೆವು. ನಾನು ನಿಮ್ಮೆಲ್ಲರನ್ನೂ ಪ್ರೀತಿಸುತ್ತೇನೆ. ಯಾರಾದರೂ ನಮ್ಮನ್ನು ದ್ವೇಷಿಸಿದರೆ ಪರವಾಗಿಲ್ಲ. ಆದರೆ ನಾನು ನಿಮ್ಮೆಲ್ಲರನ್ನೂ ಪ್ರೀತಿಸುತ್ತೇನೆ' ಎಂದಿದ್ದರು.

ಅವರ ಈ ಹೇಳಿಕೆಗಳ ನಂತರ ದೀಪ್ಕೆ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿರುವ ದೀಪ್ಕೆ, 'ಪಾಜಿ, ಜೂನ್‌ನಲ್ಲಿ ನಾವು ಪ್ರತಿಭಟನೆ ನಡೆಸುತ್ತಿದ್ದಾಗ, ನಿಮ್ಮ ಕಾಮೆಂಟ್‌ನಿಂದ ನನಗೆ ಸ್ವಲ್ಪ ನೋವಾಯಿತು. ನನಗೆ ವೈಯಕ್ತಿಕವಾಗಿ ನಿಮ್ಮ ವಿರುದ್ಧ ಯಾವುದೇ ವಿರೋಧವಿರಲಿಲ್ಲ, ಆದರೆ ನೀವು ಹೇಳಿದಂತೆ, ನಾನು ಯಾವಾಗಲೂ ನಿಮ್ಮನ್ನು ಒಂದು ಒಳ್ಳೆಯ ಉದ್ದೇಶಕ್ಕಾಗಿ ಮಾತನಾಡುವ ವ್ಯಕ್ತಿಯಾಗಿ ನೋಡಿದ್ದೇನೆ' ಎಂದಿದ್ದಾರೆ.

'ಏನಾದರೂ ಇದ್ದರೆ, ನಾನು ಯಾವಾಗಲೂ ನಿಮ್ಮ ಅಭಿಮಾನಿಯಾಗಿದ್ದೇನೆ ಮತ್ತು ಅದು ಬದಲಾಗಿಲ್ಲ. ನಾನು ಇನ್ನೂ ನಿಮ್ಮ ಸಂಗೀತವನ್ನು ಕೇಳುತ್ತೇನೆ. ವಾಸ್ತವವಾಗಿ, ನಾನು ಈ ಮೇ ತಿಂಗಳಲ್ಲಿ ಭಾರತಕ್ಕೆ ಮರಳುವ ಮೊದಲು ಚಿಕಾಗೋದಲ್ಲಿ ನಿಮ್ಮ ಸಂಗೀತ ಕಚೇರಿಗೆ ಬಂದಿದ್ದೇನೆ, ನಿಮ್ಮ ಸಂಗೀತಕ್ಕಾಗಿ ಮಾತ್ರವಲ್ಲ, ನೀವು ಯಾರೆಂಬುದರ ಬಗ್ಗೆ ನನಗೆ ಯಾವಾಗಲೂ ಅಪಾರ ಗೌರವವಿದೆ' ಎಂದು ದೀಪ್ಕೆ ತಿಳಿಸಿದ್ದಾರೆ.

ದಿಲ್ಜಿತ್ ಅವರ ಧೈರ್ಯ, ಪ್ರಾಮಾಣಿಕತೆ ಮತ್ತು ಅವರು ತಮ್ಮ ಬೇರುಗಳಿಗೆ ನಿಷ್ಠರಾಗಿ ಭಾರತವನ್ನು ಜಾಗತಿಕ ವೇದಿಕೆಗೆ ಕೊಂಡೊಯ್ದ ರೀತಿಯನ್ನು ಶ್ಲಾಘಿಸಿದ ದೀಪ್ಕೆ, 'ಅದಕ್ಕಾಗಿಯೇ ಈ ಕಾಮೆಂಟ್ ಸ್ವಲ್ಪ ನೋವುಂಟು ಮಾಡಿದೆ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ನಾನು ಯಾವಾಗಲೂ ನಿಮ್ಮನ್ನು ತುಂಬಾ ಗೌರವಿಸುತ್ತೇನೆ. ಆದರೆ ಒಂದು ಭಿನ್ನಾಭಿಪ್ರಾಯ ಅಥವಾ ತಪ್ಪು ತಿಳುವಳಿಕೆಯು ನಿಮ್ಮ ಬಗ್ಗೆ ನನಗಿರುವ ಗೌರವ ಮತ್ತು ಮೆಚ್ಚುಗೆಯನ್ನು ಬದಲಾಯಿಸುವುದಿಲ್ಲ' ಎಂದು ಅವರು ಬರೆದಿದ್ದಾರೆ.

'ಬಾಕಿ ಪಾಜಿ, ಛೋಟಾ ಭಾಯ್ ಸಮ್ಜ್ ಕೆ ಮಿಟ್ಟಿ ಪಾವೊ. ಮತ್ತು ಅಂತಿಮವಾಗಿ ನಾನು ಹೇಳಲು ಬಯಸುತ್ತೇನೆ, 'ಗಬ್ರು ತಾ ವೈರಿ ನು ವಿ ಮಿಥಾ ಬೋಲ್ದಾ, ನೀ ತು ತಾ ಫೆರ್ ಜತ್ತ್ ದ ಪ್ಯಾರ್ ಗೋರಿಯೇ' ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಖರ್ಗೆ ನಿವಾಸದಲ್ಲಿ ಅಣಕು ಸಂಸತ್ ಅಧಿವೇಶನ; ಜ್ಞಾನೇಶ್ ಕುಮಾರ್ ವಿರುದ್ಧ ಜನತಾ 'ಮಹಾಭಿಯೋಗ' ನಿರ್ಣಯ ಮಂಡನೆ, ಮೀರಾ ಕುಮಾರ್ ಅಧ್ಯಕ್ಷತೆ! Video

ವಿಚ್ಛೇದನ ಬೆನ್ನಲ್ಲೇ 2ನೇ ಮದುವೆಯಾದ ಒಮರ್ ಅಬ್ದುಲ್ಲಾ; ಪತ್ರಕರ್ತೆ ನಿಧಿ ಕೈಹಿಡಿದ ಕಾಶ್ಮೀರ CM!

ನಿರ್ದೇಶಕ Ram Gopal Varmaಗೆ ಸಂಕಷ್ಟ: ಕೂಡಲೇ ₹29.67 ಕೋಟಿ ಪಾವತಿಸುವಂತೆ ನೋಟಿಸ್, ವ್ಯವಹರಿಸದಂತೆ ಚಿತ್ರರಂಗಕ್ಕೂ ಎಚ್ಚರಿಕೆ!

ಸ್ಟಿಂಗ್ ಆಪರೇಷನ್: ಕೃಪಾ ಆಳ್ವರನ್ನು ಪಕ್ಷದಿಂದ ಉಚ್ಚಾಟಿಸಿದ ಕ್ರಮ ಸಮರ್ಥಿಸಿಕೊಂಡ ರಾಜ್ಯಾಧ್ಯಕ್ಷ ಬಿಕೆ ಹರಿಪ್ರಸಾದ್

ಪಂಜಾಬ್ ಚುನಾವಣೆ: ಎಎಪಿ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ 40 ಮಂದಿಗೆ ಟಿಕೆಟ್, ಧುರಿಯಿಂದ ಭಗವಂತ್ ಮಾನ್ ಕಣಕ್ಕೆ!