ರಿಯಲ್ ಎಸ್ಟೇಟ್ AI Image
ದೇಶ

ಒಂದು ಎಕರೆಗೆ ಬರೋಬ್ಬರಿ ₹269 ಕೋಟಿ! ರಿಯಲ್ ಎಸ್ಟೇಟ್ ಇತಿಹಾಸದಲ್ಲೇ ನೂತನ ದಾಖಲೆ; ಚಿನ್ನದ ಗಣಿಯಾದ ಐಟಿ ಕಾರಿಡಾರ್

ಇಂದು ಬಹುತೇಕ ಎಲ್ಲರೂ ಹೂಡಿಕೆಗಾಗಿ ಭೂಮಿಯ ಹಿಂದೆ ಬಿದ್ದಿದ್ದಾರೆ! ಸಿಕ್ಕ ಸಿಕ್ಕ ಕಡೆಯಲ್ಲಿ ಸಿಕ್ಕಾ ಪಟ್ಟೆ ಹಣ ಸುರಿದು ಭೂಮಿಯನ್ನ ಖರೀದಿ ಮಾಡುತ್ತಿದ್ದಾರೆ. ಅದರಂತೆ ಏನು ಸಿಕ್ಕಿತು, ಎಲ್ಲಿ ಸಿಕ್ಕಿತು ಅನ್ನೋದನ್ನು ನೋಡದೆ ಖರೀದಿಗೆ ಮುಗಿಬಿದ್ದಿದ್ದಾರೆ. ಹಾಗಾಗಿ, ಭೂಮಿಯ ಬೆಲೆ ಕೋಟಿ ಕೋಟಿ ತಲುಪಿದೆ.!

ಹೈದರಾಬಾದ್ (ತೆಲಂಗಾಣ): ಇವತ್ತು ಬಹುತೇಕ ಎಲ್ಲರೂ ಸುರಕ್ಷತೆಯ ದೃಷ್ಟಿಯಿಂದ ಭೂಮಿಯ ಹಿಂದೆ ಬಿದ್ದಿದ್ದಾರೆ.! ಸಿಟಿಯ ಜನರು ಸಿಕ್ಕ ಸಿಕ್ಕ ಕಡೆಯಲ್ಲಿ ಸಿಕ್ಕಾ ಪಟ್ಟೆ ಹಣ ಸುರಿದು ಭೂಮಿಯನ್ನ ಖರೀದಿ ಮಾಡುತ್ತಿದ್ದಾರೆ. ಅದರಂತೆ ಖಾಲಿ ಜಾಗ, ಸೈಟು, ತೋಟ, ಗದ್ದೆ ಹೀಗೆ ಏನು ಸಿಕ್ಕಿತು, ಎಲ್ಲಿ ಸಿಕ್ಕಿತು ಅನ್ನೋದನ್ನು ನೋಡದೆ ಖರೀದಿಗೆ ಮುಗಿಬಿದ್ದಿದ್ದಾರೆ. ಹಾಗಾಗಿ, ಭೂಮಿಯ ಬೆಲೆ ಕೋಟಿ ಕೋಟಿ ತಲುಪಿದೆ. ಇದಕ್ಕೆ ಬೆಸ್ಟ್ ಉದಾಹರಣೆ ಹೈದರಾಬಾದ್‌ನಲ್ಲಿ ನಡೆದಿರುವ ಭೂ ಮಾರಾಟ! ಹೌದು, ಕೇವಲ ಒಂದು ಎಕರೆ ಭೂಮಿಗೆ ಕೋಟಿ ಕೋಟಿ ಅಂದರೆ ಬರೋಬ್ಬರಿ  269 ಕೋಟಿ ರೂಪಾಯಿಗೆ ಮಾರಾಟವಾಗಿದೆ. ಆ ಕುರಿತ ವರದಿ ಇಲ್ಲಿದೆ:

ಒಂದು ಎಕರೆಗೆ 269 ಕೋಟಿ!

ಹೌದು, ರಿಯಲ್ ಎಸ್ಟೇಟ್ ಇತಿಹಾಸದಲ್ಲೇ ಒಂದು ಎಕರೆ ಜಮೀನು ಬರೋಬ್ಬರಿ 269 ಕೋಟಿ ರೂಪಾಯಿಗೆ ಮಾರಾಟವಾಗುವ ಮೂಲಕ ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ. ತೆಲಂಗಾಣ ಕೈಗಾರಿಕಾ ಮೂಲಸೌಕರ್ಯ ನಿಗಮ (TGIIC) ನಡೆಸಿದ ಇ-ಹರಾಜಿನಲ್ಲಿ ಈ ವಿಸ್ಮಯಕಾರಿ ಬೆಲೆ ದಾಖಲಾಗಿದ್ದು, ಹೈದರಾಬಾದ್‌ನ ಪ್ರಮುಖ ಐಟಿ ಮತ್ತು ವಾಣಿಜ್ಯ ಹಬ್ ಆಗಿರುವ ರಾಯದುರ್ಗಂನ ‘ನಾಲೆಡ್ಜ್ ಸಿಟಿ’ (Raidurg Knowledge City) ಪ್ರದೇಶದಲ್ಲಿರುವ ಭೂಮಿ ಇದಾಗಿದೆ.

ಇನ್ನು, ಹರಾಜಿಗಿಡಲಾಗಿದ್ದ ಒಟ್ಟು 5.38 ಎಕರೆ ಜಮೀನನ್ನು ಹೈದರಾಬಾದ್ ಮೂಲದ ಪ್ರಖ್ಯಾತ ಬಿಲ್ಡರ್ ಸಂಸ್ಥೆಯಾದ ವಂಶೀರಾಮ್ ಬಿಲ್ಡರ್ಸ್ ಅತಿ ಹೆಚ್ಚು ಬಿಡ್ ಮಾಡುವ ಮೂಲಕ ತನ್ನದಾಗಿಸಿಕೊಂಡಿದ್ದು, ಒಂದು ಎಕರೆಗೆ ₹269 ಕೋಟಿಯಂತೆ, ಈ ಒಟ್ಟು 5.38 ಎಕರೆ ಜಾಗಕ್ಕೆ ವಂಶೀರಾಮ್ ಬಿಲ್ಡರ್ಸ್ ಸಂಸ್ಥೆಯು ಬರೋಬ್ಬರಿ ₹1,447.22 ಕೋಟಿ ಹಣವನ್ನು ಪಾವತಿಸಲಿದೆ.

ಒಂದೇ ವಾರದಲ್ಲಿ ಮುರಿದುಬಿದ್ದ ಹಳೆಯ ದಾಖಲೆ!

ಹೈದರಾಬಾದ್ ರಿಯಲ್ ಎಸ್ಟೇಟ್ ಮಾರುಕಟ್ಟೆ ಎಷ್ಟು ವೇಗವಾಗಿ ಬೆಳೆಯುತ್ತಿದೆ ಎಂದರೆ, ಈ ಹರಾಜಿಗೆ ಕೇವಲ ಏಳು ದಿನಗಳ ಮುಂಚೆ (ಆಗಸ್ಟ್ 21 ರಂದು) ಅದೇ ರಾಯದುರ್ಗಂ ಪ್ರದೇಶದ ಮತ್ತೊಂದು 5.25 ಎಕರೆ ಪ್ಲಾಟ್ ಎಕರೆಗೆ ₹264 ಕೋಟಿ ದರದಲ್ಲಿ ಹರಾಜಾಗಿ ದಾಖಲೆ ಬರೆದಿತ್ತು. ಆದರೆ ಕೇವಲ ಒಂದೇ ವಾರದಲ್ಲಿ ಆ ದಾಖಲೆಯನ್ನು ಧೂಳೀಪಟ ಮಾಡಿ ಎಕರೆಗೆ ₹5 ಕೋಟಿಗೂ ಹೆಚ್ಚು ಮೊತ್ತ ದಾಖಲಾಗಿದೆ.

ಮುಂದುವರೆದು, TGIIC ಈ ಜಾಗಕ್ಕೆ ಪ್ರತಿ ಎಕರೆಗೆ ₹175 ಕೋಟಿ ಕನಿಷ್ಠ ಮೂಲ ಬೆಲೆಯನ್ನು ನಿಗದಿಪಡಿಸಿತ್ತು. ಆದರೆ ಬಿಲ್ಡರ್‌ಗಳ ನಡುವಿನ ತೀವ್ರ ಪೈಪೋಟಿಯಿಂದಾಗಿ ನಿಗದಿಪಡಿಸಿದ್ದ ಬೆಲೆಗಿಂತ ಶೇ. 52.3 ರಷ್ಟು ಹೆಚ್ಚಿನ ದರಕ್ಕೆ ಭೂಮಿ ಮಾರಾಟವಾಗಿದೆ.

ಹಾಗಾದ್ರೆ, ಈ ಭಾಗಕ್ಕೆ ಇಷ್ಟೊಂದು ಬೇಡಿಕೆ ಯಾಕೆ?

ರಾಯದುರ್ಗಂ ಮತ್ತು ಗಚಿಬೌಲಿ ಪ್ರದೇಶಗಳು ಹೈದರಾಬಾದ್‌ನ ಆರ್ಥಿಕ ಇಂಜಿನ್‌ಗಳಾಗಿವೆ. ಇಲ್ಲಿ ಹೈಟೆಕ್ ಸಿಟಿ, ಫೈನಾನ್ಷಿಯಲ್ ಡಿಸ್ಟ್ರಿಕ್ಟ್, ಮೈಂಡ್‌ಸ್ಪೇಸ್ ಐಟಿ ಪಾರ್ಕ್‌ಗಳು ಹಾಗೂ ಪ್ರಮುಖ ಜಾಗತಿಕ ಸಂಸ್ಥೆಗಳ ಕಚೇರಿಗಳಿವೆ. ಹೊರವರ್ತುಲ ರಸ್ತೆ ಸಂಪರ್ಕ ಮತ್ತು ಅತ್ಯುತ್ತಮ ಮೂಲಸೌಕರ್ಯ ಇರುವುದರಿಂದ ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸಲು ಬಿಲ್ಡರ್‌ಗಳು ಎಷ್ಟು ಕೋಟಿ ಬೇಕಾದರೂ ಹೂಡಿಕೆ ಮಾಡಲು ಮುಗಿಬೀಳುತ್ತಿದ್ದಾರೆ.

ಒಟ್ಟಾರೆಯಾಗಿ, ಈ ಹರಾಜಿನ ಮೂಲಕ ತೆಲಂಗಾಣ ಸರ್ಕಾರಕ್ಕೆ ಕೇವಲ ಎರಡು ಪ್ಲಾಟ್‌ಗಳಿಂದ (ಒಟ್ಟು 10.63 ಎಕರೆ) ₹2,833.22 ಕೋಟಿ ಆದಾಯ ಹರಿದುಬಂದಿದೆ. ಇದು ಇಡೀ ಭಾರತದ ರಿಯಲ್ ಎಸ್ಟೇಟ್ ವಲಯದಲ್ಲೇ ಅತ್ಯಂತ ದುಬಾರಿ ಮತ್ತು ಐತಿಹಾಸಿಕ ವ್ಯವಹಾರಗಳಲ್ಲಿ ಒಂದಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮಧ್ಯಪ್ರಾಚ್ಯ ಸಂಘರ್ಷ-ಕಚ್ಚಾ ತೈಲ ಬೆಲೆ ಏರಿಕೆ: ಭಾರತೀಯ ಷೇರು ಮಾರುಕಟ್ಟೆಯಲ್ಲಿ ರಕ್ತಪಾತ; ಸೆನ್ಸೆಕ್ಸ್ 789 ಅಂಕ ಇಳಿಕೆ, 24 ಸಾವಿರಕ್ಕಿಂತ ಕೆಳಗೆ ಕುಸಿದ Nifty

ಇರಾನ್ ವಿರುದ್ಧ ಇತ್ತೀಚಿನ ದಾಳಿ ಪೂರ್ಣಗೊಳಿಸಿದ್ದೇವೆ; ಪ್ರತೀಕಾರಕ್ಕೆ ಮುಂದಾದರೆ ಮತ್ತಷ್ಟು ದಾಳಿ: ಡೊನಾಲ್ಡ್ ಟ್ರಂಪ್ ಎಚ್ಚರಿಕೆ

ನೇಪಾಳ ಪ್ರವಾಹ ಮಹಾ ದುರಂತ: ಸಾವಿನ ಸಂಖ್ಯೆ 1,127ಕ್ಕೆ ಏರಿಕೆ, ನಾಪತ್ತೆಯಾಗಿರುವ 4,858 ಮಂದಿಗಾಗಿ ಮುಂದುವರೆದ ಕಾರ್ಯಾಚರಣೆ..!

ಗೃಹಲಕ್ಷ್ಮಿ ನಕಲಿ ಖಾತೆಗಳಿಗೆ ಕಡಿವಾಣ: ಮನೆ-ಮನೆ ಸಮೀಕ್ಷೆಗೆ ಸರ್ಕಾರ ಮುಂದು, ಸಮೀಕ್ಷೆ ತಪ್ಪಿಸಿದ್ರೆ ನಿಲ್ಲಲಿದೆ 2,000 ರೂ. ಹಣ..!

ನೇಪಾಳ ಮಹಾ ಪ್ರವಾಹ: ಸಾವಿನ ದವಡೆಯಿಂದ ಜಸ್ಟ್ ಮಿಸ್; ಸುರಕ್ಷಿತವಾಗಿ ಬೆಂಗಳೂರಿಗೆ ಮರಳಿದ 17 ಮಂದಿ ಕನ್ನಡಿಗರು!