ರಾಷ್ಟ್ರೀಯ ಪಕ್ಷಗಳನ್ನೇ ಮೀರಿಸಿದ ದೇಣಿಗೆ! AI Image
ದೇಶ

ರಾಷ್ಟ್ರೀಯ ಪಕ್ಷಗಳನ್ನೇ ಮೀರಿಸಿದ ದೇಣಿಗೆ: ಕಚೇರಿಯೇ ಇಲ್ಲದ 6 ಪಕ್ಷಗಳ ಖಾತೆಗೆ ಹರಿದುಬಂತು ₹1700 ಕೋಟಿ!

ರಾಷ್ಟ್ರೀಯ ಪಕ್ಷಗಳ ಒಟ್ಟು ಆದಾಯವನ್ನೇ ಮೀರಿಸುವಂತೆ 6 ಅಪರಿಚಿತ ರಾಜಕೀಯ ಪಕ್ಷಗಳಿಗೆ 1700 ಕೋಟಿ ದೇಣಿಗೆ ಹರಿದುಬಂದಿರುವ ಆಘಾತಕಾರಿ ಸತ್ಯ ತನಿಖೆಯಿಂದ ಬಯಲಾಗಿದ್ದು, ಭಾರಿ ವಿವಾದಕ್ಕೆ ಕಾರಣವಾಗಿದೆ. ಆ ಕುರಿತ ವರದಿ ಇಲ್ಲಿದೆ:

ನವದೆಹಲಿ: ಚುನಾವಣಾ ಕಣದಲ್ಲಿ ಹೆಸರಿಲ್ಲ, ಪ್ರಚಾರದ ಸದ್ದುಗದ್ದಲವಿಲ್ಲ, ಕಚೇರಿಗಳಿಗೆ ಬೀಗ ಜಡಿದಿದೆ. ಆದರೂ ಆ ಪಕ್ಷಗಳ ಖಾತೆಗೆ ಹರಿದುಬಂದ ಹಣ ಬರೋಬ್ಬರಿ ಸಾವಿರಾರು ಕೋಟಿ ರೂಪಾಯಿ. ಹೌದು, ರಾಷ್ಟ್ರೀಯ ಪಕ್ಷಗಳ ಒಟ್ಟು ಆದಾಯವನ್ನೇ ಮೀರಿಸುವಂತೆ ಗುಜರಾತಿನ 6 ಅಪರಿಚಿತ ರಾಜಕೀಯ ಪಕ್ಷಗಳಿಗೆ ನೂರಾರು ಕೋಟಿ ದೇಣಿಗೆ ಹರಿದುಬಂದಿರುವ ಆಘಾತಕಾರಿ ಸತ್ಯ ತನಿಖೆಯಿಂದ ಬಯಲಾಗಿದ್ದು, 2024ರ ಲೋಕಸಭಾ ಚುನಾವಣೆಗೂ ಮುನ್ನ, ಗುಜರಾತ್ ಮೂಲದ, ಹೆಸರೇ ಕೇಳಿರದ 6 ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳು ಒಟ್ಟು ₹1,700 ಕೋಟಿಗೂ ಅಧಿಕ ದೇಣಿಗೆ ಪಡೆದಿರುವುದು ಭಾರಿ ವಿವಾದಕ್ಕೆ ಕಾರಣವಾಗಿದೆ. ಆ ಕುರಿತ ವರದಿ ಇಲ್ಲಿದೆ:

ರಾಷ್ಟ್ರೀಯ ಪಕ್ಷಗಳಿಗಿಂತಲೂ ಹೆಚ್ಚು ಆದಾಯ:

ಭಾರತದ ಪ್ರಮುಖ 5 ಪ್ರಮುಖ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಆಮ್ ಆದ್ಮಿ ಪಾರ್ಟಿ, ಬಿಎಸ್‌ಪಿ, ಸಿಪಿಐ(ಎಂ) ಮತ್ತು ನ್ಯಾಷನಲ್ ಪೀಪಲ್ಸ್ ಪಾರ್ಟಿ - ಇವೆಲ್ಲವೂ ಸೇರಿ 2023-24ರ ಆರ್ಥಿಕ ವರ್ಷದಲ್ಲಿ ಒಟ್ಟು ₹1,480.43 ಕೋಟಿ ಆದಾಯ ಗಳಿಸಿದ್ದವು. ಆದರೆ, ಚುನಾವಣಾ ಕಣದಲ್ಲೇ ಇಲ್ಲದ ಈ ಆರು ಅನಾಮಧೇಯ ಪಕ್ಷಗಳು ಇವೆಲ್ಲಕ್ಕಿಂತಲೂ ₹200 ಕೋಟಿ ಅಧಿಕ ಹಣವನ್ನು ಬಾಚಿಕೊಂಡಿವೆ. ಅದರಲ್ಲೂ, ಈ 6 ಪಕ್ಷಗಳು ಇಡೀ 2024ರ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಸಿದ್ದು ಕೇವಲ 15 ಅಭ್ಯರ್ಥಿಗಳನ್ನು ಮಾತ್ರ. ಅದರಲ್ಲಿ ಕೆಲವು ಪಕ್ಷಗಳು ಕೇವಲ ಒಂದೇ ಒಂದು ಕ್ಷೇತ್ರದಲ್ಲಿ ಸ್ಪರ್ಧಿಸಿದ್ದವು ಎನ್ನಲಾಗಿದೆ.

ಆ 6 ನಿಗೂಢ ಪಕ್ಷಗಳು ಯಾವುವು?

ಬಿಬಿಸಿ ಹಿಂದಿ ವರದಿ ಮಾಡಿರುವಂತೆ, ಗುಜರಾತ್ ಮೂಲದ ಹೆಸರೇ ಕೇಳಿರದ ಪಕ್ಷಗಳೆಂದರೆ, ಆಮ್ ಜನಮತ್ ಪಾರ್ಟಿ ಎಂಬ ಪಕ್ಷವೊಂದೇ ಗರಿಷ್ಠ 620 ಕೋಟಿ ರೂಪಾಯಿ ದೇಣಿಗೆ ಪಡೆದುಕೊಂಡಿದೆ. ಆದರೆ ಈ ಪಕ್ಷವು 2024ರ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಸಿದ್ದು ಕೇವಲ ಒಬ್ಬ ಅಭ್ಯರ್ಥಿಯನ್ನು ಮಾತ್ರ. ಜೊತೆಗೆ, ಸತ್ಯವಾದಿ ರಕ್ಷಕ್ ಪಾರ್ಟಿ 330.55 ಕೋಟಿ ರೂಪಾಯಿ ಪಡೆದು ಎರಡನೇ ಸ್ಥಾನದಲ್ಲಿದೆ. ಸ್ವತಂತ್ರ ಅಭಿವ್ಯಕ್ತಿ ಪಾರ್ಟಿ 219.69 ಕೋಟಿ, ನ್ಯೂ ಇಂಡಿಯಾ ಯುನೈಟೆಡ್ ಪಾರ್ಟಿ 200.69 ಕೋಟಿ, ಭಾರತೀಯ ನ್ಯಾಷನಲ್ ಜನತಾ ದಳ 191.61 ಕೋಟಿ ಮತ್ತು ಗರೀಬ್ ಕಲ್ಯಾಣ್ ಪಾರ್ಟಿ 138 ಕೋಟಿ ರೂಪಾಯಿ ದೇಣಿಗೆ ಸಂಗ್ರಹಿಸಿವೆ. ಅದರಲ್ಲೂ, ಈ ಪಕ್ಷಗಳ ಅಧಿಕೃತ ಕಚೇರಿಗಳಿಗೆ ಭೇಟಿ ನೀಡಿದಾಗ ಅವುಗಳು ಮುಚ್ಚಿರುವುದು ಅಥವಾ ಅಸ್ತಿತ್ವದಲ್ಲೇ ಇಲ್ಲದಿರುವುದು ಪತ್ತೆಯಾಗಿದೆ.

ಏತನ್ಮಧ್ಯೆ, ದೇಶದಲ್ಲಿರುವ ಶೇಕಡಾ 73ರಷ್ಟು ಇಂತಹ ಪಕ್ಷಗಳು ತಮ್ಮ ಹಣಕಾಸಿನ ಲೆಕ್ಕಪತ್ರಗಳನ್ನೇ ಪ್ರಕಟಿಸಿಲ್ಲ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ವರದಿ ತಿಳಿಸಿದೆ.

ಮನಿ ಲಾಂಡರಿಂಗ್ ಶಂಕೆ!

ಭಾರತದ ಆದಾಯ ತೆರಿಗೆ ಕಾನೂನಿನ ಪ್ರಕಾರ ರಾಜಕೀಯ ಪಕ್ಷಗಳ ಆದಾಯಕ್ಕೆ ತೆರಿಗೆ ವಿನಾಯಿತಿ ಇದೆ. ಹಾಗೆಯೇ, ವ್ಯಕ್ತಿಗಳು ಪಕ್ಷಗಳಿಗೆ ದೇಣಿಗೆ ನೀಡಿದರೆ ತೆರಿಗೆ ವಿನಾಯಿತಿ ಪಡೆಯಬಹುದು. ಹಾಗಾಗಿ, ತೆರಿಗೆದಾರರು ಈ ಪಕ್ಷಗಳಿಗೆ ದೇಣಿಗೆ ನೀಡಿದಂತೆ ರಸೀದಿ ಪಡೆದು ತೆರಿಗೆ ವಿನಾಯಿತಿ ಪಡೆಯುತ್ತಾರೆ. ಪಕ್ಷಗಳು ತಮ್ಮ ಕಮಿಷನ್ ಕಡಿತಗೊಳಿಸಿ ಉಳಿದ ಹಣವನ್ನು ನಗದು ರೂಪದಲ್ಲಿ ಅವರಿಗೆ ಮರಳಿಸುತ್ತವೆ. ಅದರಂತೆ, ಇದೇ ಲೂಪ್‌ಹೋಲ್‌ ಬಳಸಿಕೊಂಡು ಕಪ್ಪು ಹಣವನ್ನು ಬಿಳಿ ಹಣವಾಗಿ ಪರಿವರ್ತಿಸಲು ಇಂತಹ ಶೆಲ್ ಪಕ್ಷಗಳನ್ನು ಬಳಸಲಾಗುತ್ತಿದೆಯೇ ಎಂಬ ಬಲವಾದ ಶಂಕೆಯನ್ನು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ವ್ಯಕ್ತಪಡಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Hormuz ಜಲಸಂಧಿಯಲ್ಲಿ ಮಹಾ ಸಂಘರ್ಷ: Iran 3 ತೈಲ ಟ್ಯಾಂಕರ್‌ಗಳ ಮೇಲೆ ಅಮೆರಿಕಾ ದಾಳಿ; 'ಕಠಿಣ ಪ್ರತೀಕಾರ'ದ ಶಪಥ ಮಾಡಿದ ಟೆಹ್ರಾನ್!

100 ದಿನಗಳ ಹೊಸ್ತಿಲಲ್ಲಿ ಡಿಕೆಶಿ ಸರ್ಕಾರ: ಸಾಧನೆಗಳ ಪಟ್ಟಿ ಹಿಡಿದು ಕಾಂಗ್ರೆಸ್ ಅಖಾಡಕ್ಕೆ, ‘ಯು-ಟರ್ನ್’ ಅಸ್ತ್ರದೊಂದಿಗೆ ವಿಪಕ್ಷಗಳ ಕೌಂಟರ್‌..!

ಭಾರತದಲ್ಲಿ ಯೂಟ್ಯೂಬರ್, ಕಂಟೆಂಟ್‌ ಕ್ರಿಯೇಟರ್ಸ್‌ ಹಾವಳಿ: ದೊಡ್ಡ ಪ್ರಮಾಣದಲ್ಲಿ ಆದಾಯ ಬರ್ತಿದೆಯಾ? ಹೇಗೆಲ್ಲಾ ದುಡ್ಡು ಮಾಡಬಹುದು ಗೊತ್ತಾ?

ಡಿಕೆಶಿಗೆ ಟಕ್ಕರ್ ಕೊಡಲು ಹೊಸ ತಂತ್ರ: AHINDA ಮುರಿದು ‘HINDA’ ಕಟ್ಟಲು ಸಿದ್ದು ಮಾಸ್ಟರ್ ಪ್ಲ್ಯಾನ್, ಮಗನ ಭವಿಷ್ಯಕ್ಕಾಗಿ ಹಳೆಯ ಮಿತ್ರರಿಗೆ ಗೇಟ್‌ಪಾಸ್?

ವಿಶ್ವಕಪ್ 2026: ಶಫಾಲಿ ವರ್ಮಾ ಗೆ ಫೆವಿಲಿಯನ್ ಗೆ ಹೋಗು ಎನ್ನುವಂತೆ ಕೈ ಸನ್ನೆ, ಪಾಕ್ ನಾಯಕಿ ವಿರುದ್ಧ ಭಾರತೀಯರ ಆಕ್ರೋಶ, ಟ್ರೋಲ್! Video