6 ಲಕ್ಷಕ್ಕೆ ಸುಪಾರಿ ಕೊಟ್ಟು ತಂದೆಯನ್ನು ಮುಗಿಸಿದ್ದ ಪಾಪಿ ಮಗ Online Desk
ದೇಶ

ಆಸ್ತಿ ಕೈತಪ್ಪುವ ಭೀತಿ, ಐಪಿಎಲ್ ಸಾಲ: 6 ಲಕ್ಷಕ್ಕೆ ಸುಪಾರಿ ಕೊಟ್ಟು ತಂದೆಯನ್ನು ಮುಗಿಸಿದ್ದ ಪಾಪಿ ಮಗ; ಪತ್ನಿ ಮೇಲೆಯೇ ಗೂಬೆ ಕೂರಿಸಲು ಹೋಗಿ ಸಿಕ್ಕಿಬಿದ್ದ!

ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದ ಔಷಧ ಉದ್ಯಮಿ ವಿನೀತ್ ಮನೋಚಾ (60) ಅವರ ಭೀಕರ ಕೊಲೆ ಪ್ರಕರಣಕ್ಕೆ ದಿಢೀರ್ ತಿರುವು ಸಿಕ್ಕಿದ್ದು, ಸ್ವಂತ ಮಗನೇ ತಂದೆಯನ್ನು ಮುಗಿಸಲು ₹6 ಲಕ್ಷ ಸುಪಾರಿ ನೀಡಿರುವುದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ. ಆ ಕುರಿತ ವರದಿ ಇಲ್ಲಿದೆ:

ಕಾನ್ಪುರ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಕಾನ್ಪುರದಲ್ಲಿ ಸೆಪ್ಟೆಂಬರ್ 5ರಂದು ನಡೆದಿದ್ದ ಪ್ರಸಿದ್ಧ ಔಷಧಿ ವ್ಯಾಪಾರಿ 60 ವರ್ಷದ ವಿನೀತ್ ಮನೋಚಾ ಭೀಕರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಸ್ವಂತ ಮಗನೇ ಸುಪಾರಿ ನೀಡಿ ತಂದೆಯನ್ನು ಕೊಲ್ಲಿಸಿರುವುದು ಪೊಲೀಸ್ ತನಿಖೆಯಿಂದ ಬಯಲಾಗಿದೆ. ಪ್ರೇಯಸಿಗೆ ತನ್ನೆಲ್ಲಾ ಆಸ್ತಿ ಬರೆಯುತ್ತಾರೆಂಬ ಭೀತಿ ಮತ್ತು ಐಪಿಎಲ್ ಬೆಟ್ಟಿಂಗ್‌ನಿಂದ ಉಂಟಾಗಿದ್ದ ಕೋಟ್ಯಂತರ ರೂಪಾಯಿ ಸಾಲವೇ ಈ ಕೊಲೆಗೆ ಪ್ರಮುಖ ಕಾರಣ ಎನ್ನಲಾಗಿದೆ. ಆರಂಭದಲ್ಲಿ ಪೊಲೀಸರು ಈ ಕೊಲೆಯ ಮಾಸ್ಟರ್‌ಮೈಂಡ್ ಸೊಸೆ ಶಾಲು ಮನೋಚಾ ಎಂದು ಭಾವಿಸಿ ಆಕೆಯನ್ನು ಬಂಧಿಸಿದ್ದರು. ಆದರೆ ಈಗ ಸೈಂಟಿಫಿಕ್ ಮತ್ತು ಡಿಜಿಟಲ್ ಪುರಾವೆಗಳ ಆಧಾರದ ಮೇಲೆ ಮಗ ಸುಬ್ರತ್ ಮನೋಚಾ ನನ್ನು ಪೊಲೀಸರು ಪ್ರಮುಖ ಆರೋಪಿಯನ್ನಾಗಿ ಬಂಧಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಆಸ್ತಿ ಬೇರೆಯವರ ಪಾಲಾಗುವ ಭೀತಿ!

ಮೃತ ವಿನೀತ್ ಮನೋಚಾ ಅವರಿಗೆ ಹಲವು ಮಹಿಳೆಯರೊಂದಿಗೆ ಸಂಬಂಧವಿತ್ತು. ಹಾಗಾಗಿ, ತಂದೆ ತನ್ನೆಲ್ಲಾ ಆಸ್ತಿಯನ್ನು ಪ್ರೇಯಸಿಗೆ (ಬೇರೊಬ್ಬ ಮಹಿಳೆಗೆ) ಬರೆದುಬಿಡಬಹುದು ಎಂಬ ತೀವ್ರ ಭೀತಿ ಮಗ ಸುಬ್ರತ್‌ನನ್ನು ಕಾಡುತ್ತಿತ್ತು ಎನ್ನಲಾಗಿದೆ. ಇದರೊಂದಿಗೆ, ಆರೋಪಿ ಸುಬ್ರತ್ ಐಪಿಎಲ್ ಬೆಟ್ಟಿಂಗ್ ಹಾಗೂ ಜೂಜಿನಿಂದಾಗಿ ಸುಮಾರು ₹40 ಲಕ್ಷಕ್ಕೂ ಹೆಚ್ಚು ಸಾಲ ಮಾಡಿಕೊಂಡಿದ್ದನು. ಆತನಿಗೆ ಬ್ಯಾಂಕ್ ಸಾಲದ ಕಂತು ಕಟ್ಟಲು ತಿಂಗಳಿಗೆ ₹55,000 ಬೇಕಾಗುತ್ತಿತ್ತು, ಆದರೆ ತಂದೆ ಆತನಿಗೆ ಖರ್ಚಿಗೆ ಕೇವಲ ₹40,000 ಮಾತ್ರ ನೀಡುತ್ತಿದ್ದರು. ಈ ಹಣಕಾಸಿನ ತೊಂದರೆಯೂ ಕೊಲೆಗೆ ಪ್ರಚೋದನೆ ನೀಡಿದೆ.

₹6 ಲಕ್ಷಕ್ಕೆ ಸುಪಾರಿ ನೀಡಿ ಪತ್ನಿಯ ಮೇಲೆ ಗೂಬೆ ಕೂರಿಸುವ ಪ್ಲಾನ್!

ಸುಬ್ರತ್ ತನ್ನ ಹಳೆಯ ಉದ್ಯೋಗಿ ವಿಶಾಲ್ ಗೌತಮ್‌ಗೆ ತಂದೆಯನ್ನು ಮುಗಿಸಲು ₹6 ಲಕ್ಷ ಸುಪಾರಿ ನೀಡಿದ್ದ. ಅಷ್ಟೇ ಅಲ್ಲದೆ, "ಒಂದು ವೇಳೆ ಪೊಲೀಸರಿಗೆ ಸಿಕ್ಕಿಬಿದ್ದರೆ ನನ್ನ ಪತ್ನಿ (ಸೊಸೆ) ಶಾಲು ಹೆಸರನ್ನು ಹೇಳು" ಎಂದು ಸುಪಾರಿ ಕಿಲ್ಲರ್‌ಗೆ ಮೊದಲೇ ಟ್ರೈನಿಂಗ್ ಕೊಟ್ಟಿದ್ದ! ಅದರಂತೆ, ಸೆಪ್ಟೆಂಬರ್ 5ರ ರಾತ್ರಿ ಸುಬ್ರತ್ ತನ್ನ ಪತ್ನಿ ಮತ್ತು ಮಗನನ್ನು ಕರೆದುಕೊಂಡು ಮುಂಜಾಗ್ರತೆಯಾಗಿ ಪಾರ್ಟಿಗೆ ತೆರಳಿದ್ದ. ಈ ಗ್ಯಾಪ್‌ನಲ್ಲಿ ಸುಪಾರಿ ಕಿಲ್ಲರ್ಸ್ ಮನೆಗೆ ನುಗ್ಗಿ ವಿನೀತ್ ಅವರ ಕುತ್ತಿಗೆ ಸೀಳಿ, 26 ಬಾರಿ ಚಾಕುವಿನಿಂದ ಇರಿದು ಬರ್ಬರವಾಗಿ ಕೊಂದಿದ್ದರು.

ಹಾಗಾದ್ರೆ, ಪೊಲೀಸರಿಗೆ ಸಿಕ್ಕಿಬಿದ್ದಿದ್ದು ಹೇಗೆ?

ಕೊಲೆ ನಡೆದ ರಾತ್ರಿ ಸುಪಾರಿ ಕಿಲ್ಲರ್ ಹೊಸ ಸಿಮ್ ಕಾರ್ಡ್ ಬಳಸಿ ಸುಬ್ರತ್‌ಗೆ 6 ಬಾರಿ ಕರೆ ಮಾಡಿದ್ದ. ಪೊಲೀಸರು ಆ ಕಾಲ್ ಡಿಟೇಲ್ಸ್, ಡಿಲೀಟ್ ಆಗಿದ್ದ ವಾಟ್ಸಾಪ್ ಚಾಟ್‌ಗಳು ಹಾಗೂ ಐಎಂಇಐ ನಂಬರ್ ಟ್ರ್ಯಾಕ್ ಮಾಡಿದಾಗ ಮಗನ ಸಂಪೂರ್ಣ ಕರ್ಮಕಾಂಡ ಬಯಲಾಗಿದೆ.

ಮುಂದುವರೆದು, ಕಾನ್ಪುರ ಪೊಲೀಸ್ ಕಮಿಷನರ್ ರಘುಬೀರ್ ಲಾಲ್ ಅವರ ನೇತೃತ್ವದ ತಂಡ ಆರೋಪಿ ಸುಬ್ರತ್ ಮತ್ತು ಸುಪಾರಿ ಕಿಲ್ಲರ್ಸ್ ಸೇರಿದಂತೆ ಎಲ್ಲರನ್ನೂ ಜೈಲಿಗಟ್ಟಿದೆ. ಇನ್ನು ಆರಂಭದಲ್ಲಿ ಜೈಲು ಪಾಲಾಗಿದ್ದ ಸೊಸೆ ಶಾಲುಗೆ ಸದ್ಯಕ್ಕೆ ಸಂಪೂರ್ಣ ಕ್ಲೀನ್ ಚೀಟ್ ಸಿಕ್ಕಿಲ್ಲವಾದರೂ, ಆಕೆಯನ್ನು ದಾಳವಾಗಿ ಬಳಸಿಕೊಳ್ಳಲಾಗಿತ್ತು ಎಂಬುದು ಸಾಬೀತಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

SIR ಕುರಿತು ಚುನಾವಣಾ ಆಯೋಗ ಏಕಪಕ್ಷೀಯ ನಿರ್ಧಾರ ಆರೋಪ: CEC ಜ್ಞಾನೇಶ್ ಕುಮಾರ್ ವಿರುದ್ಧ ಕ್ರಮಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ PIL

ಮಹಿಳೆ ಫೋಟೋ ಮಾರ್ಫ್ ಮಾಡಿ ಪ್ರಧಾನಿ ಮೋದಿ ಫೋಟೋದೊಂದಿಗೆ ಪ್ರದರ್ಶನ: CJP ವಿರುದ್ಧ FIR ದಾಖಲು

ಆಯೋಗದ ವಿವಾದ: CEC Gyanesh Kumar ಭಾಗಿಯಾಗಬೇಕಿದ್ದ ಯುವಕರೊಂದಿಗಿನ ಕಾರ್ಯಕ್ರಮ ದಿಢೀರ್ ರದ್ದು!

'ಯಾರು ಚಿತ್ರೀಕರಿಸುತ್ತಿದ್ದರು?': ಜಮುಯಿ ದುರಂತಕ್ಕೆ ವಿಪಕ್ಷಗಳೇ ಕಾರಣ-ಬಿಜೆಪಿ ಸಚಿವ

ವಿಶ್ವಸಂಸ್ಥೆ ಸುಧಾರಣೆ ವಿರೋಧಿಸುವವರಿಗೆ ಜಾಗತಿಕ ವೇದಿಕೆ ಬಗ್ಗೆ ಕಾಳಜಿಯಿಲ್ಲ, ಕೇವಲ ಸ್ವಾರ್ಥಕ್ಕೆ ಬಳಕೆ: ಎಸ್. ಜೈಶಂಕರ್ ವಾಗ್ದಾಳಿ