ಸಂಗ್ರಹ ಚಿತ್ರ 
ದೇಶ

ಮಹಾರಾಷ್ಟ್ರದಲ್ಲೂ ಭೀಕರ ಬರಗಾಲ; 358 ತಾಲ್ಲೂಕುಗಳ ಪೈಕಿ 265 ತಾಲ್ಲೂಕು ಬರಪೀಡಿತ ಎಂದು ಘೋಷಣೆ!

ಧಾರಾಶಿವ್ ಮತ್ತು ಬೀಡ್‌ನಂತಹ ಜಿಲ್ಲೆಗಳಲ್ಲಿ ಜುಲೈ ತಿಂಗಳಿನಿಂದ ಮಳೆಯಾಗಿಲ್ಲ; ಇದರಿಂದಾಗಿ ಬೆಳೆಗಳು, ಜಾನುವಾರುಗಳು ಹಾಗೂ ರೈತರು ಮತ್ತು ಕಾರ್ಮಿಕರ ದೈನಂದಿನ ನೀರಿನ ಅಗತ್ಯಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ.

ಮುಂಬೈ: ಮಹಾರಾಷ್ಟ್ರ ಸರ್ಕಾರವು ಶನಿವಾರದಂದು ರಾಜ್ಯದ 358 ತಾಲೂಕುಗಳ ಪೈಕಿ 265 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ ಎಂದು ಅಧಿಕೃತ ಅಧಿಸೂಚನೆ ತಿಳಿಸಿದೆ.

ಸರ್ಕಾರಿ ಆದೇಶದ ಪ್ರಕಾರ, ಈ ಕ್ರಮವು ರಾಜ್ಯದ ಶೇ 74ರಷ್ಟು ಪ್ರದೇಶವನ್ನು ಒಳಗೊಂಡಿದೆ. ರಾಜ್ಯದ ಕೆಲವು ಬರಪೀಡಿತ ಪ್ರದೇಶಗಳಿಗೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಇತ್ತೀಚೆಗೆ ನೀಡಿದ ಭೇಟಿಯ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ.

ಧಾರಾಶಿವ್ ಮತ್ತು ಬೀಡ್‌ನಂತಹ ಜಿಲ್ಲೆಗಳಲ್ಲಿ ಜುಲೈ ತಿಂಗಳಿನಿಂದ ಮಳೆಯಾಗಿಲ್ಲ; ಇದರಿಂದಾಗಿ ಬೆಳೆಗಳು, ಜಾನುವಾರುಗಳು ಹಾಗೂ ರೈತರು ಮತ್ತು ಕಾರ್ಮಿಕರ ದೈನಂದಿನ ನೀರಿನ ಅಗತ್ಯಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ.

ರಾಜ್ಯ ಸರ್ಕಾರದ ಅಂಕಿಅಂಶಗಳ ಪ್ರಕಾರ, ಜೂನ್ 1 ರಿಂದ ಸೆಪ್ಟೆಂಬರ್ 18ರ ಅವಧಿಯಲ್ಲಿ ಛತ್ರಪತಿ ಸಂಭಾಜಿನಗರ ವಿಭಾಗದಲ್ಲಿ 424.5 ಮಿ.ಮೀ ಮಳೆಯಾಗಿದೆ; ಇದೇ ಅವಧಿಯಲ್ಲಿ ನಿರೀಕ್ಷಿಸಲಾಗಿದ್ದ ಸಾಮಾನ್ಯ ಮಳೆಯ ಪ್ರಮಾಣ 613.1 ಮಿ.ಮೀ ಆಗಿದ್ದು, ಇದು 30.8 ರಷ್ಟು ಮಳೆ ಕೊರತೆಯನ್ನು ಸೂಚಿಸುತ್ತದೆ. ಮರಾಠವಾಡದ ಧಾರಾಶಿವ್ ಮತ್ತು ಇತರ ಐದು ಜಿಲ್ಲೆಗಳು ಛತ್ರಪತಿ ಸಂಭಾಜಿನಗರ ವಿಭಾಗದ ವ್ಯಾಪ್ತಿಗೆ ಬರುತ್ತವೆ.

ಪುಣೆ ಮತ್ತು ನಾಸಿಕ್ ವಿಭಾಗಗಳಲ್ಲಿ ಸಹ ಸುಮಾರು ಶೇ 30ರಷ್ಟು ಮಳೆಯ ಕೊರತೆ ದಾಖಲಾಗಿದ್ದರೆ, ಅಮರಾವತಿ ಮತ್ತು ನಾಗ್ಪುರ ವಿಭಾಗಗಳಲ್ಲಿ ಶೇ 27ರಷ್ಟು ಮಳೆ ಕೊರತೆ ದಾಖಲಾಗಿದೆ. ಕೊಂಕಣ ವಿಭಾಗದಲ್ಲಿ ಶೇ 6.3ರಷ್ಟು ಮಳೆ ಕೊರತೆ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬ್ಯಾಂಕ್ ಮುಷ್ಕರದ ನಡುವೆ ಗ್ರಾಹಕರಿಗೆ ಬಿಗ್ ರಿಲೀಫ್; ಎಟಿಎಂ ವಹಿವಾಟು ಶುಲ್ಕ ಸಂಪೂರ್ಣ ರದ್ದು, ಎಷ್ಟು ಬಾರಿಯಾದರೂ ಉಚಿತವಾಗಿ ಹಣ ಡ್ರಾ ಮಾಡಿ

'ಪದ್ಮಭೂಷಣ ಸಣ್ಣ ವಿಷಯ, ಅವರನ್ನು ಪ್ರಧಾನಿಯನ್ನಾಗಿ ಮಾಡಿ': ಪಶ್ಚಿಮ ಬಂಗಾಳ ಬಿಜೆಪಿ ಮುಖ್ಯಸ್ಥ ಸಮಿಕ್ ಭಟ್ಟಾಚಾರ್ಯ ಹೇಳಿಕೆಗೆ ಕಾಂಗ್ರೆಸ್ ಲೇವಡಿ

ಭಾರತದ ಭಜನೆ, ಭಕ್ತಿ ಪರಂಪರೆಗೆ ಅಪಹಾಸ್ಯ: ಜೂನಿಯರ್ ಖರ್ಗೆಯಿಂದ ಇದಕ್ಕಿಂತ ಇನ್ನೇನು ನಿರೀಕ್ಷಿಸಲು ಸಾಧ್ಯ! ಬಿಜೆಪಿ

ಮೊಬೈಲ್‌ನಲ್ಲಿ e-KYC ಮಾಡಿದರೆ ಮಾನ್ಯವಲ್ಲ; Ration Card ಬಳಕೆದಾರಿಗೆ ಆಹಾರ ಇಲಾಖೆ ಖಡಕ್ ಎಚ್ಚರಿಕೆ

'SIT ತಂಡದ ಪೊಲೀಸ್ ಅಧಿಕಾರಿಗಳ ಮೇಲೆ ನಂಬಿಕೆಯಿಲ್ಲ, ಸಮರ್ಥರನ್ನು ನೇಮಿಸಿ ಮರುತನಿಖೆ ಮಾಡಿ': ಸೌಜನ್ಯ ತಾಯಿ ಮನವಿ