ಮದ್ಯ ಸೇವಿಸಿ ಪ್ರಜ್ಞೆ ತಪ್ಪಿದ ಕೋತಿ 
ದೇಶ

ವೈನ್‌ ಶಾಪ್‌ಗೆ ನುಗ್ಗಿ ಕೈಗೆ ಸಿಕ್ಕ ಮದ್ಯ ಕುಡಿದು ಅಲ್ಲೇ ನಿದ್ರೆಗೆ ಜಾರಿದ ಕೋತಿ! Video

ಜಾರ್ಖಂಡ್‌ನ ರಾಂಚಿ ಜಿಲ್ಲೆಯ ಓರ್ಮಾಂಝಿ ಪ್ರದೇಶದ ವೈನ್‌ ಶಾಪ್‌ವೊಂದಕ್ಕೆ ಕೋತಿಯೊಂದು ನುಗ್ಗಿ, ಬಾಟಲಿಯಲ್ಲಿದ್ದ ಮದ್ಯವನ್ನು ಕುಡಿದಿದೆ.

ರಾಂಚಿ: ಮದ್ಯದಂಗಡಿಗೆ ನುಗ್ಗಿದ ಕೋತಿಯೊಂದು ಕೈಗೆ ಸಿಕ್ಕ ಬಾಟಲಿ ತೆಗೆದುಕೊಂಡು ಕಂಠಪೂರ್ತಿ ಕುಡಿದು ಪ್ರಜ್ಞೆ ತಪ್ಪಿದ ಘಟನೆ ಜಾರ್ಖಂಡ್ ನಲ್ಲಿ ನಡೆದಿದೆ.

ಜಾರ್ಖಂಡ್‌ನ ರಾಂಚಿ ಜಿಲ್ಲೆಯ ಓರ್ಮಾಂಝಿ ಪ್ರದೇಶದ ವೈನ್‌ ಶಾಪ್‌ವೊಂದಕ್ಕೆ ಕೋತಿಯೊಂದು ನುಗ್ಗಿ, ಬಾಟಲಿಯಲ್ಲಿದ್ದ ಮದ್ಯವನ್ನು ಕುಡಿದಿದೆ.

ಅಂಗಡಿಯೊಳಗೆ ನುಗ್ಗಿದ ಕೋತಿ, ಅಲ್ಲಿದ್ದ ಮದ್ಯದ ಬಾಟಲಿಯಿಂದ ಮದ್ಯ ಸೇವಿಸಿದೆ. ಬಳಿಕ ಮತ್ತೇರಿದಂತೆ ಕಂಡುಬಂದ ಕೋತಿ ಅಂಗಡಿಯಲ್ಲೇ ಮಲಗಿ ನಿದ್ರೆಗೆ ಜಾರಿದೆ.

ಕೋತಿ ಅಂಗಡಿಯೊಳಗೆ ಇರುವುದನ್ನು ಗಮನಿಸಿದ ಬಳಿಕ ಸ್ಥಳೀಯರು ಸಂಬಂಧಪಟ್ಟವರಿಗೆ ಮಾಹಿತಿ ನೀಡಿದ್ದಾರೆ.

ತಕ್ಷಣ ಸ್ಥಳಕ್ಕೆ ರಕ್ಷಣಾ ತಂಡ ಆಗಮಿಸಿ, ಯಾವುದೇ ಅಪಾಯವಾಗದಂತೆ ಕೋತಿಯನ್ನು ಸುರಕ್ಷಿತವಾಗಿ ರಕ್ಷಿಸಿ ಅಲ್ಲಿಂದ ಕರೆದೊಯ್ದಿದೆ.

ಘಟನೆಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವೈನ್‌ ಶಾಪ್‌ಗೆ ನುಗ್ಗಿದ ಕೋತಿ ಮದ್ಯ ಕುಡಿದು ಅಲ್ಲೇ ಮಲಗಿದ ಘಟನೆ ಇದೀಗ ಭಾರಿ ಚರ್ಚೆಗೆ ಕಾರಣವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CEC ಜ್ಞಾನೇಶ್ ಕುಮಾರ್‌ರನ್ನು ತಕ್ಷಣ ವಜಾಗೊಳಿಸಿ, ಕ್ರಿಮಿನಲ್ ಕೇಸ್ ದಾಖಲಿಸಿ: ರಾಷ್ಟ್ರಪತಿಗೆ ಸಿದ್ದರಾಮಯ್ಯ ಆಗ್ರಹ

Asian Games: ಇರಾನ್ ನ್ನು ಮಣಿಸಿ ಚಿನ್ನ ಮುಡಿಗೇರಿಸಿಕೊಂಡ ಭಾರತೀಯ ಪುರುಷರ ಕಬಡ್ಡಿ ತಂಡ

ಕೊನೆಯ ವಿಶ್ವಕಪ್: ಏಕದಿನಕ್ಕೂ ನಿವೃತ್ತಿ ಘೋಷಿಸುವ ಸುಳಿವು ನೀಡಿದ ವಿರಾಟ್ ಕೊಹ್ಲಿ; ಅಭಿಮಾನಿಗಳು ಶಾಕ್!

ಮಮತಾ ಬಣದ ಟಿಎಂಸಿ ಶಾಸಕರ ಕಾರಿನ ಮೇಲೆ ಕಲ್ಲು, ಮೊಟ್ಟೆಗಳ ಎಸೆತ

ಇನ್‌ಸ್ಟಾಗ್ರಾಂನಲ್ಲಿ ಪರಿಚಯ, ಬಳಿಕ ಲೈಂಗಿಕ ದೌರ್ಜನ್ಯ; 16ರ ಬಾಲಕಿ ಪ್ರಕರಣದಲ್ಲಿ 19ರ ಯುವಕ ಅರೆಸ್ಟ್