ಐಶ್ವರ್ಯ ರೈ: ವಿಶ್ವ ಸುಂದರಿ ಐಶ್ವರ್ಯ ರೈ ಬಚ್ಚನ್ ಒಬ್ಬ ಪ್ರತಿಭಾವಂತ ವಿದ್ಯಾರ್ಥಿನಿ. ಎಚ್‌ಎಸ್‌ಸಿ ಪರೀಕ್ಷೆಯಲ್ಲಿ ಐಶ್ವರ್ಯ ಶೇ.90ರಷ್ಟು ಅಂಕ ಪಡೆದಿದ್ದಳು. ಆರ್ಕಿಟೆಕ್ಟ್ ಆಗಬೇಕು ಎಂಬ ಕನಸಿನೊಂದಿಗೆ ರೇಹಜಾ ಕಾಲೇಜ್ ಸೇರಿದ್ದ ರೈ, ಕೊನೆಗೆ ಮಾಡೆಲ್ ಹಾಗೂ ನಟಿಯಾಗಿ ಶಿಕ್ಷಣವನ್ನು ಅರ್ಧಕ್ಕೆ ಕೈ ಬಿಟ್ಟರು. 
ಸಿನಿಮಾ

ಪದವಿ ಪಡೆಯದ ಟಾಪ್ 10 ಬಾಲಿವುಡ್ ತಾರೆಯರು

ಅಕ್ಷಯ್ ಕುಮಾರ್: ಬಹುಮುಖ ಪ್ರತಿಭೆ ಮತ್ತು ಖ್ಯಾತ ನಟ ಅಕ್ಷಯ್ ಕುಮಾರ್ ಸಹ ಪದವಿ ಪಡೆದಿಲ್ಲ. ಆದರೆ ಇವರು ಕಾಲೇಜ್ ಬಿಟ್ಟಿದ್ದು ಮಾತ್ರ ನಟನೆಗಾಗಿ ಅಲ್ಲ. ಬೇರೆ ಕಾರಣಕ್ಕಾಗಿ ಬಿಟ್ಟರೂ ನಟನಾಗಿ ಬೆಳೆದರು.
ಸಲ್ಮಾನ್ ಖಾನ್: ಬಾಲಿವುಡ್ ಮೊಸ್ಟ್ ಎಲಿಜಿಬಲ್ ಬ್ಯಾಚುಲರ್ ಸಲ್ಮಾನ್ ಖಾನ್ ಸಹ ಪದವಿ ಪಡೆಯದ ಮತ್ತೊಬ್ಬ ನಟ. ನಟನಾಗಬೇಕು ಎಂಬ ಕನಸಿನೊಂದಿಗೆ ಬಾಂದ್ರಾದ ನ್ಯಾಷಿನಲ್ ಕಾಲೇಜ್‌ನಿಂದ ಹೊರಬಿದ್ದದ್ದರು ಸಲ್ಮಾನ್.
ಅಮಿರ್ ಖಾನ್: ಮಿಸ್ಟರ್ ಫರ್ಫೆಕ್ಟ್ ಅಂತಲೇ ಖ್ಯಾತಿಯಾಗಿರುವ ನಟ ಅಮಿರ್ ಖಾನ್ ಅವರು ಓದಿದ್ದು ಕೇವಲು ಪಿಯುಸಿ. ಬಾಲ್ಯದಿಂದಲೇ ನಟನೆಯಲ್ಲಿ ತೊಡಕೊಂಡಿದ್ದ ಅಮಿರ್, ಶಾಲಾ ದಿನಗಳಲ್ಲಿ ತನ್ನ ಅಂಕಲ್ ನಾಸಿರ್ ಹುಸೇನ್ ಅವರಿಗೆ ಸಹಾಯ ಮಾಡುತ್ತಿದ್ದರು.
ಆಲಿಯಾ ಭಟ್: 2011ರಲ್ಲಿ ಜಮ್ನಾಬಾಯಿ ನರ್ಸೀ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿರುವ ಆಲಿಯಾ ಭಟ್, 2012ರಲ್ಲಿ ತೆರೆಕಂಡ 'ಸ್ಟುಡೆಂಟ್ ಆಫ್ ದಿ ಯಿಯರ್‌'ನೊಂದಿಗೆ ಸ್ಟುಟೆಂಡ್ ಲೈಫ್‌ಗೆ ಗುಡ್‌ಬೈ ಹೇಳುತ್ತಾರೆ. ಆದರೂ 20 ವರ್ಷದ ಆಲಿಯಾಗೆ ಪದವಿ ಪಡೆಯಬೇಕು ಎಂಬ ಆಸೆ ಇದೆಯಂತೆ. ಅದು ಯಾವತ್ತು ಈಡೇರುತ್ತೋ ಕಾದು ನೋಡ
ಪ್ರಿಯಾಂಕ ಚೋಪ್ರಾ: ಉತ್ತಮ ಹಾಡುಗಾರ್ತಿಯೂ ಆಗಿರುವ ನಟಿ ಪ್ರಿಯಾಂಕ ಚೋಪ್ರಾ ತನ್ನ 17ನೇ ವಯಸ್ಸಿನಲ್ಲಿಯೇ ವಿಶ್ವ ಸುಂದರಿ ಪಟ್ಟ ಧರಿಸಿದ್ದಳು. ಇದಾದ ಬಳಿಕ ಅವರಿಗೆ ಬಾಲಿವುಡ್‌ನಿಂದ ಸಾಕಷ್ಟು ಅವಕಾಶಗಳು ಬಂದವು. ಹೀಗಾಗಿ ಅವರು ಮತ್ತೆ ಕಾಲೇಜು ಕಡೆಗೆ ತಿರುಗಿ ನೋಡಲಿಲ್ಲ.
ಕರಿಶ್ಮಾ ಕಪೂರ್: ಅತಿ ಕಡಿಮೆ ವಯಸ್ಸಿನಲ್ಲೇ ಬಾಲಿವುಡ್‌ಗೆ ಬಂದ ಕರಿಶ್ಮಾ ಕಪೂರ್, ಪ್ರೇಮ ಖೈದಿ ಚಿತ್ರದ ಮೂಲಕ ಖ್ಯಾತಿ ಪಡೆದರು. ಕರಿಶ್ಮಾ ಬಾಲಿವುಡ್‌ಗೆ ಕಾಲಿಟ್ಟಾಗ ಆಕೆಗೆ ಜಸ್ಟ್ 16 ವರ್ಷ. 6ನೇ ತರಗತಿಯಲ್ಲಿರುವಾಗಲೇ ನಟಿಯಾಗಬೇಕು ಎಂಬ ಕನಸಿನೊಂದಿಗೆ ಓದಿಗೆ ಗುಡ್‌ಬೈ ಹೇಳುತ್ತಾಳೆ.
ದೀಪಿಕಾ ಪಡುಕೊಣೆ: ಬೆಂಗಳೂರಿನ ಸೊಫಿಯಾ ಹೈಸ್ಕೂಲ್‌ನಲ್ಲಿ ಶಾಲಾ ಶಿಕ್ಷಣ ಮತ್ತು ಮೌಂಟ್ ಕಾರ್ಮಲ್ ಕಾಲೇಜಿನಲ್ಲಿ ಪಿಯುಸಿ ಪಡೆದಿರುವ ದೀಪಿಕಾ ಪಡುಕೊಣೆ, ಒಬ್ಬ ಉತ್ತಮ ಕ್ರೀಡಾ ಪಟುವಾಗಿದ್ದಳು. ಪಿಯುಸಿಯ ನಂತರ ಮಾಡಲಿಂಗ್ ವೃತ್ತಿ ಆಯ್ಕೆ ಮಾಡಿಕೊಂಡ ದೀಪಿಕಾ, ಮುಕ್ತ ವಿವಿಯಿಂದ ಪದವಿ ಪಡೆಯಲು ಸಮಾಜಶಾಸ್ತ್ರದಲ್ಲಿ ಬಿಎ
ಕರೀನಾ ಕಪೂರ್ ಖಾನ್: ಕರೀನಾ ಕಪೂರ್ ವಕೀಲೆಯಾಗಬೇಕು ಎಂಬ ಕನಸು ಕಂಡಿದ್ದಳಂತೆ. ಆದರೆ ಸಡನ್ ಆಗಿ 'ರೆಫೂಜಿ' ಚಿತ್ರದ ಆಫರ್ ಬಂದಿದ್ದರಿಂದ ಲಾ ಮಾಡುವ ಕನಸು ಕೈ ಬಿಟ್ಟು ಬಾಲಿವುಡ್‌ಗೆ ಬರುತ್ತಾರೆ.
ಪ್ರತೀಕ ಬಬ್ಬರ್: ಬಾಲಿವುಡ್‌ನಲ್ಲಿ ಪದವಿ ಪಡೆಯದ ನಟರ ಪೈಕಿ ಪ್ರತೀಕ ಬಬ್ಬರ್ ಸಹ ಒಬ್ಬರು. ಕಾಲೇಜು ಮೆಟ್ಟಿಲು ಏರದ ಬಬ್ಬರ್ ಅವರು ಕಳೆದ ಒಂದು ವರ್ಷದಿಂದ ಜಾಹಿರಾತು ಚಿತ್ರ ನಿರ್ಮಾಪಕ ಪ್ರಹ್ಲಾದ್ ಕಕ್ಕರ್ ಬಳಿ ಕೆಲಸ ಮಾಡುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

ರಿಯಾದ್ ವಿಮಾನ ನಿಲ್ದಾಣದ ಮೇಲೆ ದಾಳಿ: ರಿಯಾದ್ ಗೆ ತೆರಳಬೇಕಿದ್ದ ಭಾರತೀಯ ವಿಮಾನಗಳು ರದ್ದು

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!