ರೆಡ್ ಕಾರ್ಪೆಟ್ ಗೆ ಕಾಲಿಡುವ ಮುನ್ನ ಐಶ್ವರ್ಯಾ ಸ್ಟ್ರಾಪ್ಲೆಸ್ ಗೌನ್ ತೊಟ್ಟಿದ್ದರು. ಗೌನ್ ನಲ್ಲಿ ವಿವಿಧ ಬಣ್ಣದ ಪ್ರಿಂಟೆಂಡ್ ಅಂಬ್ರಾಯಿಡರಿ ಮೆರುಗು ನೀಡಿತ್ತು.
ಸೂರ್ಯನ ಬಿಸಿಲಿಗೆ ಮೈಯೊಡ್ಡಿ ನಿಂತ ಐಶ್ವರ್ಯಾ.
ಕ್ಯಾನೆ ಚಿತ್ರೋತ್ಸವದಲ್ಲಿ ಐಶ್ವರ್ಯಾ ವರ್ಷದಿಂದ ವರ್ಷಕ್ಕೆ ಮತ್ತಷ್ಟು ಕಂಗೊಳಿಸುತ್ತಾರೆ.
Advertisement
Advertisement
ಮೊದಲ ದಿನದ ಗೌನ್ ನಲ್ಲಿ ಸಮುದ್ರ ತೀರದಲ್ಲಿ ಒಂದು ನೋಟ.
ಇದು ಐಶ್ವರ್ಯಾ ಮೊದಲ ದಿನ ತೊಟ್ಟ ಉಡುಗೆ. ಹಸಿರು ಬಣ್ಣದ ವಿವಿಧ ಬಣ್ಣಗಳ ಹೂವಿನಿಂದ ವಿನ್ಯಾಸಗೊಳಿಸಿದ ಗೌನ್ ನಲ್ಲಿ ಕಂಗೊಳಿಸಿದರು.
ಇದಕ್ಕೆ ಹೊಂದುವಂತೆ ಫೆರ್ರಗಮೊ ಹೀಲ್ಸ್ ಧರಿಸಿದ್ದರು.ಕೆಂಪು ಹಾಸಿಗೆ ಮೇಲೆ ಮುಗುಳುನಗುತ್ತಾ ನಡೆದುಕೊಂಡು ಹೋದ ಐಶ್ವರ್ಯಾ ಕ್ಯಾಮರಾಗಳಿಗೆ ವಿವಿಧ ಭಂಗಿಗಳಲ್ಲಿ ಫೋಸ್ ಕೊಟ್ಟರು.
ಏ ದಿಲ್ ಹೆ ಮುಶ್ಕಿಲ್ ನಟಿ ತೋಳಿಲ್ಲದ ಪೌಡರ್ ನೀಲಿ ಬಣ್ಣದ ಬಾಲ್ ಗೌನ್ ನ್ನು ತೊಟ್ಟು ಸಿಂಡ್ರೆಲ್ಲಾ ಥರ ಮಿಂಚುತ್ತಿದ್ದರು. ಇದನ್ನು ವಿನ್ಯಾಸಗೊಳಿಸಿದ್ದು ಮೈಕೆಲ್ ಸಿಂಕೊ.
ಈ ಫೋಟೋಗೆ ಲೊ ಒರಿಯಲ್ ಸ್ವರ್ಗ ಎಂದು ಶೀರ್ಷಿಕೆ ನೀಡಿದ್ದು, ನಾವು ಒಪ್ಪಲು ಸಾಧ್ಯವಿಲ್ಲವೇ ಎಂದು ಕೇಳಿದೆ.
ಮಾಜಿ ವಿಶ್ವ ಸುಂದರಿ ಐಶ್ವರ್ಯಾ ಮೊದಲ ಸಲ ಕ್ಯಾನ್ಸೆ ಫಿಲ್ಮ್ ಫೆಸ್ಟಿವಲ್ ನಲ್ಲಿ ಭಾಗವಹಿಸಿದ್ದು 2002ರಲ್ಲಿ.
ಲೊ ಒರಿಯಲ್ ಪ್ಯಾರಿಸ್ ನ ಬ್ರಾಂಡ್ ಅಂಬಾಸಿಡರ್ ಆಗಿರುವ ಐಶ್ವರ್ಯಾ, ರೆಡ್ ಕಾರ್ಪೆಟ್ ನಲ್ಲಿ ವಿವಿಧ ಬಗೆಯ ಗೌನ್ ತೊಟ್ಟು ವಿವಿಧ ಭಂಗಿಯಲ್ಲಿ ಫೋಸ್ ಕೊಟ್ಟ ಫೋಟೋಗಳನ್ನು ಟ್ವಿಟ್ಟರ್ ನಲ್ಲಿ ಸರಣಿಯಾಗಿ ಅಪ್ ಲೋಡ್ ಮಾಡಿದೆ.
ಫ್ರಾನ್ಸ್ ನ ಕ್ಯಾನೆಯಲ್ಲಿ 70ನೇ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವ ನಡೆಯುತ್ತಿದ್ದು, ಬಾಲಿವುಡ್ ಸುಂದರಿ ಐಶ್ವರ್ಯಾ ರೈ ಸತತ 15ನೇ ವರ್ಷ ಭಾಗವಹಿಸುವ ಮೂಲಕ ಸುದ್ದಿಯಾಗಿದ್ದಾರೆ.
ಸಂಪೂರ್ಣ ಸೊಬಗು ಮತ್ತು ಶೈಲಿಯಿಂದ ಕ್ಯಾನೆ ಚಲನ ಚಿತ್ರೋತ್ಸವದಲ್ಲಿ ಐಶ್ವರ್ಯಾ ರೈ ಮಿಂಚಿದರು.