ಬಾಲಿವುಡ್ ನಲ್ಲಿ ನಟಿಯರು ಕೇವಲ ಮನರಂಜನೆಗೆ ಮತ್ತು ಮೆರುಗು ನೀಡಲು ಎಂದು ಭಾವಿಸುತ್ತಿದ್ದ ಕಾಲದಲ್ಲಿ ನಟನೆಯ ಮೂಲಕ ಸಾಮರ್ಥ್ಯ ತೋರಿಸಿ ಸಾಬೀತುಪಡಿಸಿದ ದಿಟ್ಟೆ.
ಆಕೆ ನಟಿಸಿದರು, ಡ್ಯಾನ್ಸ್ ಮಾಡಿದರು, ಬೆಳೆದರು, ಬೆಳ್ಳಿ ತೆರೆಯನ್ನು ಆಳಿದರು. ಸಾದ್ಮಾ, ಚಾಂದಿನಿ, ಕ್ಷಣ ಕ್ಷಣಂ, ಗೋವಿಂದ ಗೋವಿಂದ, ದೇವರಾಗಮ್ ಚಿತ್ರಗಳನ್ನು ಮರೆಯಲು ಸಾಧ್ಯವಿಲ್ಲ, ಈ ಚಿತ್ರಗಳನ್ನು ಇಂದಿಗೂ ಜನರು ಶ್ರೀದೇವಿಗಾಗಿ ನೋಡುವವರಿದ್ದಾರೆ. ಚಿತ್ರಗಳಲ್ಲಿ ಅಮಿತಾಬ್ ಬಚ್ಚನ್, ಕಪೂರ್ ಗಳಿದ್ದರೂ ಸಹ ಶ್ರೀ
1977ರಲ್ಲಿ 16 ವಯತಿನಿಲ್ ಫಿಲ್ಮ್ ಫೇರ್ ವಿಶೇಷ ಪ್ರಶಸ್ತಿ ಗೆದ್ದ ಶ್ರೀದೇವಿಗೆ ಆಗ 14 ವರ್ಷ. ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಭಾರತಿರಾಜು ಅವರ ಚೊಚ್ಚಲ ನಿರ್ದೇಶನದ 16 ವಯತಿಲು ಚಿತ್ರದಲ್ಲಿ ನಟ ಕಮಲ್ ಹಾಸನ್ ಮತ್ತು ರಜನಿಕಾಂತ್ ಜೊತೆ ನಟಿಸಿದರು. ಮೂವರ ನಟನೆಗೆ ಸಹ ಬಹಳ ಪ್ರಶಂಸೆ ವ್ಯಕ್ತವಾಗಿದೆ.
Advertisement
Advertisement
1982ರಲ್ಲಿ ಜೆ ಮಹೇಂದ್ರನ್ ನಿರ್ದೇಶನದ ಮೀಂಡಮ್ ಕೊಕಿಲಾ ಚಿತ್ರಕ್ಕೆ 1982ರಲ್ಲಿ ಫಿಲ್ಮ್ ಫೇರ್ ಪ್ರಶಸ್ತಿ. ಆರಂಭದಲ್ಲಿ ನಟಿ ರೇಖಾ ಪಾಲಾಗಿದ್ದ ಚಿತ್ರ ಕೊನೆ ಕ್ಷಣದಲ್ಲಿ ಇವರಿಗೆ ಬಂತು.
1991ರಲ್ಲಿ ರೇಖಾ ನಟಿಸಿದ್ದ ಮತ್ತೊಂದು ಚಿತ್ರ ಕ್ಷಣ ಕ್ಷಣಂ ಬಿಡುಗಡೆಯಾಯಿತು. ತೆಲುಗಿನಲ್ಲಿ ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಕ್ಷಣ ಕ್ಷಣಂನಲ್ಲಿ ಪತ್ರಕರ್ತೆಯಾಗಿ ರೇಖಾ ನಟಿಸಿದ್ದರು. ಕಳ್ಳ ಚಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದು ವೆಂಕಟೇಶ್, ಶ್ರೀದೇವಿ ನಟನೆಯನ್ನು ಮರೆಯಲು ಸಾಧ್ಯವಿಲ್ಲ.
1990ರಲ್ಲಿ ಪಂಕಜ್ ಪರಶರ್ ನಿರ್ದೇಶನದ ಚಾಲ್ ಬಾಜ್ ಚಿತ್ರಕ್ಕೆ ಫಿಲ್ಮ್ ಫೇರ್ ಉತ್ತಮ ನಟಿ ಪ್ರಶಸ್ತಿ ಸಿಕ್ಕಿತ್ತು. ಹೇಮ ಮಾಲಿನಿ ನಟಿಸಿದ್ದ ಸೀತಾ ಔರ್ ಗೀತಾ ಚಿತ್ರದ ರಿಮೇಕ್ ಇದು. ಶ್ರೀದೇವಿ, ರಜನಿಕಾಂತ್ ಮತ್ತು ಸನ್ನಿ ಡಿಯೊಲ್ ಮುಖ್ಯ ಪಾತ್ರದಲ್ಲಿದ್ದರು. ಸೂಪರ್ ಹಿಟ್ ಚಿತ್ರವಾದ ಇದರಲ್ಲಿ ಶ್ರೀದೇವಿಯ ನಟನೆ ಅದ
ಶ್ರೀದೇವಿಯವರ ಮತ್ತೊಂದು ಮರೆಯಲಾಗದ ಚಿತ್ರ ಲಮ್ಹೆ. 1992ರಲ್ಲಿ ತೆರೆಕಂಡ ಲಮ್ಹೆಗೆ ಶ್ರೀದೇವಿಗೆ ಫಿಲ್ಮ್ ಫೇರ್ ಪ್ರಶಸ್ತಿ ಬಂದಿತ್ತು. ಯಶ್ ಚೋಪ್ರಾ ನಿರ್ಮಸಿದ್ದರು. ಅನಿಲ್ ಕಪೂರ್ ನಾಯಕ.