ಸಿನಿಮಾ

ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ದೀಪಿಕಾ-ರಣವೀರ್  

Sumana Upadhyaya
ತಿರುಪತಿ ಸನ್ನಿಧಾನದಲ್ಲಿ ದೇವರ ದರ್ಶನ ಪಡೆದು ಹೊರಬಂದ ನಂತರದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಹರಿದಾಡುತ್ತಿದೆ.
ತಿರುಪತಿ ಸನ್ನಿಧಾನದಲ್ಲಿ ದೇವರ ದರ್ಶನ ಪಡೆದು ಹೊರಬಂದ ನಂತರದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಹರಿದಾಡುತ್ತಿದೆ.
ದೇವಾಲಯ ದರ್ಶನ ಪಡೆದು ಹೊರಬಂದ ದಂಪತಿ 'ನಮ್ಮ ಮೊದಲ ವಿವಾಹ ವಾರ್ಷಿಕೋತ್ಸವ, ತಿರುಪತಿ ದೇವರ ದರ್ಶನ ಪಡೆದು ಧನ್ಯರಾಗಿದ್ದೇವೆ' ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ದೇಗುಲದ ಹೊರಗೆ ದೀಪಿಕಾ-ರಣವೀರ್
ಅಭಿಮಾನಿಗಳಿಗೆ ಮೊದಲ ವಿವಾಹ ವಾರ್ಷಿಕೋತ್ಸವದ ಫೋಟೋ ಬಿಡುಗಡೆ ಮಾಡಿದ ಜೋಡಿ
ಅಪ್ಪಟ ಭಾರತೀಯ ಸಂಪ್ರದಾಯದ ದಿರಿಸನ್ನು ಆಧುನಿಕ ಸ್ಪರ್ಶದೊಂದಿಗೆ ಧರಿಸಿದ್ದ ದೀಪಿಕಾ-ರಣವೀರ್ ಉಡುಗೆ ತೊಡುಗೆ ನೋಡುಗರ ಮನಸೂರೆಗೊಳಿಸಿದೆ. ಈಗಷ್ಟೇ ಮದುವೆ ಮುಗಿಸಿಕೊಂಡು ಬಂದ ದಂಪತಿಯಂತೆ ಕಂಗೊಳಿಸುತ್ತಿದ್ದರು.
ತಿರುಪತಿಗೆ ಆಗಮಿಸಿದ್ದ ಭಕ್ತರು ಈ ಜೋಡಿಯನ್ನು ನೋಡಿ ಕಣ್ತುಂಬಿಕೊಂಡು ಫೋಟೋಗಳನ್ನು ಕ್ಲಿಕ್ಕಿಸಿಕೊಂಡರು.
ತಮ್ಮ ಕುಟುಂಬಸ್ಥರೊಂದಿಗೆ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್
2018ರ ನವೆಂಬರ್ 14ರಂದು ಬಾಲಿವುಡ್ ನ ಖ್ಯಾತ ತಾರಾ ಜೋಡಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಇಟಲಿಯ ಲೇಕ್ ಕೊಮೊದಲ್ಲಿ ಅದ್ದೂರಿಯಾಗಿ ವಿವಾಹವಾಗಿದ್ದರು.
ನಂತರ ದೀಪಿಕಾ ತವರುಮನೆ ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ಗಣ್ಯರಿಗೆ ಮತ್ತು ಆಪ್ತರಿಗೆ ಜೋಡಿ ಔತಣಕೂಟ ಏರ್ಪಡಿಸಿತ್ತು.
ವಿವಾಹ ನಂತರ ನಡೆದ ಔತಣಕೂಟದಲ್ಲಿ ದೀಪ್ ವೀರ್
SCROLL FOR NEXT