ದಕ್ಷಿಣ ಭಾರತದ ಖ್ಯಾತ ನಟ, ಸೂಪರ್ ಸ್ಟಾರ್ ರಜನಿಕಾಂತ್ ಅವರು 70 ವಸಂತಗಳನ್ನು ಕಳೆದಿದ್ದಾರೆ. ಈ ಸಂದರ್ಭದಲ್ಲಿ ಚಿತ್ರರಂಗದವರು, ರಾಜಕೀಯ ನಾಯಕರು ಸೇರಿದಂತೆ ಅವರ ಹಿತೈಷಿಗಳು, ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ. ಇಂದು ಬೆಳಗ್ಗೆಯೇ ಶುಭ ಕೋರಿದ ಪ್ರಧಾನಿ ನರೇಂದ್ರ ಮೋದಿ ದೀರ್ಘ ವರ್ಷದವರೆಗೆ ಆರೋಗ್ಯದಿಂದ ಬಾಳಿ
ಮಹಾರಾಷ್ಟ್ರ ಮೂಲದ ಬೆಂಗಳೂರಿಗೆ ವಲಸೆ ಬಂದು ನೆಲೆಸಿದ್ದ ಮರಾಠಿ ಕುಟುಂಬದ ಜಿಜಾ ಬಾಯ್ ಮತ್ತು ರಾಮೋಜಿ ರಾವ್ ಗಾಯಕ್ವಾಡ್ ದಂಪತಿಗೆ ಮಗನಾಗಿ 1950ರ ಡಿಸೆಂಬರ್ 12ರಂದು ರಜನಿಕಾಂತ್ ಜನಿಸಿದರು. ಅವರ ಮೂಲ ಹೆಸರು ಶಿವಾಜಿ ರಾವ್ ಗಾಯಕ್ ವಾಡ್.ತಮಿಳು ನಾಡಿನ ಚಿತ್ರರಂಗದಲ್ಲಿ ಮೇರು ಕಲಾವಿದನಾಗಿ ಗುರುತಿಸಿಕೊಂಡಿರುವ ರಜನಿಕಾಂತ್ ತಮ್ಮ ಸಿನೆಮಾ ವೃತ್ತಿ ಆರಂಭಿಸಿದ್ದು ಕನ್ನಡದಲ್ಲಿ ಪೌರಾಣಿಕ ನಾಟಕವೊಂದರಲ್ಲಿ ದುರ್ಯೋಧನ ಪಾತ್ರದಲ್ಲಿ.ಕನ್ನಡದ ನಾಟಕದಲ್ಲಿ ಅವರ ಅಭಿನಯವನ್ನು ಆಗ ಗುರುತಿಸಿದವರು ತಮಿಳು ನಾಡಿನ ಖ್ಯಾತ ನಿರ್ದೇಶಕ ಕೆ ಬಾಲಚಂದರ್. ಅವರು ಶಿವಾಜಿ ರಾವ್ ರನ್ನು ಹತ್ತಿರಕ್ಕೆ ಕರೆದು ತಮಿಳು ಭಾಷೆ ಕಲಿಯುವಂತೆ ಸಲಹೆ ನೀಡಿದರು. ಅದನ್ನು ರಜನಿಕಾಂತ್ ಶಿರಸಾ ಪಾಲಿಸಿದರು.ನಂತರ ಸಿನೆಮಾದಲ್ಲಿ ಅವಕಾಶ ಸಿಕ್ಕಿತು, ಆರಂಭಗಳಲ್ಲಿ ನಟಿಸಿದ್ದು ನೆಗೆಟಿವ್ ಪಾತ್ರಗಳಲ್ಲಿ. ಹೀರೋ ಆಗಿ ಬಡ್ತಿ ಪಡೆದದ್ದು ಎಸ್ ಪಿ ಮುತ್ತುರಾಮನ್ ಅವರ ಭುವನ ಒರು ಕೆಲ್ವಿಕ್ಕುರಿ ಚಿತ್ರದಲ್ಲಿ.ಮೂಂಡ್ರು ಮೂಗಮ್ ಚಿತ್ರದಲ್ಲಿ ರಜನಿಕಾಂತ್ ತ್ರಿಪಾತ್ರದಲ್ಲಿ ನಟಿಸಿದರು. ಅದಕ್ಕೆ ತಮಿಳು ನಾಡು ಸರ್ಕಾರದಿಂದ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿತು.ರಜನಿಕಾಂತ್ ಅವರ ಮೊದಲ ಅತ್ಯಂತ ಯಶಸ್ವಿ ಚಿತ್ರ ಬಿಲ್ಲ, ಅದು ಹಿಂದಿಯಲ್ಲಿ ಅಮಿತಾಬ್ ಬಚ್ಚನ್ ಅವರು ಅಭಿನಯಿಸಿದ ಡಾನ್ ಚಿತ್ರದ ರಿಮೇಕ್.ರಜನಿಕಾಂತ್ ಮತ್ತು ಅವರ ಪತ್ನಿ ಲತಾ ರಂಗಚಾರಿ ಅವರದ್ದು ಪ್ರೇಮ ವಿವಾಹ. ಅವರು ಮೊದಲು ಭೇಟಿ ಮಾಡಿದ್ದು ಲತಾ ರಂಗಚಾರಿಯವರು ತಮ್ಮ ಕಾಲೇಜು ಮ್ಯಾಗಜೀನ್ ಗೆ ಸಂದರ್ಶನಕ್ಕೆ ಬಂದಾಗ. ರಜನಿಕಾಂತ್ ಅವರನ್ನು ಸಂದರ್ಶನ ಮಾಡಲು ಬಂದ ಲತಾ ನಂತರ ಪರಿಚಯವಾಗಿ ಸ್ನೇಹ ಬೆಳೆದು ಪ್ರೀತಿಗೆ ತಿರುಗಿತು. 1981ರಲ್ಲಿ ವಿವಾಹವಾದರು. ದಂ1988ರಲ್ಲಿ ರಜನಿಕಾಂತ್ ಇಂಗ್ಲಿಷ್ ನ ಆಕ್ಷನ್ ಮೂವಿ ಬ್ಲಡ್ ಸ್ಟೋನ್ ನಲ್ಲಿ ನಟಿಸಿದ್ದರು.ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟ ರಜನಿಕಾಂತ್ ಅವರು. 2014ರಲ್ಲಿ ಅವರು ಟ್ವಿಟ್ಟರ್ ಅಕೌಂಟ್ ತೆರೆದ ನಂತರ ಕೇವಲ 24 ಗಂಟೆಗಳಲ್ಲಿ 2,10,000 ಫಾಲೋವರ್ಸ್ ಹೊಂದಿದರು. ಇದು ಅವರ ಜನಪ್ರಿಯತೆಯನ್ನು ತೋರಿಸುತ್ತದೆ.Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics