ಇತ್ತೀಚಿಗೆ ಚಂಢೀಗಢದಲ್ಲಿ ರಾಜ್ ಕುಮಾರ್ ರಾವ್ ಜೊತೆಗಿನ ಮುಂದಿನ ಚಿತ್ರದ ಚಿತ್ರೀಕರಣ ಮುಗಿಸಿಕೊಂಡು ಮುಂಬೈಗೆ ವಾಪಸ್ಸಾದ 30 ವರ್ಷದ ಬೆಡಗಿ ಕೃತಿ ಸನೋನ್ಕಳೆದ ವಾರ ಕೋವಿಡ್-19 ಪಾಸಿಟಿವ್ ಕಂಡುಬಂದಿದ್ದರಿಂದ ಹೋಮ್ ಕ್ವಾರಂಟೈನ್ ನಲ್ಲಿದ್ದರು.ಟ್ವೀಟ್ ಮಾಡಿರುವ ಕೃತಿ ಸನೋನ್, ತನಗೆ ಚಿಕಿತ್ಸೆ ನೀಡಿದ ವೈದ್ಯರು, ಬೃಹನ್ ಮುಂಬೈ ಮಹಾನಗರ ಪಾಲಿಕೆ ಹಾಗೂ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.ಎಲ್ಲರಿಗೂ ಸಂತೋಷದ ಮಾಹಿತಿ ನೀಡುತ್ತಿದ್ದೇನೆ. ಕೊನೆಗೂ ಕೋವಿಡ್-19 ನೆಗಟಿವ್ ಬಂದಿದೆ ಎಂದು ಫೋಸ್ಟ್ ಮಾಡಿದ್ದಾರೆ.