ಕನ್ನಡದ ರಾಜಕುಮಾರ ಚಿತ್ರದಲ್ಲಿ ತಮಿಳು ನಟ ಶರತ್ ಕುಮಾರ್ ಅಭಿನಯಿಸಿದ್ದರು. ಅವರ ಪುತ್ರಿ ವರಲಕ್ಷ್ಮೀ ಸುದೀಪ್ ಅಭಿನಯದ ಮಾಣಿಕ್ಯ ಚಿತ್ರದಲ್ಲಿ ನಟಿಸಿ ಕನ್ನಡಿಗರಿಗೆ ಚಿರಪರಿಚಿತರಾಗಿದ್ದರು.
ಇನ್ನು ನಟಿ ವರಲಕ್ಷ್ಮೀ ಇದೀಗ ಕಾಸ್ಟಿಂಗ್ ಕೌಚ್ ಬಗ್ಗೆ ಮೌನ ಮುರಿದಿದ್ದಾರೆ.ಹೌದು ನಾನು, ಖ್ಯಾತ ನಟ ಹಾಗೂ ರಾಜಕಾರಣಿಯ ಪುತ್ರಿ ಎಂದು ಗೊತ್ತಿದ್ದೂ ಹಲವಾರು ಮಂದಿ ನಿರ್ಮಾಪಕರು ಹಾಗೂ ಚಿತ್ರರಂಗಕ್ಕೆ ಸಂಬಂಧಿಸಿದವರು ಮಂಚಕ್ಕೆ ಕರೆದಿದ್ದರು ಎಂದು ಹೇಳಿದ್ದಾರೆ.ಸಂದರ್ಶನವೊಂದರಲ್ಲಿ ಮಾತನಾಡಿದ್ದ ವರಲಕ್ಷ್ಮೀ ಅವರು ಲೈಂಗಿಕ ಪರಭಕ್ಷಕರ ಬಗ್ಗೆ ಸುಮ್ಮನೆ ಇರಬಾರದು ಅವರ ಹೆಸರನ್ನು ಬಹಿರಂಗಪಡಿಸಬೇಕು. ನಾವು ಸುಮ್ಮನಿದ್ದಷ್ಟು ಅವರು ಹೆಚ್ಚು ಮಾಡುತ್ತಾರೆ ಎಂದು ಹೇಳಿದರು.ಈ ರೀತಿ ಮಾಡುವುದು ಸರಿಯಲ್ಲ. ನಮ್ಮನ್ನು ಬೇರೇ ಉದ್ದೇಶಕ್ಕಾಗಿ ಕೇಳಿದ ತಕ್ಷಣ ಅದನ್ನು ನಾವು ತಿರಸ್ಕರಿಸಬೇಕು ಎಂದು ಹೇಳಿದ್ದಾರೆ.ಕೆಲವೊಮ್ಮೆ ಅವಕಾಶಗಳಿಗಾಗಿ ಕೆಲ ಮಹಿಳೆಯರು ಕಾಸ್ಟಿಂಗ್ ಕೌಚ್ ಗೆ ಓಕೆ ಎನ್ನುತ್ತಾರೆ. ಬಳಿಕ ಅವಕಾಶಗಳು ಸಿಗದೆ ಇದ್ದಾಗ ಕಾಸ್ಟಿಂಗ್ ಕೌಚ್ ಬಗ್ಗೆ ದೂರು ನೀಡುತ್ತಾರೆ.ವರಲಕ್ಷ್ಮೀವರಲಕ್ಷ್ಮೀವರಲಕ್ಷ್ಮೀವರಲಕ್ಷ್ಮೀವರಲಕ್ಷ್ಮೀವರಲಕ್ಷ್ಮೀವರಲಕ್ಷ್ಮೀವರಲಕ್ಷ್ಮೀವರಲಕ್ಷ್ಮೀವರಲಕ್ಷ್ಮೀFollow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics