ಕಿರಿಕ್ ಪಾರ್ಟಿ ಮೂಲಕ ಕರ್ನಾಟಕದ ಕ್ರಶ್ ಆದ ರಶ್ಮಿಕಾ ಮಂದಣ್ಣ ಅವರು ಇದೀಗ ಟಾಲಿವುಡ್ ನಲ್ಲಿ ಭರ್ಜರಿ ಬೇಡಿಕೆಯ ನಟಿಯಾಗಿದ್ದಾರೆ.
ಚಿತ್ರರಂಗಕ್ಕೆ ಬರುವ ಮೊದಲು ನಟ-ನಟಿಯರು ಹೆಸರು ಬದಲಾಯಿಸಿಕೊಳ್ಳುವುದು ಸಾಮಾನ್ಯ ಸಂಗತಿ. ಆದರೆ ಇಲ್ಲಿ ರಶ್ಮಿಕಾ ಮಂದಣ್ಣ ಅವರು ಸ್ಟಾರ್ ನಟಿಯ ಪಟ್ಟ ಸಿಕ್ಕ ನಂತರ ಹೆಸರು ಬದಲಾಯಿಸಿಕೊಳ್ಳಲು ಇಚ್ಛಿಸಿದ್ದಾರೆ.ಇತ್ತೀಚೆಗೆ ಟ್ವೀಟರ್ ನಲ್ಲಿ ಅಭಿಮಾನಿಗಳ ಜೊತೆ ಚರ್ಚೆ ಮಾಡಿದ್ದ ರಶ್ಮಿಕಾ ಅವರು ಒಂದು ವೇಳೆ ನಾನು ಹೆಸರು ಬದಲಾಯಿಸಿಕೊಳ್ಳುವುದಾದರೆ ನೀವು ಯಾವ ಹೆಸರು ಸೂಚಿಸುತ್ತೀರಿ? ಎಂದು ಪ್ರಶ್ನಿಸಿದ್ದರು. ಅದಕ್ಕೆ ಸಾವಿರಾರು ಅಭಿಮಾನಿಗಳು ಕಮೆಂಟ್ ಮಾಡಿದ್ದರು.ಹಲವು ಬೇರೆ ಬೇರೆ ಹೆಸರುಗಳನ್ನು ಸೂಚಿಸಿದ್ದರೂ ಕೆಲವರು ಇದೇ ಹೆಸರು ಚನ್ನಾಗಿದೆ ಬಿಡಿ ಎಂದು ಹೇಳಿದ್ದಾರೆ.ಹಿಂದೊಮ್ಮೆ ತೆಲುಗಿನ ಮೆಗಾಸ್ಟಾರ್ ಚಿರಂಜೀವಿ ಅವರು ರಶ್ಮಿಕಾ ಮಂದಣ್ಣ ಅವರನ್ನು ವೇದಿಕೆ ಮೇಲೆ ರಶ್ಮಿಕಾ ಮಂಡುಕಎಂದು ಕರೆದಿದ್ದರು. ಇದು ಅಂದು ರಶ್ಮಿಕಾರನ್ನು ಇರಿಸು ಮುರಿಸಿಗೆ ಕಾರಣವಾಗಿತ್ತು.ರಶ್ಮಿಕಾ ಮಂದಣ್ಣರಶ್ಮಿಕಾ ಮಂದಣ್ಣರಶ್ಮಿಕಾ ಮಂದಣ್ಣರಶ್ಮಿಕಾ ಮಂದಣ್ಣರಶ್ಮಿಕಾ ಮಂದಣ್ಣರಶ್ಮಿಕಾ ಮಂದಣ್ಣರಶ್ಮಿಕಾ ಮಂದಣ್ಣರಶ್ಮಿಕಾ ಮಂದಣ್ಣFollow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics