ಮಗಧೀರನ ಬೆಡಗಿ ಕಾಜಲ್ ಅಗರವಾಲ್ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಲೆ ಇತ್ತು. ಆದರೆ ಇಂದು ಅಧಿಕೃತವಾಗಿ ನಟಿಯೇ ತಮ್ಮ ಭಾವಿ ಪತಿಯ ಫೋಟೋವನ್ನು ಶೇರ್ ಮಾಡಿದ್ದಾರೆ.
ಕಾಜಲ್ ಅಗರವಾಲ್ ಭಾವಿ ಪತಿ ಜೊತೆಗೆ ತೆಗೆಸಿಕೊಂಡಿರುವ ಫೋಟೋವನ್ನು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.ದಸರ ಹಬ್ಬದ ಶುಭಾಶಯ ಕೋರಿರುವ ಕಾಜಲ್ ಅಗರವಾಲ್ ಅವರು ಭಾವಿ ಪತಿ ಗೌತಮ್ ಜೊತೆಗಿನ ಫೋಟೋವನ್ನು ಶೇರ್ ಮಾಡಿದ್ದಾರೆ.ಈ ಹಿಂದೆ ಕಾಜಲ್ ಉಂಗುರವನ್ನು ತೋರಿಸುತ್ತಿರುವ ಕೈ ಬೆರಳಿನ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದರು. ಆ ಮೂಲಕ ತಾವು ನಿಶ್ಚಿತಾರ್ಥ ಮಾಡಿಕೊಂಡಿರುವುದಾಗಿ ಘೋಷಿಸಿದ್ದರು.ಇದೇ ಅಕ್ಟೋಬರ್ 30ರಂದು ಗೌತಮ್ ಕಿಚ್ಲು ಅವರನ್ನು ಮುಂಬೈನಲ್ಲಿ ಮದುವೆಯಾಗುತ್ತಿರುವುದಾಗಿ ಮದುವೆಗೆ ಕೆಲ ಕುಟುಂಬಸ್ಥರು ಮತ್ತು ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿದೆ ಎಂದು ಕಾಜಲ್ ಬರೆದುಕೊಂಡಿದ್ದರು.ಕಾಜಲ್ ಅಗರವಾಲ್ಕಾಜಲ್ ಅಗರವಾಲ್ಕಾಜಲ್ ಅಗರವಾಲ್ಕಾಜಲ್ ಅಗರವಾಲ್ಕಾಜಲ್ ಅಗರವಾಲ್ಕಾಜಲ್ ಅಗರವಾಲ್ಕಾಜಲ್ ಅಗರವಾಲ್ಕಾಜಲ್ ಅಗರವಾಲ್ಕಾಜಲ್ ಅಗರವಾಲ್ಕಾಜಲ್ ಅಗರವಾಲ್ಗೌತಮ್ ಕಿಚ್ಲು-ಕಾಜಲ್ ಅಗರವಾಲ್