ಸ್ಯಾಂಡಲ್ವುಡ್ ಡ್ರಗ್ಸ್ ನಂಟು ಪ್ರಕರಣದಲ್ಲಿ ನಟಿ ಐಂದ್ರಿತಾ ರೇ ಹೆಸರು ಕೇಳಿಬಂದಿದೆ. ಈ ಸಂಬಂಧ ಸಿಸಿಬಿ ಸಹ ಐಂದ್ರಿತಾ-ದಿಗಂತ್ ದಂಪತಿಗೆ ನೋಟಿಸ್ ನೀಡಿದೆ.
ಡ್ರಗ್ಸ್ ಪ್ರಕರಣದಲ್ಲಿ ಶೇಖ್ ಫಾಝಿಲ್ ಹೆಸರು ಹೆಚ್ಚಾಗಿ ಕೇಳಿಬರುತ್ತಿದೆ. ಇದೇ ಆರೋಪಿ ಜೊತೆ ಐಂದ್ರಿತಾ ರೇ ಅವರು ಶ್ರೀಲಂಕಾದಲ್ಲಿ ಫಾಸಿಲ್ ಆಯೋಜಿಸಿದ್ದ ಬಾಲೀಸ್ ಕ್ಯಾಸಿನೋ ಪಾರ್ಟಿಯಲ್ಲಿ ಐಂದ್ರಿತಾ ರೇ ಭಾಗವಹಿಸಿದ್ದರು.ಇನ್ನು ಬೆಂಗಳೂರಿನ ಸ್ಟಾರ್ ಹೋಟೆಲ್ ವೊಂದರಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲೂ ಐಂದ್ರಿತಾ ಮತ್ತು ಫಾಝಿಲ್ ಭೇಟಿಯಾಗಿದ್ದರು. ಈ ವೇಳೆ ಬಾಲಿವುಡ್ ನಟ ಸೋಹೇಲ್ ಖಾನ್ ಕೂಡ ಇದ್ದರು.ಈ ಫೋಟೋಗಳೆ ಇದೀಗ ಐಂದ್ರಿತಾ ರೇಗೆ ಮುಳುವಾಗಿದೆ ಎಂದು ಹೇಳಲಾಗುತ್ತಿದೆ.ಇನ್ನು ಶೇಖ್ ಫಾಝಿಲ್ ಜೊತೆಗಿನ ನಂಟು ಸಂಬಂಧ ಪ್ರತಿಕ್ರಿಯಿಸಿದ್ದ ನಟಿ ಐಂದ್ರಿತಾ ಅವರು ನನಗೂ ಅವರಿಗೆ ವೈಯಕ್ತಿಕ ಪರಿಚಯವಿಲ್ಲ. ಚಿತ್ರ ಪ್ರಮೋಷನ್ ಗಾಗಿ ಶ್ರೀಲಂಕಾಗೆ ಹೋಗಿದ್ದೆ ಆಗ ಅವರ ಜೊತೆ ಫೋಟೋ ತೆಗೆಸಿಕೊಂಡಿದ್ದಾಗಿ ಹೇಳಿದ್ದಾರೆ.ಐಂದ್ರಿತಾ ರೇಐಂದ್ರಿತಾ ರೇಐಂದ್ರಿತಾ ರೇಐಂದ್ರಿತಾ ರೇಐಂದ್ರಿತಾ ರೇಐಂದ್ರಿತಾ ರೇಐಂದ್ರಿತಾ ರೇಐಂದ್ರಿತಾ ರೇಐಂದ್ರಿತಾ ರೇಐಂದ್ರಿತಾ ರೇಐಂದ್ರಿತಾ ರೇ-ದಿಗಂತ್ಐಂದ್ರಿತಾ ರೇ-ದಿಗಂತ್