ವಯಸ್ಕ ವೀಡಿಯೊಗಳನ್ನು ಚಿತ್ರೀಕರಿಸಿದ ಮತ್ತು ಈ ವೀಡಿಯೊವನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದ ಆರೋಪದ ಮೇಲೆ ಮುಂಬೈ ಪೊಲೀಸರು ನಟಿ ಗೆಹ್ನಾ ವಸಿಷ್ಠ್ ರನ್ನು ಬಂಧಿಸಿದ್ದಾರೆ.
ಮುಂಬೈ ಕ್ರೈಂ ಬ್ರಾಂಚ್ ನ ಪ್ರಾಪರ್ಟಿ ಸೆಲ್ ಅಧಿಕಾರಿಗಳು ಇಂದು ಗೆಹನಾ ವಸಿಷ್ಠ್ ರನ್ನು ಬಂಧಿಸಿದ್ದು, ಮುಂಬೈ ನ್ಯಾಯಾಲಯದಲ್ಲಿ ಹಾಜರುಪಡಿಸಲಿದ್ದಾರೆ.ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಈ ಬಗ್ಗೆ ಮಾಹಿತಿ ನೀಡಿದ್ದು, ಗೆಹನಾ ವಸಿಷ್ಟ್ 87 ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸಿದ್ದು, ಅವುಗಳನ್ನು ತಮ್ಮ ವೆಬ್‌ಸೈಟ್ ನಲ್ಲಿ ಪೋಸ್ಟ್ ಮಾಡಿದ್ದಾರೆ.ಈ ವಿಡಿಯೋಗಳನ್ನು ವೀಕ್ಷಿಸಲು ಚಂದಾದಾರಿಕೆ ಅಗತ್ಯವಿದ್ದು, ಇದಕ್ಕಾಗಿ 2000 ರೂ ಚಂದಾದಾರ ವೆಚ್ಚ ಪಾವತಿ ಮಾಡಬೇಕಿದೆ. ಈಗಾಗಲೇ ಹಲವರು 2000 ರೂ ಪಾವತಿ ಮಾಜಿ ಚಂದಾದಾರಿಕೆ ಪಡೆದಿದ್ದು, ವಿಡಿಯೋಗಳನ್ನು ವೀಕ್ಷಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.ತಮ್ಮನ್ನು ನೀಲಿ ಚಿತ್ರದಲ್ಲಿ ನಟಿಸುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಆರೋಪಿಸಿ ಮೂವರು ಪೊಲೀಸ್ ದೂರು ನೀಡಿದ ಬಳಿಕ ಪೊಲೀಸರು ದಾಳಿ ಮಾಡಿದ ಬಳಿಕ ಗೆಹನಾ ವಸಿಷ್ಠ್ ಅವರ ನೀಲಿ ಚಿತ್ರ ತಯಾರಿಕೆ ರಾಕೆಟ್ ಪ್ರಕರಣ ಬೆಳಕಿಗೆ ಬಂದಿದೆ.ಯಾರು ಈ ಗೆಹನಾ ವಸಿಷ್ಠ್? 16 ಜೂನ್ 1988 ರಂದು ಜನಿಸಿದ ಗೆಹನಾ ವಸಿಷ್ಠ್ ರ ಮೂಲ ಹೆಸರು ವಂದನಾ ತಿವಾರಿ ಎಂದು. ಗೆಹನಾ ವಸಿಷ್ಠ್ ಖ್ಯಾತ ಕಿರುತೆರೆ ನಟಿ, ರೂಪದರ್ಶಿ ಮತ್ತು ದೂರದರ್ಶನ ನಿರೂಪಕಿಯಾಗಿದ್ದಾರೆ. ಎಂಟಿವಿ ಯ ಟ್ರೂ ಲೈಫ್ ಎಂಬ ಕಾರ್ಯಕ್ರಮದ ವಿಜೆ ಆಗಿದ್ದರು.ರೂಪದರ್ಶಿಯಾಗಿ ಹಲವು ಬ್ರಾಂಡ್ ಗಳಿಗೆ ಕೆಲಸ ಮಾಡಿರುವ ಗೆಹನಾ ವಸಿಷ್ಠ್ 'ಮಿಸ್ ಏಷ್ಯಾ ಬಿಕಿನಿ' ಕಿರೀಟ ಧರಿಸಿ ವ್ಯಾಪಕ ಕೀರ್ತಿಗೆ ಪಾತ್ರರಾಗಿದ್ದರು. ಆನ್ ಲೈನ್ ಸ್ಪರ್ಧೆಯಲ್ಲಿ ಅತೀ ಹೆಚ್ಚು ಮತಗಳನ್ನು ಪಡೆದಿದ್ದರು.ಕಳೆದ ವರ್ಷ ನವೆಂಬರ್‌ನಲ್ಲಿ, ಗೆಹನಾ ವಸಿಷ್ಠ್ ಗೆ ಹೃದಯಾಘಾತವಾಗಿತ್ತು, ನಂತರ ಅವರನ್ನು ಶೂಟಿಂಗ್ ಸಮಯದಲ್ಲೇ ಆಸ್ಪತ್ರೆಗೆ ಸೇರಿಸಬೇಕಾಯಿತು.ಆಲ್ಟ್ ಬಾಲಾಜಿಯ ವೆಬ್ ಸರಣಿ ಡರ್ಟಿ ಟಾಕ್‌ನಲ್ಲಿ ಗೆಹನಾ ವಸಿಷ್ಠ್ ತಮ್ಮ ಬಿಕಿನಿಯಿಂದಲೇ ಜನಪ್ರಿಯರಾಗಿದ್ದರು. ಗಂದೀ ಬಾತ್ ನ ಸೀಸನ್ 3 ರಲ್ಲಿಯೂ ಗೆಹನಾ ಕೆಲಸ ಮಾಡಿದ್ದಾರೆ.Gehana-Vasisth11ಅವರ ಜನಪ್ರಿಯತೆ ಎಷ್ಟಿತ್ತು ಎಂದರೆ ಗೆಹನಾ ವಸಿಷ್ಠ್ ತಮ್ಮದೇ ಮೊಬೈಲ್ ಆ್ಯಪ್ ಅನ್ನು ಕೂಡ ಪ್ರಾರಂಭಿಸಿದ್ದರು. ಅಲ್ಲಿ ಆಗಾಗ್ಗೇ ತಮ್ಮ ಅರೆನಗ್ನ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿದ್ದರು.Gehana-Vasisth13Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos