ಸಿನಿಮಾಕಿಶನ್ ನಟನೆಯ ಡಿಯರ್ ಕಣ್ಮಣಿ"ಗೆ ಕಿಚ್ಚ ಸುದೀಪ್ ಸಾಥ್
ಕಿಚ್ಚ ಸುದೀಪ್ ಗುಟ್ಟೆ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸೋಮವಾರ ಫೆ.15 ರಂದು ವಿಸ್ಮಯ ಫಿಲ್ಮ್ಸ್ನ ಹೊಸ ಚಿತ್ರ ಕಿಶನ್ ನಟನೆಯ ''ಡಿಯರ್ ಕಣ್ಮಣಿ"ಗೆ ಕ್ಲಾಪಿಂಗ್ ಮಾಡಿದರು.
Published On : 16 Feb 2021, 12:41 am
ಚಿತ್ರದ ಮೂಲಕ ಚಂದನವನಕ್ಕೆ ಮಹಿಳಾ ನಿರ್ದೇಶಕಿಯೊಬ್ಬರು ಪರಿಚಿತರಾಗಿದ್ದಾರೆ. ವಿಸ್ಮಯಾ ಗೌಡ ಈ ಚಿತ್ರಕ್ಕೆ ನಿರ್ಮಾಣ ಹಾಗೂ ನಿರ್ದೇಶನ ಮಾಡಲಿದ್ದಾರೆ.ಬಿಗ್ಬಾಸ್ ಖ್ಯಾತಿಯ ಕಿಶನ್ ಬೆಳಗಲಿ ಅವರು ಲವರ್ ಬಾಯ್ ಪಾತ್ರದ ಮೂಲಕ ಈ ಸಿನಿಮಾದಲ್ಲಿ ನಾಯಕ ನಟರಾಗಿ ಮಿಂಚಲಿದ್ದಾರೆ.ಕಿಶನ್ ಜೊತೆಗೆ ಕ್ರಿಕೆಟರ್ ಪ್ರವೀಣ್ ಕೂಡ ಮೊದಲ ಬಾರಿಗೆ ಹಿರಿತೆರೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷAdvertisement
Advertisement
ರೇಖಾದಾಸ್ ಅವರ ಮಗಳು ಸಾತ್ವಿಕಾ ಈ ಸಿನಿಮಾದ ನಾಯಕಿ.'ವಿಸ್ಮಯಾ ಹಾಗೂ ಅವರ ತಂಡ ತುಂಬಾ ಶ್ರಮವಹಿಸಿ ಕೆಲಸ ಮಾಡುತ್ತಿದೆ. ತಪ್ಪುಗಳನ್ನು ಮಾಡಲಿ, ಕಲಿತುಕೊಂಡು ಒಳ್ಳೆಯ ಸಿನಿಮಾ ಮಾಡಲಿ ಎಂದು ಹಾರೈಸುತ್ತೇನೆ'- ಸುದೀಪ್'ಮಡಿಕೇರಿ ಹಾಗೂ ಮೈಸೂರಿನಲ್ಲಿ ಸಿನಿಮಾ ಶೂಟಿಂಗ್ ಸದ್ಯದಲ್ಲೇ ಆರಂಭವಾಗಲಿದೆ'- ನಿರ್ದೇಶಕಿ ವಿಸ್ಮಯಾ ಗೌಡ