ದೇಶ

ಅಮೃತಸರದಿಂದ ಇರಾನ್‌ ರೈಲು ಅಪಘಾತದವರೆಗೂ: ದಶಕದ ಭೀಕರ ರೈಲು ದುರಂತಗಳ ಪಟ್ಟಿ ಇಲ್ಲಿದೆ!

Vishwanath S
ಪಾಕಿಸ್ತಾನ ಯಾತ್ರಿಗಳು: 2019ರ ಅಕ್ಟೋಬರ್ 31ರಂದು ಲಾಹೋರ್ ಬಳಿಯ ಧಾರ್ಮಿಕ ಕ್ಷೇತ್ರಕ್ಕೆ ಪಂಜಾಬ್ ನಿಂದ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಯಾತ್ರಾರ್ಥಿಗಳ ರೈಲಿನಲ್ಲಿ ಅಗ್ನಿ ಅವಘಡ ಸಂಭವಿಸಿ ಕನಿಷ್ಠ 74 ಜನರು ಸಾವನ್ನಪ್ಪಿದರು.
ಪಾಕಿಸ್ತಾನ ಯಾತ್ರಿಗಳು: 2019ರ ಅಕ್ಟೋಬರ್ 31ರಂದು ಲಾಹೋರ್ ಬಳಿಯ ಧಾರ್ಮಿಕ ಕ್ಷೇತ್ರಕ್ಕೆ ಪಂಜಾಬ್ ನಿಂದ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಯಾತ್ರಾರ್ಥಿಗಳ  ರೈಲಿನಲ್ಲಿ ಅಗ್ನಿ ಅವಘಡ ಸಂಭವಿಸಿ ಕನಿಷ್ಠ 74 ಜನರು ಸಾವನ್ನಪ್ಪಿದರು.
ಭಾರತ-ಹಳಿಗಳ ಮೇಲೆ ಜನಸಂದಣಿ: 2018ರ ಅಕ್ಟೋಬರ್ 19ರಂದು ಉತ್ತರ ಭಾರತದ ಅಮೃತಸರದಲ್ಲಿ ದಸರಾ ಹಬ್ಬದ ಪ್ರಯುಕ್ತ ಪಟಾಕಿ ಪ್ರದರ್ಶನ ನಡೆಯಿತು. ಈ ವೇಳೆ ರೈಲು ಹಳಿಗಳ ಮೇಲೆ ನೂರಾರು ಜನರು ನಿಂತು ವೀಕ್ಷಿಸುವ ಸಂದರ್ಭದಲ್ಲಿ ರೈಲು ಹರಿದು 60 ಜನರು ಸಾವನ್ನಪ್ಪಿದ್ದರು.
ಅಲೆಕ್ಸಾಂಡ್ರಿಯಾ ಅಪಘಾತ: ಕೈರೋ-ಅಲೆಕ್ಸಾಂಡ್ರಿಯಾ ಮುಖ್ಯ ಮಾರ್ಗದಲ್ಲಿ ಆಗಸ್ಟ್ 11, 2017ರಂದು ಎರಡು ರೈಲುಗಳು ಮುಖಾಮುಖಿ ಡಿಕ್ಕಿಯಾಗಿದ್ದು 41 ಜನರು ಸಾವನ್ನಪ್ಪಿದ್ದರು.
ಇರಾನ್ ಘರ್ಷಣೆ: ಉತ್ತರ ಪ್ರಾಂತ್ಯದ ಸೆಮ್ನಾನ್‌ನಲ್ಲಿ 2016ರ ನವೆಂಬರ್ 25ರಂದು ಎರಡು ರೈಲುಗಳು ಮುಖಾಮುಖಿ ಡಿಕ್ಕಿಯಾಗಿತ್ತು. ಈ ವೇಳೆ ಒಂದು ರೈಲು ಬೆಂಕಿಗೆ ಆಹುತಿಯಾಯಿತು. ಈ ಅಪಘಾತದಲ್ಲಿ 44 ಜನರು ಸಾವನ್ನಪ್ಪಿದರು. ಇರಾನ್‌ನ ಅತ್ಯಂತ ಭೀಕರ ರೈಲು ದುರಂತ ಇದಾಗಿದೆ.
ಭಾರತೀಯ ಎಕ್ಸ್‌ಪ್ರೆಸ್ ವಿಪತ್ತು: 2016ರ ನವೆಂಬರ್ 20ರಂದು ಉತ್ತರಪ್ರದೇಶದಲ್ಲಿ ಇಂದೋರ್-ಪಾಟ್ನಾ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಿ 146 ಜನರು ಸಾವನ್ನಪ್ಪಿದರು.
ಕ್ಯಾಮರೂನ್ ರೈಲು ದುರಂತ: ರಾಜಧಾನಿ ಯೌಂಡೆಯಿಂದ ಡೌಲಾ ಆರ್ಥಿಕ ಕೇಂದ್ರಕ್ಕೆ ಪ್ರಯಾಣಿಸುತ್ತಿದ್ದ ರೈಲು 2016ರ ಅಕ್ಟೋಬರ್ 21ರಂದು ಹಳಿ ತಪ್ಪಿ ಕನಿಷ್ಠ 79 ಜನರು ಸಾವನ್ನಪ್ಪಿದರು.
ಕಾಂಗೋ ಹತ್ಯಾಕಾಂಡ: ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದ ದಕ್ಷಿಣ ಭಾಗದ ಜೌಗುವಿನಲ್ಲಿ ನೂರಾರು ಅಕ್ರಮ ಪ್ರಯಾಣಿಕರನ್ನು ಹೊತ್ತ ಸರಕು ರೈಲು ಅಗ್ನಿಗೆ ಆವುತಿಯಾಗಿತ್ತು. ಏಪ್ರಿಲ್ 22, 2014ರಂದು ನಡೆದಿದ್ದ ಈ ದುರಂತದಲ್ಲಿ ಕನಿಷ್ಠ 136 ಜನರು ಸಾವನ್ನಪ್ಪಿದ್ದರು.
ಹಳಿ ತಪ್ಪಿದ ಸ್ಪೇನ್: 2013ರ ಜುಲೈ 24 ರಂದು ಸ್ಯಾಂಟಿಯಾಗೊ ಡಿ ಕಾಂಪೋಸ್ಟೇಲಾದ ಹೊರವಲಯದಲ್ಲಿ ಕಾಂಕ್ರೀಟ್ ಗೋಡೆಗೆ ಅತಿ ವೇಗದ ರೈಲು ಡಿಕ್ಕಿ ಹೊಡೆದ ಪರಿಣಾಮ ಸುಮಾರು 80 ಜನರು ಸಾವನ್ನಪ್ಪಿದರು.
ಕೆನಡಾ ಇನ್ಫರ್ನೊ: ಕ್ವಿಬೆಕ್ ಪಟ್ಟಣವಾದ ಲ್ಯಾಕ್-ಮೆಗಾಂಟಿಕ್ನಲ್ಲಿ ಲಕ್ಷಾಂತರ ಲೀಟರ್ ಕಚ್ಚಾ ತೈಲವನ್ನು ಹೊತ್ತು ಸಾಗುತ್ತಿದ್ದ ರೈಲು ಹಳಿ ತಪ್ಪಿತ್ತು. ಪರಿಣಾಮ ಬೆಂಕಿ ಹೊತ್ತಿಕೊಂಡಿದ್ದು 47 ಜನರು ಸಜೀವ ದಹನವಾಗಿದ್ದರು.
ಈಜಿಪ್ಟ್ ಶಾಲಾ ಮಕ್ಕಳು: ಮಧ್ಯ ಈಜಿಪ್ಟ್‌ನಲ್ಲಿ 2012ರ ನವೆಂಬರ್ 17ರಂದು ರೈಲ್ವೆ ಸಿಗ್ನಲ್ ಆಪರೇಟರ್ ನಿದ್ರೆಗೆ ಜಾರಿದ ಪರಿಣಾಮ ರೈಲು ಮಕ್ಕಳು ತೆರಳುತ್ತಿದ್ದ ಶಾಲಾ ಬಸ್‌ಗೆ ಡಿಕ್ಕಿ ಹೊಡೆದಿತ್ತು ಪರಿಣಾಮ ನಲವತ್ತೇಳು ಶಾಲಾ ಮಕ್ಕಳು ಸಾವನ್ನಪ್ಪಿದ್ದರು.
ಅರ್ಜೆಂಟೀನಾ: ದೇಶದ ಅತ್ಯಂತ ಭೀಕರ ರೈಲು ಅಪಘಾತಗಳಲ್ಲಿ ಇದು ಒಂದು. 2015ರ ಫೆಬ್ರವರಿ 22 ರಂದು ಬ್ಯೂನಸ್ ರೈಲ್ವೆ ಟರ್ಮಿನಸ್ನಲ್ಲಿ ಪ್ರಯಾಣಿಕರ ರೈಲು ತಡೆಗೋಡೆಗೆ ಬಡಿದು 51 ಜನರು ಸಾವನ್ನಪ್ಪಿದರು. ಈ ಅಪಘಾತವು ಅರ್ಜೆಂಟೀನಾದ ಕಳಪೆ ಸ್ಥಿತಿಯನ್ನು ಎತ್ತಿ ತೋರಿಸಿದೆ. 1990ರ ದಶಕದಲ್ಲಿ ರೈಲ್ವೆ ಖಾಸಗೀಕರಣಗೊಂಡಿತ್ತ
SCROLL FOR NEXT