ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಅಭೂತಪೂರ್ವ ಒಂಬತ್ತು ಭಾರತೀಯ ಬಾಕ್ಸರ್‌ಗಳು ಅಖಾಡಕ್ಕೆ ಇಳಿಯಲಿದ್ದು, ಅವರ ಮೇಲಿನ ನಿರೀಕ್ಷೆಗಳು ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿವೆ. ಐವರು ಪುರುಷರು ಮತ್ತು ನಾಲ್ಕು ಮಹಿಳೆಯರ ಬಾಕ್ಸಿಂಗ್ ತಂಡ ಬಾಕ್ಸಿಂಗ್ ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. 
ಕ್ರೀಡೆ

ಮೇರಿ ಕೋಮ್ ಟು ವಿಕಾಸ್ ಕ್ರಿಶನ್: ಟೋಕಿಯೋ ಒಲಿಂಪಿಕ್ಸ್‌ ಅಖಾಡದಲ್ಲಿರುವ ಭಾರತದ 9 ಸ್ಟಾರ್‌ ಬಾಕ್ಸರ್‌ಗಳು

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಅಭೂತಪೂರ್ವ ಒಂಬತ್ತು ಭಾರತೀಯ ಬಾಕ್ಸರ್‌ಗಳು ಅಖಾಡಕ್ಕೆ ಇಳಿಯಲಿದ್ದು, ಅವರ ಮೇಲಿನ ನಿರೀಕ್ಷೆಗಳು ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿವೆ. ಐವರು ಪುರುಷರು ಮತ್ತು ನಾಲ್ಕು ಮಹಿಳೆಯರ ತಂಡ ಬಾಕ್ಸಿಂಗ್ ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಅಮಿತ್ ಪಂಗಲ್ (52 ಕೆಜಿ): ವಿಶ್ವದ ಪ್ರಥಮ ಶ್ರೇಯಾಂಕಿತ ಪಂಗಲ್ ಅವರಿಂದ ಟೋಕಿಯೊದಲ್ಲಿ ಭಾರತಕ್ಕೆ ಪದಕ ಖಚಿತವಾಗಿದೆ. ಹರಿಯಾಣದ ಯೋಧನಿಗೆ ನಿಯಂತ್ರಿತ ಆಕ್ರಮಣಶೀಲತೆ ಮತ್ತು ಯುದ್ಧತಂತ್ರದ ಕುಶಾಗ್ರಮತಿಯ ಉತ್ತಮ ಮಿಶ್ರಣವಾಗಿದೆ. ಅವರು ಈಗಾಗಲೇ ವಿಶ್ವ ಚಾಂಪಿಯನ್‌ಶಿಪ್ ಮತ್ತು ಕಾಮನ್‌ವೆಲ್ತ್ ಕ್ರೀಡಾಕೂಟದ ಬೆಳ್ಳಿ ಪ
ಎಂಸಿ ಮೇರಿ ಕೋಮ್ (51 ಕೆಜಿ): ಭಾರತೀಯ ಬಾಕ್ಸಿಂಗ್‌ನಲ್ಲಿ ಚಿರಪರಿಚಿತ ಹೆಸರು ಇದ್ದರೆ ಅದು ಮೇರಿ ಕೋಮ್. 38 ವರ್ಷದ ಈ ಸ್ಟಾರ್ ಬ್ಸಾಕ್ಸರ್ ಎರಡನೇ ಒಲಿಂಪಿಕ್ ಪದಕದ ಮೇಲೆ ಕಣ್ಣೀಟ್ಟಿದ್ದಾರೆ. ಆರು ಬಾರಿ ವಿಶ್ವ ಚಾಂಪಿಯನ್ ಆಗಿರುವ ಅವರು ಅಪಾರ ಪದಕಗಳನ್ನು ಗೆದ್ದಿದ್ದಾರೆ. ಭಾರತೀಯ ತುಕಡಿಯ ಇಬ್ಬರು ಧ್ವಜ ಧಾರಕರಲ್
ಮನೀಶ್ ಕೌಶಿಕ್ (63 ಕೆಜಿ): ಇದು ಮನೀಶ್ ಗೆ ಚೊಚ್ಚಲ ಒಲಂಪಿಕ್ಸ್. 25 ವರ್ಷದ ಭಾರತೀಯ ಯೋಧ. ಕೌಶಿಕ್ ಕ್ಲಾಸಿಕ್ ಡಾರ್ಕ್ ಹಾರ್ಸ್. ಅವರು 2018ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ(ಬೆಳ್ಳಿ) ಹಾಗೂ 2019ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ(ಕಂಚು) ಪದಕ ಗೆದ್ದಿದ್ದರು. ಭಾರತೀಯ ಬಾಕ್ಸಿಂಗ್‌ನ ಹುಟ್ಟೂರು ಎಂದೇ ಕರೆಯಲಾಗುವ
ಸಿಮ್ರಾಂಜಿತ್ ಕೌರ್ (60 ಕೆಜಿ): ಪಂಜಾಬ್‌ನ ಚಕರ್ ಗ್ರಾಮದ 26 ವರ್ಷದ ಸಿಮ್ರಾಂಜಿತ್ ಕೌರ್ 2018ರಲ್ಲಿ ಮೊದಲ ವಿಶ್ವ ಚಾಂಪಿಯನ್‌ಶಿಪ್ ಪದಕವನ್ನು ಗೆದ್ದು ಬೀಗಿದ್ದರು.
ವಿಕಾಸ್ ಕೃಶನ್ (69 ಕೆಜಿ): ಎರಡು ಬಾರಿ ಒಲಿಂಪಿಯನ್. ಭಾರತದಲ್ಲಿ ಸಾರ್ವಕಾಲಿಕ ಅತ್ಯಂತ ಅಲಂಕೃತ ಬಾಕ್ಸರ್ಗಳಲ್ಲಿ ತುಂಬಾ ಅನುಭವಿ. 29ರ ಹರೆಯದ ವಿಕಾಸ್ ಗೆ ಇದು ಮೂರನೇ ಮತ್ತು ಅಂತಿಮ ಒಲಿಂಪಿಕ್ಸ್‌ ಸ್ಪರ್ಧೆಯಾಗಲಿದೆ.
ಲೊವ್ಲಿನಾ ಬೊರ್ಗೊಹೈನ್ (69 ಕೆಜಿ): ಟೋಕಿಯೊದಿಂದ ಹೊರಡುವ ಮಹಿಳಾ ಬಾಕ್ಸಿಂಗ್ ತಂಡದಲ್ಲಿ ಕಿರಿಯರು ಕಡಿಮೆ ಪ್ರೊಫೈಲ್, ಹೆಚ್ಚಿನ ಕಾರ್ಯಕ್ಷಮತೆಯನ್ನು ಹೊಂದಿದ್ದಾರೆ. 23ರ ಹರೆಯದ ಲೊವ್ಲಿನಾ ಕಿಕ್‌ಬಾಕ್ಸರ್ ಆಗಿ ವೃತ್ತಿ ಪ್ರಾರಂಭಿಸಿದರು. ಈಗಾಗಲೇ(2018 ಮತ್ತು 2019) ಎರಡು ಬಾರಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜ
ಆಶಿಶ್ ಕುಮಾರ್ (75 ಕೆ.ಜಿ): ಹಿಮಾಚಲ ಪ್ರದೇಶದ ಸುಂದರ್ ನಗರದ ನಿವಾಸಿ. 26ರ ಹರೆಯದ ಆಶಿಶ್ ತೂಕ ವಿಭಾಗದಲ್ಲಿ ಸ್ಥಿರ ಪ್ರಗತಿಯನ್ನು ಸಾಧಿಸುತ್ತಿದ್ದಾರೆ. ಹಿಮಾಚಲ ಪ್ರದೇಶದ ಸಾಮಾಜಿಕ ನ್ಯಾಯ ವಿಭಾಗದ ತಹಸಿಲ್ ಕಲ್ಯಾಣ ಅಧಿಕಾರಿಯನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ.
ಪೂಜಾ ರಾಣಿ (75 ಕೆಜಿ): 30ರ ಹರೆಯದ ಪೂಜಾ ರಾಣಿ ಒಲಿಂಪಿಯನ್ ಆಗಲು ಬಹಳ ದೂರ ಬಂದಿದ್ದಾರೆ. ಭಿವಾನಿಯ ದೃಢವಾದ ಬಾಕ್ಸಿಂಗ್ ಸಂಸ್ಕೃತಿಯ ಉತ್ಪನ್ನವಾದ ಈಕೆ ತನ್ನ ಕ್ರೀಡೆಯನ್ನು ತನ್ನ ತಂದೆಯಿಂದ ರಹಸ್ಯವಾಗಿರಿಸಿದ್ದರು. ಹಲವಾರು ಏಳು ಬೀಳುಗಳ ಬಳಿಕ ಅವರು ಟೊಕಿಯೋಗೆ ಹೋಗುತ್ತಿದ್ದಾರೆ.
ಸತೀಶ್ ಕುಮಾರ್ (+91 ಕೆಜಿ): ಕ್ರೀಡಾಕೂಟಕ್ಕೆ ಅರ್ಹತೆ ಪಡೆದ ಮೊದಲ ಸೂಪರ್ ಹೆವಿವೇಯ್ಟ್. 32ರ ಹರೆಯದ ಸತೀಶ್ ಐವರು ಬಲಿಷ್ಠ ಪುರುಷರ ತಂಡದ ಅತ್ಯಂತ ಹಿರಿಯ. ಇದು ಅವರಿಗೆ ಚೊಚ್ಚಲ ಒಲಿಂಪಿಕ್ಸ್. ಉತ್ತರ ಪ್ರದೇಶದ ಬುಲಂದ್‌ಶಹರ್‌ನ ರೈತನ ಮಗ ಸತೀಶ್ ಕಾಮನ್‌ವೆಲ್ತ್ ಮತ್ತು ಏಷ್ಯನ್ ಕ್ರೀಡಾಕೂಟದಲ್ಲಿ ಪದಕಗಳನ್ನು ಗೆದ್

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಜೂನ್ 30ರೊಳಗೆ ಮುಗಿಸಿ: ರಾಜ್ಯ ಸರ್ಕಾರಕ್ಕೆ 'ಸುಪ್ರೀಂ' ಗಡುವು

'ಆ ದೇಶಕ್ಕೂ ನಾನೇ 'ಹಂಗಾಮಿ' ಸರ್ವೋಚ್ಛ ನಾಯಕ': Donald Trump ಘೋಷಣೆ, ಬೆಚ್ಚಿಬಿದ್ದ ವೆನೆಜುವೆಲಾ!

ಕ್ರಿಕೆಟ್ ಇತಿಹಾಸದಲ್ಲೇ ಮೊದಲು: ಅಂತಾರಾಷ್ಟ್ರೀಯ ಕ್ರಿಕೆಟ್ ಲೀಗ್ ನಲ್ಲಿ ಜೊತೆಯಾಗಿ ಕಣಕ್ಕಿಳಿದ ಅಪ್ಪ-ಮಗ.. ಯಾರಿವರು?

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

SCROLL FOR NEXT