ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ 
ರಾಜಕೀಯ

ಶಾಸಕರ ಆಸೆಗೆ ತಣ್ಣೀರು?

ನಿಗಮ-ಮಂಡಳಿ ನೇಮಕದ ಗಜ ಪ್ರಸವದ ಮುಹೂರ್ತ ಸಮೀಪಿಸುತ್ತಿದ್ದು, ಶಾಸಕರು, ಪರಾಜಿತ ಅಭ್ಯರ್ಥಿಗಳು ಮತ್ತು ಮಾಜಿ ಶಾಸಕರ ಆಸೆಗೆ ತಣ್ಣೀರು ಬೀಳುವುದು ಬಹುತೇಕ ನಿಚ್ಚಳಗೊಂಡಿದೆ.

ಹೈಕಮಾಂಡ್ ಒಪ್ಪಿಗೆ ದೊರೆತ ಬಳಿಕ ವಿವರ ಪ್ರಕಟ
ಬೆಂಗಳೂರು:
ನಿಗಮ-ಮಂಡಳಿ ನೇಮಕದ ಗಜ ಪ್ರಸವದ ಮುಹೂರ್ತ ಸಮೀಪಿಸುತ್ತಿದ್ದು, ಶಾಸಕರು, ಪರಾಜಿತ ಅಭ್ಯರ್ಥಿಗಳು ಮತ್ತು ಮಾಜಿ ಶಾಸಕರ ಆಸೆಗೆ ತಣ್ಣೀರು ಬೀಳುವುದು ಬಹುತೇಕ ನಿಚ್ಚಳಗೊಂಡಿದೆ.

ಶಾಸಕತ್ವ ಮತ್ತು ಚುನಾವಣೆಗೆ ಸ್ಪರ್ಧಿಸಲು ಅವಕಾಶ ಅವಕಾಶ ನೀಡಿರುವುದೇ ಒಂದು ಹುದ್ದೆಗೆ ಸಮಾನ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಸಂದಶ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್‌ಸಿಂಗ್ ಶಾಸಕರ ಪಟ್ಟಿಯನ್ನು ಅಂತಿಮಗೊಳಿಸುವುದಕ್ಕೆ ಪ್ರಧಾನವಾಗಿ ಮೂರು ಅಂಶಗಳನ್ನು ಪರಿಗಣಿಸಲಾಗಿದೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಕೆಪಿಸಿಸಿ ಪದಾಧಿಕಾರಿಗಳು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಕೈತಪ್ಪಿದವರಿಗೆ ನಿಗಮ ಮಂಡಳಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನ ನೀಡಲು ನಿರ್ಧರಿಸಲಾಗಿದೆ.

ಪಟ್ಟಿ ಅಂತಿಮಗೊಂಡರೂ ಯಾರಿಗೆ ಯಾವ ನಿಗಮ, ಮಂಡಳಿ ಎಂಬುದು ಇನ್ನೂ ಹಂಚಿಕೆಯಾಗಿಲ್ಲ. ಈ ಪಟ್ಟಿಗೆ ಹೈಕಮಾಂಡ್ ಒಪ್ಪಿಗೆ ದೊರೆತ ನಂತರ ಸಿದ್ದರಾಮಯ್ಯ ಹಾಗೂ ಪರಮೇಶ್ವರ 82 ನಿಗಮ-ಮಂಡಳಿಗಳ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಪ್ರಮುಖ ನಿರ್ದೇಶಕರ ಹೆಸರನ್ನು ಅಂತಿಮಗೊಳಿಸಿದ್ದಾರೆ. ಆದರೆ ಈ ಪಟ್ಟಿ ಹೈಕಮಾಂಡ್‌ನ್ನು ಪ್ರತಿನಿಧಿಸುವ ರಾಜ್ಯ ಮುಖಂಡರಿಗೆ ತೃಪ್ತಿ ತಂದಿಲ್ಲ. ಹೀಗಾಗಿ ಕೊನೆ ಹಂತದಲ್ಲಿ ಅರ್ಧಕ್ಕಿಂತ ಸ್ವಲ್ಪ ಹೆಚ್ಚು ಸ್ಥಾನಗಳಿಗೆ ಮಾತ್ರ ಅನುಮತಿ ಸಿಗಬಹುದು ಎನ್ನಲಾಗುತ್ತಿದೆ. ಈ ಪಟ್ಟಿಯಲ್ಲಿ ಕೆಲ ಶಾಸಕರಿಗೆ ಅವಕಾಶ ದೊರೆತರೂ ಆಶ್ಚರ್ಯವೇನೂ ಇಲ್ಲ ಎನ್ನಲಾಗುತ್ತಿದೆ.

ಈ ಪಟ್ಟಿಯ ಬಗ್ಗೆ ಎಐಸಿಸಿಯನ್ನು ಪ್ರತಿನಿಧಿಸುವ ಸಂಸದ ಮಲ್ಲಿಕಾರ್ಜುನ ಖರ್ಗೆ, ಡಾ.ಎಂ ವೀರಪ್ಪ ಮೊಯ್ಲಿ, ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್, ಬಿಕೆ ಹರಿಪ್ರಸಾದ್ ಸಂಪೂರ್ಣ ತೃಪ್ತರಾಗಿಲ್ಲ. ಅಂತಿಮ ಹಂತದಲ್ಲಿ ಸಿದ್ದರಾಮಯ್ಯ ಮತ್ತು ಪರಮೇಶ್ವರ ತಮ್ಮ ತಮ್ಮ ಹಿತಾಸಕ್ತಿ ಕಾಯ್ದುಕೊಳ್ಳಲು ಮುಂದಾಗಿ ಪಟ್ಟಿ ರಚಿಸಿದ್ದಾರೆ ಎಂಬ ಭಾವನೆಯನ್ನು ಇವರು ತಳೆದಿದ್ದು, ಪಟ್ಟಿ ದೆಹಲಿಗೆ ಬರಲಿ ಆಮೇಲೆ ನೋಡೋಣ ಎಂಬ ಸಂದೇಶೇವನ್ನು ತಮ್ಮ ಬೆಂಬಲಿಗರಿಗೆ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.

ಪಟ್ಟಿಯಲ್ಲಿ ಯಾರ್ಯಾರು?
ಜಿಲ್ಲಾಧ್ಯಕ್ಷರ ಪಟ್ಟಿಯಲ್ಲಿ ಜಿಯಾವುಲ್ಲಾ (ರಾಮನಗರ), ದಾಸೇಗೌಡ (ಮೈಸೂರು), ಪ್ರಸನ್ನಕುಮಾರ್ (ಶಿವಮೊಗ್ಗ), ಆಂಜನೇಯ (ಬಳ್ಳಾರಿ), ಭೀಮಣ್ಣ ನಾಯ್ಕ್ (ಉತ್ತರ ಕನ್ನಡ), ಅನಿಲ್ ಕುಮಾರ್ (ಕೋಲಾರ), ಗಫೂರ್ (ಉಡುಪಿ), ಮರೀಗೌಡ ಪಾಟೀಲ್ ಪ್ರಮುಖರಾಗಿದ್ದಾರೆ. ಜಯನಗರ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಬಯಸಿದ್ದ ಹಿರಿಯ ಮುಖಂಡ ಯುಬಿ ವೆಂಕಟೇಶ್, ಎಸ್ ಗುರುಚರಣ್ ಅವರೂ ಪಟ್ಟಿಯಲ್ಲಿದ್ದಾರೆ.

ಉಳಿದಂತೆ ಪಕ್ಷದ ಕಾರ್ಯಕರ್ತ ಮುಖಂಡರು ಮತ್ತು ಕೆಪಿಸಿಸಿ ಹಾಲಿ ಮತ್ತು ಮಾಜಿ ಪದಾಧಿಕಾರಿಗಳಿಗೆ ಹೆಚ್ಚಿನ ಸ್ಥಾನವನ್ನು ನೀಡಲಾಗಿದೆ.

ಅವರಲ್ಲಿ ಪ್ರಮುಖರೆಂದರೆ ಪ್ರಧಾನ ಕಾರ್ಯದರ್ಶಿಗಳಾದ ಎಂ ರಾಮಚಂದ್ರಪ್ಪ, ಮಾಗಡಿ ಕಮಲಮ್ಮ ಮಲ್ಲಾಜಮ್ಮ, ಎಸ್‌ಎಂ ಆನಂದ, ಜಿಸಿ ಚಂದ್ರಶೇಖರ್, ಡಾ.ಎಲ್ ಹನುಮಂತಯ್ಯ, ಎಸ್‌ಎಸ್ ಪ್ರಕಾಶಂ, ರಾಣಿ ಸತೀಶ್. ಕಾರ್ಯದರ್ಶಿಗಳಾದ ಆರ್ ನಾರಾಯಣಪ್ಪ, ಹಿರಣ್ಣಯ್ಯ ಸ್ವಾಮಿ, ಜೆ ಹುಚ್ಚಪ್ಪ, ವೆಂಕಟರಾವ್ ಘೋರ್ಪಡೆ, ಕಡೂರು ನಂಜಪ್ಪ, ನಿವೇದಿತ ಆಳ್ವ, ಡಾ.ಕಿಸಾನ್ ಆನಂದಕುಮಾರ್, ಎಸ್‌ಸಿ ಘಟಕದ ಅಧ್ಯಕ್ಷ ಎನ್.ಮಂಜುನಾಥ್, ಪದಾಧಿಕಾರಿಗಳು ಹಾಗೂ ಮುಖಂಡರಾದ ಆರ್ ರಘು (ಮೈಸೂರು), ಕೆಪಿ ಚಂದ್ರಕಲಾ (ಕೊಡಗು), ಎಎನ್ ಮಹೇಶ್ (ಚಿಕ್ಕಮಗಳೂರು), ಎನ್‌ಎ ಗಫೂರ್ (ಕಾರ್ಯದರ್ಶಿ ಕೆಪಿಸಿಸಿ), ಎಚ್.ಆರ್.ಭಾಸ್ಕರ (ಚಿತ್ರದುರ್ಗ), ಗಡ್ಡದೇವರಮಠ್, ಡಾ,ಬಿಪಿ ಮಂಜುಳಾ (ಚಾಮರಾಜನಗರ), ಮನೋಹರ್(ಮಾಜಿ ಯುವ ಕಾಂಗ್ರೆಸ್), ವಿಎಸ್ ಆರಾಧ್ಯ (ಮಾಜಿ ಕಾರ್ಯದರ್ಶಿ), ಅನಂತ್ (ಮೈಸೂರು), ಎನ್‌ಎಸ್ ರತ್ನ ಪ್ರಭಾ (ಎಐಸಿಸಿ ಸದಸ್ಯೆ), ಕೆ.ಮರೀಗೌಡ (ಮೈಸೂರು), ಆರ್ ನಾರಾಯಣ(ಬೆಳ್ಳಾವಿ), ಕೃಷ್ಣಂರಾಜು (ಮಾಜಿ ಬಿಡಿಎ ಸದಸ್ಯ), ಶ್ರೀಕಂಠು (ಕನಕಪುರ), ಎ ಸಿದ್ದರಾಜು (ಚಾಮರಾಜನಗರ), ಜಲಜಾ ನಾಯ್ಕ್ (ದಾವಣಗೆರೆ), ನಗರದ ಮಹಾದೇವಪ್ಪ (ಶಿವಮೊಗ್ಗ), ನಾಗರಾಜ್ ಯಾದವ್ (ಮಾಜಿ ಬ್ಲಾಕ್ ಅಧ್ಯಕ್ಷ ಬೆಂಗಳೂರು), ಬಿಎಸ್ ಶಿವಣ್ಣ ಮಳವಳ್ಳಿ, ನೂರುಲ್ಲಾ ಶರೀಫ್ (ಚಿತ್ರದುರ್ಗ), ಅನ್ವರ್ ಮುಧೋಳ್, ರಜಿಯಾ ಬೇಗಂ, ವಾಸಂತಿ ಶಿವಣ್ಣ, ಚಾಂದ್ ಪಾಷಾ (ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ), ಕೃಷ್ಣೇಗೌಡ (ಬ್ಲಾಕ್ ಅಧ್ಯಕ್ಷ ಜಯಮಹಲ್)

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಸ್ಟಾಲಿನ್ ಶ್ಲಾಘಿಸಿದ ಭಗವಂತ್ ಮಾನ್, ಪಂಜಾಬ್ ನಲ್ಲೂ ಉಪಾಹಾರ ಯೋಜನೆ ಜಾರಿ ಬಗ್ಗೆ ಚಿಂತನೆ

SCROLL FOR NEXT