ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜಕೀಯ

ರಾಹುಲ್ ಗಾಂಧಿಗೆ ಚೀಟಿ ರಹಿತ ಎರಡು ನಿಮಿಷವೂ ಮಾತನಾಡುವುದು ಸಾಧ್ಯವಿಲ್ಲ: ಸ್ಮೃತಿ ಇರಾನಿ

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಸೂಟು ಬೂಟಿನ ಸರ್ಕಾರದ ಟೀಕೆಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ವ್ಯಂಗ್ಯ ಧಾಟಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

ಸ್ಮೃತಿ ಇರಾನಿ
Srinivas Rao BV
Updated On : 23 Aug 2015, 5:38 am

ಅಮೇಥಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಸೂಟು ಬೂಟಿನ ಸರ್ಕಾರದ ಟೀಕೆಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ವ್ಯಂಗ್ಯ ಧಾಟಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಎನ್.ಡಿ.ಎ ಸರ್ಕಾರವನ್ನು ಸೂಟು ಬೂಟಿನ ಸರ್ಕಾರ ಎಂದು ಟೀಕಿಸುವ ರಾಹುಲ್ ಗಾಂಧಿಗೆ ಚೀಟಿ ಇಟ್ಟುಕೊಳ್ಳದೇ ಎರಡು ನಿಮಿಷವೂ ಮಾತನಾಡುವುದಕ್ಕೆ ಬರುವುದಿಲ್ಲ ಎಂದಿದ್ದಾರೆ.

ಸಂಸತ್ ನಲ್ಲಿ ಒಂದು ವರೆ ಗಂಟೆ ಭಾಷಣ ಮಾಡುವುದಕ್ಕಿಂತಲೂ ಸೂಟ್ ಬೂಟ್ ಕಿ ಸರ್ಕಾರ್ ಎಂದು ಒಂದು ವರೆ ನಿಮಿಷ ಟೀಕೆ ಮಾಡುವುದು ಸುಲಭದ ವಿಷಯ, ಎಂದು ಸ್ಮೃತಿ ಇರಾನಿ ಹೇಳಿದ್ದಾರೆ.  ರಾಹುಲ್ ಗಾಂಧಿ ತಾವು ಮಾಡಿದ್ದ ಕೇವಲ 2 ನಿಮಿಷದ ಭಾಷಣಕ್ಕೂ ಚೀಟಿ ತಂದಿದ್ದರು, ಚೀಟಿ ತರದೇ ಅವರಿಗೆ ಎರಡು ನಿಮಿಷವೂ ಭಾಷಣ ಮಾಡಲು ಸಾಧ್ಯವಿಲ್ಲ ಎಂದು ಸ್ಮೃತಿ ಇರಾನಿ ಟಿಕಾಪ್ರಹಾರ ನಡೆಸಿದ್ದಾರೆ.  
ಏಪ್ರಿಲ್ ನಲ್ಲಿ ನಡೆದಿದ್ದ ಸಂಸತ್ ಅಧಿವೇಶನದಲ್ಲಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದ ರಾಹುಲ್ ಗಾಂಧಿ ಮೋದಿ ಸರ್ಕಾರವನ್ನು ಸೂಟು ಬೂಟಿನ ಸರ್ಕಾರ ಎಂದು ತೀಕಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement